ಯೂಪಟೋರಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೂಪಟೋರಿಯಮ್
Eupatorium cannabinum
Scientific classification
Synonyms[೧]
  • Eupatorium sect. Pteropoda DC.
  • Eupatorium sect. Subimbricata Hoffm.
  • Viereckia R.M.King & H.Rob.
  • Chrone Dulac
  • Cunigunda Bubani
  • Pseudokyrsteniopsis R.M.King & H.Rob.
  • Eupatorium sect. Heterolepis Baker
  • Eriopappus Hort. ex Loudon
  • Caradesia Raf.
  • Eupatorium sect. Dalea Loudon
  • Halea L.
  • Eupatoriadelphus R.M.King & H.Rob.

ಯೂಪಟೋರಿಯಮ್ ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ  ವ್ಯಾಪಕವಾಗಿ ಬೆಳೆಯುವ ಸಸ್ಯಜಾತಿ. ಆಸ್ಟರೇಸೀ ಕುಟುಂಬಕ್ಕೆ (ಸೂರ್ಯಕಾಂತಿ ಕುಟುಂಬ) ಸೇರಿದೆ. ಇದರ ಕೆಲವು ಪ್ರಬೇಧಗಳು ಯುರೋಪ್, ಆಫ್ರಿಕ ಮತ್ತು ಏಷ್ಯ ಖಂಡಗಳಲ್ಲೂ ಕಾಣದೊರೆಯುವುವು. ಇದರಲ್ಲಿ ಸುಮಾರು 600 ಬಗೆಗಳಿವೆ ಎನ್ನಲಾಗಿದ್ದು ಏಳು ಪ್ರಭೇದಗಳು ಭಾರತದಲ್ಲಿ ಬೆಳೆಯುವುವು.  ಬಹುಪಾಲು ಬಗೆಗಳು ಕಾಡುಗಿಡಗಳಾದರೂ ಕೆಲವನ್ನು ಅಲಂಕಾರಕ್ಕಾಗಿ,[೨] ಮತ್ತಿತರ ಉಪಯೋಗಗಳಿಗಾಗಿ ಬೆಳೆಸುವುದೂ ಉಂಟು.

ಭಾರತದಲ್ಲಿ ಕಾಣದೊರೆಯುವ ಯೂಪಟೋರಿಯಮ್ ಜಾತಿಯಲ್ಲಿ ಕ್ಯಾನಬಿನಮ್, ಟ್ರಿಪ್ಲಿನರ್ಮ್ ಮತ್ತು ಓಡರೇಟಮ್ ಎಂಬ ಪ್ರಭೇದಗಳು ಮುಖ್ಯವೆನಿಸಿವೆ. ಕೊನೆಯಲ್ಲಿ ಹೆಸರಿಸಿದ ಪ್ರಭೇದಕ್ಕೆ ಕ್ರೋಮೊಲೀನ್ ಎಂಬ ಹೆಸರೂ ಇದೆ.

ಗುಣಲಕ್ಷಣಗಳು[ಬದಲಾಯಿಸಿ]

ಮೂರು ಪ್ರಭೇದಗಳೂ ಸುಮಾರು 1-2 ಮೀ ಎತ್ತರ ಬೆಳೆಯುವ ಪೊದೆರೂಪದ ಸಸ್ಯಗಳು. ಎಲ್ಲವೂ ಕೊಂಚ ಸುವಾಸನಾಯುಕ್ತ. ಹೂಗಳು ಕಾರಿಂಬ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿರುವುವು. ಹೂಗಳ ಬಣ್ಣ ಬಿಳಿ ಇಲ್ಲವೇ ತಿಳಿನೀಲಿ. ಈ ಬಗೆಗಳನ್ನು ಅಲಂಕಾರಕ್ಕಾಗಿ ವೃದ್ಧಿಸಲಾಯಿತಾದರೂ ಇವು ಪ್ರಸಕ್ತದಲ್ಲಿ ಕಾಡುಗಿಡಗಳಾಗಿ ಹಬ್ಬಿ ಅಸ್ಸಾಮ್, ಪಶ್ವಿಮಘಟ್ಟ ಮುಂತಾದೆಡೆಗಳಲ್ಲಿ ಅನಪೇಕ್ಷಿತ ಕಳೆಗಳಂತೆ ವ್ಯಾಪಿಸಿವೆ.

ಉಪಯೋಗಗಳು[ಬದಲಾಯಿಸಿ]

ಆದರೆ ಇವುಗಳಿಂದ ಉಪಯೋಗವಿಲ್ಲದೆ ಇಲ್ಲ. ಉದಾಹರಣೆಗೆ ಕ್ಯಾನಬಿನಮ್ ಪ್ರಭೇದ ಮೂತ್ರೋತ್ತೇಜಕ, ಕಫಹರ, ವಾಂತಿಕಾರಕ ಮತ್ತು ವ್ರಣನಿವಾರಕ ಎಂದು ಹೆಸರಾಗಿದೆ. ಹಾಗೆಯೇ ಟ್ರಿಪ್ಲಿನರ್ಮ್ ಬಗೆ ಕೂಡ ಉತ್ತೇಜಕ, ಶಕ್ತಿ ವರ್ಧಕ ಮತ್ತು ವೃಣನಿವಾರಕ ಎನಿಸಿದೆ. ಇವುಗಳ ಎಲೆ ಮತ್ತು ಕಾಂಡಗಳನ್ನು ರಸ, ಕಷಾಯ, ಲೇಪ ಮುಂತಾದ ರೂಪಗಳಲ್ಲಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Flann, C (ed) 2009+ Global Compositae Checklist
  2. Sasaki Yohei; Matsumoto Atsushi; Takido Michio; Yoshimura Mamoru; Nagumo Seiji (2006). "Study on Eupatorium Plants Called "Fujibakama"". Japanese Journal of Pharmacognosy. 60 (1): 15–20. ISSN 1349-9114. Archived from the original on 2008-08-22.

ಗ್ರಂಥಸೂಚಿ[ಬದಲಾಯಿಸಿ]

  • Hatfield, Gabrielle (2004): Encyclopedia of Folk Medicine: Old World and New World Traditions. ABC-CLIO, Inc., Santa Barbara. ISBN 1-57607-874-4
  • Ito Motomi, Watanabe Kuniaki, Kita Yoko, Kawahara Takayuki, Crawford D.J., Yahara Tetsukazu (2000). "Phylogeny and Phytogeography of Eupatorium (Eupatorieae, Asteraceae): Insights from Sequence Data of the nrDNA ITS Regions and cpDNA RFLP". Journal of Plant Research. 113 (1): 79–89. doi:10.1007/PL00013913. S2CID 22540433.{{cite journal}}: CS1 maint: multiple names: authors list (link)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: