ವಿಷಯಕ್ಕೆ ಹೋಗು

ರಾಜ ದಹಿರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಜ ದಹಿರ್
ಸಿಂಧ್ಮಹಾರಾಜ

3rd and last Maharaja of Brahmin dynasty of Sindh
ಆಳ್ವಿಕೆ 695–712 CE
ಪೂರ್ವಾಧಿಕಾರಿ Chandar
ಉತ್ತರಾಧಿಕಾರಿ Kingdom abolished
(annexed by the Umayyad Caliphate)
ರಾಜಪ್ರತಿನಿಧಿ Dahir
Spouse •Ladee
•Rani Bai
ಸಂತಾನ
ಪೂರ್ಣ ಹೆಸರು
Raja Dahir Sen
ತಂದೆ Chach
ತಾಯಿ Rani Suhanadi (former wife of Rai Sahasi)
ಜನನ 663 CE
Aror, Chacha dynasty
ಮರಣ 712 CE (aged 49)
Sindhu River, Chacha dynasty
ಧರ್ಮ Hinduism

ರಾಜಾ ದಹಿರ್ (663 – 712 ಸಿ.ಇ) ಸಿಂಧ್‌ಪ್ರಾಂತ್ಯದ (ಇಂದಿನ ಪಾಕಿಸ್ತಾನದಲ್ಲಿ) ಕೊನೆಯ ಹಿಂದೂ [೧] ದೊರೆ. [೨] ಒಬ್ಬ ಬ್ರಾಹ್ಮಣ ಆಡಳಿತಗಾರ, [೩] ಅವನ ರಾಜ್ಯವನ್ನು ಮುಹಮ್ಮದ್ ಬಿನ್ ಖಾಸಿಮ್ ನೇತೃತ್ವದ ಅರಬ್ ಉಮಯ್ಯದ್ ಕ್ಯಾಲಿಫೇಟ್ 711 ಸಿ.ಇ ನಲ್ಲಿ ಆಕ್ರಮಣ ಮಾಡಿ ವಶಪಡಿಸಿಕೂಂಡಿತು. ತನ್ನ ರಾಜ್ಯವನ್ನು ರಕ್ಷಿಸುತ್ತಾ ರಾಜ ದಾಹಿರ್ ವೀರ ಮರಣಹೊಂದಿದನು. ಚಚ್ನಾಮಾ ಗಳ ಪ್ರಕಾರ, ದಾಹಿರ್ ವಿರುದ್ಧದ ಉಮಯ್ಯದ್ ಅಭಿಯಾನವು ಸಿಂಧಿ ಕಡಲುಗಳ್ಳರು ಸೆರೆಂಡಿಬ್ (ಶ್ರೀಲಂಕಾದ ಹಳೆಯ ಹೆಸರು)ರಾಜ ಕಳುಹಿಸಿದ ಉಡುಗೊರೆಗಳನ್ನು ಕಳವು ಮಾಡಿದರು [೪] [೫]. ತನ್ನ ಉಡುಗರೆಯನ್ನು ಹಿಂತಿರುಗಿಸುವಂತೆ ಖಿಲಾಫ್ ಮಾಡಿದ ಮನವಿಗೆ ರಾಜ ದಹೀರ್ "ಸಿಂಧಿ ಕಡಲುಗಳ್ಳರು ನನ್ನ ನಿಯಂತ್ರಣದಲ್ಲಿಲ್ಲ ವೆಂದು" ಹೇಳಿದ್ದು ಕಾರಣವಾಯಿತು.

ರಾಜ್ ದಹೀರ್ ಮೊದಲ ೩ ಯುದ್ಧಗಳನ್ನು ಯಶಸ್ವಿಯಾಗಿ ಹೋರಾಡಿ ಅರಬ್ ರನ್ನು ಹಿಮ್ಮೆಟ್ಟಿಸಿದರು. ಮೂಲಸ್ಥಾನವನ್ನು(ಪಾಕಿಸ್ತಾನದಲ್ಲಿರುವ ಈಗಿನ ಮುಲ್ತಾನ್) ವಶಪಡಿಸಿಕೂಂಡ ಮೇಲೆ ಸಿಂಧ್‌ನಲ್ಲಿ ತನ್ನ ಪ್ರದೇಶವನ್ನು ರಕ್ಷಿಸುತ್ತಿರುವಾಗ ಅರೋರ್ ಕದನದಲ್ಲಿ ವೀರ ಮರಣಹೂಂದಿದನು [೬]. ಈ ಯುದ್ದದ ಅರಬ್ ಜನರಲ್ ಮುಹಮ್ಮದ್ ಬಿನ್ ಖಾಸಿಮ್. [೭]

ಚಾಚ್ ನಾಮಾದಲ್ಲಿ ಆಳ್ವಿಕೆ

[ಬದಲಾಯಿಸಿ]

ಚಾಚ್ ನಾಮಾ ಸಿಂಧ್‌ನ ಅರಬ್ ವಿಜಯದ ಅತ್ಯಂತ ಹಳೆಯ ಇತಿಹಾಸ ಗ್ರಂಥವಾಗಿದೆ. ಇದನ್ನು 1216 ರಲ್ಲಿ ಮುಹಮ್ಮದ್ ಅಲಿ ಬಿನ್ ಹಮೀದ್ ಬಿನ್ ಅಬು ಬಕರ್ ಕುಫಿ ಎಂಬ ಅರಬ್ ಪರ್ಷಿಯನ್ ಭಾಷೆಗೆ ಭಾಷಾಂತರಿಸಿದರು [೮] ಥಖಾಫಿ ಕುಟುಂಬ ( ಮುಖ್ತಾರ್ ಅಲ್-ತಖಾಫಿ ಅವರ ಸಂಬಂಧಿಗಳು) ಬರೆದಿದ್ದಾರೆಂದು ನಂಬಲಾಗಿದೆ.

ಉಮಯ್ಯದ್ ಖಿಲಾಫ್ ನೂಂದಿಗೆ ಹೊರಾಟ

[ಬದಲಾಯಿಸಿ]

ತನ್ನ ಆಳ್ವಿಕೆಯ ಸಮಯದಲ್ಲಿ ಮಹಾರಾಜ ದಾಹಿರ್ ಆ ಸಮಯದಲ್ಲಿ ಸಾಕಷ್ಟು ಶಕ್ತಿಯುತವಾಗಿ ಬೆಳೆದಿದ್ದ ಉಮಯ್ಯದ್ ಖಿಲಾಫತ್ ಸಾಮ್ರಾಜ್ಯದ ಆಕ್ರಮಣಗಳನ್ನು ಎದುರಿಸಬೇಕಾಯಿತು.

ಚಚ್ನಾಮಾ ಮತ್ತು ಅರಬ್ ಇತಿಹಾಸಕಾರ ಬಿಲಾಧುರಿಯ ಪ್ರಕಾರ, ದೇಬಲ್ ಅವಳಿ ಕದನಗಳಲ್ಲಿ ದಾಹಿರ್ ಅರಬ್ಬರನ್ನು ಎರಡು ಬಾರಿ ಸೋಲಿಸಿದನು. ಇದರಲ್ಲಿ ಆಕ್ರಮಣಕಾರಿ ಅರಬ್ ಕಮಾಂಡರ್‌ಗಳಾದ ಉಬೈದುಲ್ಲಾ ಮತ್ತು ಬುಡೈಲ್ ಅಥವಾ ಬಾಜಿಲ್ ಅವರು ದಾಹಿರ್‌ನ ಮಗ ಜೈಸಿಯಾ ನೇತೃತ್ವದಲ್ಲಿ ಸಿಂಧಿಗಳಿಂದ ಕೊಲ್ಲಲ್ಪಟ್ಟರು. [೯] [೧೦]

ಜೈಸಿಯಾ ನಂತರ ತನ್ನವರೇ ಆದ ಮುಖ್ಯಸ್ಥ ಠಾಕೂರ್ ಅನ್ನು ತನ್ನ ಪರವಾಗಿ ಆಡಳಿತ ನಡೆಸಲು ನಿಯೂಜಿಸಿದ. ಚಚ್ನಾಮಾ ಗಳ ಪ್ರಕಾರ, ಬಾಜಿಲ್‌ನ ಸಾವಿನ ಸುದ್ದಿಯನ್ನು ಅಲ್-ಹಜ್ಜಾಜ್‌ಗೆ ತಿಳಿಸಿದಾಗ, ಅವನು ತುಂಬಾ ದುಃಖಿತನಾದನು ಮತ್ತು ಕೋಪಗೂಂಡನು.

ಇದು ಮುಹಮ್ಮದ್ ಬಿನ್ ಕಾಸಿಮ್ ದಂಡಯಾತ್ರೆಗೆ ಕಾರಣವಾಯಿತು. ಅರೋರ್ ಕದನದ ಮೊದಲು, ಮಹಾರಾಜ ದಾಹಿರ್ ಈ ಭಾಷಣವನ್ನು ಚಾಚನಾಮಾ [೧೦] ಗಳು ಹೀಗೆ ದಾಖಲಿಸಿದ್ದಾರೆ.

 

"I am going to meet the Arabs in open battle, and fight them as best as I can. If I crush them, my kingdom will then be put on a firm footing. But if I am killed honourably, the event will be recorded in the books of Arabia and India and will be talked about by great men. It will be heard by other kings in the world, and it will be said that Raja Dahir of Sindh sacrificed his precious life for the sake of his country, in fighting with the enemy."[೧೧] "ನಾನು ಅರಬ್ಬರನ್ನು ಬಹಿರಂಗ ಯುದ್ಧರಂಗದಲ್ಲಿ ಎದುರಿಸುತ್ತಿದ್ದೇನೆ. ನನ್ನ ಶಕ್ತಿಮೀರಿ ಹೋರಾಡುತ್ತೇನೆ ಗೆದ್ದರೆ ಭಾರತವು ಸದೃಢವಾಗಿರುತ್ತದೆ. ಮಡಿದರೆ ವೀರ ಮರಣದ ಖ್ಯಾತಿ ನನ್ನದಾಗುತ್ತದೆ. ಅರೇಬಿಯಾ ಮತ್ತು ಭಾರತದ ಇತಿಹಾಸದಲ್ಲಿ ಇದನ್ನ ದಾಖಲಿಸಲಾಗುತ್ತದೆ. ಇದನ್ನು ಪ್ರಪಂಚದ ಇತರ ರಾಜರು ಸ್ಮರಿಸುತ್ತಾರೆ ಮತ್ತು ಸಿಂಧ್ ರಾಜ ದಾಹಿರ್ ತನ್ನ ದೇಶಕ್ಕಾಗಿ ತನ್ನ ಅಮೂಲ್ಯವಾದ ಜೀವನವನ್ನು ತ್ಯಾಗ ಮಾಡಿದನೆಂದು ಹೇಳಲಾಗುತ್ತದೆ."

ರಾಜಾ ದಾಹಿರ್ ವಿರುದ್ಧ ಬಸ್ರಾ ಗವರ್ನರ್ ಅಲ್-ಹಜ್ಜಾಜ್, ಯೂಸುಫ್ ನ ಮಗ ದಂಡಯಾತ್ರೆಗೆ ಚಾಚ್ ನಾಮಾದಲ್ಲಿ ಉಲ್ಲೇಖಿಸಲಾದ ಪ್ರಾಥಮಿಕ ಕಾರಣವೆಂದರೆ, ದಾಬಾಲ್ ಕರಾವಳಿಯಲ್ಲಿ ಸಿಂದು ಕಡಲುಗಳ್ಳರ ದಾಳಿಯಾಗಿದ್ದು, ಸೆರೆಂಡಿಬ್ ರಾಜ (ಆಧುನಿಕ ಶ್ರೀಲಂಕ) ಖಲೀಫ್‌ಗೆ ಉಡುಗೊರೆಗಳನ್ನು ಕಳ್ಳತನಮಾಡಿದ್ದು . [೪] ಬವಾರಿಜ್ ಎಂದೂ ಕರೆಯಲ್ಪಡುವ ಮೆಡ್ಸ್ (ಸಿಂಧ್‌ನಲ್ಲಿ ವಾಸಿಸುವ ಸಿಥಿಯನ್ನರ ಬುಡಕಟ್ಟು) ಈ ಹಿಂದೆ ಟೈಗ್ರಿಸ್‌ನ ಬಾಯಿಯಿಂದ ಶ್ರೀಲಂಕಾದ ಕರಾವಳಿಯವರೆಗೆ ಸಸ್ಸಾನಿಡ್ ಹಡಗಿನ ಮೇಲೆ ಕಡಲ್ಗಳ್ಳತನ ನಡೆಸುತಿದ್ದರು. ಅವರು ಕಚ್‌ನಲ್ಲಿರುವ ತಮ್ಮ ನೆಲೆಗಳಿಂದ ಅರಬ್ ಶಿಪ್ಪಿಂಗ್ ಅನ್ನು ಬೇಟೆಯಾಡಲು ಸಮರ್ಥರಾಗಿದ್ದರು, ದೇಬಾಲ್ ಮತ್ತು ಕಥಿಯಾವಾರ್ .

700 CE ನಲ್ಲಿ ಸಿಂಧ್, ರಾಜನ ರಾಜವಂಶದ ಅಡಿಯಲ್ಲಿ. ಉಮಯ್ಯದ್ ಕ್ಯಾಲಿಫೇಟ್ ಭಾರತೀಯ ಉಪಖಂಡದ ಪಶ್ಚಿಮ ಗಡಿಯಲ್ಲಿ ಮುಂದುವರಿಯುವುದನ್ನು ಕಾಣಬಹುದು.

ಹಜಾಜ್ ಅವರ ವಿಫಲಾ ಅಭಿಯಾನದ ನಂತರ ಮುಂದಿನ ಅಭಿಯಾನವನ್ನು ಮುಹಮ್ಮದ್ ಬಿನ್ ಖಾಸಿಮ್ ಮೂಂದಾಳತ್ವದಲ್ಲಿ ಮಾಡಲಾಯಿತು. 711 ರಲ್ಲಿ, ಖಾಸಿಮ್ ನ ಮಗ ಮೊಹಮದ್ ದೇಬಲ್‌ಮೇಲೆ ದಾಳಿ ಮಾಡಿದನು ಮತ್ತು ಅಲ್-ಹಜ್ಜಾಜ್‌ನ ಆದೇಶದ ಮೇರೆಗೆ ಹಿಂದಿನ (ವಿಫಲವಾದ) ಕಾರ್ಯಾಚರಣೆಯಿಂದ ಸೆರೆಯಾಳುಗಳಾಗಿದ್ದ ಕೈದಿಗಳನ್ನು ಮುಕ್ತಗೊಳಿಸಿ ತನ್ನ ಪಡೆಗೆ ಸೇರಿಸಿಕೂಂಡನು. ಈ ತಂತ್ರದಲ್ಲಿ ರಾಜದ್ರೊಹಿಗಳನ್ನು ಮತ್ತು ಸೋಲಿಸಲ್ಪಟ್ಟ ಪಡೆಗಳಿಂದ ಬೆಂಬಲವನ್ನು ಪಡೆದನು. ದೇಬಲ್‌ನಿಂದ ಕಾಸಿಮ್ನ ಮಗ ಮೊಹಮದ್ ನೆರುನ್‌ಗೆ ಯುದ್ದ ಸಾಮಾಗ್ರಿ ಮತ್ತು ಆಹಾರ ಪೂರೈಕೆಗಾಗಿ ತೆರಳಿದನು. ಸಿಂದಿನ ಈ ಬ್ರಾಹ್ಮಣ ವಂಶಜರು (ಮಹಾರಾಜ್ ದಾಹಿರ್ ವಂಶಜರು) ಬೌದ್ದರ ರಾಯ್ ವಂಶಜರಿಂದ ಅಧಿಕಾರ ವಹಿಸಿಕೂಂಡಿದ್ದರಿಂದಾಗಿ ಬೌದ್ಧರು ಮತ್ತು ಬುಡಕಟ್ಟುಗಳಾದ ಜಾಟ್ ಜನಾಂಗದವರು ಸಹಜವಾಗಿ ರಾಜನಿಷ್ಟರಾಗಿರಲಿಲ್ಲ. ನೆರುನ್‌ ನಗರದ ಬೌದ್ಧ ಗವರ್ನರ್ ಅರಬ್ಬರ ಮೊದಲ ಅಭಿಯಾನದ ನಂತರ ಇದು ಕ್ಯಾಲಿಫೇಟ್‌ನನಿಗೆ ಸಲ್ಲಿಸಬೇಕಾದ ಕಪ್ಪ ಎಂದು ಒಪ್ಪಿಕೊಂಡು ಶರಣಾಗಿ ಯುದ್ದಕ್ಕೆ ಸಹಕರಿಸಿದರು. ಖಾಸಿಂನ ಸೇನೆಗಳು ನಂತರ ಸಿವಿಸ್ತಾನವನ್ನು ವಶಪಡಿಸಿಕೊಂಡರು. ಹಲವಾರು ಬುಡಕಟ್ಟು ಮುಖ್ಯಸ್ಥರು ತಮ್ಮ ನಿಷ್ಠೆಯನ್ನು ಬದಲಿಸಿದರು. ಈ ತಂತ್ರದ ಮೂಲಕ ಸುತ್ತಮುತ್ತಲಿನ ಪ್ರದೇಶಗಳು ಅರಬ್ಬರ ವಶವಾಯಿತು. ಖಾಸಿಂನ ಸಂಯೋಜಿತ ಪಡೆಗಳು ಸಿಸಾಮ್‌ನಲ್ಲಿ ಕೋಟೆಯನ್ನು ವಶಪಡಿಸಿಕೊಂಡವು ಮತ್ತು ಸಿಂಧೂ ನದಿಯ ಪಶ್ಚಿಮ ಪ್ರದೇಶವನ್ನು ಭದ್ರಪಡಿಸಿದನು.

ಸ್ಥಳೀಯ ಬುಡಕಟ್ಟುಗಳಾದ ಮೆಡ್ಸ್ ಮತ್ತು ನೆರುನ್, ಬಜ್ರಾ, ಕಾಕಾ ಕೋಲಾಕ್ ಮತ್ತು ಸಿವಿಸ್ತಾನ್‌ನ ಬೌದ್ಧ ಆಡಳಿತಗಾರರ ಬೆಂಬಲವನ್ನು ತನ್ನ ಪ್ರಧಾನ ಆರೋಹಿಸಿದ ಸೈನ್ಯಕ್ಕೆ ಕಾಲಾಳುಪಡೆಯಾಗಿ ಮುಹಮ್ಮದ್ ಬಿನ್ ಖಾಸಿಮ್ ಬಳಸಿ ಮಹರಾಜ ದಾಹಿರ್ ಅನ್ನು ಸೋಲಿಸಿದನು. ಇದಲ್ಲದೆ ಅವನು ಪೂರ್ವ ಪ್ರದೇಶಗಳನ್ನು ವಶಪಡಿಸಿಕೊಂಡು ಉಮಯ್ಯದ್ ಕ್ಯಾಲಿಫೇಟ್ಗೆ ಸೇರಿಸಿದನು. [೧೨]

ಅಂತಿಮ ಯುದ್ಧಕ್ಕೆ ಸ್ವಲ್ಪ ಸಮಯದ ಮೊದಲು, ದಾಹಿರ್‌ನ ಮಂತ್ರಿ ರಾಜನ ಬಳಿ ಬಂದು ಎರಡು ಮನವಿಯನ್ನು ಮಾಡಿದನು. ಮೊದಲನೆಯದು "ರಾಜನೇ ತಾವು ಭಾರತದ ಹಿತೈಷಿ ರಾಜರುಗಳಲ್ಲಿ ಆಶ್ರಯಿಪಡೆಯಬೇಕು". ಆಗ ಮಹಾರಾಜ ದಾಹೀರನು ಹೀಗೆ ಹೇಳಿದನು "ನೀವು ಅವರಿಗೆ ಹೇಳಬೇಕು, 'ನಾನು ನಿಮ್ಮ ಮತ್ತು ಅರಬ್ ಸೈನ್ಯದ ನಡುವೆ ಗೋಡೆಯಾಗಿದ್ದೇನೆ. ನಾನು ಬಿದ್ದರೆ, ಅರಬ್ಬರ ಕೈಯಲ್ಲಿ ನಿಮ್ಮ ವಿನಾಶವನ್ನು ತಡೆಯುಲಾಗದು"ಎಂದನು. ಆಗ ಮಂತ್ರಿಯು ಎರಡನೆಯ ಮನವಿಯಾಗಿ "ನೀವು ಕನಿಷ್ಠ ನಿಮ್ಮ ಕುಟುಂಬವನ್ನು ಭಾರತದ ಯಾವುದಾದರೂ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಬಿಡಿ" ಎನ್ನಲು. ದಾಹಿರ್ ಇವೆರಡು ಮನವಿಯನ್ನು ನಿರಾಕರಿಸಿದ. "ನನ್ನ ಠಾಕೂರ್ ಮತ್ತು ಗಣ್ಯರ ಕುಟುಂಬಗಳು ಇಲ್ಲಿಯೇ ಇರುವಾಗ ನಾನು ನನ್ನ ಕುಟುಂಬವನ್ನು ಭದ್ರತೆಗೆ ಕಳುಹಿಸಲು ಸಾಧ್ಯವಿಲ್ಲ." [೧೨]

ದಾಹಿರ್ ನಂತರ ಖಾಸಿಮ್ ಸಿಂಧೂ ನದಿಯನ್ನು ದಾಟದಂತೆ ತಡೆಯಲು ಪ್ರಯತ್ನಿಸಿದನು, ಅವನ ಪಡೆಗಳನ್ನು ಅದರ ಪೂರ್ವ ದಡಕ್ಕೆ ಸ್ಥಳಾಂತರಿಸಿದನು. ಆದಾಗ್ಯೂ, ಅಂತಿಮವಾಗಿ, ಖಾಸಿಮ್ ನದಿಯನ್ನು ದಾಟಿದನು ಮತ್ತು ಜೈಸಿಯಾ (ದಾಹಿರ್‌ನ ಮಗ) ನೇತೃತ್ವದ ಜಿತೋರ್‌ನಲ್ಲಿ ತನ್ನ ಪಡೆಗಳನ್ನು ಸೋಲಿಸಿದನು. 711 ರಲ್ಲಿ ಅರೋರ್‌ನಲ್ಲಿ (ಆಧುನಿಕ ನವಾಬ್‌ಶಾ ಬಳಿ) ಕಾಸಿಮ್ ದಾಹಿರ್‌ನೊಂದಿಗೆ ಹೋರಾಡಿದನು, ಅಂತಿಮವಾಗಿ ಅವನು ಕೊಲ್ಲಲ್ಪಟ್ಟನು. ಸಿಂಧೂ ನದಿಯ ದಡದಲ್ಲಿ ನಡೆದ ಅರೋರ್ ಕದನದಲ್ಲಿ ದಾಹಿರ್ ಕೊಲ್ಲಲ್ಪಟ್ಟ ನಂತರ, ಅವನ ತಲೆಯನ್ನು ಅವನ ದೇಹದಿಂದ ಕತ್ತರಿಸಿ ಹಜ್ಜಾಜ್ ಬಿನ್ ಯೂಸುಫ್‌ಗೆ ಕಳುಹಿಸಲಾಯಿತು.

ಸಹ ನೋಡಿ

[ಬದಲಾಯಿಸಿ]
 • ಚಾಚ್ ನಾಮಾ
 • ರೈ ರಾಜವಂಶ

ಉಲ್ಲೇಖಗಳು

[ಬದಲಾಯಿಸಿ]

ಮೂಲಗಳು

[ಬದಲಾಯಿಸಿ]
 • ರಾಜಾ ದಾಹಿರ್ ಅವರ ಪತ್ನಿ ರಾಣಿ ಬಾಯಿ 150,000 ಸೈನಿಕರೊಂದಿಗೆ ರಾವರ್ ಕೋಟೆಗೆ ಓಡಿಹೋದರು, ಅಲ್ಲಿಂದ ಅವರು ಮುಹಮ್ಮದ್ ಬಿನ್ ಕಾಸಿಮ್ ಅವರನ್ನು ಯುದ್ಧಕ್ಕೆ ಸವಾಲು ಹಾಕಿದಳು. ಮುಹಮ್ಮದ್ ಬಿನ್ ಖಾಸಿಮ್ ಅವಳನ್ನು ರಾವರ ಬಳಿಗೆ ಅಟ್ಟಿಸಿಕೂಂಡು ಹೊದನು. ಕೋಟೆಯ ಗೋಡೆಗಳನ್ನು ಅಗೆದು ಕೆಡವಲು ತನ್ನ ಗಣಿಗಾರರಿಗೆ ಆದೇಶಿಸಿದನು. ಆವಾಗ ರಾಣಿ ಬಾಯಿ, ತನ್ನನ್ನು ಶತ್ರುಗಳು ಸುತ್ತುವರೆದಿರುವುದನ್ನು ಕಂಡು, ಶರಣಾದಳು. ಇತರ ಮಹಿಳೆಯರೊಂದಿಗೆ ತನ್ನನ್ನು ತಾನು ಸುಟ್ಟುಕೊಂಡಳು.
 • ಮಿರ್ಜಾ ಕಾಲಿಚ್‌ಬೇಗ್ ಫ್ರೆಡೂನ್‌ಬೆಗ್: ದಿ ಚಚ್ನಾಮಾ, ಸಿಂಧ್‌ನ ಪ್ರಾಚೀನ ಇತಿಹಾಸ, ಅರಬ್ ವಿಜಯದವರೆಗೆ ಹಿಂದೂ ಅವಧಿಯನ್ನು ನೀಡುತ್ತದೆ. ಕಮಿಷನರ್ಸ್ ಪ್ರೆಸ್ 1900 [೧] ನಿಂದ ಪರ್ಷಿಯನ್ ಭಾಷೆಯಿಂದ ಅನುವಾದಿಸಲಾಗಿದೆ.
 • ಆರ್‌ಸಿ ಮಜುಂದಾರ್, ಎಚ್‌ಸಿ ರಾಯ್ಚಂದ್ರ ಮತ್ತು ಕಲಿಕಿಂಕರ್ ದಿಟ್ಟಾ: ಆನ್ ಅಡ್ವಾನ್ಸ್ಡ್ ಹಿಸ್ಟರಿ ಆಫ್ ಇಂಡಿಯಾ, ಭಾಗ II,
 • ತಾರೀಖ್-ಸಿಂಧ್, ಮಾವ್ಲಾನಾ ಸೈಯದ್ ಅಬು ಜಾಫರ್ ನದ್ವಿ ಅವರಿಂದ
 • ವಿಂಕ್, ಆಂಡ್ರೆ, ಅಲ್-ಹಿಂದ್ ದಿ ಮೇಕಿಂಗ್ ಆಫ್ ದಿ ಇಂಡೋ ಇಸ್ಲಾಮಿಕ್ ವರ್ಲ್ಡ್, ಬ್ರಿಲ್ ಅಕಾಡೆಮಿಕ್ ಪಬ್ಲಿಷರ್ಸ್, 1 ಜನವರಿ 1996, 

ಟೆಂಪ್ಲೇಟು:History of Sindh

ಟೆಂಪ್ಲೇಟು:Karachi

 1. Saraswat, Jigar (11 March 2021). "Raja Dahir defeated Muhammad Bin Qasim and Arab troops thrice". Indian Daily Post. Retrieved 11 January 2022.
 2. Asif, Manan Ahmed (19 September 2016). A Book of Conquest: The Chachnama and Muslim Origins in South Asia. Harvard University Press. p. 8. ISBN 978-0-674-66011-3.
 3. Perera, Sasanka; Pathak, Dev Nath; Kumar, Ravi (30 December 2021). Against the Nation: Thinking Like South Asians (in Indian English). Bloomsbury Publishing. p. 239. ISBN 9789389812336. Retrieved 29 September 2023. Playing along the same ideological lines of trying to build a historical narrative on how Muslims fought against the cruel Hindus, it talks of how Muhammad Bin Qasim, the general of Umayyad Caliphate who fought against the last Sindhi Brahmin king called Raja Dahir.
 4. ೪.೦ ೪.೧ Mirza Kalichbeg Fredunbeg: The Chachnamah, An Ancient History of Sind, Giving the Hindu period down to the Arab Conquest. Commissioners Press 1900, Section 18: "It is related that the king of Sarandeb* sent some curiosities and presents from the island of pearls, in a small fleet of boats by sea, for Hajjáj. He also sent some beautiful pearls and valuable jewels, as well as some Abyssinian male and female slaves, some pretty presents, and unparalleled rarities to the capital of the Khalífah. A number of Mussalman women also went with them with the object of visiting the Kaabah, and seeing the capital city of the Khalífahs. When they arrived in the province of Kázrún, the boat was overtaken by a storm, and drifting from the right way, floated to the coast of Debal. Here a band of robbers, of the tribe of Nagámrah, who were residents of Debal, seized all the eight boats, took possession of the rich silken clothes they contained, captured the men and women, and carried away all the valuable property and jewels."
 5. MacLean, Derryl N. (1989). Religion and Society in Arab Sind. BRILL. ISBN 9004085513.
 6. Khushalani, Gobind (2006). Chachnamah Retold : An Account Of The Arab Conquest Of Sindh (in ಇಂಗ್ಲಿಷ್). Bibliophile South Asia. p. 127. ISBN 978-81-85002-68-2.
 7. Garg, Gaṅgā Rām (1992). Encyclopaedia of the Hindu World (in ಇಂಗ್ಲಿಷ್). Concept Publishing Company. ISBN 978-81-7022-373-3. When Muhammad-bin-Qāsim plundered the place Arora in 712 and defeated Rājā Dāhar, who belonged to the Arorā dynasty, the Arorā people left Sind and settled in the Punjāb cities, situated on the banks of the rivers Sind, Jhelum, Cenāb and Rāvī.
 8. Common Era year is an approximation of the Islamic calendar date 613 AH.
 9. Majumdar, R.C., ed. (1970). History and Culture of the Indian People, Volume 03, The Classical Age. Public Resource. Bharatiya Vidya Bhavan.
 10. ೧೦.೦ ೧೦.೧ Kalichbeg (1900). The Chachnamah An Ancient History Of Sindh.
 11. Khurram Ali Shafique (23 May 2001). "Rajah Dahar of Sindh". Pakistanspace.com website. Retrieved 2 April 2021.
 12. ೧೨.೦ ೧೨.೧ Manan Ahmed Asif (19 September 2016). A Book of Conquest. Harvard University Press. pp. 8–. ISBN 978-0-674-66011-3.