ವಿಷಯಕ್ಕೆ ಹೋಗು

ರಫ್ಲೀಸಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಫ್ಲೀಸಿಯ
Rafflesia arnoldii flowers in Bengkulu, Indonesia
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: ಮ್ಯಾಲ್ಪಿಘಿಯಾಲೆಸ್
ಕುಟುಂಬ: ರಫ್ಲೀಸಿಯೇಸೀ
ಕುಲ: ರಫ್ಲೀಸಿಯ
R.Br. ex Thomson bis[]
Type species
Rafflesia arnoldii
Species

See Classification section

ರಫ್ಲೀಸಿಯ ಆವೃತಬೀಜಸಸ್ಯಗಳ (ಆಂಜಿಯೋಸ್ಪರ್ಮ್ಸ್) ಪೈಕಿ ರಫ್ಲೀಸಿಯೇಸಿ ಕುಟುಂಬಕ್ಕೆ ಸೇರಿರುವ ಸಸ್ಯ.[]: 2 [] ಇದರ ಜೈವಿತಾಮ ರಫ್ಲೀಸಿಯ ಒಂದು ವೈವಿಧ್ಯಮಯ ಹಾಗೂ ವಿಚಿತ್ರ ಸಸ್ಯ. ಮಲಯ ದ್ವೀಪಸಮೂಹಗಳಲ್ಲಿ ಮಾತ್ರ ಕಂಡುಬರುವ ಈ ಸಸ್ಯ ಒಂದು ಪರಾವಲಂಬಿ ಸಸ್ಯ. ವಿವಿಧ ಜಾತಿಯ ಸಸ್ಯಗಳ ಮೇಲೆ ಇದು ಪರಾವಲಂಬಿ ಜೀವನ ನಡೆಸಬಲ್ಲದು. ಆವೃತಬೀಜಸಸ್ಯಗಳ ಮುಖ್ಯ ಭಾಗಗಳಾದ ಬೇರು, ಕಾಂಡ, ಎಲೆಗಳಾವುವೂ ಈ ಸಸ್ಯದಲ್ಲಿ ಇರುವುದಿಲ್ಲ. ಪ್ರಬುದ್ಧಸಸ್ಯ ಬಿಳಿಯ ಸೂಕ್ಷ್ಮನಾಳಗಳ ತಂತುಜಾಲದಂತಿದ್ದು ಆತಿಥೇಯ ಸಸ್ಯದ ಒಳಭಾಗದಲ್ಲಿ ಹರಡಿಕೊಂಡಿರುತ್ತದೆ.[] ಹೀಗಾಗಿ ಹೊರನೋಟಕ್ಕೆ ಸಸ್ಯದ ಇರುವಿಕೆಯ ಅರಿವೇ ಆಗುವುದಿಲ್ಲ. ಹೂ ಅರಳಿದ ಅನಂತರವೇ ಸಸ್ಯದ ಇರುವಿಕೆಯ ಅರಿವಾಗುತ್ತದೆ. ಅರಳಿದ ಹೂ ಕೊಳೆತಮಾಂಸದ ವಾಸನೆ ಬೀರುವುದರಿಂದ ಸಸ್ಯವನ್ನು ಸುಲಭವಾಗಿ ಪತ್ತೆಮಾಡಬಹುದು.

ಪರಾವಲಂಬನಕ್ಕೆ ಹೊಂದಿಕೊಳ್ಳಲು ಈ ಸಸ್ಯ ತನ್ನ ವಿಕಾಸಕ್ರಮದಲ್ಲಿ ಬೇರು, ಕಾಂಡ, ಎಲೆಗಳನ್ನು ಕಳೆದುಕೊಂಡಿತು. ರಚನೆಯಲ್ಲಿ ಶಿಲೀಂಧ್ರಗಳನ್ನು ಹೋಲುವಂತೆ ಮಾರ್ಪಾಡಾಯಿತು. ಆದರೆ ಮೂಲಗುಣವಾದ ಆವೃತಬೀಜವನ್ನು ಉತ್ಪಾದಿಸಲು ಅರಳುವ ಪುಷ್ಪ ಮಾತ್ರ ಉಳಿದು ಬಂತು.

ಹೂವುಗಳ ವಿವರ

[ಬದಲಾಯಿಸಿ]

ಸಸ್ಯದ ರಚನೆ ಎಷ್ಟು ಭಿನ್ನವೊ ಅದರ ಹೂ ಕೂಡ ಅಷ್ಟೇ ವಿಶಿಷ್ಟವಾದ್ದು. ಈ ಹೂ ಸಸ್ಯಪ್ರಪಂಚದಲ್ಲಿಯೇ ಅತಿದೊಡ್ಡದೆಂದು ಹೇಳಲಾಗುತ್ತದೆ. ಸಸ್ಯದ ವ್ಯಾಸ ಸುಮಾರು 80 ಸೆಂಮೀ. ಹೂವಿನ ಸುತ್ತ ಪುಷ್ಪಪಾತ್ರೆಯಿರುತ್ತದೆ; ಪುಷ್ಪದಳಗಳಿರುವುದಿಲ್ಲ. ಹೂಗಳಲ್ಲಿ ಗಂಡು ಹೆಣ್ಣುಗಳೆಂಬ ಭೇಧವಿದೆ. ಗಂಡುಹೂಗಳಲ್ಲಿರುವುದು ಕೇಸರಗಳು ಮಾತ್ರ. ಅಗಣಿತ ಸಂಖ್ಯೆಯಲ್ಲಿರುವ ಕೇಸರಗಳ ತುದಿಯಲ್ಲಿ ಎರಡು ಪರಾಗಕೋಶಗಳಿವೆ. ಅವುಗಳ ಮೇಲ್ಭಾಗದಲ್ಲಿರುವ ರಂಧ್ರಗಳ ಮೂಲಕ ಪರಾಗರೇಣು ಹೊರಬೀಳುತ್ತದೆ. ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.

ಹೆಣ್ಣುಹೂವಿನಲ್ಲಿ ಒಂದು ಶಲಾಕೆ ಮಾತ್ರ ಇರುತ್ತದೆ. ಅಂಡಾಶಯ ಶಲಾಕ ಸ್ಥಿತಿಯಲ್ಲಿಯೇ ಇದ್ದು ಅದರಲ್ಲಿ ಒಂದು ಕೋಣೆ ಮಾತ್ರ ಇರುತ್ತದೆ. ಕಾರ್ಪೆಲ್‌ಗಳ ಒಳಭಿತ್ತಿಯ ಮೇಲೆ ಭ್ರೂಣ ಬೆಳೆಯುತ್ತದೆ. ಶಲಾಕನಳಿಕೆಯ ತುದಿಯಲ್ಲಿ ಶಲಾಕಾಗ್ರವಿರುತ್ತದೆ. ಈ ಪುಷ್ಪದಿಂದ ಬೆಳೆಯುವ ಹಣ್ಣು ರಸಭರಿತ ಬರ‍್ರಿ ಮಾದರಿಯದು.

ಛಾಯಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Rafflesia". International Plant Names Index. The Royal Botanic Gardens, Kew, Harvard University Herbaria & Libraries and Australian National Botanic Gardens. Retrieved 29 October 2020.
  2. Willem, Meijer (1997). "Rafflesiaceae". Flora Malesiana. Vol. 13. Leiden: Hortus Botanicus Leiden, under auspices of Foundation Flora Malesiana. pp. 1–42. ISBN 90-71236-33-1.
  3. "Rafflesia R.Br. ex Gray". Plants of the World Online. Board of Trustees of the Royal Botanic Gardens, Kew. 2022. Retrieved 29 November 2022.
  4. Shaw, Jonathan (March–April 2017). "Colossal Blossom: Pursuing the peculiar genetics of a parasitic plant". Harvard Magazine. Retrieved 27 June 2017.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: