ರೋಹಿತ ಮಾಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Spectroscope
Other namesSpectrograph
Related itemsMass spectrograph

ರೋಹಿತ ಮಾಪಕ (ರೋಹಿತ ದ್ಯುತಿಮಾಪಕ , ರೋಹಿತ ಲೇಖಿ ಅಥವಾ ರೋಹಿತ ದರ್ಶಕ ) ಎಂಬುದು ಒಂದು ವೈಜ್ಞಾನಿಕ ಉಪಕರಣವಾಗಿದ್ದು, ವಿದ್ಯುತ್ಕಾಂತೀಯ ರೋಹಿತದ ಒಂದು ನಿರ್ದಿಷ್ಟ ಭಾಗದ ಮೇಲಿನ ಬೆಳಕಿನ ಗುಣಲಕ್ಷಣಗಳನ್ನು ಅಳೆಯಲು ಇದನ್ನು ಬಳಸಲಾಗುತ್ತದೆ; ಮತ್ತು ಮೂಲದ್ರವ್ಯಗಳನ್ನು ಗುರುತಿಸಲು ರೋಹಿತ ದರ್ಶಕದ ವಿಶ್ಲೇಷಣೆಯಲ್ಲಿ ಇದನ್ನು ವಿಶಿಷ್ಟವಾಗಿ ಬಳಸಲಾಗುತ್ತದೆ. ಅಳೆಯಲ್ಪಟ್ಟ ಚಲ ಪರಿಮಾಣವು ಬಹುತೇಕ ವೇಳೆ ಬೆಳಕಿನ ಅಳೆಯಬಲ್ಲ ಪ್ರಮಾಣವಾಗಿರುತ್ತದೆಯಾದರೂ, ಇದು ಉದಾಹರಣೆಗೆ, ಧ್ರುವೀಕರಣ ಸ್ಥಿತಿಯೂ ಆಗಿರಲು ಸಾಧ್ಯವಿರುತ್ತದೆ. ಸ್ವತಂತ್ರ ಚಲ ಪರಿಮಾಣವು ಸಾಮಾನ್ಯವಾಗಿ ಬೆಳಕಿನ ತರಂಗಾಂತರ ಅಥವಾ ಒಂದು ಏಕಮಾನವಾಗಿದ್ದು, ತರಂಗ ಸಂಖ್ಯೆ ಅಥವಾ ಇಲೆಕ್ಟ್ರಾನ್‌ ವೋಲ್ಟ್‌‌‌‌ಗಳಂಥ, ತರಂಗಾಂತರದೊಂದಿಗೆ ಒಂದು ಪರಸ್ಪರ ಸಂಬಂಧವನ್ನು ಹೊಂದಿರುವ ಫೋಟಾನ್‌‌ ಶಕ್ತಿಗೆ ಅದು ನೇರವಾಗಿ ಅನುಗುಣವಾಗಿರುತ್ತದೆ. ರೋಹಿತದ ಗೆರೆಗಳನ್ನು ಉಂಟುಮಾಡುವುದಕ್ಕಾಗಿ ಮತ್ತು ಅವುಗಳ ತರಂಗಾಂತರಗಳು ಮತ್ತು ತೀವ್ರತೆಗಳನ್ನು ಅಳೆಯುವುದಕ್ಕಾಗಿರುವ ರೋಹಿತ ದರ್ಶನದಲ್ಲಿ ಒಂದು ರೋಹಿತ ಮಾಪಕವನ್ನು ಬಳಸಲಾಗುತ್ತದೆ. ಗಾಮಾ ಕಿರಣಗಳು ಮತ್ತು ಕ್ಷ-ಕಿರಣಗಳಿಂದ ಮೊದಲ್ಗೊಂಡು ಅತೀವ ಅವರೋಹಿತ ಕಿರಣಗಳವರೆಗೆ ಇರುವ, ತರಂಗಾಂತರಗಳ ಒಂದು ಅತ್ಯಂತ ವ್ಯಾಪಕ ಶ್ರೇಣಿಯ ಮೇಲೆ ಕಾರ್ಯನಿರ್ವಹಿಸುವ ಉಪಕರಣಗಳಿಗೆ ರೋಹಿತ ಮಾಪಕ ಎಂಬ ಶಬ್ದವನ್ನು ಅನ್ವಯಿಸಲಾಗುತ್ತದೆ. ಒಂದು ವೇಳೆ ಆಸಕ್ತಿಯ ಕ್ಷೇತ್ರವು ಗೋಚರ ರೋಹಿತವನ್ನು ಸಮೀಪಿಸಲು ಸೀಮಿತಗೊಳಿಸಲ್ಪಟ್ಟರೆ, ಅಂಥ ಅಧ್ಯಯನವನ್ನು ರೋಹಿತ ದ್ಯುತಿಮಾಪನ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಹೇಳುವುದಾದರೆ, ರೋಹಿತದ ವಿಭಿನ್ನ ಭಾಗಗಳನ್ನು ಅಳೆಯಲು ವಿಭಿನ್ನ ಕೌಶಲಗಳು ಬಳಸಲ್ಪಡುತ್ತವೆಯಾದ್ದರಿಂದ, ಈ ಒಟ್ಟು ವ್ಯಾಪ್ತಿಯ ಯಾವುದೇ ಸಣ್ಣ ಭಾಗದ ಮೇಲೆ ಯಾವುದೇ ನಿರ್ದಿಷ್ಟ ಉಪಕರಣವು ಕಾರ್ಯನಿರ್ವಹಿಸುತ್ತದೆ. ದ್ಯುತಿ ಆವರ್ತನಗಳಿಗಿಂತ ಕೆಳಗೆ (ಅಂದರೆ, ಮೈಕ್ರೋತರಂಗ ಮತ್ತು ರೇಡಿಯೋ ಆವರ್ತನಗಳಲ್ಲಿ), ರೋಹಿತ ವಿಶ್ಲೇಷಕವು ನಿಕಟ ಸಂಬಂಧವನ್ನು ಹೊಂದಿರುವ ಒಂದು ವಿದ್ಯುನ್ಮಾನ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

ರೋಹಿತ ದರ್ಶಕಗಳು[ಬದಲಾಯಿಸಿ]

ವಿವರ್ತನೆ ಆಧರಿತ ರೋಹಿತ ಮಾಪಕಗಳ ಹೋಲಿಕೆ: ಪ್ರತಿಫಲನದ ಮಸೂರಗಳು, ವಕ್ರೀಕರಣದ ಮಸೂರಗಳು, ಫೈಬರ್‌ ಮಸೂರಗಳು

ಖಗೋಳ ವಿಜ್ಞಾನದಲ್ಲಿ ಮತ್ತು ರಸಾಯನ ಶಾಸ್ತ್ರದ ಕೆಲವೊಂದು ಶಾಖೆಗಳಲ್ಲಿ ರೋಹಿತ ದರ್ಶಕಗಳನ್ನು ಅನೇಕವೇಳೆ ಬಳಸಲಾಗುತ್ತದೆ. ಮುಂಚಿನ ರೋಹಿತ ದರ್ಶಕಗಳು ಕೇವಲ ಪಟ್ಟಕಗಳಾಗಿದ್ದು, ಬೆಳಕಿನ ತರಂಗಾಂತರಗಳನ್ನು ಗುರುತುಮಾಡುವ ಕ್ರಮಾಂಕನಗಳನ್ನು ಅವು ಹೊಂದಿದ್ದವು. ಮಾನೋಕ್ರೊಮೇಟರ್‌‌‌‌ಗಳಂಥ ಆಧುನಿಕ ರೋಹಿತ ದರ್ಶಕಗಳು ಒಂದು ವಿವರ್ತನ ಜಾಲರಿ, ಒಂದು ಚಲಿಸಬಲ್ಲ ಸೀಳಿಕೆ, ಮತ್ತು ಕೆಲವೊಂದು ವಿಧದ ದ್ಯುತಿಪತ್ತೆಕಾರಕವನ್ನು ಸಾಮಾನ್ಯವಾಗಿ ಬಳಸುತ್ತವೆ ಮತ್ತು ಇವೆಲ್ಲವೂ ಒಂದು ಕಂಪ್ಯೂಟರ್‌‌‌ನಿಂದ ಸ್ವಯಂಚಾಲನೆಗೊಳಿಸಲ್ಪಟ್ಟಿರುತ್ತವೆ ಮತ್ತು ನಿಯಂತ್ರಿಸಲ್ಪಟ್ಟಿರುತ್ತವೆ. ಜೋಸೆಫ್‌ ವಾನ್‌ ಫ್ರೌನ್‌ಹೋಫರ್‌‌ ಎಂಬಾತನಿಂದ ರೋಹಿತ ದರ್ಶಕವು ಆವಿಷ್ಕರಿಸಲ್ಪಟ್ಟಿತು.

ಮೂಲದ್ರವ್ಯವೊಂದನ್ನು ತಾಪಜ್ವಲನದ ಮಟ್ಟದವರೆಗೆ ಬಿಸಿಮಾಡಿದಾಗ, ಸದರಿ ಮೂಲದ್ರವ್ಯದ ಪರಮಾಣು ಸಂರಚನೆಯ ವಿಶಿಷ್ಟ ಲಕ್ಷಣವಾಗಿರುವ ಬೆಳಕನ್ನು ಅದು ಹೊರಸೂಸುತ್ತದೆ. ಬೆರಳ ಗುರುತುಗಳು ಎಂಬುದಾಗಿ ಭಾವಿಸಲ್ಪಡುವಂತೆ ಮಾಡುವ, ಸೂಕ್ಷ್ಮವಾಗಿ ವಿಶದೀಕರಿಸಲ್ಪಟ್ಟ ಪಟ್ಟೆಗಳನ್ನು ಮಾಪಕದ ಮೇಲೆ ಬೆಳಕಿನ ನಿರ್ದಿಷ್ಟ ಆವರ್ತನಗಳು ಉಂಟುಮಾಡುತ್ತವೆ. ಉದಾಹರಣೆಗೆ, ಸೋಡಿಯಂ ಧಾತುವು, ಸೋಡಿಯಂ D-ಗೆರೆಗಳು ಎಂದು ಕರೆಯಲಾಗುವ ಒಂದು ಅತ್ಯಂತ ವಿಶಿಷ್ಟ ಲಕ್ಷಣದ ಜೋಡಿ ಹಳದಿ ಪಟ್ಟೆಯನ್ನು 588.9950 ಮತ್ತು 589.5924 ನ್ಯಾನೋಮೀಟರ್‌‌ಗಳಲ್ಲಿ ಹೊಂದಿದೆ, ಮತ್ತು ಒಂದು ಕಡಿಮೆ ಒತ್ತಡದ ಸೋಡಿಯಂ ಆವಿ ದೀಪವನ್ನು ನೋಡಿರುವ ಯಾರಾದರೊಬ್ಬರಿಗೆ ಇದರ ಬಣ್ಣವು ಅದಕ್ಕೆ ನಿಕಟವಾಗಿರುವಂತೆ ತೋರುತ್ತದೆ.

19ನೇ ಶತಮಾನದ ಆರಂಭದಲ್ಲಿದ್ದ ಮೂಲ ರೋಹಿತ ದರ್ಶಕದ ವಿನ್ಯಾಸದಲ್ಲಿ, ಒಂದು ಸೀಳಿಕೆಯ ಮೂಲಕ ಬೆಳಕು ಪ್ರವೇಶಿಸುತ್ತಿತ್ತು ಮತ್ತು ಒಂದು ಸಮಾಂತರೀಕರಿಸುವ ಮಸೂರವು ಬೆಳಕನ್ನು ಸಮಾನಾಂತರ ಕಿರಣಗಳ ಒಂದು ತೆಳುವಾದ ರಶ್ಮಿ ದಂಡವಾಗಿ ರೂಪಾಂತರಿಸುತ್ತಿತ್ತು. ಒಂದು ಪಟ್ಟಕದ ಮೂಲಕ (ಕೈಯಲ್ಲಿ-ಹಿಡಿದುಕೊಂಡ ರೋಹಿತ ದರ್ಶಕಗಳಲ್ಲಿ, ಸಾಮಾನ್ಯವಾಗಿ ಒಂದು ಅಮಿಸಿ ಪಟ್ಟಕದ ಮೂಲಕ) ಬೆಳಕು ನಂತರ ಹಾದುಹೋಗುತ್ತಿತ್ತು ಹಾಗೂ ಪಟ್ಟಕವು ರಶ್ಮಿ ದಂಡವನ್ನು ಒಂದು ರೋಹಿತವಾಗಿ ವಕ್ರೀಕರಿಸುತ್ತಿತ್ತು; ಏಕೆಂದರೆ, ಚೆದರಿಕೆಯ ಕಾರಣದಿಂದಾಗಿ ವಿಭಿನ್ನ ತರಂಗಾಂತರಗಳು ವಿಭಿನ್ನ ಮೊತ್ತಗಳಾಗಿ ವಕ್ರೀಕರಿಸಲ್ಪಡುತ್ತಿದ್ದವು. ರೋಹಿತದ ಬಿಂಬದ ಮೇಲ್ಭಾಗದಲ್ಲಿ ಸ್ಥಳಾಂತರಿಸಲ್ಪಟ್ಟ ಮಾಪಕವೊಂದನ್ನು ಹೊಂದಿರುವ ಕೊಳವೆಯೊಂದರ ಮೂಲಕ ಈ ಬಿಂಬವನ್ನು ನಂತರ ವೀಕ್ಷಿಸಲಾಗುತ್ತಿತ್ತು; ಇದರಿಂದಾಗಿ ಅದರ ಪ್ರತ್ಯಕ್ಷ ಅಳತೆಯನ್ನು ಮಾಡುವುದು ಸಾಧ್ಯವಾಗುತ್ತಿತ್ತು.

ಛಾಯಾಚಿತ್ರಗ್ರಹಣದ ಫಿಲಮಿನ ಅಭಿವೃದ್ಧಿಯೊಂದಿಗೆ ಹೆಚ್ಚು ನಿಖರವಾದ ರೋಹಿತ ಲೇಖಿಯು ಸೃಷ್ಟಿಸಲ್ಪಟ್ಟಿತು. ಇದು ರೋಹಿತ ದರ್ಶಕವು ಹೊಂದಿದ್ದಂಥ ತತ್ತ್ವವನ್ನೇ ಆಧರಿಸಿತ್ತು, ಆದರೆ ವೀಕ್ಷಿಸುವ ಕೊಳವೆಯ ಜಾಗದಲ್ಲಿ ಒಂದು ಕ್ಯಾಮರಾವನ್ನು ಇದು ಹೊಂದಿತ್ತು. ಇತ್ತೀಚಿನ ವರ್ಷಗಳಲ್ಲಿ, ದ್ಯುತಿವರ್ಧಕ ಕೊಳವೆಯ ಸುತ್ತಲೂ ನಿರ್ಮಿಸಲಾದ ವಿದ್ಯುನ್ಮಾನ ಮಂಡಲಗಳು ಕ್ಯಾಮರಾವನ್ನು ಪಲ್ಲಟಗೊಳಿಸಿವೆ; ಇದರಿಂದಾಗಿ ಅತಿ ಮಹತ್ತರವಾದ ನಿಖರತೆಯೊಂದಿಗೆ ನಿಜಾವಧಿಯ ರೋಹಿತ ಲೇಖೀಯ ವಿಶ್ಲೇಷಣೆಯನ್ನು ನಡೆಸಲು ಅವಕಾಶ ದೊರೆಯುತ್ತದೆ. ರೋಹಿತ ಲೇಖೀಯ ವ್ಯವಸ್ಥೆಗಳಲ್ಲಿ, ಫಿಲಮಿನ ಜಾಗದಲ್ಲಿ ದ್ಯುತಿಸಂವೇದಕಗಳ ಶ್ರೇಣಿಗಳನ್ನೂ ಸಹ ಉಪಯೋಗಿಸಲಾಗುತ್ತದೆ. ಅಜ್ಞಾತ ಮೂಲದ್ರವ್ಯದ ಸಂಯೋಜನೆಯನ್ನು ವಿಶ್ಲೇಷಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಖಗೋಳೀಯ ಸಂಗತಿಯ ಅಧ್ಯಯನ ಮಾಡುವುದಕ್ಕೆ ಮತ್ತು ಖಗೋಳೀಯ ಸಿದ್ಧಾಂತಗಳನ್ನು ಪರೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಇಂಥ ರೋಹಿತದ ವಿಶ್ಲೇಷಣೆ, ಅಥವಾ ರೋಹಿತ ದರ್ಶನವು ಒಂದು ಮುಖ್ಯ ವೈಜ್ಞಾನಿಕ ಸಾಧನವಾಗಿ ಮಾರ್ಪಟ್ಟಿದೆ.

ಆಧುನಿಕ ರೋಹಿತ ಲೇಖಿಗಳಲ್ಲಿ, ಫೋಟಾನ್‌‌ ಸಂಖ್ಯೆಯ ಸ್ವರೂಪದಲ್ಲಿ (UV, ಗೋಚರಿಸುವ, ಮತ್ತು ಸನಿಹದ-IR ರೋಹಿತದ ವ್ಯಾಪ್ತಿಗಳಲ್ಲಿ) ಅಥವಾ ವ್ಯಾಟ್‌ಗಳ ಸ್ವರೂಪದಲ್ಲಿ (ಮಧ್ಯದಿಂದ ದೂರದ-IRವರೆಗೆ) ರೋಹಿತವು ಸಾಮಾನ್ಯವಾಗಿ ನೀಡಲ್ಪಡುತ್ತದೆ ಮತ್ತು ತರಂಗಾಂತರ, ತರಂಗ ಸಂಖ್ಯೆ, ಅಥವಾ eVಯ ಪರಿಭಾಷೆಗಳಲ್ಲಿ ನೀಡಲಾದ ಒಂದು ಅಪಚ್ಛೇದದೊಂದಿಗೆ ಪ್ರದರ್ಶಿಸಲ್ಪಡುತ್ತದೆ.

ಗೋಚರಿಸುವ ರೋಹಿತ ಮಾಪಕಗಳಿಗೆ ಸಂಬಂಧಿಸಿದಂತೆ ವಿಶಿಷ್ಟವಾಗಿ ಬಳಸಲಾಗುವ ಮೂರು ಅಪಚ್ಛೇದದ ಬಗೆಗಳ ಒಂದು ಹೋಲಿಕೆ.
ಅವರೋಹಿತ ರೋಹಿತ ಮಾಪಕಗಳಿಗೆ ಸಂಬಂಧಿಸಿದಂತೆ ವಿಶಿಷ್ಟವಾಗಿ ಬಳಸಲಾಗುವ ಮೂರು ಅಪಚ್ಛೇದದ ಬಗೆಗಳ ಒಂದು ಹೋಲಿಕೆ.

ರೋಹಿತ ಲೇಖಿಗಳು[ಬದಲಾಯಿಸಿ]

ಸಮಾನಾಂತರ ಗೆರೆಯ ರೋಹಿತ ಮಾಪಕದ ರೂಪರೇಖೆ
ಪಟ್ಟಕವೊಂದನ್ನು ಆಧರಿಸಿದ ಒಂದು ಅತ್ಯಂತ ಸರಳ ರೋಹಿತ ಮಾಪಕ

ರೋಹಿತ ಲೇಖಿ ಎಂಬುದು ಒಂದು ಉಪಕರಣವಾಗಿದ್ದು, ಒಳಬರುವ ಅಲೆಯನ್ನು ಒಂದು ಆವರ್ತನ ರೋಹಿತವಾಗಿ ಅದು ಪ್ರತ್ಯೇಕಿಸುತ್ತದೆ. ಅಲೆಗಳ ಕರಾರುವಾಕ್ಕಾದ ಸ್ವರೂಪವನ್ನು ಅವಲಂಬಿಸಿ, ರೋಹಿತ ಲೇಖಿಗಳು ಎಂದು ಉಲ್ಲೇಖಿಸಲ್ಪಡುವ ಹಲವಾರು ವಿಧದ ಯಂತ್ರಗಳು ಅಸ್ತಿತ್ವದಲ್ಲಿವೆ. ಮೊದಲು ಬಂದ ರೋಹಿತ ಲೇಖಿಗಳು ಛಾಯಾಚಿತ್ರಗ್ರಹಣದ ಕಾಗದವನ್ನು ಶೋಧಕವಾಗಿ ಬಳಸಿದವು. ಛಾಯಾಚಿತ್ರಗ್ರಹಣದ ಕಾಗದವನ್ನು ಬಳಸಿಕೊಂಡ ರೋಹಿತ ಲೇಖಿಗಳ ನೆರವಿನೊಂದಿಗೆ, ತಾರಾಕೂಡಿಕೆಯ ರೋಹಿತದ ವರ್ಗೀಕರಣ ಮತ್ತುಮುಖ್ಯ ಸರಣಿಯ ಆವಿಷ್ಕಾರ, ಹಬಲ್‌ನ ನಿಯಮ ಮತ್ತುಹಬಲ್‌ನ ಸರಣಿ ಇವೆಲ್ಲವನ್ನೂ ರೂಪಿಸಲಾಯಿತು. ಜೀವಂತ ಸಸ್ಯಗಳನ್ನು ಶೋಧಕವಾಗಿ ಬಳಸಿಕೊಂಡ ಒಂದು ರೋಹಿತ ಲೇಖಿಯನ್ನು ಉಪಯೋಗಿಸಿಕೊಂಡು, ಫೈಟೋಕ್ರೋಮ್‌ ಎಂಬ ಸಸ್ಯ ವರ್ಣದ್ರವ್ಯವನ್ನು ಆವಿಷ್ಕರಿಸಲಾಯಿತು. ಗೋಚರಿಸುವ ಬೆಳಕು ಮತ್ತು UV ಬೆಳಕು ಈ ಎರಡಕ್ಕೆ ಸಂಬಂಧಿಸಿದಂತೆಯೂ ಬಳಸಬಲ್ಲ CCDಗಳಂಥ ವಿದ್ಯುನ್ಮಾನ ಶೋಧಕಗಳನ್ನು ತೀರಾ ಇತ್ತೀಚಿನ ರೋಹಿತ ಲೇಖಿಗಳು ಬಳಸುತ್ತವೆ. ದಾಖಲಿಸಲ್ಪಡಬೇಕಾದ ಬೆಳಕಿನ ತರಂಗಾಂತರಗಳ ಮೇಲೆ ಶೋಧಕದ ನಿಖರವಾದ ಆಯ್ಕೆಯು ಅವಲಂಬಿಸುತ್ತದೆ.

ಮುಂಬರಲಿರುವ ಜೇಮ್ಸ್‌‌ ವೆಬ್‌ ಸ್ಪೇಸ್‌ ದೂರದರ್ಶಕವು ಒಂದು ಸಮೀಪ-ಅವರೋಹಿತ ರೋಹಿತ ಲೇಖಿ (ನಿಯರ್‌-ಇನ್‌ಫ್ರಾರೆಡ್‌ ಸ್ಪೆಕ್ಟ್ರೋಗ್ರಾಫ್‌-NIRSpec) ಮತ್ತು ಒಂದು ಮಧ್ಯ-ಅವರೋಹಿತ ರೋಹಿತ ಮಾಪಕ (ಮಿಡ್‌-ಇನ್‌‌ಫ್ರಾರೆಡ್‌ ಸ್ಪೆಕ್ಟ್ರೋಮೀಟರ್‌‌-MIRI) ಈ ಎರಡನ್ನೂ ಒಳಗೊಳ್ಳಲಿದೆ.

ಏಣಿಯಂಥ ರಚನೆಯ ರೋಹಿತ ಲೇಖಿಯೊಂದು ಎರಡು ವಿವರ್ತನ ಜಾಲರಿಗಳನ್ನು ಬಳಸುತ್ತದೆ; ಇವುಗಳನ್ನು ಪರಸ್ಪರ ಸಂಬಂಧಿಸಿದಂತೆ 90 ಡಿಗ್ರಿಗಳ ಪ್ರಮಾಣದಲ್ಲಿ ತಿರುಗಿಸಲಾಗಿರುತ್ತದೆ ಮತ್ತು ಒಂದಕ್ಕೊಂದು ನಿಕಟವಾಗಿರುವಂತೆ ಇರಿಸಲಾಗಿರುತ್ತದೆ. ಆದ್ದರಿಂದ, ಒಂದು ಸೀಳಿಕೆಯ ಬದಲಿಗೆ ಒಂದು ಪ್ರವೇಶ ಬಿಂದುವನ್ನು ಬಳಸಲಾಗುತ್ತದೆ ಮತ್ತು ರೋಹಿತವನ್ನು ದಾಖಲಿಸಲು ಒಂದು 2d CCD-ಚಿಪ್‌ನ್ನು ಬಳಸಲಾಗುತ್ತದೆ. ಕರ್ಣರೇಖೆಯ ಮೇಲೆ ಒಂದು ರೋಹಿತವನ್ನು ಮರುಗಳಿಸಬಹುದೆಂದು ಸಾಮಾನ್ಯವಾಗಿ ಯಾರಾದರೂ ಊಹಿಸುತ್ತಾರೆ; ಆದರೆ, ಎರಡೂ ಸಮಾನಾಂತರ ಗೆರೆಗಳು ಒಂದು ವ್ಯಾಪಕ ಅಂತರಬಿಡುವಿಕೆಯನ್ನು ಹೊಂದಿದಾಗ ಮತ್ತು ಕೇವಲ ಮೊದಲ ದರ್ಜೆಯು ಮಾತ್ರವೇ ಗೋಚರಿಸುವಂತಾಗಲು ಒಂದು ಗೆರೆಯು ಪ್ರಜ್ವಲಿಸಿದಾಗ ಮತ್ತು ಅನೇಕ ಉನ್ನತ ದರ್ಜೆಗಳು ಗೋಚರಿಸುವಂತಾಗಲು ಮತ್ತೊಂದು ರೇಖೆಯು ಪ್ರಜ್ವಲಿಸಿದಾಗ, ಒಂದು ಸಾಮಾನ್ಯವಾದ ಸಣ್ಣ CCD-ಚಿಪ್ ಮೇಲ್ಭಾಗಕ್ಕೆ ನಾಜೂಕಾಗಿ ಮಡಿಸಲಾದ ಒಂದು ಅತ್ಯಂತ ಸೂಕ್ಷ್ಮ ರೋಹಿತವು ದೊರೆಯುತ್ತದೆ. ಮಸುಕು ಬಿಂಬ ಅಥವಾ ಅಸಮ ಬಿಂಬತೆಗೆ ಸಂಬಂಧಿಸಿದಂತೆ, ಸಮಾಂತರೀಕರಿಸುವ ಮಸೂರಗಳನ್ನು ಅತ್ಯುತ್ತಮವಾಗಿಸುವ ಅಗತ್ಯವಿಲ್ಲ, ಆದರೆ ಗೋಲ ವಿಪಥನವನ್ನು ಶೂನ್ಯಕ್ಕೆ ನಿಶ್ಚಯಿಸಬಹುದು ಅಥವಾ ನಿಗದಿಪಡಿಸಬಹುದು ಎಂಬುದನ್ನು ಸಣ್ಣ ಚಿಪ್‌‌ ಅರ್ಥೈಸುತ್ತದೆ.

ಮಾನೋಕ್ರೊಮೇಟರ್‌‌ ಸಾಧನಕ್ಕೆ ಒಂದು ಹೋಲಿಕೆಯಾಗಿ ರೋಹಿತ ಲೇಖಿಯೊಂದನ್ನು ಕೆಲವೊಮ್ಮೆ ಪಾಲಿಕ್ರೊಮೇಟರ್‌‌ ಎಂದು ಕರೆಯಲಾಗುತ್ತದೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ದೀಪದ ಮೂಲಗಳ ಪಟ್ಟಿ
  • ದ್ಯುತಿಮಾಪನ (ಮಸೂರಗಳು) ಮುಖ್ಯ ದ್ಯುತಿಮಾಪನ/ವಿಕರಣ ಮಾಪನ ಲೇಖನವು - ತಾಂತ್ರಿಕ ಶಬ್ದಗಳನ್ನು ವಿವರಿಸುತ್ತದೆ
  • ರೋಹಿತ ದರ್ಶನ
  • ವೃತ್ತಾಕಾರದ ದ್ವಿವರ್ಣತ್ವ
  • ರಾಶಿ ರೋಹಿತ ಮಾಪಕ
  • ಝೆರ್ನಿ-ಟರ್ನರ್‌‌ ಮಾನೋಕ್ರೊಮೇಟರ್‌‌

ಗ್ರಂಥಸೂಚಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]