ಲಕ್ಕವಳ್ಳಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2009) |
ಲಕ್ಕವಳ್ಳಿ | |
---|---|
ಗ್ರಾಮ | |
Country | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರು |
Elevation | ೩೦೦ m (೧,೦೦೦ ft) |
Population | |
• Total | ೮,೦೦೦ |
Languages | |
• Official | Kannada, others like Tamil,Telugu, Urdu, Malayalam are also present |
ಸಮಯ ವಲಯ | UTC+5:30 (IST) |
PIN | 577128 |
ವಾಹನ ನೊಂದಣಿ | KA - 18 |
Nearest city | Shivamogga |
Lok Sabha constituency | Chikkamagaluru |
Vidhan Sabha constituency | Tarikere |
Climate | Moderate Tropical (Köppen) |
Website |
ಲಕ್ಕವಳ್ಳಿ ಒಂದು ಹೋಬಳಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ. ಈ ಪ್ರದೆಶದಲ್ಲಿ ಭಧ್ರಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು "ಲಕ್ಕವಳ್ಳಿ ಡ್ಯಾಮ್" ಎಂದೆ ಪ್ರಸಿದ್ಧಿ ಪಡೆದಿದೆ. ಈ ವಿವಿಧೋದ್ದೇಶದ ಅಣೆಕಟ್ಟು ಮುಖ್ಯವಾಗಿ ಕೃಷಿ ಮತ್ತ್ತು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಪ್ರಖ್ಯಾತ ಕುವೆಂಪು ವಿಶ್ವವಿದ್ಯಾಲಯವು ಇಲ್ಲಿಂದ ನಾಲ್ಕು ಮೈಲಿ ದೂರದಲ್ಲಿದ್ದು, ರಾಜ್ಯದ ಪ್ರತಿಷ್ಠಿತ ಕಲಿಕಾ ಮತ್ತು ಸಂಶೊಧನಾ ಕೇಂದ್ರವಾಗಿದೆ.
ಭಧ್ರಾ ಅಭಯಾರಣ್ಯ[ಬದಲಾಯಿಸಿ]
ಇಲ್ಲಿನ ಭಧ್ರಾ ಅಭಯಾರಣ್ಯ ರಾಜ್ಯದ ಪ್ರಮುಖ ಅಭಯಾರಣ್ಯವಾಗಿದೆ. ಇಂತಹ ಅರಣ್ಯದಲ್ಲಿ ಹುಲಿ,ಆನೆ, ಚಿರತೆ,ಗೌರ್(ಕಾಡೆಮ್ಮೆ), ಲೆಮುರ್, ಜಿಂಕೆ, ಸಾಂಬಾರ, ಸಾರಂಗ, ನವಿಲು ಇನ್ನಿತರ ಪ್ರಾಣಿ, ಪಕ್ಷಿಗಳ ವಾಸಸ್ಥಾನವಾಗಿದೆ. ಭಧ್ರಾ ಅಭಯಾರಣ್ಯವು "ಪ್ರಾಜೆಕ್ಟ್ ಟೈಗರ್" ಅಡಿಯಲ್ಲಿನ ಹುಲಿ ಸಂರಕ್ಷಿತ ಪ್ರದೇಶ. ಈ ೪೯೨ ಚ. ಕಿ ಮೀ ವಿಸ್ತೀರ್ಣದ ಅರಣ್ಯವು ಜಲಾಶಯದ ಸುತ್ತಮುತ್ತಲಿನ ಪ್ರದೆಶದಲ್ಲಿ ಹರಡಿಕೊಂಡಿದ್ದು ಪ್ರಕೃತಿಯ ವಿಹಂಗಮತೆಗೆ ಸಾಕ್ಷಿಯಾಗಿದೆ.
ಅಣೆಕಟ್ಟು[ಬದಲಾಯಿಸಿ]
ಅಣೆಕಟ್ಟಿನ ಕಟ್ಟಡವು ೧೮೬ ಅಡಿ ಇದ್ದು, ಒಟ್ಟು ಎತ್ತರ ೧೯೪ ಅಡಿ ಇದೆ. ಇದನ್ನು ಸರ್ ಎಮ್ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಟ್ಟಲಾಗಿದ್ದು ಕರ್ನಾಟಕದ ಸುಂದರ ಮತ್ತು ಹಳೆಯ ಅಣೆಕಟ್ಟಿನಲ್ಲೊಂದಾಗಿದೆ. ಪಶ್ಚಿಮ ಘಟ್ಟದ ಮಡಿಲಲ್ಲಿರುವ ಅಣೆಕಟ್ಟೆಯು ಸಣ್ಣ ಸಣ್ಣ ದ್ವೀಪವನ್ನು ಸೃಷ್ಟಿ ಸಿದೆ. ಬಹೋಪಯೋಗಿ ಅಣೆಕಟ್ಟಾಗಿದ್ದು ಇಲ್ಲಿಂದ ವಿದ್ಯುತ್ ಉತ್ಪಾದನೆ, ಕೃಷಿ ಮತ್ತು ಇತರೆ ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ತರೀಕೆರೆ, ಕಡೂರು, ಬೀರೂರು,ದಾವಣಗೆರೆ ಮತ್ತು ಚಿತ್ರದುರ್ಗಗಳಿಗೆ ವಿವಿಧೋದ್ದೇಶಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ.
ತಲುಪುವುದು ಹೇಗೆ[ಬದಲಾಯಿಸಿ]
ಲಕ್ಕವಳ್ಳಿಯು ಪ್ರಮುಖ ಪಟ್ಟಣಗಳಾದ ತರೀಕೆರೆ ಶಿವಮೊಗ್ಗ ಮತ್ತು ಭದ್ರಾವತಿಯಿಂದ ತಲಾ ೨೦ ಕಿಮೀ, ೨೮ ಕಿಮೀ ಹಾಗು ೨೪ ಕಿಮೀ ದೂರದಲ್ಲಿದೆ.
- ಹತ್ತಿರದ ರೈಲ್ವೆ ನಿಲ್ದಾಣ: ತರೀಕೆರೆ , ಭದ್ರಾವತಿ, ಶಿವಮೊಗ್ಗ
- ಹತ್ತಿರದ ವಿಮಾನ ನಿಲ್ದಾಣ: ಮಂಗಳೂರು (೨೦೪ ಕಿಮೀ)
- ಖಾಸಗಿ ಬಸ್ಸುಗಳ ಸೌಲಭ್ಯವಿದೆ
ಲಕ್ಕವಳ್ಳಿಯ ಅಂಕಿ ಅಂಶಗಳು[ಬದಲಾಯಿಸಿ]
- ವಿಸ್ತೀರ್ಣ : ೮ ಚ ಕಿ ಮೀ
- ಜನಸಂಖ್ಯೆ : ೭೦೦೦
- ಉದ್ಯೋಗ : ಕೃಷಿ, ಮೀನುಗಾರಿಕೆ, ಕೈಗಾರಿಕೆ
- ಗ್ರಾಮ ದೇವತೆ : ಮಾರಿಕಾಂಬ
- ದೇವಾಲಯಗಳು: ಸೋಮೇಶ್ವರ ಸ್ವಾಮಿ, ಕದಲಿ ರಂಗನಾಥ ಸ್ವಾಮಿ, ಆಂಜನೇಯ ಸ್ವಾಮಿ
- ಅಂಛೆ ಪೆಟ್ಟಿಗೆ ಸಂಖ್ಯೆ : ೫೭೭೧೨೮
ಸೌಲಭ್ಯಗಳು[ಬದಲಾಯಿಸಿ]
- ಆಸ್ಪತ್ರೆಗಳು : ೨ (ಸರ್ಕಾರಿ ಮತ್ತು ಬಸವೇಶ್ವರ)
- ಅಂಛೆ ಕಛೇರಿ : ೧
- ಪೋಲೀಸ್ ಠಾಣೆ : ೧
- ಪಶು ವೈದ್ಯಾಲಯ: ೧
![]() |
Wikimedia Commons has media related to Lakkavalli. |
- Pages with non-numeric formatnum arguments
- ಉಲ್ಲೇಖವಿಲ್ಲದ ಲೇಖನಗಳು
- Articles needing additional references from January 2009
- Articles with invalid date parameter in template
- All articles needing additional references
- Pages using infobox settlement with unknown parameters
- Commons link is locally defined
- ಚಿಕ್ಕಮಗಳೂರು ಜಿಲ್ಲೆ
- ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳು