ರವೆ ಬೋಂಡ

ವಿಕಿಪೀಡಿಯ ಇಂದ
Jump to navigation Jump to search
ರವೆ ಬೋಂಡ
ಮನೆಯಲ್ಲಿ ಮಾಡಿದ ರವೆ ಬೋಂಡ

ರವೆ ಬೋಂಡ ಒಂದು ಮಸಾಲೆಯುಕ್ತ ಕರಿದ ತಿಂಡಿ. ತಯಾರಿಸಲು ಸುಲಭವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ. ಇದು ದಕ್ಷಿಣ ಭಾರತದ ಜನಪ್ರಿಯ ಕುರುಕುಲು ತಿಂಡಿಯಾಗಿದೆ. ಇದನ್ನು ತಯಾರಿಸಲು ಇರುವ ಹಲವಾರು ವಿಧಾನಗಳಲ್ಲಿ ಒಂದು ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ರವೆ ಬೋಂಡವನ್ನು ಚಟ್ನಿ ಅಥವಾ ಸಾಸ್ನೊಂದಿಗೆ ತಿನ್ನಬಹುದು

ಬೇಕಾಗುವ ಸಾಮಗ್ರಿಗಳು[ಬದಲಾಯಿಸಿ]

 1. ಚಿರೋಟಿ ರವೆ - ೧ ಬಟ್ಟಲು
 2. ಮೈದಾ ಹಿಟ್ಟು - ೧ ಬಟ್ಟಲು
 3. ಕಡಲೆ ಹಿಟ್ಟು - ೧ ಬಟ್ಟಲು
 4. ಅಕ್ಕಿ ಹಿಟ್ಟು - ೧ ಬಟ್ಟಲು
 5. ಈರುಳ್ಳಿ - ೨
 6. ಹಸಿಮೆಣಸಿನಕಾಯಿ - ರುಚಿಗೆ ಬೇಕಾದಷ್ಟು
 7. ಕೊತ್ತಂಬರಿ ಸೊಪ್ಪು - ೧ ಸಣ್ಣ ಕಟ್ಟು
 8. ನಿಂಬೆ ಹಣ್ಣಿನ ರಸ - ೧ ಚಮಚ
 9. ಉಪ್ಪು - ರುಚಿಗೆ ತಕ್ಕಷ್ಟು
 10. ಸಕ್ಕರೆ - ೧ ಚಿಕ್ಕ ಚಮಚ
 11. ಎಣ್ಣೆ - ಕರಿಯಲು ಬೇಕಾಗುವಷ್ಟು

ತಯಾರಿಸುವ ವಿಧಾನ[ಬದಲಾಯಿಸಿ]

ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಲ್ಲಾ ನಾಲಕ್ಕು ಹಿಟ್ಟುಗಳನ್ನು ಗಂಟುಗಳಿಲ್ಲದಂತೆ ಬೆರೆಸಿಟ್ಟುಕೊಳ್ಳಿ. ಈಗ ಎಲ್ಲವನ್ನೂ ಸೇರಿಸಿ, ಉಪ್ಪು ಸಕ್ಕರೆ, ನಿಂಬೆ ಹಣ್ಣಿನ ರಸವನ್ನೂ ಸೇರಿಸಿ. ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಹಿಟ್ಟನ್ನು ರುಚಿ ನೋಡಿ ನಿಮಗೆ ಬೇಕಾದ ಹದಕ್ಕೆ ಹೊಂದಿಸಿ, ಹತ್ತು ನಿಮಿಷ ಬಿಡಿ.

ದಪ್ಪ ತಳದ ಬಾಂಡಲೆಯಲ್ಲಿ ಎಣ್ಣೆಯನ್ನು ಕಾಯಲು ಇಡಿ. ಕಾದ ಎಣ್ಣೆಗೆ ಚಮಚದಿಂದ ಬೋಂಡದ ಹಿಟ್ಟನ್ನು ಹಾಕಿ. ಮಧ್ಯಮ ಉರಿಯಲ್ಲಿ ಕೆಂಪಗೆ ಕರಿಯಿರಿ.

ರವೆ ಬೋಂಡ ಸವಿಯಲು ಸಿದ್ಢ.

ನಿಮ್ಮ ರುಚಿಗೆ ತಕ್ಕಂತೆ ಪುದೀನ, ಸಬ್ಬುಸೀಗೆ ಸೊಪ್ಪು, ನುಗ್ಗೆ ಸೊಪ್ಪು, ಮೆಂತ್ಯದ ಸೊಪ್ಪು ಇವುಗಳನ್ನು ಬೆರೆಸಿಕೊಳ್ಳಬಹುದು.

ಇದು ಎಣ್ಣೆಯಲ್ಲಿ ಕರಿದ ಪದಾರ್ಥವಾಗಿದ್ದು, ಮಸಾಲೆ ಭರಿತವಾಗಿರುವುದರಿಂದ ಇದನ್ನು ತಿನ್ನುವಾಗ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.


ಉಲ್ಲೇಖಗಳು[ಬದಲಾಯಿಸಿ]

https://www.realbharat.org/crispy-rava-bonda-129/

"https://kn.wikipedia.org/w/index.php?title=ರವೆ_ಬೋಂಡ&oldid=996787" ಇಂದ ಪಡೆಯಲ್ಪಟ್ಟಿದೆ