ರಾಧಾ ರಮಣ (ಚಲನಚಿತ್ರ)
ಗೋಚರ
ರಾಧಾ ರಮಣ |
---|
"ರಾಧಾ ರಮಣ" ೧೯೪೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ಜ್ಯೋತಿ ಸಿನ್ಹ ಅವರು ನಿರ್ದೇಶನ ಹಾಗೂ.ಎಂ.ವಿ.ರಾಜಮ್ಮ ಅವರು ಚಿತ್ರವನ್ನು ನಿರ್ಮಿಸಿದ್ದರು. ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಪದ್ಮನಾಭ ಶಾಸ್ತ್ರಿ.
ಕಥಾ ಸಾರಾಂಶ
[ಬದಲಾಯಿಸಿ]ರಾಧಾ-ಕೃಷ್ಣರ ಪ್ರಣಯದ ನಿಷ್ಕಳಂಕತೆಯನ್ನು ಹೇಳುವ ಕಥೆ ಇದಾಗಿದೆ. ರಾಧೆಯ ಪತಿ ಅನಯನಿಗೆ ಆಕೆಯ ಮೇಲೆ ಸಂಶಯ. ಕೃಷ್ಣನ ಜನ್ಮ ರಹಸ್ಯ ತಿಳಿದ ಮೇಲೆ ಕೃಷ್ಣನ ವೈರಿ ಕಂಸನೊಂದಿಗೆ ಸೇರಿ ಆ ಮೂಲಕ ರಾಧಾ ಕೃಷ್ಣರನ್ನು ದೂರ ಮಾಡುವುದು ಇವನ ಉದ್ದೇಶವಾಗಿರುತ್ತದೆ. ಆದರೆ ನಂತರದ ಘಟನೆಗಳಲ್ಲಿ ಅನಯನು ತನ್ನ ಸಂಶಯವನ್ನು ನಿವಾರಿಸಿಕೊಂಡು ರಾಧೆತ ಪತಿ ನಿಷ್ಠೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ.
ವಿಶೇಷತೆ
[ಬದಲಾಯಿಸಿ]ಈ ಚಿತ್ರವನ್ನು ನಿರ್ಮಿಸುವ ಮೂಲಕ ಎಂ.ವಿ. ರಾಜಮ್ಮ ಕನ್ನಡದ ಮೊದಲ ಚಲನಚಿತ್ರ ನಿರ್ಮಾಪಕಿ ಎನ್ನಿಸಿದರು. ಬಾಲಕೃಷ್ಣ ಮತ್ತು ಜಿ.ವಿ. ಅಯ್ಯರ್ ಅವರ ಮೊದಲ ಚಿತ್ರವಾಗಿದೆ.