ಯೂರಿ ಗಗಾರಿನ್
ಯೂರಿ ಅಲೆಕ್ಸೇಯವಿಚ್ ಗಗಾರಿನ್ (ಮಾರ್ಚ್ ೯, ೧೯೩೪ – ಮಾರ್ಚ್ ೨೭, ೧೯೬೮) ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿ ಪಡೆದ ಸೋವಿಯತ್ ಅಂತರಿಕ್ಷಯಾನಿ.
ಜೀವನ
[ಬದಲಾಯಿಸಿ]ಯೂರಿ ಗಗಾರಿನ್ ಜನ್ಮ ಮಾರ್ಚ್ ೯, ೧೯೩೪ರಂದು ಮಾಸ್ಕೊ ಪಶ್ಚಿಮದಲ್ಲಿರುವ ಕ್ಲುಶಿನೊ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಪರಿವಾರದಲ್ಲಾಯಿತು. ಉನ್ನತ ವಿದ್ಯಾಭ್ಯಾಸದ ಸಮಯದಲ್ಲಿ ವಿಮಾನ ಉಡಾವಣೆಯ ಗೀಳು ಬೆಳಸಿಕೊಂಡ ಗಗಾರಿನ್ ತದನಂತರ ಸೇನಾ ವೈಮಾನಿಕ ಶಿಕ್ಷಣವನ್ನು ಒರೆನ್ಬರ್ಗ್ ಪೈಲಟ್ ಶಾಲೆಯಿಂದ ೧೯೫೫ರಲ್ಲಿ ಪಡೆದರು. ೧೯೬೦ರಲ್ಲಿ ಅಂತರಿಕ್ಷಯಾನಕ್ಕಾಗಿ ಸೋವಿಯತ್ ಅಂತರಿಕ್ಷ ಸಂಸ್ಥೆ ಆಯ್ಕೆ ಪ್ರಕ್ರಿಯೆ ಶುರುಮಾಡಿತು. ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಗಗಾರಿನ್ ಸೇರಿದಂತೆ ೨೦ ಅಂತರಿಕ್ಷಯಾನಿಗಳು ಕೊನೆಹಂತಕ್ಕೆ ತಲುಪಿದರು. ಅಂತಿಮವಾಗಿ ೫ ಅಡಿ ೨ ಅಂಗುಲದ ಗಗಾರಿನ್ ಸರ್ವಾನುಮತದಿಂದ ಆಯ್ಕೆಯಾದರು. ಏಪ್ರಿಲ್ ೧೨, ೧೯೬೧ ರೊಂದು ಗಗಾರಿನ್ ವೋಸ್ಟಾಕ್ ೩ಕೆಎ (ವೋಸ್ಟಾಕ್ ೧)ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಿ ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೧] ಅಂತರಿಕ್ಷಯಾನದ ಮಧ್ಯದಲ್ಲಿಯೆ ಸೋವಿಯತ್ ಸರ್ಕಾರದಿಂದ ಸೀನಿಯರ್ ಲೆಫ್ಟನೆಂಟ್ ಪದವಿಯಿಂದ ಮೇಜರ್ ಪದವಿಗೆ ಗಗಾರಿನ್ ಬಡ್ತಿ ಪಡೆದರು. ಗಗಾರಿನ್ ಸುರಕ್ಷಿತವಾಗಿ ಮರಳುವುದು ಬಹುತೇಕ ಅಸಂಭವವೆಂದು ಸೋವಿಯತ್ ಅಧಿಕಾರಿ ವರ್ಗ ನಂಬಿತ್ತು ಆದರೆ ಯಶಸ್ವಿಯಾಗಿ ಯಾನದಿಂದ ಮರಳಿದ ಗಗಾರಿನ್ ತದನಂತರ ವಿಶ್ವವಿಖ್ಯಾತರಾಗಿ ಪ್ರಪಂಚದ ಹಲವೆಡೆ ಸನ್ಮಾನಿತರಾದರು. ಮಾರ್ಚ್ ೨೭, ೧೯೬೮ರೊಂದು ನಿಯತ್ಕಾಲಿಕ ಮಿಗ್ ೧೫ ವಿಮಾನ ಚಾಲನೆ ಅಭ್ಯಾಸ ನಡೆಸುವಾಗಾದ ಒಂದು ದುರಂತ ಅಪಘಾತದಲ್ಲಿ ಗಗಾರಿನ್ ಮೃತಪಟ್ಟರು.
ಅಂಚೆಚೀಟಿಗಳು ಮತ್ತು ನಾಣ್ಯಶಾಸ್ತ್ರ
[ಬದಲಾಯಿಸಿ]ಬಾಹ್ಯ ಸಂಪರ್ಕ ಕೊಂಡಿಗಳು
[ಬದಲಾಯಿಸಿ]- ಯೂರಿ ಗಗಾರಿನ್ :ಚಿತ್ರಗಳಲ್ಲಿ ಜೀವನ ಚರಿತ್ರೆ... Archived 2006-01-10 ವೇಬ್ಯಾಕ್ ಮೆಷಿನ್ ನಲ್ಲಿ.
- ಗಗಾರಿನ್ - ವಿಸ್ತೃತ ಜೀವನ ಚರಿತ್ರೆ
- ಯೂರಿ ಗಗಾರಿನ್ ಪ್ರತಿಮೆಗಳು Archived 2005-12-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Wilson, Jim (2011-04-13). "Yuri Gagarin: First Man in Space" (in ಇಂಗ್ಲಿಷ್). NASA. Archived from the original on 2023-03-14. Retrieved 2023-03-27.