ವಿಷಯಕ್ಕೆ ಹೋಗು

ಮೋಮೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಮೊ ಟಿಬೆಟ್ ಹಾಗೂ ನೇಪಾಳಕ್ಕೆ ಸ್ಥಳೀಯವಾದ ಒಂದು ಬಗೆಯ ಡಂಪ್ಲಿಂಗ್. ವರ್ಷಗಳ ಅವಧಿಯಲ್ಲಿ, ಇದು ಭಾರತೀಯ ರಾಜ್ಯಗಳಾದ ಅಸ್ಸಾಂ ಮತ್ತು ಮಣಿಪುರದಲ್ಲಿ ಬಹಳ ಜನಪ್ರಿಯವಾಗಿದೆ; ಇಲ್ಲಿ, ಜನ ಸರಳ ಆವಿಯಲ್ಲಿ ಬೇಯಿಸಿದ ಪೋರ್ಕ್ (ಹಂದಿ ಮಾಂಸ) ಹೂರಣ ತುಂಬಿದ ಮೋಮೊಗಳನ್ನು ಮುಖ್ಯ ಆಹಾರದ ಭಾಗವಾಗಿ ತಿನ್ನಲು ಪ್ರಾರಂಭಿಸಿದ್ದಾರೆ. ಮೋಮೊದ ಮೂಲ ಅಸ್ಪಷ್ಟವಾಗಿದೆ. ಈಗಿನ ದಿನಗಳಲ್ಲಿ, ಮೋಮೊವನ್ನು ಬಹುತೇಕ ರುಬ್ಬಿದ ಮಾಂಸ, ತರಕಾರಿಗಳು, ಟೊಫ಼ು, ಪನೀರ್ ಚೀಸ್, ಮೃದು ಛುರ್ಪಿ (ಸ್ಥಳೀಯ ಗಿಣ್ಣು) ಮತ್ತು ತರಕಾರಿ ಹಾಗೂ ಮಾಂಸ ಯಾವುದೇ ಸಂಯೋಜನೆಯೊಂದಿಗೆ ತಯಾರಿಸಲಾಗುತ್ತದೆ.



"https://kn.wikipedia.org/w/index.php?title=ಮೋಮೊ&oldid=1183603" ಇಂದ ಪಡೆಯಲ್ಪಟ್ಟಿದೆ