ವಿಷಯಕ್ಕೆ ಹೋಗು

ರಾಷ್ಟ್ರೀಯ ಯುವ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಯುವ ದಿನ
ಅಧಿಕೃತ ಹೆಸರುರಾಷ್ಟ್ರೀಯ ಯುವ ದಿನ
ಪರ್ಯಾಯ ಹೆಸರುಗಳುವಿವೇಕಾನಂದ ಜಯಂತಿ
ಆಚರಿಸಲಾಗುತ್ತದೆಭಾರತ ಮತ್ತು ಆರ್ ಕೆ ಎಮ್ ಶಾಖಾ ಕೇಂದ್ರಗಳು ವಿಶ್ವಾದ್ಯಂತ
ಮಹತ್ವಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
ಆರಂಭ೧೯೮೫[]
ಆವರ್ತನವಾರ್ಷಿಕ
Started byಭಾರತ ಸರ್ಕಾರ

ವಿವೇಕಾನಂದ ಜಯಂತಿ ಎಂದೂ ಕರೆಯಲ್ಪಡುವ ರಾಷ್ಟ್ರೀಯ ಯುವ ದಿನವನ್ನು ಹಿಂದೂ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ ೧೨ ರಂದು ಆಚರಿಸಲಾಗುತ್ತದೆ. ೧೯೮೪ರಲ್ಲಿ, ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು ಮತ್ತು ೧೯೮೫ರಿಂದ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತಿದೆ.[]

ಇತಿಹಾಸ

[ಬದಲಾಯಿಸಿ]

ಮಹಾನ್ ಸ್ವಾಮಿ ವಿವೇಕಾನಂದ ಅವರ ಜನ್ಮದಿನವನ್ನು ಅಂದರೆ ಜನವರಿ ೧೨ ಅನ್ನು ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ೧೯೮೪ರಲ್ಲಿ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರವಾಗಿತ್ತು. ಸ್ವಾಮಿ ವಿವೇಕಾನಂದ ಅವರ ತತ್ತ್ವಶಾಸ್ತ್ರ ಮತ್ತು ಅವರ ಬದುಕಿನ ಆದರ್ಶಗಳು ಭಾರತೀಯ ಯುವ ದಿನಾಚರಣೆಗೆ ಸ್ಫೂರ್ತಿಯ ಉತ್ತಮ ಮೂಲವಾಗಿದೆ.ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮ ಹಂಸರ ಶಿಷ್ಯರಾಗಿದ್ದರು.

ಆಚರಣೆ ಮತ್ತು ಚಟುವಟಿಕೆಗಳು

[ಬದಲಾಯಿಸಿ]

ರಾಷ್ಟ್ರೀಯ ಯುವ ದಿನವನ್ನು ಭಾರತದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಆಚರಿಸಲಾಗುತ್ತದೆ, ಮೆರವಣಿಗೆಗಳು, ಭಾಷಣಗಳು, ಸಂಗೀತ, ಯುವ ಸಮಾವೇಶಗಳು, ವಿಚಾರಗೋಷ್ಠಿಗಳು, ಯೋಗಾಸನಗಳು, ಪ್ರಸ್ತುತಿಗಳು, ಪ್ರಬಂಧ-ಬರಹ, ಪಠಣಗಳು ಮತ್ತು ಕ್ರೀಡೆಗಳಲ್ಲಿ ಸ್ಪರ್ಧೆಗಳು ಪ್ರತಿ ವರ್ಷ ಜನವರಿ ೧೨ರಂದು ನಡೆಯುತ್ತವೆ.[] ಸ್ವಾಮಿ ವಿವೇಕಾನಂದರ ಉಪನ್ಯಾಸಗಳು ಮತ್ತು ಬರಹಗಳು, ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಿಂದ ಮತ್ತು ಅವರ ಗುರು ಶ್ರೀ ರಾಮಕೃಷ್ಣ ಪರಮಹಂಸ ಅವರ ವಿಶಾಲ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದಿವೆ. ಇವು ಸ್ಫೂರ್ತಿಯ ಮೂಲವಾಗಿದ್ದವು ಮತ್ತು ಯುವಕರನ್ನು ಒಳಗೊಂಡ ಹಲವಾರು ಯುವ ಸಂಘಟನೆಗಳು, ಅಧ್ಯಯನ ವಲಯಗಳು ಮತ್ತು ಸೇವಾ ಯೋಜನೆಗಳಿಗೆ ಪ್ರೇರಣೆ ನೀಡಿವೆ.[]

ಉಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://www.odisha.gov.in/portal/LIWPL/event_archive/Events_Archives/32National_Youth_Day.pdf
  2. "Know Vivekananda on National Youth Day 2022". SA News Channel (in ಅಮೆರಿಕನ್ ಇಂಗ್ಲಿಷ್). 11 ಜನವರಿ 2022. Retrieved 12 ಜನವರಿ 2022.
  3. "National Youth Day 2022: Date, Theme, History- Know why is it celebrated on January 12th". Jagranjosh.com. 12 ಜನವರಿ 2022. Retrieved 12 ಜನವರಿ 2022.
  4. "National Youth Day, India" (PDF). National Youth Day. 12 ಜನವರಿ 2009. Retrieved 6 ಅಕ್ಟೋಬರ್ 2011.