ವಿಷಯಕ್ಕೆ ಹೋಗು

ಯಳೇಶಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಳೇಶಪುರ ಹಾಸನ ಜಿಲ್ಲೆಹೊಳೆನರಸೀಪುರ ತಾಲೂಕಿನಲ್ಲಿರುವ ಒಂದು ಊರು. ಹಾಸನದಿಂದ ಹೋಳೆನರಸೀಪುರಕ್ಕೆ ಪ್ರಯಾಣಿಸುವ ದಾರಿಯಲ್ಲಿ ಈ ಊರಿದೆ.

ಇಲ್ಲಿನ ಎಳ್ಳೇಶ್ವರ್ ದೇವಾಲಯವು ಕ್ರಿ.ಶ. ೧೨೩೮ರ ಜನವರಿ ೨೭ರಂದು ಹೊಯ್ಸಳವೀರ ಸೋಮೇಶ್ವರನ ೨ನೇ (ಹೊನ.೭೧,೭೨) ಶಾಸನ ಗಮನ ವಾಗಿದೇ ಎಂದು ತಿಳಿದು ಬಂದಿದೇ. ಇದು ಹೇಮಾವತಿ ನದಿಯ ದಂಡೆಯಲ್ಲಿದೆ ದೇವಾಲಯದ ಸುತ್ತಲೂ ಹಸಿರು ತುಂಬಿದ ಗದ್ದೆಗಳು ಮನಸೆಲೆಯುತದೆ. ಇಲ್ಲಿ ಒಟ್ಟು ಐದು ಶಾಸನಗಳು ಗೋಚರಿಸುತ್ತವೆ. ಇವುಗಳಲ್ಲಿ ಎರಡು ಶಾಸನ ಹೊಯ್ಸಳರ ಸೋಮೇಶ್ವರನ್ ಶಾಸನವಾಗಿದೆ ಎಂದು ಎಫಿಗ್ರಾಫಿಯ ಆಫ್ ಕರ್ನಾಟಕದಲ್ಲಿ ತಿಳಿದು ಬರುತ್ತದೇ ಈ ಎರಡು ಶಾಸನಗಳು ದಿನಾಂಕ ಒಂದೇ ಕ್ರಿ.ಶ. ೧೨೩೮ರ್ ಜನವರಿ ೨೭ ಆಗಿದೆ. ಈ ದಿನ ಅರಸ ವಿಜಯರಾಜೇಂದ್ರ ಪಟ್ಟಣದ ನೆಲೆವೀಡಿನಿಂದ ಆಳುಇಸ್ಸ ಆತ ಕಟ್ಟಿಸಿದಂತೆ ತೋರುತದೆ. ಈ ಎರಡು ಶಾಸನಗಳು ಕುರಿತು ರಂಗ ಪಟ್ಟಣ ಸ್ವಾಮೀ ಸೋಮಣ್ಣ ೨ನೇ ಯಳ್ಳೆಶ್ವರ ದೇವರಿಗೆ ಭೂಮಿಯನ್ನು ದಾನ ಮಾಡಿದ ವಿಷಯವನ್ನು ಸಾರುತ್ತದೆ ಈ ದೇವತೆಗೆ ಬಾದಾಮಿಯಲ್ಲಿ ಆಲಯ ಹಾಗೂ ಕೆರೆ ರೂಪುಗೊಂಡಿದೆ. ಯಳ್ಳೇಶ್ವರ ದೇವಾಲಯದಲ್ಲಿ ಒಂದೇ ಕಲ್ಲಿನ ಮೇಲೆ ಸಪ್ತಮಾತ್ರಕೆಯರು ೨ಗಣಪತಿ; ೨ನಂದಿ; ೧ಪದ; ಕುದರೆ ಮೇಲೆ ವೀರಭದ್ರೇಶ್ವರ; ರುದ್ರೇಶ್ವರ ಮತ್ತು ಯಳ್ಳೇಶ್ವರ ದೇವರ ಲಿಂಗದ ರೂಪದಲ್ಲಿ ಇದೆ ಹಾಗು ಒಂದು ಖಡ್ಗ ಸಹ ಇಲ್ಲಿ ಇದೆ. ದೇವಾಲಯದ ಮುಂಭಾಗದಲ್ಲಿ ಒಂದು ಮಸ್ತಿಕಲ್ಲು,೨ನಗರ ಕಲ್ಲು ಮತ್ತು ಒಂದು ಗರುಡ ಕಂಬವಿದೆ. ಇಲ್ಲಿಯ ೨ ನಂದಿ ವಿಗ್ರಹಗಳನ್ನು ತುಂಬ ಸೂಕ್ಷ್ಮ ಕುಸುರಿಯಿಂದ್ ಕೆತ್ತಲಾಗಿದೆ. ಭಕ್ತರು ಇಲ್ಲಿಗೆ ಒಂದು ಶ್ರ್ಡ್ಡಾಭಕ್ತಿಯಿಂದ ಪೂಜೆ ಸಲ್ಲಿಸಿ, ಭಗವಂತನಲ್ಲಿ ತಮ್ಮ ಕಷ್ಟ ನಿವಾರಣೆಗೆ ಮೊರೆಮಾಡಿ ಕೊಳ್ಳುತ್ತಾರೆ. ಪ್ರತಿ ಕಡೆ ಕಾತಿಕ ಅಮಾವಾಸ್ಯೆಯಂದು ಇಡಿ ರಾತ್ರಿ ಉತ್ಸವ ನಡೆಯುತ್ತದೆ ಹಾಗೂ ಹಬ್ಬದಲ್ಲಿ ಗೊಡೆಗೆ ಸುಣ್ಣ ಹಚ್ಚುವುದರಿಂದ ಕಲ್ಲೂಗಳು ಹಾಳಗುವ ಸಂಭವ ಹೆಚ್ಚು. ಗೋಡೆಯ ಮೇಲೆ ಬರೆದಿರುವ ಶಾಸನಗಳು ಮುಚ್ಚಿಹೋಗಬಹುದು, ಇದನ್ನು ತಡೆದು ಪ್ರವಾಸಿಗರು ಬರುವತೆ ಸಂಭಂದಪಟ್ಟವರು ಈ ಬಗ್ಗೆ ಗಮನ ಹರಿಸುವುದು ಸೂಕ್ತವೆನಿಸುತದೆ.

"https://kn.wikipedia.org/w/index.php?title=ಯಳೇಶಪುರ&oldid=637812" ಇಂದ ಪಡೆಯಲ್ಪಟ್ಟಿದೆ