ಛುರ್ಪಿ
ಗೋಚರ
ಛುರ್ಪಿ ಅಥವಾ ಡುರ್ಖಾ ಹಿಮಾಲಯದ ಪ್ರದೇಶಗಳಾದ ನೇಪಾಳ, ಸಿಕ್ಕಿಂ, ದಾರ್ಜೀಲಿಂಗ್, ಕಾಲಿಂಪೊಂಗ್, ಭೂತಾನ್ ಮತ್ತು ಟಿಬೆಟ್‍ನಲ್ಲಿ ಸೇವಿಸಲ್ಪಡುವ ಸಾಂಪ್ರದಾಯಿಕ ಗಿಣ್ಣಾಗಿದೆ. ಛುರ್ಪಿಯ ಎರಡು ವೈವಿಧ್ಯಗಳೆಂದರೆ ಮೃದು ವಿಧ (ಸಾಮಾನ್ಯವಾಗಿ ಅನ್ನದೊಂದಿಗೆ ಪಕ್ಕ ಖಾದ್ಯವಾಗಿ ಸೇವಿಸಲ್ಪಡುತ್ತದೆ) ಮತ್ತು ಗಟ್ಟಿ ವಿಧ (ಅಡಿಕೆಯಂತೆ ಅಗಿಯಲ್ಪಡುತ್ತದೆ). ಇದು ನೇಪಾಳಕ್ಕೆ ಸ್ಥಳೀಯವಾಗಿದೆಯೆಂದು ಪರಿಚಿತವಾಗಿದೆ.
ಛುರ್ಪಿಯನ್ನು ಸ್ಥಳೀಯ ಹಾಲುಮನೆಯಲ್ಲಿ ಅಥವಾ ಮನೆಯಲ್ಲಿ ಮಜ್ಜಿಗೆಯಿಂದ ತಯಾರಿಸಲಾಗುತ್ತದೆ.[೧] ಮಜ್ಜಿಗೆಯನ್ನು ಕುದಿಸಿ ಪಡೆಯಲಾದ ಘನ ಮುದ್ದೆಯನ್ನು ದ್ರವದಿಂದ ಪ್ರತ್ಯೇಕಿಸಿ ನೀರನ್ನು ಬಸಿಯಲು ತೆಳುವಾದ ಬಟ್ಟೆಯಿಂದ ಸುತ್ತಿ ನೇತು ಹಾಕಲಾಗುತ್ತದೆ. ಇದು ಮೃದುವಾಗಿ, ಬಿಳಿಬಣ್ಣದ್ದಾಗಿದ್ದು ರುಚಿಯಲ್ಲಿ ತಟಸ್ಥವಾಗಿರುತ್ತದೆ. ಆದರೆ, ಇದಕ್ಕೆ ಹುಳಿ ರುಚಿ ಬರಲು ಹಲವುವೇಳೆ ಸ್ವಲ್ಪ ಸಮಯದವರೆಗೆ ಹುಳಿಯಾಗಲು ಬಿಡಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]