ರಸ್ ಮಲಾಯಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Ras Malai 2.JPG

ರಸ್ ಮಲಾಯಿ ಮುಖ್ಯವಾಗಿ ಭಾರತದಲ್ಲಿ, ಜೊತೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಸೇವಿಸಲಾದ ಒಂದು ಸಿಹಿತಿ೦ಡಿ. ರಸ್ ಮಲಾಯಿ ಹೆಸರು ಹಿಂದಿಯ ಎರಡು ಶಬ್ದಗಳಿಂದ ಬರುತ್ತದೆ: ರಸ್, ಎ೦ದರೆ ರಸ, ಮತ್ತು ಮಲಾಯಿ, ಎ೦ದರೆ ಕೆನೆ. ಅದನ್ನು "ಪದರವಿಲ್ಲದ ಪುಷ್ಕಳ ಚೀಜ಼್‍ಕೇಕ್" ಎಂದು ವರ್ಣಿಸಲಾಗಿದೆ. ರಸ್ ಮಲಾಯಿ ಏಲಕ್ಕಿಯಿಂದ ಪರಿಮಳಯುಕ್ತವಾಗಿಸಿದ ಸಕ್ಕರೆಭರಿತ ಬಿಳಿ ಕೆನೆ, ಅಥವಾ ಮಲಾಯಿಯಲ್ಲಿ ನೆನೆಸಿದ ಛೇನಾದ ಹಳದಿ ಬಣ್ಣದ ಉಂಡೆಗಳನ್ನು ಹೊಂದಿರುತ್ತದೆ. ಅದನ್ನು ಕೇಸರಿ, ಪಿಸ್ತಾ ಮತ್ತು ಖೀರ್ಅನ್ನು ಹೊಂದಿರುವ ಹೂರಣವನ್ನು ಸಕ್ಕರೆ ಪಾಕ ಮತ್ತು ಹಾಲಿನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ.