ರುದ್ರ ಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರುದ್ರಭಟ್ಟ ಇಂದ ಪುನರ್ನಿರ್ದೇಶಿತ)
ರುದ್ರ ಭಟ್ಟ
ಜನನ12ನೇ ಶತಮಾನ CE
ಮರಣ12 ಅಥವಾ 13ನೇ ಶತಮಾನ CE
ವೃತ್ತಿ(ಗಳು)ಕವಿ, ಬರಹಗಾರ
Known forಜಗನ್ನಾಥ ವಿಜಯ

ರುದ್ರಭಟ್ಟ:- (೧೧೮೫) ೧೨ನೇ ಶತಮಾನದ ಕವಿ. ಈತ ಹೊಯ್ಸಳ ಸಾಮ್ರಾಜ್ಯದ ರಾಜನಾದ ವೀರ ಬಲ್ಲಾಳ ಮಂತ್ರಿ ಚಂದ್ರಮೌಳಯನ ಆಸ್ಥಾನ ಕವಿಯಾಗಿದ್ದನು. ರುದ್ರ ಭಟ್ಟ ಒಬ್ಬ ವೈದಿಕ ಸ್ಮಾರ್ಥ ಬ್ರಾಹ್ಮಣನು. ಸಂಸೃತವಿಷ್ಣು ಪುರಾಣವನ್ನು ಆಧಾರವಾಗಿಟ್ಟುಕೊಂಡು ಆತ ಜಗನ್ನಾಥ ವಿಜಯ ಎಂಬ ಚಂಪೂ ಕಾವ್ಯ ಮತ್ತು ರಸಕಲಿಕೆ ಲಕ್ಷಣ ಗ್ರಂಥವನ್ನು ಬರೆದಿದ್ದಾನೆ. ಕೃಷ್ಣ ರಾಕ್ಷಸನಾದ ಬಾಣಾಸುರನನ್ನು ಕೊಂದ ಕಥೆಯನ್ನು "ಜಗನ್ನಾಥ ವಿಜಯಂ" ಚಂಪು ಕಾವ್ಯದಲ್ಲಿ ಬಣ್ಣಿಸಿದ್ದಾನೆ.ಈತನ ನಂತರ ಬಂದ ಕನ್ನಡದ ಪ್ರಮುಖ ಕವಿಗಳಾದ ಕುಮಾರವ್ಯಾಸ, ಲಕ್ಷ್ಮೀಶ, ಹರಿದಾಸ, ಕನಕದಾಸ ಹಾಗೂ ಪುರಂದರದಾಸರು ಈತನನ್ನೇ ಮಾದರಿಯನ್ನಾಗಿ ತೆಗೆದುಕೊಂಡರು ಎಂದು ಪುರಾಣದಿಂದ ಕಂಡು ಬಂದ ವಿಷಯವಾಗಿದೆ.ಕನ್ನಡ ಭಾಷೆಯ ಪಂಡಿತರಾದ ನರಸಿಂಹಾಚಾರ್ಯರ ಪ್ರಕಾರ ರಾಜ ವೀರ ಬಲ್ಲಾಳ 2 ಈತನ ಮಂತ್ರಿ ರುದ್ರ ಭಟ್ಟನನ್ನು ವಿಷೇಷವಾಗಿ ಸನ್ಮಾನಿಸಿದ್ದಾರೆ. ರುದ್ರ ಭಟ್ಟ ತನ್ನ ರಚನೆಗಳ್ಳಿ ಹಿಂದೂ ದೇವರುಗಳಾದ ವಿಷ್ಣು, ಶಿವ ಹಾಗೂ ಬ್ರಹ್ಮ ಇವರನ್ನು ಒಂದೇ ದೇವರನ್ನಾಗಿ ಪರಿಗಣಿಸಿದ್ದಾನೆ.ಅವರೆಲ್ಲರನ್ನು ಪರಬ್ಭ್ರಹ್ಮ ರಂದು ಕರೆದಿದ್ದಾನೆ.ಈತನ ರಚನೆಗಳು ಮಾರ್ಗ ಹಾಗೂ ದೇಶಿ ಶೈಲಿಗಳಲ್ಲಿ ರಚಿತಗೊಂಡಿವೆ.

ಉಲ್ಲೇಖಗಳು[ಬದಲಾಯಿಸಿ]

Citations

ಗ್ರಂಥಸೂಚಿ

  • Sastri, Nilakanta K.A. [1955] (2002). A history of South India from prehistoric times to the fall of Vijayanagar. New Delhi: Indian Branch, Oxford University Press. ISBN 0-19-560686-8.
  • Narasimhacharya, R (1988). History of Kannada Literature. New Delhi: Asian Educational Services. ISBN 81-206-0303-6.
  • Mukherjee, Sujit (1999). Dictionary of Indian Literature One: Beginnings - 1850. Oriental Blackswan, New Delhi. ISBN 81-2501453-5
  • Sreekantaiyya, K N. (2001). Indian Poetics. Sahitya Akademi, New Delhi. ISBN 81-260-0807-5
  • Datta, Amaresh (1988) Encyclopaedia of Indian literature. Sahitya Akademi. New Delhi. ISBN 81-260-1194-7
  • Shiva Prakash, H.S. (1997). "Kannada". Edited by Ayyappa Panicker. Medieval Indian Literature, An Anthology, Volume 1. Sahitya Akademi. New Delhi. ISBN 81-260-0365-0
  • Dalal, Roshan. (2011). Hinduism: An Alphabetical Guide. Penguin Books. ISBN 0-143-4142-16, ISBN 978-0143414216