ರುಮೇಲಿ ಧರ್
ರುಮೇಲಿ ಧರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಬಂಗಾಳ, ಅಸ್ಸಾಂ, ಪೂರ್ವ ವಲಯ ಹಾಗು ಇಂಡಿಯ ಎ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ರುಮೇಲಿ ಧರ್ ರವರು ಡಿಸೆಂಬರ್ ೦೯, ೧೯೮೩ರಂದು ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಜನಿಸಿದರು.[೧]
ವೃತ್ತಿ ಜೀವನ
[ಬದಲಾಯಿಸಿ]ಪ್ರಥಮ ದರ್ಜೆ ಕ್ರಿಕೆಟ್
[ಬದಲಾಯಿಸಿ]ದೇಶಿ ಕ್ರಿಕೆಟ್‍ನಲ್ಲಿ ಬಂಗಾಳ, ಅಸ್ಸಾಂ, ಪೂರ್ವ ವಲಯ ಹಾಗು ಇಂಡಿಯ ಎ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಇವರು ಜುಲ್ಹಾನ್ ಗೋಸ್ವಾಮಿರೊಂದಿಗೆ ಮೊದಲಿಗೆ ಆರಂಭಿಕ ಬೌಲರ್ ಆಗಿ ತಂದಕ್ಕೆ ಸೇರಿಕೊಂಡರು. ನಂತರ ಪಾಕಿಸ್ಥಾನ, ಅಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗು ಮುಂತಾದ ತಂಡಗಳ ವಿರುದ್ದ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೨೦೧೨ರಲ್ಲಿ ಭುಜದ ಗಾಯದಿಂದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿ ಕ್ರಿಕೆಟ್ ಜಗತ್ತಿನಿಂದ ಆರು ವರ್ಷ ದೂರವಿದ್ದರು. ನಂತರ ೨೦೧೮ರಲ್ಲಿ ಮತ್ತೆ ಕ್ರಿಕೆಟ್ ಜಗತ್ತಿಗೆ ವಾಪಸ್ ಆದರು.[೨][೩][೪]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಜನವರಿ ೨೭, ೨೦೦೩ರಂದು ಲಿನ್ಕನ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ವಿಶ್ವ ಸರಣಿಯ ೨ನೇ ಏಕದಿನ ಪಂದ್ಯದ ಮೂಲಕ ರುಮೇಲಿ ಧರ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫]ನವಂಬರ ೨೧, ೨೦೦೫ರಲ್ಲಿ ದೆಹಲಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕೈಕ ಟೆಸ್ಟ್ ಪಂದ್ಯದ ಮೂಲಕ ರುಮೇಲಿ ಧರ್ ರವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬]ಅಗಸ್ಟ್ ೦೫, ೨೦೦೬ರಂದು ಇಂಗ್ಲೆಂಡ್‌ನ ದರ್ಬಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ರುಮೇಲಿ ಧರ್ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೂ ಪಾದಾರ್ಪನೆ ಮಾಡಿದರು.[೭]
ಪಂದ್ಯಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ : ೧೮ ಪಂದ್ಯ[೮]
- ಏಕದಿನ ಕ್ರಿಕೆಟ್ : ೭೮ ಪಂದ್ಯಗಳು
- ಟೆಸ್ಟ್ ಕ್ರಿಕೆಟ್ : ೦೪ ಪಂದ್ಯಗಳು
ವಿಕೇಟ್‍ಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೧೩
- ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೬೩
- ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ: ೦೮
ಅರ್ಧ ಶತಕ
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೧
- ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೬
- ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ: ೦೧
ಉಲ್ಲೇಖಗಳು
[ಬದಲಾಯಿಸಿ]- ↑ https://www.cricbuzz.com/profiles/13617/rumeli-dhar
- ↑ https://scroll.in/field/869543/rumeli-dhar-returns-the-34-year-olds-journey-through-injury-and-depression-to-india-recall
- ↑ https://www.icc-cricket.com/news/624481
- ↑ https://www.cricbuzz.com/cricket-news/100450/rumeli-dhar-returns-after-six-year-hiatus-jhulan-goswami-injury-india-women-south-africa-criccket-team
- ↑ http://www.espncricinfo.com/series/8589/scorecard/67266/england-women-vs-india-women-2nd-match-world-series-of-womens-cricket-2002-03
- ↑ http://www.espncricinfo.com/series/14737/scorecard/226656/india-women-vs-england-women-only-test-england-women-tour-of-sri-lanka-and-india-2005-06
- ↑ http://www.espncricinfo.com/series/14587/scorecard/225163/england-women-vs-india-women-only-t20i-india-women-tour-of-ireland-and-england-2006
- ↑ http://www.espncricinfo.com/india/content/player/54114.html