ಯವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A Yavana image, excavations at (Bharhut)

ಯವನರು ಅಂದರೆ ಗ್ರೀಸ್ ದೇಶದವರು. ಯವನ ಎಂಬ ಸಂಸ್ಕೃತ ಶಬ್ದವೂ ಯವನಭಾಷೆಯಿಂದಲೇ ಬಂದಿದೆ. ಯವನ ಶಬ್ದ ಇಯಾನೆಸ್ (ಐಯೋನಿಯನ್ನರು/ಅಯೋನಿಯನ್ನರು), (ಯವನಭಾಷೆಯಲ್ಲಿ: Ἴωνες, ಇಯೋನೆಸ್)

ες ಎಂಬುದರಿಂದ ಈ ಶಬ್ದ ಮೂಡಿ ಬಂದಿದೆ. ಅಯೋನಿಯನ್ ಎಂದರೆ ಪೌರ್ವಾತ್ಯ ದೇಶಗಳಿಗೆ ತಿಳಿದ ಪ್ರಾಚೀನ ಗ್ರೀಕರು. ಮಹಾಭಾರತ, ಹಲವಾರು ಬೌದ್ಧ ಗ್ರಂಥಗಳಲ್ಲಿ, ಶಾಸನಗಳಲ್ಲಿ ಇವರ ಉಲ್ಲೇಖವಿದೆ.

ಮಧ್ಯಯುಗೀನ ಸಾಹಿತ್ಯದಲ್ಲಿ ಯವನ ಎಂಬ ಮಾತು ಸಾಮಾನ್ಯವಾಗಿ ಮ್ಲೇಚ್ಛ ಎಂಬುದರ ಪರ್ಯಾಯ ಪದವಾಗಿ ಬಳಸಲ್ಪಟ್ಟು ಎಲ್ಲ ಪರಕೀಯರಿಗೂ ಅನ್ವಯವಾಗಬಹುದಾಗಿತ್ತಾದರೂ, ಆರಂಭದ ಶತಮಾನಗಳಲ್ಲಿ ಇದು ಖಚಿತವಾಗಿ ಗ್ರೀಸ್ ದೇಶದ ಗ್ರೀಕರಿಗೆ, ಏಷ್ಯ ಮೈನರ್ನಲ್ಲಿ ಇಜಿಯನ್ ಸಮುದ್ರ ಮತ್ತು ಲಿಡಿಯಗಳ ನಡುವಣ ಗ್ರೀಕರಿಗೆ, ಅನ್ವಯವಾಗುತ್ತಿದ್ದ ಪದ. ( ನೋಡಿ :- ಪಂಜಾಬಿನ ಇತಿಹಾಸ)


ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಯವನ&oldid=1183434" ಇಂದ ಪಡೆಯಲ್ಪಟ್ಟಿದೆ