ಲಕ್ಷ್ಮಿ ಬಾರಮ್ಮಾ(ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಷ್ಮಿ ಬಾರಮ್ಮ ಭಾರತೀಯ ಕನ್ನಡ ಭಾಷೆಯ ಧಾರಾವಾಹಿ ಆಗಿದ್ದು, ಇದು ಕಲರ್ಸ್ ಕನ್ನಡ (ಹಿಂದೆ ಈ-ಟಿವಿ ಕನ್ನಡ ) ದಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ೭:೩೦ ಕ್ಕೆ ಪ್ರಸಾರವಾಗುತ್ತಿತ್ತು. [೧] [೨] ಇದು ಮಾರ್ಚ್ ೪, ೨೦೧೩ ರಂದು ಪ್ರಥಮ ಪ್ರಸಾರವನ್ನು ಮಾಡಿತು ಮತ್ತು ಕನ್ನಡ ಧಾರಾವಾಹಿಯಲ್ಲಿ ಎರಡನೇ ಅತಿ ಉದ್ದವಾದ ಧಾರಾವಾಹಿ ಆಗಿದೆ. [೩] [೪]


ಲಕ್ಷ್ಮಿ ಬಾರಮ್ಮಾ(ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಸತೀಶ್ ಕೃಷ್ಣನ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು2125
ನಿರ್ಮಾಣ
ನಿರ್ಮಾಪಕ(ರು)ಪ್ರಕಾಶ್ ಜಯರಾಮ್
ಸಂಕಲನಕಾರರುಸುಜೀತ್ ರೈ
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ22 ನಿಮಿ‍ಷಗಳು
ನಿರ್ಮಾಣ ಸಂಸ್ಥೆ(ಗಳು)ಜೈ ಮಾತಾ ಕಂಬೈನ್ಸ್
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ
ಮೂಲ ಪ್ರಸಾರಣಾ ಸಮಯ4 ಮಾರ್ಚ್ 2013 (2013-03-04) – 25 ಜನವರಿ 2020 (2020-01-25)
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಲಕ್ಷ್ಮೀ ಬಾರಮ್ಮ 2


ಕಥಾವಸ್ತು[ಬದಲಾಯಿಸಿ]

ಲಕ್ಷ್ಮೀ (ಲಚ್ಚಿ) ಮುಗ್ಧ ಹಳ್ಳಿ ಹುಡುಗಿ. ಅನಾಥಳಾಗಿದ್ದ ಲಚ್ಚಿಯನ್ನು ಅವಳ ಅಜ್ಜಿ ಬೆಳಸಿರುತ್ತಾಳೆ. ಲಕ್ಷ್ಮೀ ಮಲತಾಯಿ ತುಂಬಾ ಕೆಟ್ಟವಾಗಿದ್ದಳು ಮತ್ತು ಅವಳಿಗೆ ಇಬ್ಬರು ಗಂಡು ಮಕ್ಕಳಿದ್ದರು. ಲಚ್ಚಿ ತಂದೆ ತನ್ನ ಎಲ್ಲಾ ಆಸ್ತಿಯನ್ನು ಲಚ್ಚಿಗೆ ಹುಟ್ಟುವ ಮಕ್ಕಳಿಗೆ ಬರೆದಿರುತ್ತಾನೆ. ಇದರಿಂದ ಕೋಪಗೊಂಡ ಲಚ್ಚಿ ಮಲತಾಯಿ, ತನ್ನ ತಮ್ಮನಿಗೆ ಮದುವೆ ಮಾಡಲು ಸಂಚು ಮಾಡುತ್ತಾಳೆ.

ಲಚ್ಚಿ ತನ್ನ ಕಿರಿಯ ಮಲ ಸಹೋದರ ನಂಜುಂಡಿ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದಳು. ತನ್ನ ತಾಯಿ ಪಾರ್ವತಿಯ ಹರಕೆ ತೀರಿಸಲು ಬಂದಿದ್ದ ಚಂದು ಅನ್ನು ಲಚ್ಚಿ ಅಜ್ಜಿ ಮದುವೆಯಾಗುವಂತೆ ಒತ್ತಾಯಿಸುತ್ತಾಳೆ. ಅವಳನ್ನು ಕಾಪಾಡಲು ಚಂದನ್ ಲಚ್ಚಿಯನ್ನು ಮದುವೆಯಾಗುತ್ತಾನೆ.

ಮದುವೆಯಾದ ನಂತರ ಚಂದನ್ ಬೇರೆಯವಳನನ್ನು ಪ್ರೀತಿಸುವ ವಿಷಯ ಲಚ್ಚಿಗೆ ತಿಳಿಯುತ್ತದೆ. ಗಂಡನ ಪ್ರೀತಿಗೆ ಅಡಚಣೆಯಾಗದಿರಲು ಬಯಸುತ್ತಾಳೆ. ಅವನಿಂದ ಓಡಿಹೋಗುತ್ತಾಳೆ. ಆದರೆ ಪರಿಸ್ಥಿತಿ ಅವಳನ್ನು ಶ್ರುತಿಯ ಮನೆಗೆ ಬರುವಂತೆ ಮಾಡುತ್ತದೆ. ಮತ್ತೊಂದೆಡೆ, ಲಕ್ಷ್ಮಿಯ ಬಗ್ಗೆ ಸತ್ಯವನ್ನು ತಿಳಿಯದ ಶ್ರುತಿ (ಗೊಂಬೆ) ಅವಳನ್ನು ತನ್ನ ತಂಗಿ ಎಂದು ಒಪ್ಪಿಕೊಳ್ಳುತ್ತಾಳೆ ಮತ್ತು ತಾಯಿಯ ಇಚ್ಛೆಗೆ ವಿರುದ್ಧವಾಗಿ ಅವಳನ್ನು ಚಿನ್ನು ಎಂದು ಹೆಸರಿಸುತ್ತಾಳೆ.

ಶ್ರುತಿ ಚಂದನ್ ಸ್ವಂತ ಸೋದರ ಅತ್ತೆಯ ಮಗಳು ಎಂಬುದು ಗೊತ್ತಾಗುತ್ತದೆ ಮತ್ತು ಅವರ ಮದುವೆ ಮೊದಲೇ ನಿರ್ಧರಿತವಾಗಿರುವ ವಿಷಯವು ಬೆಳಕಿಗೆ ಬರುತ್ತದೆ. ಈ ಸತ್ಯವನ್ನು ತಿಳಿದ ಅವಳು ತನ್ನನ್ನು ತಾನೇ ಸಮಾಧಾನಪಡಿಸುತ್ತಾಳೆ ಮತ್ತು ಮದುವೆ ವ್ಯವಸ್ಥೆಗಳನ್ನು ಗಮನಿಸಲು ನಿರ್ಧರಿಸುತ್ತಾಳೆ. ಈ ಸಮಯದಲ್ಲಿ ಅವಳ ಮದುವೆಯ ಸತ್ಯ ಅತ್ತೆ ಪಾರ್ವತಿಗೆ ಗೊತ್ತಾಗುತ್ತದೆ.

ಚಂದನ್‌ ಸೋದರ ಮಾವ ರಂಜಿತ್‌ಗೂ ಈ ಸತ್ಯದ ಅರಿವಿರುತ್ತದೆ. ಕುಮುದಾ, ಚಂದನ್ ಅವರ ದುಷ್ಟ ಸೋದರ ಅತ್ತೆ ಮತ್ತು ಪತಿ ಮನೋಜ್ ಅವರೊಂದಿಗೆ ಇಡೀ ಆಸ್ತಿಯನ್ನು ತನ್ನ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಕೆಯ ದುಷ್ಟ ಯೋಜನೆಗಳ ಬಗ್ಗೆ ಕುಟುಂಬಕ್ಕೆ ತಿಳಿದಿರುವುದಿಲ್ಲ. ಆದರೆ ಈ ವಿಷಯ ಕೈಲಾಶ್ ಶ್ರುತಿಯ ತಂದೆಗೆ ಗೊತ್ತಾಗುತ್ತದೆ. ತಮ್ಮ ಸತ್ಯ ಹೊರಬಾರದು ಎಂಬ ಕಾರಣಕ್ಕೆ ಕೈಲಾಶ್ ಅನ್ನು ಕಟ್ಟಡ ಮೇಲಿನಿಂದ ತಳುತ್ತಾರೆ. ಕೈಲಾಶ್ ಅನ್ನು ಲಕ್ಷ್ಮೀ ಉಳಿಸುತ್ತಾಳೆ‌. ಕೈಲಾಶ್ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ ಮತ್ತು ನಂತರ ಅವನು ಕುಮುದಾಗೆ ಎಚ್ಚರಿಕೆ ನೀಡುತ್ತಾನೆ. ಪಾರ್ವತಿ ಮತ್ತು ಕೈಲಾಶ್ ಚಂದನ್ & ಲಕ್ಷ್ಮೀ ಸತ್ಯವನ್ನು ಶ್ರುತಿಗೆ ಹೇಳಲು ನಿರ್ಧರಿಸುತ್ತಾರೆ ಮತ್ತು ಅಂತಿಮವಾಗಿ ಎಲ್ಲರಿಗೂ ಸತ್ಯ ಗೊತ್ತಾಗುತ್ತದೆ.

ಶ್ರುತಿಯ ತಾಯಿ ಕಲ್ಪನಾಳನ್ನು ತನ್ನ ಲಾಭಕ್ಕಾಗಿ ಕುಮುದಾ ಬಳಸಿಕೊಳ್ಳುತ್ತಾಳೆ. ಅಂತಿಮವಾಗಿ ಕುಮುದಳಾ ನಿಜ ರೂಪವನ್ನು ಕೈಲಾಶ್, ರಂಜಿತ್ ಮತ್ತು ಲಕ್ಷ್ಮಿ ಬಹಿರಂಗಪಡಿಸುತ್ತಾರೆ. ಈ ಸಮಯದಲ್ಲಿ ಶ್ರುತಿ ಗರ್ಭಿಣಿಯಾಗಿದ್ದಳು. ಆಕೆಯ ಮಗು ಸತ್ತಿದೆ ಎಂದು ಎಲ್ಲರೂ ನಂಬುತ್ತಾರೆ. ಇದೇ ಸಮಯದಲ್ಲಿ ಕೈಲಾಶ್‌ನ ತಂಗಿಯೇ ಗೊಂಬೆಯ ತಂಗಿ ಚಿನ್ನುವಿನ ಸಾವಿಗೆ ಕಾರಣವಾಗಿರುವ ವಿಚಾರ ಬೆಳಕಿಗೆ ಬರುತ್ತದೆ. ಲಕ್ಷ್ಮೀ ಗೊಂಬೆ ಮಗುವಿಗೆ ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಅಧ್ಯಾ ಎಂಬ ಹೆಸರಿನ ಹೆಣ್ಣು ಮಗುವಿಗೆ ಲಕ್ಷ್ಮೀ ಜನ್ಮ ನೀಡುತ್ತಾಳೆ‌.ಗೊಂಬೆ ಮತ್ತು ಚಂದುವಿನ ಮಗು ಸತ್ತಿಲ್ಲ‌ ಎಂಬ ವಿಚಾರ ಬೆಳಕಿಗೆ ಬರುತ್ತದೆ. ಮತ್ತು ಈ ಹೆಣ್ಣು ಮಗುವನ್ನು ಕುಮುದ ಅಡಿಗಿಸಿ ಇಟ್ಟಿರುತ್ತಾಳೆ. ಈ ಮಗುವಿನ ಹೆಸರು ಸಿರಿಯಾಗಿರುತ್ತದೆ‌.

ಈ ಸಮಯದಲ್ಲಿ ಅನಿರುದ್ಧ್ ಎಂಬ ಪಾತ್ರ ಈ ಕುಟುಂಬವನ್ನು ಪ್ರವೇಶಿಸುತ್ತದೆ. ಅವನು ಕುಟುಂಬದ ವಿಶ್ವಾಸವನ್ನು ಗಳಿಸುತ್ತಾನೆ ಮತ್ತು ನಂತರ ಅವನು ಶ್ರುತಿಯನ್ನು ಅಪಹರಿಸಿ ಅವಳ ಹಿಂದಿನದನ್ನು ಮರೆಯುವಂತೆ ಮಾಡುತ್ತಾನೆ. ಅವಳು ಶ್ರಾವ್ಯ ಎಂದು ಮನವರಿಕೆ ಮಾಡುತ್ತಾನೆ. ಮತ್ತೊಂದೆಡೆ, ಶ್ರುತಿ ಸತ್ತಿದ್ದಾಳೆ ಎಂದು ಕುಟುಂಬ ನಂಬುತ್ತದೆ. ಲಕ್ಷ್ಮೀ ಶ್ರುತಿ ಇನ್ನೂ ಜೀವಂತವಾಗಿದ್ದಾಳೆ ಎಂದು ನಂಬಿರುತ್ತಾಳೆ‌. ಅವಳನ್ನು ಹುಡುಕುತ್ತಾ ಮನೆ ಬಿಟ್ಟು ಬರುತ್ತಾಳೆ. ಈಗ ಅವಳನ್ನು ಶ್ರಾವ್ಯಳಾಗಿ ಬದುಕುವ ವಿಷಯ ಚಿನ್ನುಗೆ ಅರಿವಾಗುತ್ತದೆ. ಈ ಬಗ್ಗೆ ತನ್ನ ಪರಿವಾರಕ್ಕೆ ಹೇಳುತ್ತಾಳೆ‌.

ಚಂದು ಅವರ ಕುಟುಂಬವು ಲಂಡನ್‌ನ ಶ್ರೀಮಂತ ವ್ಯಾಪಾರ ಕುಟುಂಬವಾದ ಚಕ್ರವರ್ತಿ ಕುಟುಂಬ ಎಂದು ವೇಷ ಧರಿಸಿ ಭಾರ್ಗವಿ ದೇವಿಯ ಮನೆಗೆ ಪ್ರವೇಶಿಸುತ್ತದೆ. ರಾಮಚಂದ್ರ ರಾಯರು ಕುಟುಂಬದ ಹಿರಿಯ ಸದಸ್ಯರಾದ ವಸಂತ್ ಚಕ್ರವರ್ತಿ, ಅವರ ಪತ್ನಿ ಸುಲೋಚನ, ಶಾಲಿನಿ ಚಕ್ರವರ್ತಿಯಾಗಿ, ಅವರ ಮಗಳು ಕಲ್ಪನಾ ಸುಮಲಥ ಚಕ್ರವರ್ತಿಯಾಗಿ ಮತ್ತು ಪತಿ ಕೈಲಾಶ್ ಅಮರನಾಥ ಚಕ್ರವರ್ತಿ (ಎಸ್ / ಒ ಶಾಲಿನಿ ಮತ್ತು ವಸಂತ್ ಚಕ್ರವರ್ತಿ) ವೇಷದಲ್ಲಿದ್ದಾರೆ. ರಾಮು ಸುದೀಪ್ ಚಕ್ರವರ್ತಿ (ಎಸ್ / ಒ ಸುಮಲತಾ ಮತ್ತು ಅಮರನಾಥ್) ಮತ್ತು ಕಾರು ಚಾಲಕನಾಗಿ ಚಂದು, ಯುವರಾಜ್ ಸಿಂಗ್, ಶ್ವೇತಾ ಸುಷ್ಮಾ ಪಾತ್ರದಲ್ಲಿ - ಶಾಲಿನಿ ಮತ್ತು ವಸಂತ್ ಅವರ ಮಗಳು. ರಂಜಿತ್ ಶ್ವೇತಾನಂದ ಸ್ವಾಮೀಜಿ ವೇಷ. ಉಳಿದ ಕಥಾವಸ್ತುವು ಲಕ್ಷ್ಮಿ, ಚಂದನ್ ಮತ್ತು ಕುಟುಂಬದೊಂದಿಗೆ ಶ್ರುತಿಯನ್ನು ತಮ್ಮ ಜೀವನದಲ್ಲಿ ಹೇಗೆ ಮರಳಿ ತರುತ್ತಾರೆ ಮತ್ತು ಅವಳ ಹಿಂದಿನದನ್ನು ಹೇಗೆ ನೆನಪಿಸುತ್ತಾರೆ ಎಂಬುದರ ಸುತ್ತ ಸುತ್ತುತ್ತದೆ.

ಕಥೆಯು ಲಕ್ಷ್ಮೀ (ಚಿನ್ನು/ಲಚ್ಚಿ) ಮದುವೆಯಲ್ಲಿ ಕೊನೆಗೆಯಾಗುತ್ತದೆ.

ಕ್ರಾಸ್ ಓವರ್[ಬದಲಾಯಿಸಿ]

ಗೊಂಬೆ ಪಾತ್ರದ ನಾಪತ್ತೆಯಾದ ಮಗಳನ್ನು ಹುಡುಕುವ ಅನ್ವೇಷಣೆಯಲ್ಲಿ ಕುಲವಧು ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿಗಳು ತಿಂಗಳುಗಳ ಕಾಲ ಪರಸ್ಪರ ಸಂಬಂಧ ಹೊಂದಿದ್ದವು. ಕಾಣೆಯಾದ ಬಾಲಕಿಯನ್ನು ಕುಲವಾಧು ಧಾರಾವಾಹಿಯಲ್ಲಿ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದರು. ಮತ್ತು, ಅಂತಿಮವಾಗಿ ಎರಡೂ ಧಾರಾವಾಹಿಗಳ ಪ್ರಮುಖ ಪಾತ್ರಗಳು ಕಾಣೆಯಾದ ಹುಡುಗಿಯ ಪ್ರಸಂಗವು ಮುಗಿಯುವವರೆಗೆ ಸ್ವಲ್ಪ ಸಮಯದವರೆಗೆ ಒಟ್ಟಿಗೆ ಸೇರುತ್ತವೆ. [೫]


ಪಾತ್ರವರ್ಗ[ಬದಲಾಯಿಸಿ]

ಮುಖ್ಯ ಪಾತ್ರಗಳು[ಬದಲಾಯಿಸಿ]

 • ಚಂದು ಗೌಡ/ ಶೈನ್ ಶೆಟ್ಟಿ /ಚಂದನ್ / ಯುವರಾಜ್ ಸಿಂಗ್ [೬] [೭] : ಚಂದು ಪಾತ್ರದಲ್ಲಿ. ಲಕ್ಷ್ಮೀ ಮತ್ತು ಗೊಂಬೆ ಗಂಡನಾಗಿ. ಪಾರ್ವತಿ ಮಗನಾಗಿ.
 • ರಶ್ಮಿ ಪ್ರಭಾಕರ್/ ಕವಿತಾ ಗೌಡ : ಲಕ್ಷ್ಮಿ (ಲಚ್ಚಿ, ಚಿನ್ನು) ಪಾತ್ರದಲ್ಲಿ, ಚಂದು ಮೊದಲ ಹೆಂಡ್ತಿ. ಗೊಂಬೆ ದತ್ತು ತಂಗಿ.
 • ನೇಹಾ ಗೌಡ : ಶ್ರುತಿ ಆಲಿಯಾಸ್ ಗೊಂಬೆ ಪಾತ್ರದಲ್ಲಿ. ಚಂದು ಎರಡನೇ ಹೆಂಡತಿಯಾಗಿ. ಚಿನ್ನು ಅಕ್ಕನಾಗಿ. ಕಲ್ಪನಾ ಮಗಳಾಗಿ. ಸಿರಿ ಹೆತ್ತ ತಾಯಿಯಾಗಿ. ಶ್ರಾವ್ಯ ಆಗಿ [೮] [೯]

ಇತರೆ ಪಾತ್ರಗಳು[ಬದಲಾಯಿಸಿ]

 • ದೀಪಾ ರವಿಶಂಕರ್ : ಚಂದು ತಾಯಿ ಪಾರ್ವತಿಯಾಗಿ.
 • ಅನಿಖಾ ಸಿಂಧ್ಯಾ: ಕುಮುದಾಳಾಗಿ, ಶ್ರುತಿಯ ಚಿಕ್ಕಮ್ಮ, ಚಂದು ಸೋದರ ಅತ್ತೆ, ಕಲ್ಪನಾ ತಂಗಿಯಾಗಿ [೧೦]
 • ಜೀವನ್ ನೀನಸಮ್: ರಂಜಿತ್ ಪಾತ್ರದಲ್ಲಿ. ಶ್ವೇತಾನಂದ ಸ್ವಾಮೀಜಿಯಾಗಿ
 • ವಿಜಯ್: ರಾಮು ಪಾತ್ರದಲ್ಲಿ. ಸುದೀಪ್ ಚಕ್ರವರ್ತಿಯಾಗಿ.
 • ನವ್ಯಾಗೌಡ: ಶ್ವೇತಾ/ ಸುಷ್ಮಾ ಪಾತ್ರದಲ್ಲಿ
 • ಲಕ್ಷ್ಮಿ ಸಿದ್ದಯ್ಯ: ಕಲ್ಪನಾ / ಸುಮಲತ ಚಕ್ರವರ್ತಿಯಾಗಿ
 • ಜಯಬಾಲು : ಸುಲೋಚನಾ / ಶಾಲಿನಿ ಚಕ್ರವರ್ತಿಯಾಗಿ
 • ದತ್ತಣ್ಣ: ರಾಮಚಂದ್ರ ರಾಯರು / ವಸಂತ್ ಚಕ್ರವರ್ತಿಯಾಗಿ
 • ರೋಹಿತ್ ನಾಗೇಶ್ : ಮನೋಜ್ ಪಾತ್ರದಲ್ಲಿ
 • ಎಚ್‌ಎಂಟಿ ವಿಜಯ್ : ಬೋರೆಗೌಡ ಪಾತ್ರದಲ್ಲಿ
 • ವಿಕ್ರಮ್ ವಾಸುದೇವ ರಾವ್ : ನಂಜುಂಡಿಯಾಗಿ
 • ವಸಂತ್ ಕುಮಾರ್ : ಕೈಲಾಶ್ / ಅಮರನಾಥ ಚಕ್ರವರ್ತಿಯಾಗಿ
 • ನಿರಂಜನ ಕುಮಾರ್: ಬಸವನ ಪಾತ್ರದಲ್ಲಿ
 • ಚಿ ಭಾರತ್ : ಗಿರಿಯಾಗಿ
 • ಕಮಲಾಶ್ರಿ : ತಾತಮ್ಮಳ ಪಾತ್ರದಲ್ಲಿ
 • ಲಕ್ಷ್ಮಿ ಸಂಜಯ್: ರೇವತಿಯಾಗಿ
 • ರಾಮಸ್ವಾಮಿ: ಯಮಸ್ವಂತ್ ಪಾತ್ರದಲ್ಲಿ
 • ಬೇಬಿ ಮೋನಿಷಾ: ಸಿರಿಯ ಪಾತ್ರದಲ್ಲಿ, ಗೊಂಬೆ & ಚಂದು ಮೊದಲ ಮಗು
 • ಅನಿಲ್ ಕುಮಾರ್ ಟಿಪ್ಟೂರ್
 • ರೋಹಿತ್ ರಂಗಸ್ವಾಮಿ : ಅನಿರುದ್ಧ್ / ಅರುಣ್ ಪಾತ್ರದಲ್ಲಿ, ಭಾರ್ಗವಿ ದೇವಿಯ ಸಹೋದರ
 • ರೂಪೇಶ್ ಕುಮಾರ್: ಗುರು, ಭಾರ್ಗವಿ ದೇವಿಯ ಸಹೋದರ
 • ನಂದಿನಿ: ಭಾರ್ಗವಿ ದೇವಿಯಾಗಿ
 • ಸೌಮ್ಯ ಭಟ್ : ಮೇಧಾ ಪಾತ್ರದಲ್ಲಿ, ಭಾರ್ಗವಿ ದೇವಿಯ ಮಗಳಾಗಿ
 • ಸಾಗರ್ ಗೌಡ: ವಾಸು, ಭಾರ್ಗವಿ ದೇವಿಯ ಸೇವಕನಾಗಿ

ಉಲ್ಲೇಖಗಳು[ಬದಲಾಯಿಸಿ]

 1. "ETV Kannada serial Lakshmi Baramma".
 2. "'Lakshmi Baramma' crosses 2000 episodes; the cast celebrates by cutting a cake". Times of India.
 3. "More-spellbinding-soap-gathas". Outlook India.
 4. "ETV Kannada Launches Lakshmi Baaramma". Archived from the original on 2013-12-03. Retrieved 2020-01-06.
 5. "Serials merge for a common cause!". Deccan Chronicle.
 6. "TOI-Will second marriage bring bad luck to Chandan?". Times of India.
 7. "Who will replace Chandan in Lakshmi Baramma?". Times of India.
 8. "Imagination runs wild on TV". Deccan Chronicle.
 9. "Neha Gowda of Lakshmi Baramma talks about playing the much-loved character of Gombe". The Hindu.
 10. "Lakshmi Baramma: Kummuda chikki aka actress Anika makes a comeback". Times of India.