ವಿಷಯಕ್ಕೆ ಹೋಗು

ರಾಮ ಪ್ರಸಾದ್ ಬಿಸ್ಮಿಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ ಪ್ರಸಾದ್ ಬಿಸ್ಮಿಲ್
ಜನನ೧೧ ಜೂನ್ ೧೮೯೭
ಷಹಜಹಾನ್ಪುರ, ಯುನೈಟೆಡ ಪ್ರಾಂತ್ಯ್ಯ, ಬ್ರಿಟಿಷ್ ಭಾರತ
ವೃತ್ತಿಕವಿ, ಸ್ವಾತಂತ್ರ ಹೋರಾಟಗಾರ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿದೇಶ ಭಕ್ತಿ ಕವಿತೆ

ರಾಮ ಪ್ರಾಸದ ಬಿಸ್ಮಿಲ್ ಅವರು ಮೈನ್ಪುರಿ ಪಿತೂರಿ(೧೯೧೮)ಯಲ್ಲಿ ಹಾಗು ಕಾಕೋರಿ ಪಿತೂರಿ(೧೯೨೫)ಯಲ್ಲಿ ಭಾಗವಹಿಸಿದ ಭಾರತೀಯ ಕ್ರಾಂತಿಕಾರಿ. ಇವರು ಬ್ರಿಟೀಷರ ಸಾಮ್ರಾಜ್ಯದ ವಿರುದ್ಧ ಹೋರಾಡಿದರು. ಇವರು ಹೋರಾಟಗಾರರಷ್ಟೇ ಅಲ್ಲದೆ, ಹಿಂದಿ ಹಾಗೂ ಉರ್ದು ಭಾಷೆಯ ಉತ್ತಮ ಕವಿಯಾಗಿದ್ದರು. ಇವರು ರಾಮ, ಅಜ್ಞಾತ್ ಹಾಗೂ ಬಿಸ್ಮಿಲ್ ಎಂಬ ಅಂಕಿತನಾಮದಲ್ಲಿ ದೇಶಭಕ್ತಿಯನ್ನು ಪ್ರಚಾರಿಸಿ ಕವಿತೆಗಳನ್ನು ಬರೆದಿದ್ದಾರೆ. ಬಿಸ್ಮಿಲ್ಲರು ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜದೊಂದಿಗೆ ಜೊತೆಗೂಡಿದ್ದರು. ಇವರ ಬರವಣಿಗೆಯಲ್ಲಿ ಸ್ವಾಮಿ ದಯಾನಂದರ ಪುಸ್ತಕ, 'ಸತ್ಯಾರ್ಥ ಪ್ರಕಾಶ'ದಿಂದ ಪ್ರೇರಣೆಯನ್ನು ಪಡೆದಿರುವುದನ್ನು ಕಾಣಬಹುದು. ಇವರ ಗುರು, ಆರ್ಯ ಸಮಾಜದ ಭೋದಕ ಸ್ವಾಮಿ ಸೋಮದೇವ. ಇವರು ಹರ್ ದಯಾಲ್ ಅವರ ಸ್ನೇಹಿತರಾಗಿದ್ದರು. ಬಿಸ್ಮಿಲ್ಲರು ಹಿಂದುಸ್ತಾನ್ ರಿಪಬ್ಲಿಕನ್ ಅಸೋಷಿಯೇಶನ್ ಎಂಬ ಕ್ರಾಂತಿಕಾರಿ ಸಂಸ್ಥೆಯನ್ನು ಸ್ಥಾಪಿಸಿದ್ದರು [] . ಆಂಗ್ಲ ಭಾಷೆಯ ಕ್ಯಾಥರೀನ್ ಹಾಗು ಬಂಗಾಳಿ ಭಾಷೆಯ ಬೊಲಶೆವಿಕೊಂ ಕಿ ಕರ್ತೂತ್ ಪುಸ್ತಕಗಳನ್ನು ಭಾಷಾಂತರ ಮಾಡಿ, ಭಗತ್ ಸಿಂಗ್ ಅವರಿಂದ ಪ್ರಶಂಸೆಯನ್ನು ಪಡೆದ ಕವಿ. "ಸರ್ಫ಼ರೋಷಿ ಕಿ ತಮನ್ನ" ಎಂಬ ಗೀತೆಯನ್ನು ಇವರೇ ಬರೆದದ್ದು.

ಆರಂಭಿಕ ಜೀವನ

[ಬದಲಾಯಿಸಿ]

ರಾಮ ಪ್ರಸಾದ್ ಬಿಸ್ಮಿಲ್ ಅವರು ಜೂನ್ ೧೧, ೧೮೯೭ರಂದು, ಷಹಜಹಾನ್ಪುರ, ಯುನೈಟೆಡ್ ಪ್ರಾವಿಂಸಿನಲ್ಲಿ, ಮುರಳಿಧರ್ ಹಾಗು ಮೋಲಮತಿ ದಂಪತಿಗಳಿಗೆ ಜನಿಸಿದರು. ಅವರು ಹಿಂದಿ ಭಾಷೆಯನ್ನು ತಮ್ಮ ತಂದೆಯವರಿಂದಲೇ ಅಧ್ಯಯನ ಮಾಡಿದರು ಹಾಗು ಉರ್ದು ಭಾಷೆಯ ಅದ್ಯಯನಕ್ಕೆ ಮೌಲ್ವಿಯ ಬಳಿ ತೆರಳಿದರು. ಅವರನ್ನು ಆಂಗ್ಲ ಭಾಷೆ ಶಾಲೆಗೆ ದಾಖಲಿಸಿದ್ದರು. ತಂದೆಯ ವಿರುದ್ದವಾಗಿ ಅವರು ಆರ್ಯ ಸಮಾಜವನ್ನು ಸೇರಿದರು. ಅಲ್ಲಿ ಅವರು ತಮ್ಮ ಕವಿತೆ ಬರಿಯುವ ಪ್ರತಿಭೆಯನ್ನು ಪ್ರದರ್ಶಿಸಿದರು.

ಸೋಮದೇವರೊಂದಿಗೆ ಸಂಪರ್ಕ

[ಬದಲಾಯಿಸಿ]
ಲಾಲ ಹರ್ ದಯಾಲ್
ಲಾಲ ಹರ್ ದಯಾಲ್

೧೮ ವರ್ಷ ವಯಸ್ಸಿನಲ್ಲಿ ಬಿಸ್ಮಿಲ್ ಅವರಿಗೆ ಓರ್ವ ಪಂಡಿತ ಹಾಗೂ ಹರ್ ದಯಾಲರ ಮಿತ್ರರಾಗಿದ್ದ ಭಾಯೀ ಪರಮಾನಂದ ಅವರಿಗ ಘೋಷಿಸಿದ ಮರಣ ದಂಡನೆಯ ಬಗ್ಗೆ ತಿಳಿಯಿತು. ಅದೇ ಸಮಯದಲ್ಲಿ ಅವರು ಆರ್ಯ ಸಮಾಜದ ಸಮ್ಮೆಳನ ಪ್ರತಿ ನಿತ್ಯ ಆರ್ಯ ಸಮಾಜ ದೇವಾಲಯದಲ್ಲಿ ನಡೆಯತ್ತಿತ್ತು. ಅಲ್ಲಿಯೇ ಸ್ವಾಮಿ ಸೋಮದೇವರು ನೆಲೆಸಿದ್ದರು. ಪರಮಾನಂದರಿಗೆ ದೊರಕಿದ್ದ ದಂಡನೆಯ ಬಗ್ಗೆ ಕೋಪಗೊಂಡು, "ಮೆರಾ ಜನಮ್" ಎಂಬ ಪದ್ಯವನ್ನು ರಚಿಸಿದರು. ಸೋಮದೇವರಿಗೆ ತೋರಿಸಿದರು. ಆಗಲೇ ಅವರು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ನಿಶ್ಚಯಿಸಿದ್ದರು..

ಲಕ್ನೋ ಕಾಂಗ್ರೆಸ್

[ಬದಲಾಯಿಸಿ]

ಅದೇ ವರ್ಷ ಬಿಸ್ಮಿಲ್ ಅವರು ಶಾಲೆಯನ್ನು ತ್ಯಜಿಸಿ, ಹಲವು ಮಿತ್ರರೊಂದಿಗೆ ಲಕ್ನೊಗೆ ತೆರಳಿದರು. ಇಂಡಿಯನ್ ನಾಷನಲ್ ಕಾಂಗ್ರೆಸ್ಸಿನ ನರಮ್ ದಲ್ ವಿಭಾಗದವರು, ಗರಮ್ ದಲ್ ವಿಭಾಗದ ತಿಲಕ್ ಅವರಿಗೆ ಒಂದು ದೊಡ್ಡ ಸಮಾರಂಭಾದಲ್ಲಿ ಸ್ವಾಗತಿಸಲು ಅನುಮತಿ ನೀಡಲಿಲ್ಲ. ಅಲ್ಲಿ ಅವರು ಯುವಕರ ಒಂದು ಗುಂಪನ್ನು ಮಾಡಿ, ಅಮೇರಿಕಾದ ಸ್ವಾತಂತ್ರದ ಬಗ್ಗೆ ಒಂದು ಪುಸ್ತಕ "ಅಮೆರಿಕಾ ಕಿ ಸ್ವತಂತ್ರ ಕಾ ಇತಿಹಾಸ್" ಬರೆಯಲು ಸೋಮದೇವರ ಅನುಮತಿ ಪಡೆದರು. ಕಾಲ್ಪನಿಕ ಲೇಖ ಬಾಬು ಹರಿವಂಶ್ ಸಹೈ ಅವರ ನೇತೃತ್ವದಲ್ಲಿ, ಈ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಪ್ರಕಾಶಕರ ಹೆಸರು ಸೋಮದೇವ್ ಸಿದ್ಧಗೋಪಾಲ ಶುಕ್ಲ ಎಂದು ನೀಡಲಾಗಿತ್ತು. ಪ್ರಕಟಣೆಯಾದ ನಂತರ, ಉತ್ತರ ಪ್ರದೇಶ್ ಸರ್ಕಾರವು ಈ ಪುಸ್ತಕದ ಮಾಋಆಟವನ್ನು ನಿಷೇಧಿಸಿತು.

ಮೈನ್ಪುರ ಪಿತೂರಿ

[ಬದಲಾಯಿಸಿ]

ಬಿಸ್ಮಿಲ್ ಅವರು ಮೈತ್ರಿ ವೇದಿ ಎಂಬ ಕ್ರಾಂತ್ರಿಕಾರಿ ಸಂಸ್ಥೆಯನ್ನು ಸ್ಥಾಪಿಸಿದರು. ಬಿಸ್ಮಿಲ್ಲರು ಔರೈಯ ಊರಿನ ಒಂದು ಶಾಲಾ ಶಿಕ್ಷಕರಾದ, ಪಂಡಿತ್ ಗೇಂಡಾ ಲಾಲ್ ದೀಕ್ಷಿತ್ ಅವರೊಂದಿಗೆ ಕೈ ಜೋಡಿಸಿದರು. ಸೋಮದೇವರು ಬಿಸ್ಮಿಲ್ಲರಿಗೆ ಓರ್ವ ಅನುಭವಸ್ಥ ಸಂಗಾತಿ ಇದ್ದರೆ ಅವರೆ ಈ ಹೋರಾಟ ಇನ್ನು ಸಫ಼ಲವಾಗುತ್ತದೆ ಹಾಗು ಒಬ್ಬರಿಗೊಬ್ಬರು ಬೆಂಬಲ ನೀಡಬಹುದೆಂದು ನಂಬಿದ್ದರು. ದೀಕ್ಷಿತ್ ಅವರಿಗೆ ಆಲ್ಲಿನ ಸುತ್ತಮುತ್ತಲಿನ ಡಾಕುಕಗಳ ಸಂರ್ಪಕವತ್ತು. ಅವರ ಶಕ್ತಿಯನ್ನು ಬಳಸಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಬೇಕೆಂದು ದೀಕ್ಷಿತರು ಬಯಸಿದರು. ಬಿಸ್ಮಿಲ್ ಅವರಂತೆಯೇ, ದೀಕ್ಷಿತ್ ಅವರೂ ಸಹ ಒಂದು ಸ್ವದೇಶಾಭಿಮಾನವನ್ನು ಹುಟ್ಟಿಸುವ ಒಂದು ಯುವಕರ ಸಂಘಟನೆಯನ್ನು ಪ್ರಾರಂಭಿಸಿದ್ದರು. ಅದೇ ಶಿವಾಜಿ ಸಮಿತಿ. ನಂತರ ಅವರಿಬ್ಬರು ಸೇರಿ ವಿವಿಧ ಪ್ರದೇಶಗಳಿಂದ - ಎತವಃ, ಮೈನ್ಪುರಿ, ಆಗ್ರ, ಷಹಜಹಾನ್ಪುರದಿಂದ ಹುಡುಗರನ್ನು ಒಟ್ಟುಗುಡಿಸಿ ತಮ್ಮ ಸಂಸ್ಠೆಯನ್ನು ಬಲಪಡಿಸಿಕೊಂಡರು. ೨೮ ಜನವರಿ ೧೯೧೮ರಂದು ಬಿಸ್ಮಿಲರು, "ದೇಶವಾಸಿಯೋಂ ಕೆ ನಾಮ್ ಸಂದೇಶ್" ಎಂಬ ಕರಪತ್ರವನ್ನು ಬರೆದು, ಅದರಲ್ಲಿ ಅವರ ಒಂದು ಕವಿತೆ, "ಮೈನ್ಪುರ್ ಕಿ ಪ್ರತಿಜ್ಞಾ"ವನ್ನು ರಚಿಸಿ ಅನೇಕ ಪ್ರದೇಶಗಳಿಗೆ ಹಂಚಿದರು. ಹಣವನ್ನು ಒಟ್ಟು ಗೂಡಿಸಲು ಪಕ್ಷದವರು ೧೯೧೮ರಲ್ಲಿ ಮೂರು ಬಾರಿ ಲೂಟಿಯನ್ನು ಮಾಡಿದರು. ಪೊಲೀಸರು ಇವರನೆಲ್ಲ ಮೈನ್ಪುರದ ಸುತ್ತಮುತ್ತಲು ಹುಡುಕಿದರು. ಆದರೆ ಬಿಸ್ಮಿಲ್ ಹಾಗು ಅವರ ಸಹವರ್ತಿಗಳು ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದ ಪುಸ್ತಕಗಳನ್ನು ದೆಹಲಿ ಕಾಂಗ್ರೆಸ್ಸಿನಲ್ಲಿ ಮಾರುತ್ತಿದ್ದರು. ಪೊಲೀಸರು ಅವರನ್ನು ಹುಡುಕಿದ ನಂತರ, ಬಿಸ್ಮಿಲ್ ಅವರು ಮಾರಾಟವಾಗದ ಪುಸ್ತಕಗಳೊಂದಿಗೆ ತಲೆಮರೆಸಿಕೊಂಡು ತಪ್ಪಿಸಿಕೊಂಡು ಹೋದರು. ಆನಂತರ ಮತ್ತೊಂದು ಲೂಟಿ - ದೆಹಲಿ ಹಾಗು ಆಗ್ರ ನಡುವೆ ಮಾಡಬೇಕೆಂದು ಯೋಜನೆ ಮಾಡುತ್ತಿರುವ ಸಮಯಕ್ಕೆ ಪೊಲೀಸರು ಆಗಮಿಸಿ ಎರಡೂ ಕಡೆಗಳಿಂದ ಗುಂಡೇಟು ಹೊಡೆಯಲು ಪ್ರಾರಂಭಿಸಿದರು. ತಪಿಸಿಕೊಳ್ಳಲು ಬಿಸ್ಮಿಲ್ ಅವರು ಯಮುನಾ ನದಿಯಲ್ಲಿ ದುಮುಕಿ ನೀರಿನ ಕೆಳಗೆ ಈಜಾಡಿಕೊಂಡು ಹೋದರು. ಮೃತಪಟ್ಟಿದರೆಂದು ಎಲ್ಲರು ನಂಬಿದ್ದರು. ಅವರನ್ನು ನಂತರ ಪೊಲೀಸಿನವರು ಅವರನ್ನು ಆಗ್ರ ಕೋಟೆಯಲ್ಲಿ ಬಂದಿಸಿದರು. ಅವರು ಅಲ್ಲಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ಅಡಗಿಕೋಂಡಿದ್ದರು. ಅಷ್ತರಲ್ಲಿ ಅವರ ವಿರುದ್ಧ ಅಪರಾಧಿ ಪ್ರಕರಣ ದಾಖಲಿಸಿದ್ದರು. ಈ ಘಟನೆಯನ್ನೇ 'ಮೈನ್ಪುರಿ ಪಿತೂರಿ' ಎಂದು ಕರೆಯುತ್ತಾರೆ. ನವೆಂಬರ್ ೧೧, ೧೯೧೯ರಂದು ಮೈನ್ಪುರದ ನ್ಯಾಯಾಂಗದ ನ್ಯಾಯಾದೀಶರಾದ ಬಿ. ಎಸ್. ಕ್ರಿಸ್ ಅವರು ಆರೋಪಿಗಳ ವಿರುದ್ಧ ತೀರ್ಮಾನವನ್ನು ನೀಡಿದರು.

ಗುಪ್ತ ಚಟುವಟಿಕೆಗಳು

[ಬದಲಾಯಿಸಿ]

೧೯೧೯ರಿಂದ ೧೯೨೦ವರೆಗೆ, ಬಿಸ್ಮಿಲ್ ಅವರು ಭೂಗತವಾಗಿ, ಉತ್ತರ ಪ್ರದೇಶದ ಹಳ್ಳಿಯಿಂದ ಹಳ್ಳಿಗೆ ಓಡಾಡಿಕೊಂಡು, ಅನೇಕ ಪುಸ್ತಕಗಳನ್ನು ಬರೆದುಕೊಂಡಿದ್ದರು. ಅದರಲ್ಲಿ ಕೆಲವು - ಕವನಗಳ ಸಂಗ್ರಹ 'ಮನ್ ಕಿ ಲಹರ್', ಹಾಗು ಎರಡು ಬೆಂಗಾಲಿ ಭಾಷೆಯ ಕವಿತೆಗಳನ್ನು, ಹಿಂದಿ ಭಾಷೆಗೆ ಭಾಷಾಂತರ ಮಾಡಿದ್ದಾರೆ. ಅವರು ತಮ್ಮ ಪುಸ್ತಕಗಳನ್ನು ಸ್ವಂತ ಸಂಪನ್ಮೂಲಗಳಿಂದ ಪ್ರಕಟಿಸುತ್ತಿದ್ದರು. ಅವರು ಒಂದು ಸರಣಿ ಪುಸ್ತಕಗಳನ್ನು 'ಸುಶೀಲ್ ಮಾಲಾ' ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಈ ಸರಣಿಯಲ್ಲಿ "ಯೋಗಿಕ್ ಮಾಲಾ" ಎಂಬ ಪುಸ್ತಕವು ಪ್ರಕಾಶಕನು ಕಾರಾಣಾಂತರಗಳಿಂದ ತಲೆಮರೆಸಿಕೊಂಡಿರುವುದರಿಂದ ಲಭ್ಯವಾಗಲಿಲ್ಲ. ೧೯೨೯ರಲ್ಲಿ 'ಕ್ರಾಂತಿ ಗೀತಾಂಜಲಿ' ಎಂಬ ಒಂದು ಪುಸ್ತಕವು ಬಿಸ್ಮಿಲರ ಮರಣೋತ್ತರ ಪ್ರಕಟನೆಯಾಯಿತು. ಅದರ ಮಾರಾಟವನ್ನು ಬ್ರಿಟಿಷ್ ಸರ್ಕಾರ ೧೯೩೧ರಲ್ಲಿ ನಿಷೇಧಿಸಿತು

ಹಿಂದುಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ ರಚನೆ

[ಬದಲಾಯಿಸಿ]

೧೯೨೦ರಲ್ಲಿ ಮೈನ್ಪುರದ ಪಿತೂರಿಯ ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಿಸ್ಮಿಲವರು ತಮ್ಮ ತಾಯಿನಾಡು, ಷಹಜಹಾನ್ಪುರಕ್ಕೆ ತೆರಳಿ ಇನ್ನು ಯಾವುದೇ ಕ್ರಾಂತಿ ಸಂಘಟನೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮಾತುನೀಡಿದರು. ಈ ಹೇಳಿಕೆಯನ್ನು ದೇಶಿಯ ನ್ಯಾಯಾಲಯದಲ್ಲಿ ದಾಖಲೆ ಮಾಡಿದ್ದರು.

೧೯೨೧ರಲ್ಲಿ ಬಿಸ್ಮಿಲ್ ಅವರು ಷಹಜಹಾನ್ಪುರದಿಂದ ಅನೇಕರೊಡನೆ ಅಹಮದಾಬಾದಿನ ಕಾಂಗ್ರೆಸ್ಸಿಗೆ ಹಾಜರಾಗಿದ್ದರು. ಅವರನ್ನು ಹಿರಿಯ ಕಾಂಗ್ರೆಸ್ಸಿನ ನಾಯಕರಾದ 'ಪ್ರೇಮ್ ಕೃಷ್ಣ ಕನ್ನ' ಹಾಗು ಕ್ರಾಂತಿಕಾರಿ 'ಆಶ್ಫಾಕುಲ್ಲಾ ಖಾನ್'ರೊಂದಿಗೆ ವೇದಿಕೆ ಹಂಚಿಕೊಂಡರು. ಇದರಲ್ಲಿ ಬಿಸ್ಮಿಲ್ ಅವರು ಬಹುಮುಖ್ಯ ಪಾತ್ರವಹಿಸಿ, ಪೂರ್ಣ ಸ್ವರಾಜ್ಯದ ಹೊರಾಟಕ್ಕೆ ಪ್ರಸ್ತಾವನೆಯನ್ನು 'ಮೌಲಾನಾ ಹಸ್ರತ್ ಮೊಹನಿ' ಅವರೊಂದಿಗೆ ಕೂಡಿ ಸಾಮನ್ಯ ಸಭೆಯಲ್ಲಿ ಜಾರಿಗೆ ತಂದಿದ್ದರು. ಮಹಾತ್ಮ ಗಾಂಧಿಯವರು ಇದ್ದರು ವಿರುದ್ಧವಾಗಿದ್ದರೂ ಯುವ ಶಕ್ತಿಯ ಕೋರಿಕೆಗೆ ಅಸಹಾಯಕರಾಗಿ ತಲೆಬಾಗಿಸಿದ್ದರು. ಇದರ ನಂತರ ಬಿಸ್ಮಿಲ್ ಅವರು ವಾಪಸ್ ಷಹಜಹಾನ್ಪುರಕ್ಕೆ ತೆರಳಿ ಯುವಕರನ್ನು ಸಜ್ಜುಗೊಳಿಸಿ ಅದನ್ನು 'ಯುನೈಟ್ಟೆಡ್ ಪ್ರಾವಿಂಸ್ ಫ಼ಾರ್ ನಾನ‍ ಕೊ-ಓಪರೇಷನ್' ಎಂದು ಕರೆದರು. ಬಿಸ್ಮಿಲ್ಲರ ಉಗ್ರ ಭಾಷಣಕ್ಕೆ ಮನಸೋತ ಉತ್ತರ ಪ್ರದೇಶದ ಜನರು ಬ್ರಿಟೀಷರ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದರು. ಬಿಸ್ಮಲ್ ಅವರು ಹೇಳಿದ ಮಾತು "ಸ್ವರಾಜ್ಯವನ್ನು ನಾವು ಎಂದಿಗೂ ಅಹಿಸಾಮಾರ್ಗದಲ್ಲಿ ಪಡೆಯಲು ಸಾದ್ಯವಿಲ್ಲ"[]

೧೯೨೨ರ ಫೆಬ್ರವರಿಯಲ್ಲಿ, ಚೌರಿ ಚೌರಾ ಎಂಬಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಹಲವು ರೈತರು ಪೋಲಿಸರಿಂದ ಹತ್ಯೆಗೀಡಾದರು. ಇದಕ್ಕೆ ಪ್ರತ್ಯುತ್ತರವಾಗಿ, ಅಲ್ಲಿನ ಜನರು ಠಾಣೆಯ ಮೇಲೆ ಹಲ್ಲೆ ಮಾಡಿದರು. ಈ ಘಟನೆಯಲ್ಲಿ ೨೨ ಪೊಲೀಸ್ ಅಧಿಕಾರಿಗಳು ಜೀವಂತವಾಗಿ ಸುಟ್ಟುಹೋದರು. ನಂತರ ಗಾಂಧಿಜಿ, ಯಾವುದೇ ಕಾಂಗ್ರೆಸ್ ಪದಾಧಿಕಾರಿಗಳ ಅನುಮತಿ ಪಡೆಯದೆ, ಅಸಹಕಾರ ಚಳುವಳಿಯನ್ನು ತಡೆಹಾಕಿದರು. ಆ ವರ್ಷ ಗಯಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಸ್ಮಿಲ್, ಹಾಗೂ ಕೆಲವು ಯುವಕರು ಇದರ ವಿರುದ್ದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗಾಂಧಿಜಿಯವರು ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲವೆಂದು ನಿರಾಕರಿಸಿದಾಗ, ಕಾಂಗ್ರೆಸ್ ಅದ್ಯಕ್ಷರಾದ ಚಿತ್ತರಂಜನ್ ದಾಸ್ ಅವರು ರಾಜಿನಾಮೆ ನೀಡಿದರು. ಕಾಂಗ್ರೆಸ್ ನರಮದಲ್ ಹಾಗೂ ಗರಮದಲ್ ಎಂದು ೨ ಭಾಗಗಳಾಗಿ ವಿಂಗಡನೆಯಾಯಿತು.

ಹಳದಿ ಕಾಗದ ಸಂವಿಧಾನ

[ಬದಲಾಯಿಸಿ]

ಲಾಲಾ ಹರ್ ದಯಾಲ್ ಅವರ ಅನುಮತಿಯೊಂದಿಗೆ, ಬಿಸ್ಮಿಲ್ ಅವರು ಅಲಹಾಬಾದ್ಗೆ ತೆರಳಿದರು. ಅಲ್ಲಿ ಸಚಿದಾನಂದ್ರ ನಾಥ್ ಸಾನ್ಯಾಲ್ ಹಾಗು ಬಾಂಗ್ಲ ಕ್ರಾಂತಿಕಾರ ಜದುಗೊಪಾಲ್ ಚಟರ್ಜಿಯವರ ಸಹಾಯದಿಂದ ೧೯೨೩ಯಲ್ಲಿ ಸಂವಿಧಾನ ಪಾರ್ಟಿಯನ್ನು ಸಂಘಟಿಸಿದರು. ಹಳದಿ ಹಾಳೆಯ ಮೇಲೆ ಆ ಪಾರ್ಟಿಯ ಮುಖ್ಯ ಉದ್ದೇಶಗಳನ್ನು ಬರೆದರು. ನಂತರ ಸಚಿಂದ್ರ ನಾಥ್ ಅವರ ಅಧ್ಯಕ್ಷತೆಯಲ್ಲಿ ಮೊದಲನೆಯ ಸಭೆಯನ್ನು ೩ ಅಕ್ಟೋಬರ್ ೧೯೨೪ರಂದು, ಕಾನ್ಪುರದಲ್ಲಿ ನಡೆಸಿದರು.

ಕಾಕೋರಿ ಪಿತೂರಿಯ ನಂತರ, ಬಿಸ್ಮಿಲ್ ಆಶ್ಫಾಕುಲ್ಲಾ ಖಾನ್ ಹಾಗು ಇನ್ನಿತರರನ್ನು ೧೮ ತಿಂಗಳ ಕಾಲ ಕಾನೂನು ಪ್ರಕ್ರಿಯೆಗೆ ಒಳಗಾಗಿದ್ದರು. ಬಿಸ್ಮಿಲ್ ಅವರನ್ನು ೧೯ ಡಿಸೆಂಬರ್ ೧೯೨೭ರಂದು ಗಲ್ಲಿಗೇರಿಸಲಾಯಿತು. ಅವರ ಶವವನ್ನು ರಪ್ತಿ ನದಿಯಲ್ಲಿ ವಿಸರ್ಜಿಸಿದರು.[]

ಬಿಸ್ಮಿಲ್ ಸ್ಮಾರಕ ಉದ್ಯಾನವನ
ಬಿಸ್ಮಿಲ್ ಸ್ಮಾರಕ ಉದ್ಯಾನವನ

ಅವರ ನೆನಪಿನಲ್ಲಿ ಒಂದು ಉದ್ಯಾನವನ, ರೈಲು ನಿಲ್ದಾಣವನ್ನು ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ

ಹೊರಗಿನ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಭಾರತದ ಸ್ವಾತಂತ್ರಕ್ಕೆ ಸಂಬಂಧಪಟ್ಟ ಮಾಹಿತಿ http://ww7.rebelsindia.com/[ಶಾಶ್ವತವಾಗಿ ಮಡಿದ ಕೊಂಡಿ]
  2. ಭಾರತದ ಒಂದು ದೃಷ್ಟಿಕೋಣದ ಒಂದು ನೋಟ https://books.google.co.in/books?id=q0gQCrZ6hZwC&pg=PA180#v=onepage&q&f=false
  3. ರಾಮ್ ಬಿಸ್‌ಮಿಲ್‌ರವರ ಅಂಚೆ ಸ್ತಾಂಪ್ http://www.indianpost.com/viewstamp.php/Alpha/R/RAM%20PRASAD%20BISMIL%20-%20ASHFAQUALLAH%20KHAN