ಯು. ಶ್ರೀನಿವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯು.ಶ್ರೀನಿವಾಸ್
ಶ್ರೀನಿವಾಸ್ ಪುಣೆಯಲ್ಲಿ ಜನವರಿ ೨೦೦೯ರಂದು ನೀಡಿದ ಕಛೇರಿ
ಹಿನ್ನೆಲೆ ಮಾಹಿತಿ
ಜನನ(೧೯೬೯-೦೨-೨೮)೨೮ ಫೆಬ್ರವರಿ ೧೯೬೯
Palakol, West Godavari Dist, ಆಂಧ್ರ ಪ್ರದೇಶ, India
ಮೂಲಸ್ಥಳಆಂಧ್ರ ಪ್ರದೇಶ,ಭಾರತ
ಮರಣ19 September 2014(2014-09-19) (aged 45)
ಚೆನ್ನೈ,ಭಾರತ
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ
ವೃತ್ತಿಸಂಗೀತಕಾರ
ವಾದ್ಯಗಳುಎಲೆಕ್ಟ್ರಿಕಲ್ ಮ್ಯಾಂಡೋಲಿನ್
ಸಕ್ರಿಯ ವರ್ಷಗಳು1978–2014
L‍abelsReal World Records
ಅಧೀಕೃತ ಜಾಲತಾಣmandolinbrothers.in

ಉಪ್ಪಲಪು ಶ್ರೀನಿವಾಸ್, (1969 ಫೆಬ್ರವರಿ 28 - 2014 ಸೆಪ್ಟೆಂಬರ್ 19) ದಕ್ಷಿಣ ಭಾರತದ ಕರ್ನಾಟಕ ಸಂಗೀತ ಸಂಪ್ರದಾಯದ ಒಬ್ಬ ಮ್ಯಾಂಡೊಲಿನ್ ವಾದಕ. ಶ್ರೀನಿವಾಸ್ ವಿದ್ಯುತ್ ಮ್ಯಾಂಡೊಲಿನ್ ನುಡಿಸುತ್ತಿದ್ದರು[೧] ಮತ್ತು ಖ್ಯಾತರಾದ ಜಾನ್ ಮೆಕ್ಲಾಗ್ಲಿನ್, ಮೈಕೆಲ್ ನೈಮನ್ ಮತ್ತು ಮೈಕೆಲ್ ಬ್ರೂಕ್ ಜತೆ ಕೈಜೋಡಿಸಿದ್ದರು. [೨] ಅವರಿಗೆ 1998 ರಲ್ಲಿ ಪದ್ಮಶ್ರೀ ಮತ್ತು 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು [೩] . ಅವರು ಶ್ರೀ ಸತ್ಯಸಾಯಿಬಾಬಾ ಅನುಯಾಯಿ ಮತ್ತು ಭಕ್ತರಾಗಿದ್ದರು ಮತ್ತು ಅವರು ಹಲವಾರು ಸಂದರ್ಭಗಳಲ್ಲಿ ಅವರ ಸಮ್ಮುಖ ಕಛೇರಿ ನೀಡಿದ್ದರು[೪]

ಆರಂಭಿಕ ಜೀವನ[ಬದಲಾಯಿಸಿ]

ಶ್ರೀನಿವಾಸ್ ಆಂಧ್ರಪ್ರದೇಶದ ಪಳಕೋಲ್ ಎಂಬಲ್ಲಿ ಫೆಬ್ರವರಿ 28, 1969,ರಂದು ಜನಿಸಿದರು[೫]. ತನ್ನ ಆರನೇ ವಯಸ್ಸಿನಲ್ಲಿ ತನ್ನ ತಂದೆ ಸತ್ಯನಾರಾಯಣರ ಮ್ಯಾಂಡೊಲಿನ್ ವಾದನದಲ್ಲಿ ಆಸಕ್ತಿ ತೋರಿಸಿದರು. ತನ್ನ ಮಗನ ಪ್ರತಿಭೆ ಮನಗಂಡ ತಂದೆ ಅವನನ್ನು ಕಲಿಸಲಾರಂಭಿಸಿದರು. ಶೀಘ್ರದಲ್ಲೇ, ಸತ್ಯನಾರಾಯಣರ ಗುರು ರುದ್ರರಾಜು ಸುಬ್ಬರಾಜುರವರು, ಯು ಶ್ರೀನಿವಾಸ್ ಅವರ ಸಾಮರ್ಥ್ಯ ಅರಿತುಕೊಂಡರು ಮತ್ತು ಅವರಿಗೆ ಕಲಿಸಲಾರಂಭಿಸಿದರು. ರುದ್ರರಾಜು ಸುಬ್ಬರಾಜುರವರಿಗೆ ಮ್ಯಾಂಡೋಲಿನ್ ನುಡಿಸುವುದು ತಿಳಿದಿಲ್ಲವಾದುದರಿಂದ ಅವರು ಕೇವಲ ಹಾಡುತ್ತಿದ್ದರು ಮತ್ತು ಶ್ರೀನಿವಾಸ್ ಅದನ್ನು ಮ್ಯಾಂಡೋಲಿನ್ ನಲ್ಲಿ ಬಾರಿಸುತ್ತಿದ್ದರು.ಮುಂದೆ ಅವರ ಕುಟುಂಬ ಚೆನ್ನೈಗೆ ವಲಸೆ ಹೋಯಿತು.[೬] ಅವರ ಸಹೋದರ ಯು ರಾಜೇಶ್ ಒಬ್ಬ ಸುಶಿಕ್ಷಿತ ಮ್ಯಾಂಡೊಲಿನ್ ವಾದಕ. ಶ್ರೀನಿವಾಸ್ 1994 ರಲ್ಲಿ, ಐಎಎಸ್ ಅಧಿಕಾರಿ ಮಗಳು ಶ್ರೀ ಅವರನ್ನು ವಿವಾಹವಾದರು. ಅವರಿಗೆ ಓರ್ವ ಮಗ. ದಂಪತಿಗಳು 2012 ರಲ್ಲಿ ವಿಚ್ಛೇದನ ಹೊಂದಿದರು.[೭]

ಪ್ರದರ್ಶನದ ವೃತ್ತಿಜೀವನ[ಬದಲಾಯಿಸಿ]

Remember Shakti Concert, Munich/Germany (2001) (left to right) U. Srinivas, John McLaughlin, V. Selvaganesh

ಯು ಶ್ರೀನಿವಾಸ್ ತ್ಯಾಗರಾಜರ ಆರಾಧನಾ ಹಬ್ಬದ ಸಮಯದಲ್ಲಿ, ಗುಡಿವಾಡ ಆಂಧ್ರಪ್ರದೇಶದಲ್ಲಿ, 1978 ರಲ್ಲಿ ತನ್ನ ಮೊದಲ ಸಾರ್ವಜನಿಕ ಕರ್ನಾಟಕ ಸಂಗೀತ ಕಾರ್ಯಕ್ರಮದಲ್ಲಿ ನೀಡಿದರು. ಶೀಘ್ರದಲ್ಲೇ, ಅವರು ಭಾರತೀಯ ಲಲಿತಕಲಾ ಸೊಸೈಟಿ ಅಡಿಯಲ್ಲಿ 1981 ರಲ್ಲಿ ಮದ್ರಾಸ್ ಸಂಗೀತ ಸೀಸನ್ ನಿರ್ವಹಿಸಲು ಬಂದರು. 1983ರಲ್ಲಿ ಬರ್ಲಿನ್ ನಗರದಲ್ಲಿ ಒಂದು ಜಾಜ್ ಫೆಸ್ಟ್ ಪ್ರದರ್ಶನ ನೀಡಿದರು ಇದನ್ನು ಪುನರಾವರ್ತಿಸುವಂತೆ ಪ್ರೇಕ್ಷಕರು ವಿನಂತಿಸಿಕೊಂಡರು. ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ನಂತರ ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾ, ಪ್ರವಾಸವನ್ನು ಮುಂದುವರೆಸಿದರು.

ಜಾಝ್ ಪ್ರವಾಸಗಳು[ಬದಲಾಯಿಸಿ]

1983 ರಲ್ಲಿ ಪಶ್ಚಿಮ ಬರ್ಲಿನ್ ಜಾಝ್ ಉತ್ಸವ, ಅವರು ಮೈಲ್ಸ್ ಡೇವಿಸ್ ಮತ್ತು ಆವರ ಆಲ್ ಸ್ಟಾರ್ ಬ್ಯಾಂಡ್ ವಿರುದ್ಧ ಸ್ಪರ್ಧಿಸಿದ್ದರು. 1987 ರಲ್ಲಿ, ಯು ಶ್ರೀನಿವಾಸ್ ಮೆಕ್ಸಿಕೋ ದಲ್ಲಿ ಕೆವೆಂಟಿನೋ ಉತ್ಸವದಲ್ಲಿ ಭಾಗವಹಿಸಿದ ಮೊದಲ ದಕ್ಷಿಣ ಭಾರತೀಯ ಕರ್ನಾಟಕ ಸಂಗೀತ ಕಲಾವಿದ . ಬಾರ್ಸಿಲೋನಾದಲ್ಲಿ ಒಲಿಂಪಿಕ್ಸ್ ಆರ್ಟ್ಸ್ ಫೆಸ್ಟಿವಲ್, 1992 ನಲ್ಲಿ ಪ್ರದರ್ಶನ.

ಪ್ರಶಸ್ತಿಗಳು ಮತ್ತು ಸಾಧನೆಗಳು[ಬದಲಾಯಿಸಿ]

ಯು ಶ್ರೀನಿವಾಸ್ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಮ್ಯೂಸಿಕ್(SIOWM) ಎಂಬ ಸಂಗೀತ ಶಾಲೆ ಆರಂಭಿಸಿದರು. ಮ್ಯಾಂಡೊಲಿನ್ ಯು ಶ್ರೀನಿವಾಸ್ ಸ್ವೀಕರಿಸಿದ ಪ್ರಶಸ್ತಿಗಳು:

  • ಭಾರತದ ರಾಷ್ಟ್ರಪತಿಯಿಂದ ಏಪ್ರಿಲ್ 12, 1998 ರಂದು ಪದ್ಮಶ್ರೀ[೮]
  • ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೦ ರಲ್ಲಿ.[೯]
  • ಸಂಗೀತ ರತ್ನ
  • ಸಂಗೀತ ಸಂಸ್ಕೃತಿ ರಿಂದ ಸನಾತನ ಸಂಗೀತ ಪುರಸ್ಕಾರ
  • ಆಸ್ಥಾನ ವಿದ್ವಾನ್ ಹೆಸರಿನ ಪ್ರಶಸ್ತಿ. ಜುಲೈ 1984 ರಲ್ಲಿ ತಮಿಳುನಾಡು ಸರಕಾರದಿಂದ, ಕಂಚಿ ಕಾಮಕೋಟಿ ಪೀಠಂ ನಿಂದ ಅಕ್ಟೋಬರ್ 1, 1990 ರಂದು,ಆಸ್ಥಾನ ವಿದ್ವಾನ್ ಪ್ರಶಸ್ತಿ ಪಿಳ್ಳಯರ್ ದೇವಾಲಯದಿಂದ ಆಗಸ್ಟ್ 27 ರಂದು 1995 ಆಸ್ಥಾನ ವಿದ್ವಾನ್ ಪ್ರಶಸ್ತಿ.
  • ಶ್ರೀ ರಾಜಲಕ್ಷ್ಮಿ ಫೌಂಡೇಶನ್, ಚೆನೈ ನಿಂದ 1985 ಕ್ಕೆ ರಾಜಲಕ್ಷ್ಮಿ ಪ್ರಶಸ್ತಿ
  • ಮೈಸೂರು ಟಿ.ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ
  • ಸಂಗೀತ ಕಲಾನಿಧಿ ಎಮ್.ಎಸ್. ಸುಬ್ಬುಲಕ್ಷ್ಮಿ ಮೂಲಕ ಸಂಗೀತಾ ಬಾಲ ಭಾಸ್ಕರ ಪ್ರಶಸ್ತಿ.
  • ಭಾರತದ ರಾಷ್ಟ್ರಪತಿಯಿಂದ ರಾಷ್ಟ್ರೀಯ ಪೌರ ಪ್ರಶಸ್ತಿ, 1991ರಲ್ಲಿ.
  • ಕ್ರಮವಾಗಿ 1983 ಮತ್ತು 1993 ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯ ಮೂಲಕ ವಿಶೇಷ "ಟಿಟಿಕೆ" ಪ್ರಶಸ್ತಿ ಮತ್ತು ಅತ್ಯುತ್ತಮ ಕಲಾವಿದ ಪ್ರಶಸ್ತಿ
  • ರಾಜೀವ್ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ


ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಶ್ರೀನಿವಾಸ್ ಜಾನ್ ಮೆಕ್ಲಾಗ್ಲಿನ್, ಮೈಕೆಲ್ ಬ್ರೂಕ್, ಟ್ರೆ ಗನ್, ನಿಗೆಲ್ ಕೆನಡಿ, ನಾನಾ Vasconcelos, ಮತ್ತು ಮೈಕೆಲ್ ನೈಮನ್ ರಂತಹ ಪಶ್ಚಿಮ ಕಲಾವಿದರು, ಹಾಗೂ ಹರಿಪ್ರಸಾದ್ ಚೌರಾಸಿಯಾ ಮತ್ತು ಜಾಕಿರ್ ಹುಸೇನ್ ಎಂದು ಹಿಂದೂಸ್ತಾನಿ ಸಂಗೀತ ಕಲಾವಿದರೊಂದಿಗೆ ಪ್ರದರ್ಶನ. ಇಳೆಯರಾಜ ಕ್ಲಾಸಿಕ್ ಇನ್ ಮ್ಯಾಂಡೋಲಿನ್ 2008 ರಲ್ಲಿ, ಯು ಶ್ರೀನಿವಾಸ್ ದೇಬಾಶಿಸ್ ಭಟ್ಟಾಚಾರ್ಯ (ಲ್ಯಾಪ್ ಸ್ಟೀಲ್ ಗಿಟಾರ್),ಜಾನ್ ಮೆಕ್ಲಾಗ್ಲಿನ್,ಝಕೀರ್ ಹುಸೇನ್,ಶಿವಮಣಿ,ವಿಕ್ಕು ವಿನಾಯಕರಾಮ್,ದೊಮಿನಿಕ್ ಪಿಯಾಝಾ,ಜಾರ್ಜ್ ಬ್ರೂಕ್, ಯು ರಾಜೇಶ್, ಅನಿಲ್ ಶ್ರೀನಿವಾಸನ್ ಮತ್ತು ಇತರರೊಂದಿಗೆ 2008ರಲ್ಲಿ ಸಂಜಾನಿತ ಇದರ ಬಿಡುಗಡೆ.

ಮರಣ[ಬದಲಾಯಿಸಿ]

ಯು ಶ್ರೀನಿವಾಸ್ ಯಕೃತ್ತು ಕಸಿ ಮಾಡಿಸಿಕೊಂಡಿದ್ದರು ಮತ್ತು ಅದರಿಂದ ಚೇತರಿಸಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಕೆಲವು ತೊಡಕು ಸೆಪ್ಟೆಂಬರ್ 18ರ ಸಂಜೆ ಕಂಡುಬಂದು, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದರು ಮತ್ತು ಯಕೃತ್ತಿನ ವೈಫಲ್ಯದಿಂದ ಸೆಪ್ಟೆಂಬರ್ 19, 2014 ರಂದು ನಿಧನರಾದರು.[೧೦] ಅವರು ಸಹೋದರ,ಸಹೋದರಿ ಹಾಗೂ ತಂದೆ ತಾಯಿಯರನ್ನು ಅಗಲಿದರು.

ಉಲ್ಲೇಖಗಳು‌‌[ಬದಲಾಯಿಸಿ]

  1. Ramamoorthy, Mangala (2006-06-17). "'We move around like brothers'". ದಿ ಹಿಂದೂ. Chennai. Archived from the original on 2010-10-30. Retrieved 2009-06-02.
  2. Gautam, Savitha (2003-03-27). "The 'shakti' of sound". ದಿ ಹಿಂದೂ. Chennai. Archived from the original on 2003-06-24. Retrieved 2009-06-02.
  3. "Padma Awards". Ministry of Communications and Information Technology (India). Retrieved 2009-03-08.
  4. "Beautiful Mandolin Concert by U. Srinivas and U. Rajesh". Prasanthi Diary. August 5, 2010. Retrieved 2014-09-19.
  5. Hunt, Ken. "U. Srinivas - Biography". Allmusic. Retrieved 2009-06-02.
  6. Aruna Chandraraju. "Disarming humility". Retrieved 2014-09-19.
  7. "ಮ್ಯಾಂಡೋಲಿನ್ ಶ್ರೀನಿವಾಸ್ ದಂಪತಿ ವಿಚ್ಛೇದನ - ಪ್ರ್ಜಜಾವಾಣಿ ವಾರ್ತೆ". Archived from the original on 2016-03-05. Retrieved 2014-09-23.
  8. "Padma Awards Directory (1954–2013)" (PDF). Ministry of Home Affairs. Archived from the original (PDF) on 2015-10-15. Retrieved 2014-09-20.
  9. "SNA: List of Akademi Awardees". Sangeet Natak Akademi Official website. Archived from the original on 2015-05-30. Retrieved 2014-09-20.
  10. Janani Sampath,TNN (Sep 19, 2014). "Mandolin U Srinivas, popular Carnatic musician, passes away". The Times of India. Retrieved 2014-09-19.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]