ರಾಗಿ ಹಿಟ್ಟು
ಗೋಚರ
ರಾಗಿ ಹಿಟ್ಟು ಮುಖ್ಯವಾಗಿ ರಾಗಿ ಕಾಳಿನಿಂದ ತಯಾರಿಸಿದ ಪುಡಿ ಆಹಾರವಾಗಿದೆ. ಇದು ಪ್ರೋಟೀನ್ ಹಾಗೂ ಖನಿಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಸಸ್ಯಾಹಾರಿಗಳಿಗೆ ಇದು ಪ್ರೋಟೀನ್‍ನ ಅತಿ ಸೂಕ್ತ ಮೂಲವಾಗಿದೆ.
ರಾಗಿ ಹಿಟ್ಟಿನ ತಯಾರಿಕೆ
[ಬದಲಾಯಿಸಿ]ಮೊದಲು ರಾಗಿಯನ್ನು ಸ್ವಚ್ಛಗೊಳಿಸಿ ತೊಳೆಯಲಾಗುತ್ತದೆ. ಇದು ಬಿಸಿಲಿನಲ್ಲಿ ಸಹಜವಾಗಿ ಒಣಗಲು ೫ ರಿಂದ ೮ ಗಂಟೆಗಳವರೆಗೆ ಬಿಡಲಾಗುತ್ತದೆ. ನಂತರ ಇದನ್ನು ಹಿಟ್ಟು ಮಾಡಲಾಗುತ್ತದೆ. ಕಡಿಮೆ ಹೀಮೊಗ್ಲೋಬಿನ್ ಮಟ್ಟವಿರುವ ಜನರಿಗೆ ಇದು ಅತ್ಯುತ್ತಮವಾಗಿದೆ. ರಾಗಿ ಹಿಟ್ಟಿನಿಂದ ರಾಗಿ ಗಂಜಿ, ರಾಗಿ ಹಲ್ವಾ, ರಾಗಿ ರೊಟ್ಟಿಯನ್ನು ತಯಾರಿಸಬಹುದು. ತಿನ್ನಲು ರುಚಿಯಾಗಿದ್ದು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.[೧]
ಬೇಕಿಂಗ್
[ಬದಲಾಯಿಸಿ]ಬೇಕ್ ಮಾಡುವಾಗ ಮೈದಾದ ಬದಲು ಅನೇಕ ಪೌಷ್ಟಿಕ ಲಾಭಗಳನ್ನು ಹೊಂದಿರುವ ರಾಗಿ ಹಿಟ್ಟನ್ನು ಬಳಸಬಹುದು. ರಾಗಿ ಕೇಕ್ ಮತ್ತು ರಾಗಿ ಬಿಸ್ಕತ್ತುಗಳನ್ನು ತಯಾರಿಸಬಹುದು. ರಾಗಿ ಹಿಟ್ಟು ಆಧಾರಿತ ಬೇಕರಿ ಉತ್ಪನ್ನಗಳು ಮತ್ತು ದಿಢೀರ್ ಮಿಶ್ರಣಗಳು ಈಗ ಬೇಡಿಕೆಯಲ್ಲಿವೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ The Hindu, Life & Style (23 July 2015). "Food". Parvathy Menon. Retrieved 9 December 2017.
- ↑ THE HINDU, New states (18 February 2017). "Thinking beyond finger millet flour gruel". Rani Devalla. Retrieved 9 December 2017.