ಲಕ್ಷ್ಮೀ ಕುಂಜತ್ತೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

  • ಪೂರಕವಲ್ಲದ ಪರಿಸರದಲ್ಲಿ ತನ್ನದೇ ಆದ ಮಿತಿಯೊಳಗೆ ಸಾಹಿತ್ಯ ಕಾಯಕವನ್ನು ಕೈಗೊಂಡವರು ಲಕ್ಷ್ಮೀ ಕುಂಜತ್ತೂರು.
  • ಕೆರಳ ಕರ್ನಾಟಕದ ಗಡಿಯಲ್ಲೇ ಇರುವ ಒಂದು ಪ್ರದೇಶ ಉಚ್ಚಿಲ. ಇದು ಕರ್ನಾಟಕಕ್ಕೆ ಸೇರಿದ ಪ್ರದೇಶ.
  • ಲಕ್ಷ್ಮೀ ಕುಂಜತ್ತೂರು ಅವರ ಪೂರ್ವಿಕರ ಮನೆ ಅಥವಾ ಬಾಲ್ಯದ ಮನೆ ಇರುವುದು ಈ ಉಚ್ಚಿಲದ ಕೋಟೆ ದೇವಸ್ಥಾನದ ಕೆರೆಯ ಪಶ್ಚಿಮ ದಿಕ್ಕಿನಲ್ಲಿ.
  • ಲಕ್ಷ್ಮೀಯವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಗಳಲ್ಲಿ ಮಕ್ಕಳ ಸಾಹಿತ್ಯ ಪ್ರಮುಖವಾದುದು.
  • ಲಕ್ಷ್ಮೀ ಕುಂಜತ್ತೂರು ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಅಧ್ಯಾಪಿಕೆಯಾಗಿ ಶಿಕ್ಷಣ ರಂಗಕ್ಕೆ ಪಾದಾರ್ಪಣೆ ಗೈದವರು.
  • ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ೭೭ರ ಹರೆಯದ ಲಕ್ಷ್ಮೀ ಕುಂಜತ್ತೂರು ಅನನ್ಯ ಸಾಧಕಿ.

ಜನನ-ಜೀವನ[ಬದಲಾಯಿಸಿ]

೧೯೩೧ರ ಶರತ್ ಪೂರ್ಣಿಮೆಯಂದು ಬೀರ ಮತ್ತು ಆರ್ಯ ದಂಪತಿಗಳ ಮಗಳಾಗಿ ಲಕ್ಷ್ಮೀಯವರು ಜನಿಸಿದರು. ನಾಲ್ಕು ಅಕ್ಕಂದಿರ ಮುದ್ದಿನ ತಂಗಿಯಾಗಿ ಹೆಚ್ಚೇನೂ ತೊಂದರೆಗಳಿಲ್ಲದೆ ಬೆಳೆದವರು ಲಕ್ಶ್ಮೀ. ಶ್ರಮ ಜೀವಿಗಳ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮೀಯನ್ನು ಎರಡುವರೆ ವರ್ಷವಾಗುವಾಗಲೆ ಶಾಲೆಗೆ ಸೇರಿಸಲಾಯಿತು. ಮೂರನೆ ತರಗತಿಯಲ್ಲಿರುವಾಗ ಬರಹಕ್ಕೆ ತೊಡಗಿದರು. 'ಕೋಳಿಯ ಹುಟ್ಟು ಹೇಗಾಯಿತು' ಎಂಬ ಲೇಖನ ಬರೆದು, ತನ್ನ ತಾಯಿ, ಅಕ್ಕನವರಿಗೆ ತೋರಿಸಿದಾಗ ಅವರು ಲಕ್ಷ್ಮೀಯವರನ್ನು ತುಂಬಾ ಮೆಚ್ಚಿ ಪ್ರೋತ್ಸಾಹಿಸಿದರು. ಲೇಖನಗಳನ್ನು, ಕವನಗಳನ್ನು ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಬರೆಯುತ್ತಿದ್ದರು.

ಉದ್ಯೋಗ[ಬದಲಾಯಿಸಿ]

'ಅಧ್ಯಾಪಕ ವೃತ್ತಿ ತರಬೇತಿ ಕೇಂದ್ರ'ದಲ್ಲಿ ಇವರ ಸಂಬಂಧಿಕರೊಬ್ಬರು ಅಧ್ಯಾಪಿಕೆಯಾಗಿದ್ದುದರಿಂದ ಅವರ ಪ್ರೋತ್ಸಾಹದಿಂದ ಬಲ್ಮಠ ಸರಕಾರದ ಅಧ್ಯಾಪನ ವೃತ್ತಿ ತರಬೇತಿ ಕೇಂದ್ರದಲ್ಲಿ ಇವರು ಅಧ್ಯಾಪನ ವೃತ್ತಿ ತರಬೇತಿಯನ್ನು ಪಡೆದರು. ಇವರು ತನ್ನ ಶಿಕ್ಷಣ ವೃತ್ತಿಗೆ ನಾಂದಿ ಹಾಕಿದ್ದು

ಕೃತಿಗಳು[ಬದಲಾಯಿಸಿ]

  • ಉತ್ತರ ರಾಮಾಯಣ
  • ಭವಭೂತಿಯ ಉತ್ತರ ರಾಮ ಚರಿತೆ ಕೆಲವು ಅಭಿಪ್ರಾಯಗಳು

ಬರವಣಿಯ ಕ್ಷೇತ್ರ[ಬದಲಾಯಿಸಿ]

'ವಿದ್ಯಾಭ್ಯಾಸದ ತಳಹದಿ'(ಅಪ್ರಕಟಿತ) ಲೇಖಕಿ ರಚಿಸಿದ ಒಂದು ಮಾದರಿ ಪಠ್ಯಪುಸ್ತಕ.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  • ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಮಹಿಳಾ ಸಮಿತಿಯ ವತಿಯಿಂದ ಸನ್ಮಾನ
  • ಕನ್ನಡ ಸಾಹಿತ್ಯ ಪರಿಷತ್ತು
  • ಕರ್ನಾಟಕ ಲೇಖಕರ ಸಂಘ
  • 'ಪ್ರಗತಿಪಥ' ಕಾದಂಬರಿಗೆ'ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ'

ಸನ್ಮಾನ ಪ್ರಶಸ್ತಿಗಳು[ಬದಲಾಯಿಸಿ]

  • ಮೈಕಲ್ ಮಧುಸೂದನ ಪ್ರಶಸ್ತಿ[೧]
  • ಆದಾಗ್ಯೂ, ಲಡೀಸ್ ಸೋಷಿಯಲ್ ಲೀಗ್, ಭಾರತ ಸ್ಕೌಟ್ ಮತ್ತು ಗೈಡ್ಸ್, ಕಾರಂತ ಕನ್ನಡ ಸಂಘ

ಉಲ್ಲೇಖ[ಬದಲಾಯಿಸಿ]

  1. ಚಂದ್ರಗಿರಿ, ಸಾ ರಾ ನಾಡೋಜ ಅಬೂಬಕ್ಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ.ಸಬಿಹಾ, ಸಿರಿವರ ಪ್ರಕಾಶನ ಬೆಂಗಳೂರು, ಮೊದಲ ಮುದ್ರಣ ೨೦೦೯, ಪುಟ ೨೪೫