ಲಂಚಾವತಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಂಚಾವತಾರ ನಾಟಕವು ೧೯೫೯ರ ಡಿಸೆಂಬರ್ ೩೦ ರಂದು ಶಿವಮೊಗ್ಗದಲ್ಲಿ ಪ್ರಪ್ರಥಮ ಪ್ರದರ್ಶನ ಕಂಡಿತು.ಮಾಸ್ಟರ್ ಹಿರಣ್ಣಯ್ಯನವರ ಈ ನಾಟಕದ ಮೂಲ ಹೆಸರು " ಗುಮಾಸ್ತ". ಈ ನಾಟಕದಲ್ಲಿ ಗುಮಾಸ್ತನಾದ ಸತ್ಯ ಮೂರ್ತಿ ಮತ್ತು ವಿಶ್ವ ಗೆಳೆಯರು.ಒಂದು ಸಲ ಈ ಗುಮಾಸ್ತ ಯಾವುದೊ ಕೆಲಸ ಮಾಡಿ ಕೊಡಲು ತನ್ನ ಗೆಳೆಯನ ಹತ್ತಿರವೇ ಲಂಚ ತಗೋತಾನೆ.ಅಲ್ಲಿವರೆಗೂ ಸತ್ಯ ಮೂರ್ತಿಯನ್ನು ಸರ್ ಎನ್ನುತಿದ್ದ ಸ್ನೇಹಿತ ವಿಶ್ವ ಕೂಡಲೇ ಏಕವಚನದಿಂದ ಕರೆಯಲು ಶುರುವಿಡುತ್ತಾನೆ.ಆತ್ಮ ಗೌರವವನ್ನು ಕಳೆದು ಕೊಂಡರೆ ಏನಾಗುತ್ತದೆ ಎಂಬುದನ್ನು ತಿಳಿಸಿಕೊಡುವ ಈ ನಾಟಕ ಇಲ್ಲಿವರೆಗೆ ಹನ್ನೊಂದು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ.ಅಮೇರಿಕ,ಇಂಗ್ಲೆಂಡ್,ನ್ಯೂಜಿಲಂಡ್,ಬಹರೇನ್,ದುಬೈ,ಕುವೈತ್ ಮುಂತಾದ ದೇಶಗಳಲ್ಲಿ ಜನ ಒತ್ತಾಯಿಸಿ ಈ ನಾಟಕ ಪ್ರದರ್ಶನ ಮಾಡಿಸಿದ್ದಾರೆ.