ಮೋನಿಷಾ ಉನ್ನಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಮೋನಿಷಾ ಉನ್ನಿ
ಜನನ24 ಜನವರಿ,1971
ಪಣ್ಣಿಯಂಕರ, ಕೊಯಿಕ್ಕೋಡ್, ಕೇರಳ
ಮರಣ5 ಡಿಸೆಂಬರ್ 1992
ಎಕ್ಸ್-ರೇ ಜಂಕ್ಷನ್, ಚೆರ್ತಾಲ, ಅಲಪ್ಪುಳ, ಕೇರಳ
Nationalityಭಾರತೀಯ
Alma materಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು
ಉದ್ಯೋಗನಟಿ, ನೃತ್ಯಪಟು
ಸಕ್ರಿಯ ವರ್ಷಗಳು1986-1992
Parent(s)ನಾರಾಯಣ ಉನ್ನಿ, ಶ್ರೀದೇವಿ ಉನ್ನಿ
ಪ್ರಶಸ್ತಿಗಳುಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ

ಮೋನಿಷಾ ಉನ್ನಿ (ಆಂಗ್ಲ:Monisha Unni) (24 ಜನವರಿ 1971 – 5 ಡಿಸೆಂಬರ್ 1992) ದಕ್ಷಿಣ ಭಾರತದ ಪ್ರಸಿದ್ಧ ನಟಿ.[೧] ನಖಕ್ಷತಂಗಳ್ ಎಂಬ 1986ರ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಮೋನಿಷಾ, ಮುಂದೆ ಮಲಯಾಳಂ, ತಮಿಳು, ಕನ್ನಡ ಭಾಷೆಯ ಚಿತ್ರಗಳಲ್ಲಿ ನಟಿಸಿದರು. 16ನೇ ವಯಸ್ಸಿಗೆ ಅತ್ತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ದೇಶದ ಅತ್ಯಂತ ಕಿರಿಯ ನಟಿ ಮೋನಿಷಾ.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ಬಾಲ್ಯ

ಮೋನಿಷಾ ಹುಟ್ಟಿದ್ದು ಕೊಯಿಕ್ಕೋಡ್ ಜಿಲ್ಲೆಯ ಪಣ್ಣಿಯಂಕರ ಎಂಬಲ್ಲಿ. ತಂದೆ ನಾರಾಯಣ ಉನ್ನಿ, ಉದ್ಯಮಿ. ತಾಯಿ ಶ್ರೀದೇವಿ ಉನ್ನಿ ನಟಿ ಮತ್ತು ನೃತ್ಯಪಟು ಆಗಿದ್ದರು. ಅಣ್ಣ ಸಜಿತ್ ಉನ್ನಿ. ಮೋನಿಷಾ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆಯ ವ್ಯವಹಾರಗಳೆಲ್ಲ ಬೆಂಗಳೂರಲ್ಲೇ ಇದ್ದುದ್ದರಿಂದ ಕುಟುಂಬ ಇಲ್ಲೇ ನೆಲೆಸಿತ್ತು.

ಶಿಕ್ಷಣ

ಬೆಂಗಳೂರಿನ ಸಂತ ಚಾರ್ಲ್ಸ್ ಪ್ರೌಢಶಾಲೆ ಮತ್ತು ಸಂತ ಬಿಷಪ್ ಕಾಟನ್ ಶಾಲೆಗಳಲ್ಲಿ ಶಾಲಾಶಿಕ್ಷಣ ಪೂರೈಸಿದ ಮೋನಿಷಾ, ಕಾಲೇಜು ಶಿಕ್ಷಣ ಪಡೆದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.

ಮಾತೃಭಾಷೆ ಮಲಯಾಳಂ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಬಲ್ಲವರಾಗಿದ್ದರು ಮೋನಿಷಾ.

ನಟನಾವೃತ್ತಿ[ಬದಲಾಯಿಸಿ]

ಮೋನಿಷಾ ನಟಿಸಿದ ಮೊದಲ ಚಿತ್ರ 1986ರಲ್ಲಿ ಬಿಡುಗಡೆಯಾದ ನಖಕ್ಷತಂಗಳ್.[೨] ಎಂ. ಟಿ. ವಾಸುದೇವ ನಾಯರ್ ಮುಖೇನ ಮೋನಿಷಾ ಚಿತ್ರರಂಗಕ್ಕೆ ಅಡಿಯಿಟ್ಟರು. ತಮ್ಮ ಮೊದಲ ಚಿತ್ರಕ್ಕೇ 34ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೋನಿಷಾ ಅಂಥ ಪುರಸ್ಕಾರ ಪಡೆದ ಈವರೆಗಿನ ಅತ್ಯಂತ ಕಿರಿಯ ನಟಿ. ಮುಂದೆ ಹಲವಾರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಮೋನಿಷಾ ಜನಪ್ರಿಯರಾದರು.

ಕನ್ನಡದ ನಂಟು[ಬದಲಾಯಿಸಿ]

ಮೋನಿಷಾ ಬಾಲ್ಯ, ಶಾಲೆ-ಕಾಲೇಜುಗಳೆಲ್ಲಾ ಬೆಂಗಳೂರಿನಲ್ಲೇ ಪೂರೈಸಿದ್ದು ಕನ್ನಡ ಭಾಷೆಯನ್ನೂ ಬಲ್ಲವರಾಗಿದ್ದರು. ಮೋಹಿನಿಯಾಟ್ಟಂ ನೃತ್ಯದಲ್ಲಿ ತರಬೇತಿ ಪಡೆದ ಅವರು, 1985ರಲ್ಲಿ ಕರ್ನಾಟಕ ರಾಜ್ಯ ಮಟ್ಟದ ನೃತ್ಯಸ್ಪರ್ಧೆಯಲ್ಲಿ ಕೌಶಿಕ ಪ್ರಶಸ್ತಿ ಪಡೆದಿದ್ದರು.

ಮೋನಿಷಾ ನಟನೆಯ ಏಕೈಕ ಕನ್ನಡ ಚಿತ್ರ, ರಾಘವೇಂದ್ರ ರಾಜಕುಮಾರ್ ನಾಯಕನಾಗಿ ನಟಿಸಿದ ಚಿರಂಜೀವಿ ಸುಧಾಕರ್ (1988).[೩] ಆ ಚಿತ್ರದ "ವಸಂತಮಾಸ ಶೃಂಗಾರಮಾಸ ಬಂದಿದೆ" ಹಾಡು ಜನಪ್ರಿಯ ಹಾಡಾಗಿದೆ.

ನಿಧನ[ಬದಲಾಯಿಸಿ]

5 ಡಿಸೆಂಬರ್ 1992ರಂದು ಬೆಳಗಿನ ಜಾವ ಮೋನಿಷಾ ಮತ್ತು ಅವರ ತಾಯಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಚೆರ್ತಾಲ-ಮುನ್ನಾಟಿ ರಾಷ್ಟ್ರೀಯ ಹೆದ್ದಾರಿ 47 ಹಾದು ಹೋಗುವ, ಅಲಪ್ಪುಳ ಜಿಲ್ಲೆಯ ಎಕ್ಸ್-ರೇ ಜಂಕ್ಷನ್ ಎಂಬಲ್ಲಿ ನಡೆದ ಅಪಘಾತದಲ್ಲಿ ಮೋನಿಷಾ ತಾಯಿ ಬದುಕುಳಿದು ಮೋನಿಷಾ, ಕಾರಿನ ಡ್ರೈವರ್ ಸಾವನ್ನಪ್ಪಿದರು. ಆಗ ಮೋನಿಷಾ ಅವರ ವಯಸ್ಸು 21 ಆಗಿತ್ತು.[೪]

ಉಲ್ಲೇಖಗಳು[ಬದಲಾಯಿಸಿ]

  1. "Monisha Unni biography". Filmibeat. Retrieved 19 Nov 2020.
  2. ೨.೦ ೨.೧ "Remembering 'Manjal Prasadam Nettiyil Charthiya' girl Monisha Unni on her death anniversary". Times of India. 5 Dec 2019. Retrieved 19 Nov 2020.
  3. "ಚಿರಂಜೀವಿ ಸುಧಾಕರ್". Filmibeat. Retrieved 19 Nov 2020.
  4. Sajimon P S (12 Sep 2013). "An 'unsafe' corridor without streetlights". Times of India. Retrieved 19 Nov 2020.