ರೋಜರ್ ಯಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಜರ್ ಆರ್ಲಿನರ್ ಯಂಗ್ ಅವರು ಪ್ರಾಣಿಶಾಸ್ತ್ರ, ಜೀವಶಾಸ್ತ್ರ ಮತ್ತು ಸಮುದ್ರ ಜೀವಶಾಸ್ತ್ರದ ಅಮೇರಿಕನ್ ವಿಜ್ಞಾನಿ. ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ.

ವಿದ್ಯಾಭ್ಯಾಸ[ಬದಲಾಯಿಸಿ]

1889ರಲ್ಲಿ ವರ್ಜೀನಿಯಾದ ಕ್ಲಿಫ್ಟನ್ ಫೊರ್ಜ್ನಲ್ಲಿ ಜನಿಸಿದರು. ಯಂಗ್ ತನ್ನ ಅಂಗವಿಕಲ ತಾಯಿಯ ಆರೈಕೆಯಲ್ಲಿ ಹೆಚ್ಚಿನ ಸಮಯವನ್ನು ಕಳೆದರು. ಯಂಗ್ 1923 ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 1924 ರಲ್ಲಿ ಯಂಗ್ ಶಿಕಾಗೊ ವಿಶ್ವವಿದ್ಯಾನಿಲಯದಲ್ಲಿ ತನ್ನ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಆರಂಭಿಸಿದರು, ಅದು 1926 ರಲ್ಲಿ ಸ್ವೀಕರಿಸಲ್ಪಟ್ಟಿತು.[೧]

ಗೌರವಗಳು[ಬದಲಾಯಿಸಿ]

ಆಫ್ರಿಕನ್ ಅಮೆರಿಕನ್ನರನ್ನು ಬೆಂಬಲಿಸಲು ಯಂಗ್ ಗೌರವಾರ್ಥವಾಗಿ "ರೋಜರ್ ಆರ್ಲಿನರ್ ಯಂಗ್ ಮರೀನ್ ಸಂರಕ್ಷಣಾ ಡೈವರ್ಸಿಟಿ ಫೆಲೋಷಿಪ್" ಸ್ಥಾಪನೆಯಾಯಿತು.ರೋಜರ್ ಆರ್ಲಿನರ್ ಯಂಗ್ ಮೊದಲಬಾರಿ 2005ರಲ್ಲಿ ಕಾಂಗ್ರೆಷನಲ್ ರೆಸೊಲ್ಯೂಷನ್ನಲ್ಲಿ ನಾಲ್ಕು ಇತರ ಆಫ್ರಿಕನ್ ಅಮೆರಿಕನ್ ಮಹಿಳೆಯರೊಂದಿಗೆ ಗುರುತಿಸಲ್ಪಟ್ಟರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ಯಂಗ್ ವಿವಾಹವಾಗಿರಲಿಲ್ಲ. ತನ್ನ ಅನಾರೋಗ್ಯದ ತಾಯಿಗೆ ಯಂಗ್ ಒಬ್ಬರೇ ಬೆಂಬಲವಾಗಿದ್ದರು. ೧೯೫೦ ದಶಕದಲ್ಲಿ ಯಂಗ್ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾದರು.[೩]

ವೃತ್ತಿ ಜೀವನ[ಬದಲಾಯಿಸಿ]

ಅರ್ನೆಸ್ಟ್ ಎವೆರೆಟ್ ಜೇಮ್ಸ್ ಅವರು 1927ರಲ್ಲಿ ಆರಂಭವಾದ ಮ್ಯಾಸಚೂಸೆಟ್ಸ್ನ ಮೆರೈನ್ ಬಯೋಲಾಜಿಕಲ್ ಲ್ಯಾಬೊರೇಟರಿಯಲ್ಲಿ ಬೇಸಿಗೆಯಲ್ಲಿ ಅವರೊಂದಿಗೆ ಕೆಲಸ ಮಾಡಲು ಯಂಗ್ ಅವರನ್ನು ಆಹ್ವಾನಿಸಿದರು. ಅಲ್ಲಿ,ಅವರು ಸಮುದ್ರ ಜೀವಿಗಳಲ್ಲಿ ಫಲೀಕರಣ ಪ್ರಕ್ರಿಯೆಯನ್ನು ಸಂಶೋಧಿಸುವುದರ ಜೊತೆಗೆ ಜೀವಕೋಶದಲ್ಲಿ ಜಲಸಂಚಯನ ಮತ್ತು ನಿರ್ಜಲೀಕರಣದ ಪ್ರಕ್ರಿಯೆಯನ್ನು ಸಂಶೋಧಿಸಿದರು. 1929ರಲ್ಲಿ, ಯಂಗ್ ಯೂರೋಪ್ನಲ್ಲಿ ಅನುದಾನ ಹಣವನ್ನು ಪಡೆಯಲು ಯತ್ನಿಸುತ್ತಿದ್ದ ಸಮಯದಲ್ಲಿ, ಯೌವ್ದ್ ಹೊವಾರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮಧ್ಯಂತರ ವಿಭಾಗದ ಮುಖ್ಯಸ್ಥರಾದರು. ಹೊವಾರ್ಡ್ನಲ್ಲಿ ನಡೆಸಲಾದ ಪ್ರಯೋಗಗಳಲ್ಲಿ ಬಳಸಲಾದ ನೇರಳಾತೀತ ಕಿರಣಗಳಿಂದ ಅವರ ಕಣ್ಣು ಶಾಶ್ವತವಾಗಿ ಹಾನಿಗೊಳಗಾಯಿತು.[೪]

ನಿಧನ[ಬದಲಾಯಿಸಿ]

ಯಂಗ್ ನವೆಂಬರ್ 9,1964ರಂದು ಇಹಲೋಕ ತ್ಯಜಿಸಿದರು.[೫]

ಉಲ್ಲೇಖಗಳು[ಬದಲಾಯಿಸಿ]

  1. https://www.sdsc.edu/ScienceWomen/young.html
  2. "ಆರ್ಕೈವ್ ನಕಲು". Archived from the original on 2018-12-22. Retrieved 2018-12-29.
  3. https://www.infoplease.com/people/roger-arliner-young
  4. https://oceanconservancy.org/blog/2017/11/29/little-known-life-first-african-american-female-zoologist/
  5. https://blackpast.org/aah/young-roger-arliner-1889-1964