ವಿಷಯಕ್ಕೆ ಹೋಗು

ಮ್ಯಾಥ್ಯೂ ಕ್ರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಥ್ಯೂ ಕ್ರಾಸ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಮ್ಯಾಥ್ಯೂ ಹೆನ್ರಿ ಕ್ರಾಸ್
ಹುಟ್ಟು (1992-10-15) ೧೫ ಅಕ್ಟೋಬರ್ ೧೯೯೨ (ವಯಸ್ಸು ೩೨)
ಅಬರ್ಡೀನ್, ಸ್ಕಾಟ್ಲೆಂಡ್
ಬ್ಯಾಟಿಂಗ್ಬಲಗೈ ದಾಂಡಿಗ
ಪಾತ್ರವಿಕೆಟ್ ಕೀಪರ್ ದಾಂಡಿಗ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೫೫)೨೩ ಜನವರಿ ೨೦೧೪ v ಕೆನಡಾ
ಕೊನೆಯ ಅಂ. ಏಕದಿನ​೭ ಮಾರ್ಚ್ ೨೦೨೪ v ಕೆನಡಾ
ಟಿ೨೦ಐ ಚೊಚ್ಚಲ (ಕ್ಯಾಪ್ ೩೪)೪ ಜುಲೈ ೨೦೧೩ v ಕೀನ್ಯಾ
ಕೊನೆಯ ಟಿ೨೦ಐ೧೩ ಮಾರ್ಚ್ ೨೦೨೪ v ಸಂಯುಕ್ತ ಅರಬ್ ಸಂಸ್ಥಾನ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೩-೨೦೧೪ನಾಟಿಂಗ್ಹಮ್ಶೈರ್
೨೦೧೩ಲೌಬರೋ MCCU
೨೦೧೬ಎಸ್ಸೆಕ್ಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಅಂ. ಏಕ ಟಿ೨೦ಐ ಪ್ರ.ದ ಲಿಸ್ಟ್ ಏ
ಪಂದ್ಯಗಳು ೯೩ ೬೭ ೧೨೦
ಗಳಿಸಿದ ರನ್ಗಳು ೧,೯೮೮ ೧,೦೮೨ ೧೬೧ ೨,೫೩೫
ಬ್ಯಾಟಿಂಗ್ ಸರಾಸರಿ ೨೩.೯೫ ೨೩.೦೨ ೧೪.೬೩ ೨೪.೧೪
೧೦೦/೫೦ ೨/೧೦ ೦/೫ ೦/೦ ೨/೧೩
ಉನ್ನತ ಸ್ಕೋರ್ ೧೧೪ ೬೬* ೩೦ ೧೧೪
ಹಿಡಿತಗಳು/ ಸ್ಟಂಪಿಂಗ್‌ ೧೧೮/೮ ೪೧/೧೫ ೨೧/೦ ೧೪೪/೧೫
ಮೂಲ: Cricinfo, ೧೩ ಮಾರ್ಚ್ ೨೦೨೪

ಮ್ಯಾಥ್ಯೂ ಹೆನ್ರಿ ಕ್ರಾಸ್ (ಜನನ ೧೫ ಅಕ್ಟೋಬರ್ ೧೯೯೨) ಒಬ್ಬ ಸ್ಕಾಟಿಷ್ ಕ್ರಿಕೆಟಿಗ, ಇವರು ಸ್ಕಾಟ್ಲೆಂಡ್ ಪರ ಬಲಗೈ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡುತ್ತಾರೆ. [] ಕ್ರಾಸ್ ೨೩ ಜನವರಿ ೨೦೧೪ ರಂದು ಕೆನಡಾ ವಿರುದ್ಧ ಸ್ಕಾಟ್ಲೆಂಡ್‌ಗಾಗಿ ತನ್ನ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು []

ವೃತ್ತಿಜೀವನ

[ಬದಲಾಯಿಸಿ]

ಮ್ಯಾಥ್ಯೂ ಕ್ರಾಸ್ ೨೦೧೧ ಅಂಡರ್ -೧೯ ವಿಶ್ವಕಪ್ ಸಮಯದಲ್ಲಿ ಸ್ಕಾಟ್ಲೆಂಡ್ ತಂಡದ ಉಪನಾಯಕನಾಗಿ ಸೇವೆ ಸಲ್ಲಿಸಿದರು. ಅವರು ಲೌಬರೋ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. []

ಮ್ಯಾಥ್ಯೂ ಒಂಬತ್ತನೇ ವಯಸ್ಸಿನಲ್ಲಿ ಅಬರ್ಡೀನ್‌ಶೈರ್ ಸಿ.ಸಿ ಯ ಸದಸ್ಯರಾದರು.

ಮ್ಯಾಥ್ಯೂ ಅವರು ೨೦೧೩ ರಲ್ಲಿ ಸ್ಕಾಟ್ಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾದರು, ಅದರ ನಂತರ ಯು.ಎ.ಇಯಲ್ಲಿ ೨೦೧೩ ರ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಟಿ೨೦ ತಂಡಕ್ಕೆ ಆಯ್ಕೆಯಾದರು. []

ಜೂನ್ ೨೦೧೯ ರಲ್ಲಿ, ಅವರು ೨೦೧೯ ರ ಗ್ಲೋಬಲ್ ಟಿ೨೦ ಕೆನಡಾ ಪಂದ್ಯಾವಳಿಯಲ್ಲಿ ಮಾಂಟ್ರಿಯಲ್ ಟೈಗರ್ಸ್ ಫ್ರಾಂಚೈಸ್ ತಂಡಕ್ಕಾಗಿ ಆಡಲು ಆಯ್ಕೆಯಾದರು. []

ಅವರು ಸಂಯುಕ್ತ ಅರಬ್ ಸಂಸ್ಥಾನಡಲ್ಲಿ ನಡೆದ ೨೦೧೯ ರ ಐಸಿಸಿ ಟಿ೨೦ ವಿಶ್ವಕಪ್ ಅರ್ಹತಾ ಪಂದ್ಯಾವಳಿಗಾಗಿ ಸ್ಕಾಟ್ಲೆಂಡ್‌ನ ತಂಡದಲ್ಲಿದ್ದರು. [] ಸೆಪ್ಟೆಂಬರ್ ೨೦೨೧ ರಲ್ಲಿ, ೨೦೨೧ ರ ICC ಪುರುಷರ ಟಿ೨೦ ವಿಶ್ವಕಪ್‌ಗಾಗಿ ಸ್ಕಾಟ್‌ಲ್ಯಾಂಡ್‌ನ ತಾತ್ಕಾಲಿಕ ತಂಡದಲ್ಲಿ ಕ್ರಾಸ್ ರವರನ್ನು ಹೆಸರಿಸಲಾಯಿತು. []

ಉಲ್ಲೇಖಗಳು

[ಬದಲಾಯಿಸಿ]
  1. "Player Profile: Matty Cross". ESPNcricinfo. Retrieved 1 February 2014.
  2. "Full Scorecard of Scotland vs Canada 18th Match, Group A 2013/14 - Score Report". ESPNcricinfo.com. Retrieved 19 November 2021.
  3. ೩.೦ ೩.೧ "MATTHEW CROSS". Cricketscotland.com. Archived from the original on 4 ಮಾರ್ಚ್ 2016. Retrieved 2 February 2014.
  4. "Global T20 draft streamed live". Canada Cricket Online. 20 June 2019. Retrieved 20 June 2019.
  5. "Squads announced for T20I Tri-Series in Ireland and ICC Men's T20 World Cup Qualifier". Cricket Scotland. Retrieved 12 September 2019.
  6. "Captain Coetzer leads Scotland squad to ICC Men's T20 World Cup". Cricket Scotland. Retrieved 9 September 2021.