ವಿಷಯಕ್ಕೆ ಹೋಗು

ಲಿಂಗಸೂಗೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಿ೦ಗಸೂಗೂರು ಇಂದ ಪುನರ್ನಿರ್ದೇಶಿತ)
ಲಿಂಗಸುಗೂರು
ಛಾವಣಿ,
ಪಟ್ಟಣ
ದೇಶ India
ರಾಜ್ಯಕರ್ನಾಟಕ ಟೆಂಪ್ಲೇಟು:Country data Karnataka
ಜಿಲ್ಲೆರಾಯಚೂರು
ಲೋಕ ಸಭಾ ಕ್ಷೇತ್ರರಾಯಚೂರು
Elevation
೪೯೯ m (೧,೬೩೭ ft)
Population
 (2011)
 • Total೩೪,೯೩೨
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್
584122
ದೂರವಾಣಿ ಸಂಕೇತ08537
Vehicle registrationKA 36
Websitewww.lingasugurtown.gov.in

ಲಿಂಗಸೂಗೂರು ರಾಯಚೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ.ರಾಯಚೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಲಿಂಗಸೂಗೂರು ಪ್ರಮುಖವಾಗಿದೆ.

ಯರಗೋಡಿ ಗ್ರಾಮವು ಲಿಂಗಸಗೂರು ತಾಲ್ಲೂಕಿನಿಂದ 25 ಕಿ.ಮೀ ದೂರದಲ್ಲಿದ್ದು ಕೃಷ್ಣಾ ನದಿಯಿಂದ ಈ ಊರು ದ್ವೀಪ (ನಡುಗಡ್ಡೆ )ಪ್ರದೇಶವಾಗಿ ಉಳಿದಿದೆ. ಇಲ್ಲಿನ ಜನರಿಗೆ ತಾಲ್ಲೂಕಿಗೆ ಬರಲು ಕಷ್ಟವಾಗುತ್ತಿದ್ದು ತೆಪ್ಪದ ಮೂಲಕ ಮತ್ತು ಸೇತುವೆ ಮೂಲಕ ಬರುತ್ತಿದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಬಹುತೇಕ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದು ಇದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಇಲ್ಲಿನ ಜನರು ಸೂರ್ಯಕಾಂತಿ , ಸಜ್ಜೆ,ಜೋಳ,ದಾಳಿಂಬೆ ,ಪಪ್ಪಾಯಿ, ಶೇಂಗಾ,ಹತ್ತಿ,ಮೆಣಸಿನಕಾಯಿ, ಪ್ರಮುಖ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷ್ಣಾ ನದಿಯು ತುಂಬಿ ಹರಿದಾಗ ಇಲ್ಲಿನ ಜನರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿ ಹೋದರೆ ಅಲ್ಲಿನ ಜನರಿಗೆ ಸರ್ಕಾರವು ಡ್ರೋನ್ ಮುಖಾಂತರ ಮತ್ತು ಹಡಗಿನ ಮೂಲಕ ಅಲ್ಲಿನ ಜನರಿಗೆ ಎಲ್ಲಾ ತರಹದ ಮೂಲಸೌಕರ್ಯಗಳನ್ನು ಒದಗಿಸುತ್ತದೆ.

ಇತಿಹಾಸ

[ಬದಲಾಯಿಸಿ]

ಲಿಂಗಸೂಗೂರು ಬ್ರೀಟಿಶರ ಆಡಳಿತದಲ್ಲಿ ಜಿಲ್ಲಾ ಕೇಂದ್ರವಾಗಿತ್ತು. ತಾಲ್ಲೂಕಾ ಕೇಂದ್ರವಾದ ಲಿಂಗಸೂಗೂರು ಬ್ರೀಟಿಶರ ಆಡಳಿತದಲ್ಲಿ ಸೈನಿಕರ ನೆಲೆಯಾಗಿತ್ತು . ಈ ಕಾರಣಕ್ಕಾಗಿಯೇ ಲಿಂಗಸೂಗೂರನ್ನೂ 'ಛಾವಣಿ' ಎಂಬ ಹೆಸರಿನಿಂದ ಕರೆಯಲಾಗುತಿತ್ತು. ಈ ತಾಲೂಕಿನ ಪ್ರಾಚೀನತೆಯು ನೋಡಿದಾಗ ಶಿಲಾಯುಗದ ವಸ್ತುಗಳು ಇಲ್ಲಿ ಲಭ್ಯವಾಗಿದ್ದರಿಂದ ಇತಿಹಾಸವು ಶಿಲಾಯುಗದ ಕಾಲಕ್ಕೆ ನಿಲ್ಲುತ್ತದೆ. ಈ ತಾಲ್ಲೂಕಿನಲ್ಲಿ "ಮಸ್ಕಿ"ಯು ಅಶೋಕನ ಆಳ್ವಿಕೆಯ ಒಂದು ಭಾಗವಾಗಿತ್ತು ಎಂದು ಇಲ್ಲಿ ದೊರೆತ ಅಶೋಕನ ಶೀಲಾ ಶಾಸನದಿಂದ ತಿಳಿಯುತ್ತದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ‍‍ತಾಲೂಕು ಕೇಂದ್ರದಿಂದ ೨೭ ಕೀ.ಮೀ ಅಂತರದಲ್ಲಿ ಇತಿಹಾಸ ಪ್ರಸಿದ್ದ '''ಜಲದುರ್ಗ ಛಾಯಭಗವತಿ ಡ್ರಾಪ್ ಇದ್ದು ,ಇದು ೧೨ನೇ ಶತಮಾನದಲ್ಲಿ ದೇವಗಿರಿಯ ಯಾದವ ರಾಜನಿಂದ ನಿರ್ಮಿಸಿದ್ದು ಏಳು ಸುತ್ತು ಕೋಟೆ ಏಳು ಅಗಸಿ ಬಾಗಿಲು ಇವೆ, ನಂತರ ಈ ಪ್ರದೇಶವು .ವಿಜಯನಗರ ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಸೈನಿಕ ನೆಲೆಯಾಗಿತ್ತು ಇದರಬಗ್ಗೆ ಮೆದೊಸ್ ಟೇಲರ್{medos tailor} ಎಂಬ ಸಂಶೋದಕ ೧೮೭೧ ರಲ್ಲಿ ನೊಬಲ್ ಕ್ವೀನ್ {NOBEL QUEEN} ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.

ವಿಜಯನಗರ ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಅಪರಾದಿಗಳನ್ನು ಕೊಲ್ಲುವ ಸಲುವಾಗಿ ಉಪಯೋಗಿಸುತ್ತಿದ್ದ ಬಗ್ಗೆ ಕುರುಹುಗಳಿವೆ,ಈಗ ಈ ಕೋಟೆಯು ಸುಂದರ ಪ್ರವಾಸಿ ಸ್ತಳವಾಗಿದ್ದು ಮನಸ್ಸಿಗೆ ಮುದ ನೀಡುತ್ತದೆ, ಈ ಕೋಟೆಯು ರಾಯಚೂರಿನಿಂದ ೧೦೦ ಕೀ.ಮೀ.ಹಾಗು ಲಿಂಗಸೂಗೂರಿನಿಂದ ೨೬ ಕೀ.ಮೀ ದೂರದಲ್ಲಿದೆ, '