ರುಡ್ ಸೆಟ್ ಸಂಸ್ಥೆ

ವಿಕಿಪೀಡಿಯ ಇಂದ
Jump to navigation Jump to search
ರುಡ್ ಸೆಟ್ ಸಂಸ್ಥೆ

ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷತ್ರ ಧರ್ಮಸ್ಥಳ ಮಾರ್ಗದ ಮಧ್ಯ ಇರುವ ಸಿದ್ದವನದ ಈ ರುಡ್ ಸೇಟ್ ಸಂಸ್ಥೆ ಇದುವರಿಗೆ ಸರಿ ಸುಮಾರು ಇಪ್ಪತ್ತು ಸಾವಿರ ನಿರುದೋಗಿ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಅದರಲ್ಲಿ ಹದಿನೇಳು ಸಾವಿರ ನಿರುದ್ಯೋಗಿ ಯುವಕರಿಗೆ ಬದಕು ಕಟ್ಟಿ ಕೊಟ್ಟಿದೆ.1987 ರಲ್ಲಿಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಹಾಗೂ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಯುಕ್ತಶ್ರಾದಲ್ಲಿ ಕಾರ್ಯ ನಿರ್ವಾಹಿಸುವ ಈ ಸಂಸ್ಥೆ ಗ್ರಾಮೀಣ ಯುವಕರಿಗೆ ಸ್ವಯಂ ಉದ್ದೋಗ ಕಲ್ಪಿಸುವ ಜೀವ ಸಂಜೀವಿನಿಯಾಗಿ ಕಾರ್ಯ ನಿರ್ವಾಹಿಸುತ್ತಿದ್ದೆ. ಇಂದು ಕರ್ನಾಟದಲ್ಲಿ ಆರು ಕೇಂದ್ರಗಳು ಸೇರಿದಂತ್ತೆ 17 ರಾಜ್ಯಗಳಲ್ಲಿ ಒಟ್ಟು 27 ಅಂಗಸಂಸ್ಥೆಗಳನ್ನು ಹೊಂದಿ ನಿರುದ್ಯೋಗವನ್ನು ಬುಡಸಹಿತ ಕಿತ್ತ್ತೆಯಸೆವುದಕ್ಕೆ ಶ್ರಮಿಸುತ್ತಿದೆ. ಪೋಟೊ ಗ್ರಾಫಿ , ವಿಡಿಯೋ ಗ್ರಾಫಿ, ಹೊಲಿಗೆ ಯಂತ್ರ ತರಬೇತಿ ,ಗಣಕ ಯಂತ್ರ ತರಬೇತಿ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ 55-60 ವಿವಿಧ ಬಗೆಯ ತರಬೇತಿಗಳನ್ನು ಯುವಕ-ಯುವತಿಯರ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಇದರಿಂದ ತರಬೇತಿ ಪಡೆದ ನಂತರದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಗಳಿಂದ ಸಬ್ಸಿಡಿ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದೆ.

ಸಂಸ್ಥೆ ಹಿನ್ನಲೆ[ಬದಲಾಯಿಸಿ]

ನಿರುದ್ಯೋಗ ಸಮಸ್ಯಯನ್ನು ಗಂಭಿರವಾಗಿ ಅರಿತು 1987 ರಲ್ಲಿ ಶ್ರೀ ಧರ್ಮಸ್ಥಳ ಧರ್ಮಧಿಕಾರಿ ಡಾ||. ಡಿ ವಿರೇಂದ್ರ ಹಡ್ಗೆ ಅವರ ಸಮಾಲೋಚನೆ ಸ್ವರೂಪವೆ ಈ ರುಟ್ ಸೇಟ್ ಸಂಸ್ಥೆ. ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನಾರ ಬ್ಯಾಂಕ್ ಹಾಗೂ ಶ್ರೀ ಕ್ಷತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಯುಕ್ತಶ್ರದಲ್ಲಿ ಇಂದು ಇಂದು ಕರ್ನಾಟದಲ್ಲಿ ಆರು ಕೇಂದ್ರಗಳು ಸೇರಿದಂತ್ತೆ ಹದಿನೇಳು ರಾಜ್ಯಗಳಲ್ಲಿ ಒಟ್ಟು ಇಪ್ಪತ್ತೆಳು ಅಂಗಸಂಸ್ಥೆಗಳನ್ನು ಹೊಂದಿ ಯಶಸ್ವಿಯಾಗಿ ಕಾರ್ಯನಿರ್ವಾಹಿಸುತ್ತಿದ್ದೆ.

ಸಂಸ್ಥೆ ದ್ಯೇಯ ವಾಕ್ಯ[ಬದಲಾಯಿಸಿ]

ಮೂರು ವರ್ಷ ಸತತ ವ್ಯಾಸಂಗ ಮಾಡಿ ಇನ್ನೊಬ್ಬರ ಲೇಕ್ಕ ಬರೆಯುವ ನೌಕರಿ ಹೋಗುವ ಬದಲು ಸ್ವಯಂ ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುದು ಹೆಚ್ಚು ಅರ್ಥಪೂರ್ಣವಾದದ್ದು- ಡಾ||.ಡಿ ವಿರೇಂದ್ರ ಹೆಗ್ಡೆ

ಸಂಸ್ಥೆ ದಯೋದ್ದೇಶಗಳು[ಬದಲಾಯಿಸಿ]

ಸ್ವಾವಲಂಬಿ ಜೀವನ ನಡೆಸಲು ಸಹಯವಾಗುವಂತೆ ಯುವಕ-ಯುವತಿಯರನ್ನು ಗುರುತಿಸಿ ಪ್ರೇರೆಪಿಸಿ ಸ್ವಯಂ ಉದ್ದೋಗ ತರಬೇತಿ ನೀಡುವುದು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳನ್ನು ಅಭಿವೃದ್ಧಿ ಪಡಿಸುವುದು. ಸ್ವಯಂ ಉದ್ಯೋಗ ಆರಂಭಿಸಲು ಸಮಾಲೋಚನೆ,ನೇರವು ಹಾಗೂ ಮಾರ್ಗದರ್ಶನ ನೀಡುವುದು.

ಸಂಸ್ಥಯಲ್ಲಿನ ಕಾರ್ಯಕ್ರಮಗಳು[ಬದಲಾಯಿಸಿ]

ಸಂಸ್ಥೆಯಲ್ಲಿ 60ಕ್ಕೂ ಹೆಚ್ಚು ಸ್ವಯಂ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು.ತರಬೇತಿಗಳು ಅಲ್ಪವಧಿಯವುಗಳಾಗಿವೆ.

ಸೂಕ್ತ ಅಭ್ಯಾರ್ಥಿಗಳನ್ನು ಗುರುತ್ತಿಸಿ ತರಬೇತಿಗೆ ಆಯ್ಕೆ ಮಾಡುವುದು.

ಕ್ಯಾಂಪಸ್ ಹಾಗೂ ಪ್ರಾಯೋಗಿಕ ತರಬೇತಿಗೆ ಒತ್ತು.

ವರ್ಥನಭ್ಯಾಸ ಗುಂಪು ಚರ್ಚೆಗಳಿಗೆ ಅವಕಾಶ

ಬ್ಯಾಂಕ್ ಮತ್ತು ಸರ್ಕಾರಿ ಅಧಿಕಾರಿಗಳೂಂದಿಗೆ ಚರ್ಚೆ

ಸಂಸ್ಥಯಲ್ಲಿನ ಸೌಲಭ್ಯಗಳು[ಬದಲಾಯಿಸಿ]

ಸುಸಜ್ಜಿತ ತರಬೇತಿ ಸಂರ್ಕೀಣ ಮತ್ತು ಗ್ರಂಥಾಲಯ

ತರಬೇತಿ ಸಲಕರಣೆಗಳು ಮತ್ತು ದೃಶ್ಯ, ಶ್ರವ್ಯ ಮಾಧ್ಯಮಗಳ ಬಳಕೆ

ಪ್ರಾಯೋಗಿಕ ಕಲಿಕೆ ಕಾರ್ಯಗಾರ

ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ.

ಸಂಸ್ಥೆಗೆ ಸಂದಿಸಿದೆ ಗೌರವಗಳು[ಬದಲಾಯಿಸಿ]

ಗ್ರಾಮೀಣ ಅಭಿವೃದ್ಧಿಯಲ್ಲಿ ವಹಿಸಿದ ಸಕ್ರೀಯೆ ಪಾತ್ರಕ್ಕೆ 1998-99 ಸಾಲಿನಲಿ ಕೇಂದ್ರ ಸರ್ಕಾರ ‘’ಪಕ್ಕಿ’’ ಪ್ರಶಸ್ತಿ ಲಭಿಸಿದೆ.

2006-07ನೇ ಸಾಲಿನಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

2010-11ನೇ ಸಲಿನಲಿ ಭಾರತೀಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಿಂದ ರಾಷ್ಟ್ರಮಟ್ಟದ ಪ್ರಶಸ್ತಿ ರುಡ್ ಸೇಟ್ ಸಾಧನೆಗೆ ‘’ಸಿಡ್ಬಿ’’ ಪ್ರಶಸ್ತಿ ಲಭಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಗೆ ಲಂಡನ್ನಿನ ಪ್ರತಿಷ್ಟತ “ಆಶ್ಡನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ ಲಭಿಸಿದೆ

ಇನ್ನೂ ಅಲವಾರು ಪ್ರಶಸ್ತಿಗಳು ಲಭಿಸಿವೆ.