ರಬಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಬಡಿ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ, ಸಿಹಿ, ಸಾಂದ್ರೀಕೃತ ಹಾಲು ಆಧಾರಿತ ಖಾದ್ಯವಾಗಿದೆ. ಹಾಲು ಗಟ್ಟಿಯಾಗಿ ತಿಳಿ ಹಳದಿ ಅಥವಾ ಮಾಸಲು ಬಣ್ಣವಾಗುವವರೆಗೆ ಬಹಳ ಕಾಲದವರೆಗೆ ಕಡಿಮೆ ಉರಿಯಲ್ಲಿ ಕಾಯಿಸಿ ಇದನ್ನು ತಯಾರಿಸಲಾಗುತ್ತದೆ. ಇದಕ್ಕೆ ರುಚಿ ಕೊಡಲು ಬೆಲ್ಲ, ಸಂಬಾರ ಪದಾರ್ಥಗಳು ಮತ್ತು ನಟ್‍ಗಳನ್ನು (ಗೋಡಂಬಿ, ಪಿಸ್ತಾ, ಬಾದಾಮಿ) ಸೇರಿಸಲಾಗುತ್ತದೆ. ಇದನ್ನು ತಂಪಾಗಿಸಿ ಡಿಜ಼ರ್ಟ್ ಆಗಿ ಬಡಿಸಲಾಗುತ್ತದೆ. ರಸಾಬಲಿ, ಛೇನಾ ಖೀರಿ ಮತ್ತು ಖೀರ ಸಾಗರದಂತಹ ಹಲವಾರು ಡಿಜ಼ರ್ಟ್‌ಗಳಲ್ಲಿ ರಬಡಿ ಮುಖ್ಯ ಘಟಕಾಂಶವಾಗಿದೆ.

ಬಾಸುಂದಿಯು ಇದನ್ನು ಹೋಲುವ ಖಾದ್ಯವಾಗಿದೆ.

ಚಂಡಿಮಂಗಲ ಕೃತಿಯು ೧೪೦೦ರ ದಶಕದ ಮುಂಚಿನ ವರ್ಷಗಳಲ್ಲಿ ಇತರ ಸಿಹಿ ಖಾದ್ಯಗಳ ಜೊತೆಗೆ ರಬಡಿಯನ್ನು (ಗಟ್ಟಿಯಾಗಿಸಿದ, ಸಿಹಿ ಹಾಲು) ಉಲ್ಲೇಖಿಸುತ್ತದೆ.[೧]

ಅತಿಯಾದ ಹಾಲಿನ ಬಳಕೆಯ ಕಾರಣ ೧೯೬೫ರಲ್ಲಿ ಕೋಲ್ಕತಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ರಬಡಿಯನ್ನು ನಿಷೇಧಿಸಲಾಗಿತ್ತು. ಪ್ರತ್ಯೇಕ ಸಿಹಿತಿಂಡಿಗಳ ಅಂಗಡಿಗಳು ಹಾಕಿದ ದಾವೆಗಳ ಕಾರಣ ಒಂದು ವರ್ಷದಲ್ಲಿ ಕಲ್ಕತ್ತಾ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹಿಂಪಡೆಯಿತು.[೨] 

ಉಲ್ಲೇಖಗಳು[ಬದಲಾಯಿಸಿ]

  1. "Full text of "Indian Food Tradition A Historical Companion Achaya K. T."". archive.org. Retrieved 2019-01-30.
  2. "The Bitterest Ban: The improbable story of how Bengal tried to ban Bengali sweets". Economic Times Blog (in ಅಮೆರಿಕನ್ ಇಂಗ್ಲಿಷ್). 2015-07-25. Retrieved 2020-02-07.
"https://kn.wikipedia.org/w/index.php?title=ರಬಡಿ&oldid=991029" ಇಂದ ಪಡೆಯಲ್ಪಟ್ಟಿದೆ