ವಿಷಯಕ್ಕೆ ಹೋಗು

ಮೊದಲ ಆಂಗ್ಲೋ-ಅಫಘಾನ್‌ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
First Anglo-Afghan War
Part of The Great Game

Remnants of an Army by Elizabeth Butler depicting William Brydon who was the sole British survivor after Britain's catastrophic retreat from Kabul.
ದಿನಾಂಕ1839–1842
ಸ್ಥಳAfghanistan
ಫಲಿತಾಂಶ British withdrawal from Afghanistan.[][][]
ಯುದ್ಧಾಕಾಂಕ್ಷಿಗಳು
Afghanistan British East India Company
ದಂಡನಾಯಕರು ಮತ್ತು ನಾಯಕರು
Dost Mohammadಟೆಂಪ್ಲೇಟು:POW,
Akbar Khan
William Hay Macnaghten ,
John Keane,
William Elphinstoneಟೆಂಪ್ಲೇಟು:POW,
George Pollock
ಸಾವುನೋವುಗಳು ಮತ್ತು ನಷ್ಟಗಳು
Unknown 4,500 killed[]
Afghan civilians = Unknown
British (Indian) civilians = 12,000 killed[]

ಟೆಂಪ್ಲೇಟು:Campaignbox First Anglo-Afghan War ಟೆಂಪ್ಲೇಟು:Sidebar with collapsible groups ಮೊದಲ ಆಂಗ್ಲೋ-ಅಪಘಾನ್‌ ಯುದ್ಧ ವು ಭಾರತದಲ್ಲಿನ ಬ್ರಿಟೀಷರ ಮತ್ತು ಅಫಘಾನಿಸ್ತಾನದ ನಡುವೆ ೧೮೩೯ ರಿಂದ ೧೮೪೨ರ ವರೆಗೆ ನಡೆಯಿತು. ಇದು ಗ್ರೇಟ್ ಗೇಮ್‌ನ ಕಾಲದ ಮೊದಲ ಪ್ರಮುಖ ಯುದ್ಧವಾಗಿತ್ತು. ಇದು ಹತ್ತೊಂಬತ್ತನೇ ಶತಮಾನದಲ್ಲಿನ ಮಧ್ಯ ಏಷ್ಯಾದಲ್ಲಿ ಶಕ್ತಿ ಮತ್ತು ಪ್ರಾಭಲ್ಯವನ್ನು ಸ್ಥಾಪಿಸುವ ಸಲುವಾಗಿನ ರಷ್ಯಾ ಮತ್ತು ಯುನೈಟೆಡ್‌ ಕಿಂಗ್‌ಡಮ್‌ಗಳ ನಡುವಿನ ಪೈಪೋಟಿಯಲ್ಲಿನ ಮತ್ತು ಬ್ರಿಟೀಷ್‌ ರಾಜ್‌ನ್ನು ಈಸ್ಟ್‌ ಇಂಡಿಯಾ ಕಂಪನಿಯೊಂದಿಗೆ ವಿಲೀನಗೊಳಿಸಿದ ನಂತರದ ಬೆಳವಣಿಗೆಯಲ್ಲಿ ಬ್ರಿಟೀಷರ ಶಕ್ತಿಯನ್ನು ಕುಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಘಟನೆಯಾಯಿತು.[]

ಕಾರಣಗಳು

[ಬದಲಾಯಿಸಿ]

೧೮೩೦ರ ದಶಕದಲ್ಲಿ, 1837ರ ಹೊತ್ತಿಗೆ ಬ್ರಿಟೀಷರು ಭಾರತದಲ್ಲಿ ಭದ್ರವಾಗಿ ಬೇರೂರಿದ್ದರು. ರಷ್ಯಾದ ರಾಜರು ಭಾರತದ ಮೇಲೆ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡಿದ್ದರಿಂದಾಗಿ ಖೈಬರ್‌ ಮತ್ತು ಬೊಲಾನ್‌ ಪಾಸ್‌ಗಳಿಂದ ಭಾರತವನ್ನು ವಶಪಡಿಸಿಕೊಳ್ಳಬಹುದು ಎಂಬ ಭಯಕ್ಕೆ ಒಳಗಾದರು. ರಷ್ಯಾವು ಅಫಘಾನಿಸ್ಥಾನವನ್ನು ಹೆದರಿಸುವ ಸಲುವಾಗಿ ತಮ್ಮ ದೂತನನ್ನು ಕಳುಹಿಸಿದ್ದಾರೆ ಎಂಬ ವದಂತಿಯ ಮೇರೆಗೆ ಬ್ರಿಟೀಷರು ಅಫಘಾನಿಸ್ಥಾನದ ಮೇಲೆ ದಾಳಿ ಮಾಡಿದರು.[]

ಬ್ರಿಟಿಷರು ರಷ್ಯಾದ ವಿರುದ್ಧವಾಗಿ ಅಫಘಾನಿಸ್ಥಾನದೊಂದಿಗೆ ಬಾಂದವ್ಯವನ್ನು ಬೆಳೆಸಿಕೊಳ್ಳುವ ಸಲುವಾಗಿ ಕಾಬುಲ್‌ಗೆ ದೂತನೊಬ್ಬನನ್ನು ಕಳುಹಿಸಿಕೊಟ್ಟಿತು. ಅಲ್ಲಿನ ರಾಜ ದೋಸ್ತ್ ಮೊಹಮ್ಮದ್‌ ಬಾಂದವ್ಯಕ್ಕೇನೋ ಸಮ್ಮತಿಸಿದನು, ಆದರೆ ೧೮೩೪ರಲ್ಲಿ ಸಿಕ್‌ ಸಾಮ್ರಾಜ್ಯವು ವಶಪಡಿಸಿಕೊಂಡಿದ್ದ ಪೇಷಾವರವನ್ನು ವಶಪಡಿಸಿಕೊಳ್ಳಲು ಸಹಕರಿಸಬೇಕೆಂದು ಕೋರಿದನು. ಆದರೆ ಬ್ರಿಟೀಷರು ಸಹಾಯ ಮಾಡಲು ನಿರಾಕರಿಸಿದರು. ದೋಸ್ತ್‌ ಮೆಹಮೂದನು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಾರಂಭಿಸಿದನು ಮತ್ತು ಇದೇ ಸಂದರ್ಭದಲ್ಲಿ ರಷ್ಯಾ ಕೂಡ ಬಾಂಧವ್ಯಕ್ಕಾಗಿ ತನ್ನ ದೂತನನ್ನು ಕಾಬೂಲ್‌ಗೆ ಕಳುಹಿಸಿತ್ತು. ಇದು ದೋಸ್ತ್‌ ಮೊಹಮ್ಮದ್‌ ಬ್ರಿಟೀಷ್‌ ವಿರೋಧಿಯೆಂದು ಭಾರತದ ಗವರ್ನರ್‌ ಜನರಲ್‌ ಆದ ಲಾರ್ಡ್‌ ಔಕ್‌ಲ್ಯಾಂಡ್ ಇವರಿಗೆ ಮನವರಿಕೆ ಮಾಡಿಕೊಟ್ಟಿತು. ಬ್ರಿಟಿಷರಿಗೆ ಎಲ್ಲಿ ರಷ್ಯಾ ಭಾರತದ ಮೇಲೆ ದಾಳಿಮಾಡಿಬಿಡುತ್ತದೆಯೋ ಎಂದು ಭಯವಾಗಿ ಅಫಘಾನ್‌ ಮತ್ತು ರಷ್ಯಾದ ಸಂಬಂದಗಳು ಹಳಸುವಂತೆ ಮಾಡಲು ೧೮೩೮ರಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿತು. ಇದರಿಂದಾಗಿ ಪರ್ಶಿಯನ್‌ ಸೈನಿಕ ಸಮುದಾಯವು ರಷ್ಯಾದ ಸಹಯೋಗದೊಂದಿಗೆ ಅಪಘಾನಿಸ್ಥಾನದ ಪಶ್ಚಿಮಭಾಗದ ಹೆರಾತ್‌ನ ಭಾಗದಲ್ಲಿ ದಾಳಿ ಮಾಡಲು ಪ್ರಚೋದಿಸಿತು. ರಷ್ಯಾ ತನ್ನ ಪ್ರಾಭಲ್ಯತೆಯನ್ನು ಉತ್ತರ ಮತ್ತು ಮಧ್ಯ ಏಷ್ಯಾಗಳಲ್ಲಿ ಹೆಚ್ಚಿಸಿಕೊಳ್ಳುವ ಸಲುವಾಗಿ ಮೊದಲಿನಿಂದಲೇ ಹೆರಾತ್‌ ಗಡಿ ತಕರಾರನ್ನು ಹೊಂದಿರುಪ ಪರ್ಶಿಯಾದೊಂದಿಗೆ ಬಾಂದವ್ಯಗನ್ನು ಬೆಳೆಸಿಕೊಂಡಿತು. ಹೆರಾತ್‌ ಭಾಗವನ್ನು ಅಪಘಾನ್‌ ೧೭೫೦ರಲ್ಲಿ ಗೆದ್ದುಕೊಂಡಿತ್ತು. ಬ್ರಿಟೀಷರು ಅಫಘಾನಿಸ್ಥಾನಲ್ಲಿ ಈಗ ಆಳುತ್ತಿರು ಬ್ರಿಟೀಷ್‌ ವಿರೋಧಿ ರಾಜನನ್ನು ಕೆಳಗಿಳಿಸಿ ಬ್ರಿಟಿಷರ ಪರವಾಗಿರುವವರನ್ನು ಆಳ್ವಿಕೆಗೆ ತರಬೇಕೆಂದು ಹೊಂಚುಹಾಕಿದರು. ಬ್ರಿಟಿಷರು ಅಪಘಾನಿಸ್ಥಾನದ ನೂತನ ಅಧಿಕಾರಿಯಾಗಿ ಶುಜಾ ಶಾ ದುರಾನಿಯವರನ್ನು ಮಾಡಬೇಕೆಂದು ಆಯ್ಕೆ ಮಾಡಿದರು.

ತನ್ನ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳುವ ಸಲುವಾಗಿ, ೧೮೩೮ರಲ್ಲಿ ಲಾರ್ಡ್‌ ಔಕಲ್ಯಾಂಡ್‌ ರವರು ಶಿಮ್ಲಾದಲ್ಲಿ ಸಾರ್ವಜನಿಕ ಹೇಳಿಕೆಯನ್ನು ನೀಡಿ, ಅಪಘಾನಿಸ್ಥಾನದ ವ್ಯವಹಾರದಲ್ಲಿ ಭಾಗಿಯಾಗಲು ತಮಗೆ ನಿಜವಾದ ಕಾರಣ ಇದೆ ಎಂದರು. ಪ್ರಕಟಣೆಯಲ್ಲಿ ಅವರು ಭಾರತದ ರಕ್ಞಣೆಯ ಸಲುವಾಗಿ ಬ್ರಿಟಿಷರು ಭಾರತದ ಪಶ್ವಿಮ ಭಾಗದಲ್ಲಿ ಬಾಂದವ್ಯ ಬೆಳೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಬ್ರಿಟೀಷ್‌‌ ಕಛೇರಿಯ ಬಾತ್ಮಿಯು ನಾವು ಸಣ್ಣ ಸೇನಾ ತುಕಡಿಯನ್ನು ಹೊಂದಿದ ಶಾ ಸುಜಾನ್ನು ಅವನ ಸಿಂಹಾಸನವನ್ನು ಮರಳಿ ಪಡೆಯುವ ಸಲುವಾಗಿ ಸಹಾಯ ನಿಡುತ್ತೇವೆ ಎಂದು ತಿಳಿಸಿತು. ಇದು ಬ್ರಿಟೀಷ್‌‌ ಪರವಾಗಿನ ದೊರೆಯನ್ನು ಅಪಘಾನಿಸ್ಥಾನದಲ್ಲಿ ಅಧಿಕಾರಕ್ಕೆ ತರುವ ಸಲುವಾಗಿ ಮಾಡಿದ ತಂತ್ರವಾಗಿತ್ತು. ಮತ್ತು ಬ್ರಿಟೀಷ್‌‌ ಹೇಳಿಕೆಯಲ್ಲಿ ಅಫಘಾನ್‌ನದ ಕಾಬುಲ್‌ನಲ್ಲಿ ಶಾ ಶುಜಾರವರು ತಮ್ಮ ಅಧಿಕಾರವನ್ನು ಸ್ಥಾಪಿಸಿದ ನಂತರ ತುಕಡಿಯನ್ನು ಮರಳಿ ಪಡೆಯಲಾಗುವುದೆಂದು ತಿಳಿಸಿತು. ಶುಜಾನ ಸಂಪೂರ್ಣ ಆಡಳಿತವು ಬಂಡಾಯಕ್ಕಾಗಿ ಬುಡಕಟ್ಟು ಜನಾಂಗದವನ್ನು ಖರೀದಿಸಲು ಬೇಕಾಗುವ ಹಣಕ್ಕಾಗಿ ಬ್ರಿಟಿಷರನ್ನು ಅವಲಂಬಿಸಿತ್ತು. ಬ್ರಿಟಿಷರು ತಾವೇ ಅಪಘಾನಿಸ್ರಾನದ ಮೇಲೆ ಯುದ್ಧ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಬದಲಾಗಿ ಶುಜಾ ನಾಯಕತ್ವದ ಸರ್ಕಾರಕ್ಕೆ ನ್ಯಾಯ ಒದಗಿಸಲು ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿಕೊಂಡಿತು. ಏಕೆಂದರೆ ವಿದೇಶಿಯರ ಹಸ್ತಕ್ಷೇಪವಾಗಿದೆ ಎಂದು ಎಲ್ಲ ದೇಶಗಳು ತಮ್ಮ ಮೇಲೆ ವಿರೋಧ ವ್ಯಕ್ರಪಡಿಸಬಾರದು ಎಂಬುದು ಅವರ ಯೋಚನೆಯಾಗಿತ್ತು. ಹಾಗಿದ್ದರೂ, ಪರ್ಶಿಯಾ ರಷ್ಯಾದ ಪರವಾಗಿದುದರಿಂದ ’ಬ್ರಿಟನ್‌ ತನ್ನ ಪರವಾಗಿರುವವರನ್ನು ರಾಜ್ಯಾಡಳಿತವನ್ನು ನಿರ್ಮಿಸಿ ರಷ್ಯಾದ ಪ್ರಾಭಲ್ಯವನ್ನು ತಡೆಯುವ ಸಲುವಾಗಿ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ವಿನಾಕಾರಣ ದಂಗೆ ಮಾಡುತ್ತಿದೆ ಎಂದು ಮನವರಿಕೆ ಮಾಡಿಕೊಂಡಿತ್ತು.[]

ಆಕ್ರಮಣ

[ಬದಲಾಯಿಸಿ]

೨೧೦೦೦ ಬ್ರಿಟೀಷ್‌‌ ಮತ್ತು ಭಾರತೀಯ ಸೈನಿಕ ತುಕಡಿಯು ಸರ್‍ ಜಾನ್‌ ಕೈನೇ(ಸರ್‌ ವಿಲ್ಲೋಬಿ ಕಾಟನ್‌ರವರ ಬದಲಾಗಿ ಮತ್ತು ನಂತರ ವಿಲ್ಲಿಯಂ ಎಲ್ಪಿನ್‌ಸ್ಟನ್‌ ಇವರ ಬದಲಾಗಿ)ಯವರ ಅಧಿಪತ್ಯದಲ್ಲಿ ೧೮೩೮ರ ಡಿಸೆಂಬರಿನಲ್ಲಿ ಪಂಜಾಬಿನಿಂದ ಹೊರಟು ಸನ್ನದ್ಧವಾಯಿತು. ಅವರೊಂದಿಗೆ ಕಲ್ಕತ್ತಾ ಸರ್ಕಾರದ ಮುಖ್ಯ ಕಾರ್ಯನಿರ್ವಾಹಕರಾದ ವಿಲಿಯಂ ಹೇ ಮೆಕ್‌ನಾಟೆನ್‌ರವರು ಇದ್ದರು. ಇವರನ್ನು ಕಾಬುಲ್‌ಗೆ ತೆರಳುವವರ ಮುಖ್ಯ ಮುಂದಾಳುವಾಗಿ ಆಯ್ಕೆ ಮಾಡಲಾಗಿತ್ತು. ೧೮೩೯ ಮಾರ್ಚ್‌ ಅಂತ್ಯದಲ್ಲಿ ಬ್ರಿಟೀಷ್‌‌ ತುಕಡಿಯು ಕ್ವೆಟ್ಟಾವನ್ನು ತಲುಪಿತು. ಬೊಲಾನ್‌ ಪಾಸ್‌ನ್ನು ದಾಟಿ ಕಾಬೂಲ್‌ ಕಡೆ ಪ್ರಯಾಣ ಬೆಳೆಸಿದವು. ಅವು ಅಂತ್ಯತ ಕಠಿಣವಾದ ಪ್ರಯಾಣವನ್ನು ಕೈಗೊಂಡು ೪೦೦೦ ಮೀಟರ್‌ ಎತ್ತರದಲ್ಲಿರುವ ಪರ್ವತವನ್ನು ದಾಟಿ ಮುಂದೆ ಸಾಗಿದವು. ಮತ್ತು ಒಳ್ಳೆಯ ಸಾಹಸವನ್ನು ಮೆತೆದು ಎಪ್ರಿಲ್‌ ೨೫,೧೮೩೯ರಲ್ಲಿ ಕಂದಹಾರ್‌‌ನ್ನು ವಶಪಡಿಸಿಕೊಂಡವು. ಜುಲೈ ೨೨ರಂದು ಮಿಂಚಿನ ದಾಳಿ ನಡೆಸಿ ಅಜೇಯವಾಗಿದ್ದ ಘಜನಿ ಕೋಟೆಯನ್ನು ವಶಪಡಿಸಿಕೊಂಡವು ಇದು ಉತ್ತರ ಪಶ್ವಿಮದಲ್ಲಿರುವ ಗಡಿಯಲ್ಲಿ ಪಶ್ಚಿಮಲ್ಲಿರುವವರ ಹಿಡಿತ ಸಾಧಿಸಿ ವಿರೋಧಿಗಳ ನೋವಿನ ಸಂಗತಿಯಾಯಿತು. ಬ್ರಿಟೀಷ್‌‌ ಪಡೆಗಳು ಸಾರ್ವಭೌಮತ್ವವನ್ನು ಪಡೆಯುವ ಗುಂಗಿನಲ್ಲಿ ಒಂದು ಶಹರದ ಬಾಗಿಲುಗಳನ್ನು ಮುರಿದುಕೊಂಡು ಭ್ರಾಂತಿಯಿಂದ ಪ್ರವೇಶಿಸಿದವು. ಈ ಕೋಟೆಯನ್ನು ಗೆಲ್ಲುವುದರೊಂದಿಗೆ ೨೦೦ಜನ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಾಳುಗಳಾದರು. ಆದರೆ ಅಫಘಾನಿಸ್ತಾನವು ಸುಮಾರು ೫೦೦ಜನರನ್ನು ಕಳೆದುಕೊಂಡಿತು.೧,೬೦೦ ಸೈನಿಕರನ್ನು ಗಾಯಾಳುಗಳಾಗಿ ಸೆರೆಹಿಡಿಯಲಾಯಿತು. ಘಜನಿಯಲ್ಲಾದ ಗೆಲುವು ಮುಂದಿನ ನಡಿಗೆಗೆ ಸಹಕಾರಿಯಾದವು.

ಇದರಿಂದಾಗಿ ಬ್ರಿಟೀಷ್‌‌ ಪಡೆಗಳು ದೊಸ್ತ್‌ ಮೊಹಮ್ಮದ್ದನ ಒಬ್ಬ ಮಗನ ಮುಂದಾಳತ್ವದಲ್ಲಿರುವ ಪಡೆಯ ಮೇಲೆ ನಿರ್ಣಾಯಕ ಜಯವನ್ನು ಸಾಧಿಸಿದ್ದವು. ೧೮೩೯ರಲ್ಲಿ ದೊಸ್ತ್ ಮೊಹಮ್ಮದ್ದನು ಅವನ ಅತ್ಯಂತ ಆತ್ಮೀಯರೊಡಗೂಡಿ ಮೊದಲು ಬಾಮಿಯಾನ್‌ಗೂ ನಂತರ ಬುಕಾರಾಗೂ ಓಡಿಹೋದನು. ಹೆಚ್ಚು ಕಡಿಮೆ ೩೦ವರ್ಷದ ನಂತರ ಶುಜಾ ಮತ್ತೆ ಕಾಬುಲ್‌ನ ದೊರೆಯಾಗಿ ಸಿಂಹಾಸನವನ್ನೇರಿದನು.

ಕಲತ್‌

[ಬದಲಾಯಿಸಿ]

೧೮೩೯ ನವೆಂಬರ್‌ ೧೩ರಂದು ಭಾರತಕ್ಕೆ ಮರಳಿ ಬರುತ್ತಿರುವ ಸಂದರ್ಭದಲ್ಲಿ, ಬೋಲಾನ್‌ ಪಾಸ್‌ಗೆ ತೆರಳುವ ಸಂದಭದಲ್ಲಿ ಬಲೂಚಿ ಬುಡಕಟ್ಟು ಜನಾಂಗದವರನ್ನು ಸೆರೆಹಿಡಿದ ಬ್ರಿಟಿಷರ ವಿರುದ್ಧ ಹಗೆ ತೀರಿಸಿಕೊಳ್ಳುವ ಸಲುವಾಗಿ ಕಲತ್‌ನಲ್ಲಿರುವ ಬಲೂಚಿ ಕೊಟೆಯಲ್ಲಿರುವವರು ಬಾಂಬೆ ಭಾಗದಲ್ಲಿ ಆಕ್ರಮಣ ನಡೆಸಿದರು.

ಆಕ್ರಮಿಸುವಿಕೆ

[ಬದಲಾಯಿಸಿ]

ಹೆಚ್ಚಿನ ಸಂಖ್ಯೆಯ ಬ್ರಿಟೀಷ್‌ ಪಡೆಗಳು ಭಾರತಕ್ಕೆ ವಾಪಸಾದವು(ಕೇವಲ ೮೦೦೦ ಸೈನಿಕರು ಅಪಘಾನಿಸ್ತಾನದಲ್ಲಿ ಉಳಿದುಕೊಂಡರು), ಆದರೆ ಬಹುಬೇಗನೆ ಶುಜಾನ ಆಳ್ವಿಕೆಯು ಬ್ರಿಟಿಷರ ಸೈನಿಕ ತುಕಡಿಯ ಸಹಕಾರದೊಂದಿಗೆ ನಡೆಯುತ್ತಿದೆ ಎಂಬುದು ಸಾಬಿತಾಯತು. ಅಪಘಾನ್‌ನ ನಿವಾಸಿಗಳು ಷಾ ಶುಜಾನ ಆಳ್ವಿಕೆಯಲ್ಲಿ ಬ್ರಿಟಿಷರ ಹಸ್ತಕ್ಷೇಪದ ಬಗ್ಗೆ ಅಸಮದಾನಗೊಂಡಿದ್ದರು. ಅಪಘಾನಿಸ್ರಾನದಲ್ಲಿನ ವಾಸವು ಮುಂದುವರಿಯುವುದರಿಂದ ಬ್ರಿಟೀಷ್‌‌ ಸೈನಿಕರಿಗೆ ತಮ್ಮ ಸಂಸಾರಗಳನ್ನು ಅಲ್ಲಿಗೆ ಕರೆಸಿಕೊಳ್ಳಬಹುದು ಎಂದು ವಿಲಿಯಂ ಹೇ ಮೆಕ್‌ನಾಟೆನ್‌ ಹೇಳಿಕೆ ನೀಡಿದರು. ಇದರಿಂದ ಅಪಘಾನಿಗಳಿಗೆ ಮತ್ತಷ್ಟು ಬೇಸರವಾಗಲು ಕಾರಣವಾಯಿತು. ಬ್ರಿಟಿಷರ ಉಳಿಯುವಿಕೆಯು ಅಪಘಾನಿನಲ್ಲಿ ಖಾಯಂ ಆದ ನಂತರ ದೊಸ್ತ್‌ ಮೆಹಮೂದನು ಅಪಘಾನಿನಲ್ಲಿರುವ ಬ್ರಿಟಿಷರ ವಸಾಗತುಗಳ ಮೇಲೆ ದಾಳಿಮಾಡಿ ಸೋತನು ಮತ್ತು ೧೮೪೦ರಲ್ಲಿ ಭಾರತಕ್ಕೆ ಗಡಿಪಾರು ಮಾಡಲ್ಪಟ್ಟನು.

ಇದೇ ಸಂದರ್ಭದಲ್ಲಿ,ಬ್ರಿಟೀಷ್‌‌ ಪಡೆಯು ಬಾಲಾ ಹಿಸ್ಸಾರ್‌ದಲ್ಲಿರುವ ತಮ್ಮ ವಸಾಹತನ್ನು ಖಾಲಿಮಾಡಿ ಕಾಬುಲ್‌ನ ಉತ್ತರ ಪೂರ್ವದಲ್ಲಿ ತಮ್ಮ ಸೈನಿಕ ನೆಲೆಯನ್ನು ವರ್ಗಾಯಿಸಿದರು. ಆಯ್ಕೆ ಮಾಡಿಕೊಂಡ ಸ್ಥಳವು ಸುತ್ತಲೂ ಪರ್ವತಗಳಿಂದ ಆವರಿಸ್ಪಟ್ಟು ಕಡಿಮೆ ರಕ್ಷಣಾತ್ಮಕವಾಗಿತ್ತು. ರಕ್ಷಿಸಿಕೊಳ್ಳಬೇಕಾದ ಸ್ಥಳವು ಇದ್ದ ಸೈನಿಕ ತುಕಡಿಗಿಂತ ಅಂದರೆ ಸುಮಾರು ಎರಡು ಮೈಲಿ ದೊಡ್ಡ ಕ್ಷೇತ್ರದಲ್ಲಿತ್ತು. ಜೊತೆಗೆ, ವಸ್ತುಗಳನ್ನು ಶೇಕರಿಸಿಡುವ ಮತ್ತು ಸರಬರಾಜು ಮಾಡುವ ವ್ಯವಸ್ಥೆಯು ಮುಖ್ಯ ಸೈನಿಕ ಶಿಬಿರದಿಂದ ೩೦೦ ಯಾರ್ಡ ದೂರದಲ್ಲಿತ್ತು.[]

೧೮೪೧ ಅಕ್ಟೋಬರ್‌ ವೇಳೆಗೆ ತೊಂದರೆಗೊಳಗಾದ ಬುಡಕಟ್ಟು ಜನಾಂಗದವರು ಬಾಮಿಯಾನ್‌ನಲ್ಲಿ ದೋಸ್ತ್‌ ಮೊಹಮ್ಮದ್ದನ ಮಗನಾದ ಮೊಹಮ್ಮದ್‌ ಅಕ್ಬರ್ ಖಾನ್‌ ಇವನಿಗೆ ಸಹಾಯ ಮಾಡತೊಡಗಿದವು. ೧೮೪೧ ನವೆಂಬರ್‌ನಲ್ಲಿ ಹಿರಿಯ ಬ್ರಿಟೀಷ್‌‌ ಅಧಿಕಾರಿ ಸರ್‌ ಅಲೆಕ್ಸಾಂಡರ್‌ ಶೆಕುಂದಾರ್ ಬರ್ನ್ಸ್ ಮತ್ತು ಅವನ ಸಹಚರರು ಕಾಬುಲ್‌ನಲ್ಲಿ ವಿರೋಧಿಗಳ ಗುಂಪಿನಿಂದ ಕೊಲ್ಲಲ್ಪಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಬ್ರಿಟೀಷ್‌‌ ಪಡೆಗಳು ಯಾವುದೇ ವಿಧವಾದ ಕಾರ್ಯಾಚರಣೆಯನ್ನೂ ಕೈಗೊಳ್ಳಲಿಲ್ಲ. ವಿರೋಧಿಗಳಿಗೆ ಇದರಿಂದಾಗಿ ಮುಂದಿನ ದಂಗೆಗೆ ಸ್ಪೂರ್ತಿ ದೊರೆತಂತಾಯಿತು. ನವೆಂಬರ್‌ ೯ರಂದು ಕಾಬುಲ್‌ಗೆ ಅಪಘಾನಿಗಳು ಸರಬರಾಜನ್ನು ನಿಲ್ಲಿಸಿದ್ದರಿಂದಾಗಿ ಚಂಡಮಾರುತ ಬೀಸಿದಂತೆ ಸಮಸ್ಯೆಗೆ ಒಳಗಾಗತೊಡಗಿದರು. ಮುಂದಿನ ವಾರಗಳಲ್ಲಿ ಬ್ರಿಟೀಷ್‌‌ ಅಧಿಕಾರಿಗಳು ಅಕ್ಬರ್‌ ಖಾನ್‌ನೊಂದಿಗೆ ಬಾಂದವ್ಯ ಬೆಳೆಸಲು ಪ್ರಯತ್ನಿಸಿದರು. ಮೆಕ್‌ನಾಟೆನ್‌‌ ಗುಪ್ತವಾಗಿ ಒಂದು ವೇಳೆ ಬ್ರಿಟಿಷರಿಗೆ ಅಪಘಾನ್‌ನಲ್ಲಿ ಉಳಿಯಗೊಟ್ಟರೆ ಅಕ್ಬರ್‌ ಖಾನ್‌ನನ್ನು ಅಫಘಾನಿಸ್ತಾನದ ಮುಖ್ಯಾಧಿಕಾರಿಯಾಗಿ ಮಾಡುವುದಾಗಿ ಆಮಿಷವನ್ನು ಒಡ್ಡಿದನು, ಮತ್ತು ಅಪಾರವಾದ ಹಣವನ್ನೂ ನೀಡುವುದಾಗಿ ವರದಿ ಕಳುಹಿಸಿದನು. ಡಿಸೆಂಬರ್‌ ೨೩ರಂದು ಅಕ್ಬರ್‌ ಖಾನ್‌ ಮತ್ತು ಮೆಕ್‌ನಾಟೆನ್‌‌ರ ನಡುವಿನ ನೇರ ಸಂಧಾನ ಮಾತುಕತೆಗಾಗಿ ಭೇಟಿಯು ನಡೆಯಿತು. ಮೆಕ್‌ನಾಟೆನ್‌ ಮತ್ತು ಜೊತೆಗಿದ್ದ ಮೂವರು ಅಧಿಕಾರಿಗಳು ಅಕ್ಬರ್‌ಖಾನ್‌ನಿಂದ ಸೆರೆಹಿಡಿದು ಕೊಲ್ಲಲ್ಪಟ್ಟರು. ಮತ್ತು ಮೆಕ್‌ನಾಟೆನ್‌‌ರ ಪಾರ್ಥಿವ ಶರೀರವನ್ನು ಮುಖ್ಯ ಶಹರದಲ್ಲಿ ಎಳೆದೊಯ್ದು ತೋರಿಸಲಾಯಿತು. ಎಲ್ಪಿಸ್ಟೊನ್‌ ಇವರು ಆಗಲೇ ತನ್ನ ಸೈನಿಕ ತುಕಡಿಯ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿದ್ದರು ಮತ್ತು ಅವರ ನಾಯಕತ್ವವು ತನ್ನ ಘನತೆಯನ್ನು ಕಳೆದುಕೊಂಡಿತ್ತು.

ಎಲ್ಫಿನ್‌ಸ್ಟೋನ್‌ ಸೇನೆಯ ನಾಶ

[ಬದಲಾಯಿಸಿ]

ದಂಡು ಪ್ರದೇಶದಲ್ಲಿ ಸೇನಾ ಸಾಮರ್ಥ್ಯ ದುರ್ಬಲಗೊಂಡಿರುವುದನ್ನು ಗಮನಿಸಿದ ಸೇನೆಯು ಇದನ್ನು ಮತ್ತಷ್ಟು ದುರ್ಬಲಗೊಳಿಸಲು ನಿರ್ಧಾರಿಸಿತು. ಎಲ್ಫಿನ್‌ಸ್ಟೋನ್‌‌ನ ದಂಡು ಪ್ರದೇಶದಲ್ಲಿದ್ದ ಸೇನಾ ಪಡೆಯ ಮೇಲೆ ದಾಳಿ ನಡೆಸಬೇಕೆಂಬ ನಿರ್ಧಾರ ತಲುಪುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿದ್ದ ಬ್ರಿಟೀಷ್‌ ಸೇನೆಗೆ ರಕ್ಷಣೆ ಒದಗಿಸಲು ನಿರ್ಧರಿಸಲಾಯಿತು. ಐದು ದಿನಗಳಲ್ಲಿ ಸೇನಾ ಹಿಂತೆಗೆತ ಆರಂಭವಾಯಿತು. ಬ್ರಿಟೀಷ್‌ ಶಿಬಿರದಲ್ಲಿ ೪,೫೦೦ಕ್ಕೂ ಹೆಚ್ಚು ಸೇನಾ ಪಡೆ ಮತ್ತು ೧೨ ಸಾವಿರಕ್ಕೂ ಹೆಚ್ಚು ನಾಗರಿಕ ಶಿಬಿರವಿತ್ತು. ೪೪ನೆ ರಂಜಿಮೆಂಟಿನ ಕಾಲ್ದಳದ ಬ್ರಿಟೀಷ್‌ ಬೆಟಲಿಯನ್ ಮತ್ತು ಭಾರತೀಯ ತಂಡ ಇತ್ತು. ಸುರಕ್ಷಿತವಾಗಿ ಪ್ರಯಾಣವನ್ನು ಬೆಳೆಸುತ್ತಿದ್ದರೂ

ಬ್ರಿಟೀಷ್‌ ಸೈನ ಹಿಮಾಚ್ಛಾಧಿತ ಪ್ರದೇಶದಲ್ಲಿ ಘಿಲ್ಝಾಯಿ ಸೈನಿಕರ ದಾಳಿಯನ್ನು ಎದುರಿಸಬೇಕಾಯಿತು. ಅಲ್ಲಿಂದ ತಪ್ಪಿಸಿಕೊಂಡರೂ, ಭಾರೀ ಪ್ರತಾಪ ತೊಂದರೆಯನ್ನು ಎದುರಿಸಿದ ನಂತರ ಕಾಬೂಲ್ ಮತ್ತು ಗ್ಯಾಂಡ್‌ಮಾಕ್‌ನ ನಡುವೆಯಿರುವ ಕಾಬೂಲ್ ನದಿಯನ್ನು ದಾಟಿದರು. ಆದರೆ, ಜಲಾಲಾಬಾದ್ ತಲುಪುವ ಮೊದಲೇ ಗ್ಯಾಂಡ್‌ಮಾಕ್‌ನಲ್ಲಿ 30 miles (48 km) ಸೈನಿಕರ ಹತ್ಯಾಕಾಂಡ ನಡೆಯಿತು. ಒಂದೇಡೆ ಸಾಮೂಹಿಕ ಹತ್ಯಾಕಾಂಡ, ಇನ್ನೊಂದಡೆ ಸುಮಾರು ಎರಡು ಅಡಿಯಷ್ಟು ದಪ್ಪದ ಹೆಪ್ಪುಗಟ್ಟಿದ ಹಿಮದಿಂದಾಗಿ ಕಾಲ್ದಳದ ಸಂಖ್ಯೆ ಕೇವಲ ೪೦ಕ್ಕೆ ತಲುಪಿತು. ನೆಲವು ಮಂಜಿನಿಂದ ಆವೃತ್ತವಾಗಿದ್ದರೆ, ಸೈನಿಕರಿಗೆ ಮಲಗಲು ಒಂದು ಬೆಚ್ಚಗಿನ ನೆಲ ಕೂಡ ಇರಲಿಲ್ಲ. ವಾರದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಸಿಗುತ್ತಿದ್ದ ಆಹಾರ ಕೂಡ ಸ್ವಲ್ಪ ಮಾತ್ರ. ಸೈನಿಕರಲ್ಲಿ ಒಂದು ಡಜನಿನಷ್ಟು ಮದ್ದು ತುಂಬಿಸಿದ್ದ ಕೋವಿಯಿದ್ದರೆ, ಅಧಿಕಾರಿಗಳ ಬಲಿ ಪಿಸ್ತೂಲ್ ಮತ್ತು ಕೆಲವು ಸಂಖ್ಯೆ ಖಡ್ಗ ಇತ್ತು. ಕಾಲ್ದಳದ ದಳಪತಿ ಜೇಮ್ಸ್ ಸೌಟರ್, ಸೆರ್ಜೆಂಟ್ ಫೈರ್, ಬಂಧಿಯಾದ ಏಳು ಮಂದಿ ಸೈನಿಕರು ಹೊರತು ಪಡಿಸಿದರೆ ೪೪ ಮಂದಿಯಲ್ಲಿ ಎಲ್ಲರೂ ಸಾವನ್ನಪ್ಪಿದರು.[] ಬ್ರಿಟನ್‌ನಿಂದ ಜಲಾಲಾಬಾದ್‌ಗೆ ತಲುಪಿದವ ಡಾ.ವಿಲ್ಸನ್ ಬ್ರೈಡನ್ ಮಾತ್ರ.

ಪ್ರತಿಕಾರಗಳು

[ಬದಲಾಯಿಸಿ]

ರಕ್ಷಣಾ ಪಡೆಗಳ ಮೇಲೆ ದಾಳಿ ನಡೆದಾಗ ಕಾಬೂಲ್‌ನಲ್ಲಿ ಅಫ್ಘಾನ್ ಸೇನಾ ಪಡೆಗಳು ಅಘಾನಿಸ್ತಾನದಲ್ಲಿದ್ದ ಬ್ರಿಟೀಷ್‌ ತುಕುಡಿಗಳ ಮೇಲೆ ಮುತ್ತಿಗೆ ಹಾಕಿದವು. ಕಂದಹಾರ್ (ಇಲ್ಲಿ ಬ್ಟಿಟಿಷರ ದೊಡ್ಡ ಸೇನಾ ತುಕುಡಿಯನ್ನು ನಿಯೋಜಿಸಲಾಗಿತ್ತು.), ಜಲಾಬಾದ್ (ಇಲ್ಲಿ ೧೮೪೧ರ ಅಕ್ಟೋಬರ್‌ನ ಪ್ರಥಮ ಹಂತದ ಸೇನಾ ಹಿಂತೆಗೆತದ ಹಿನ್ನೆಲೆಯಲ್ಲಿ ಕಾಬೂಲ್‌ನಿಂದ ಇಲ್ಲಿಗೆ ಕಳುಹಿಸಲಾಗಿತ್ತು.) ಮತ್ತು ಘಝ್ನಿಯಲ್ಲಿ ಬ್ಟಿಟಿಷ್ ತುಕುಡಿಗಳಿದ್ದವು. ಘಝ್ನಿ ಪ್ರದೇಶ ಲಗ್ಗೆ ಹಾಕಲ್ಪಟ್ಟಿತು. ಇತರ ಪ್ರದೇಶಗಳಲ್ಲಿ ೧೮೪೨ರಲ್ಲಿ ಭಾರತದ ವಿಮೋಚನಾ ಪಡೆಗಳು ತಲುಪುವ ವರೆಗೆ ಇಲ್ಲಿನ ರಕ್ಷಣ ಪಡೆಗಳು ಕಾರ್ಯಚರಣೆಯಲ್ಲಿ ತೊಡಗಿದವು. ಅಕ್ಬರ್ ಖಾನ್‌ನನ್ನು ಜಲಲಾಬಾದ್‌ನಲ್ಲಿ ಸೋಲಿಸಲಾಯಿತು. ಕಾಬೂಲನ್ನು ಮರುವಶ ಪಡಿಸಿಕೊಳ್ಳಲು ಮತ್ತು ಈ ಪ್ರದೇಶದ ಮೇಲೆ ಬ್ರಿಟೀಷ್‌ ಪ್ರಾಬಲ್ಯವನ್ನು ಮರುಸ್ಥಾಪಿಸಲು ಯೋಜನೆಯನ್ನು ರೂಪಿಸಲಾಯಿತು.

ಬ್ರಿಟನಿನ ಸರಕಾರ ಬದಲಾವಣೆಯಾದ ಕಾರಣ ಗೌವರ್ನರ್ ಜನರಲ್ ಲಾರ್ಡ್ ಔಕ್ಲೆಂಡ್‌ಗೆ ಹಿನ್ನಡೆಯಾಯಿತು. ಜೊತೆಗೆ ಆತನ ಹುದ್ದೆಗೆ ಲಾರ್ಡ್ ಎಲ್ಲೆನ್‌ಬೋರೋ ನಿಯೋಜಿಸಲಾಯಿತು. ಎಲ್ಲೆನ್ಬೊರೌಹ್‌ನ ಸೂಚನೆಯಂತೆ ಯುದ್ಧಕ್ಕೆ ವಿರಾಮ ನೀಡಲಾಯಿತು. ಇದರ ಜೊತೆಗೆ ಆತನ ಆದೇಶದಂತೆ ಹಿಂತೆಗೆತ ಕಾಬೂಲ್‌ನಲ್ಲಿ ಬಂಧನಕ್ಕೆ ಒಳಗಾದ ಯುದ್ಧ ಕೈದಿಗಳ ಸುರಕ್ಷಿತ ಬಿಡುಗಡೆ ಮತ್ತು ಪ್ರತಿಕಾರಿಗಳಿಗೆ ಶಿಕ್ಷೆ ನೀಡಿದ ನಂತರ ತುಕುಡಿಗಳು ಕಂದಹಾರ್ ಮತ್ತು ಜಲಲಾಬಾದ್‌ನ್ನು ತೊರೆಯುವಂತೆ ಆತ ಸೂಚನೆ ನೀಡಿದ.

೧೮೪೨ರಲ್ಲಿ ಜನರಲ್ ನೋಟ್ಟ್ ಕಂದಹಾರ್‌ನಿಂದ ಮುಂದುವರಿದು ಘಝ್ನಿಗೆ ಮುತ್ತಿಗೆ ಹಾಕಿದ ಅಲ್ಲಿನ ಕೋಟೆ-ಕೊತ್ತಲೆಗಳನ್ನು ಉರುಳಿಸಿದ. ಈ ಮಧ್ಯೆ ಜನರಲ್ ಪೊಲೆಕ್ ಜಲಾಲಾಬಾದ್‌ನ ಖೈಬರ್ ಪಾಸ್ ಮೂಲಕ ಆಗಮಿಸಿ ಅಕ್ಬರ್‌ಖಾನ್‌ನನ್ನು ಸೋಲಿಸಿದರು. ಬ್ರಿಟೀಷ್‌ ಜಂಟಿ ಪಡೆಗಳು ಸೆಪ್ಟಂಬರ್‌ನಲ್ಲಿ ಕಾಬೂಲನ್ನು ವಶಕ್ಕೆ ತೆಗೆದುಕೊಂಡವು. ಒಂದು ತಿಂಗಳ ನಂತರ ಕೈದಿಗಳನ್ನು ಕಾಬೂಲ್ ನಗರದ ಪ್ರಮುಖ ಮಾರುಕಟ್ಟೆಯನ್ನು ನಾಶ ಮಾಡಲಾಯಿತು. ನಂತರ ಖೈಬರ್‌ಪಾಸ್ ಮೂಲಕ ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಲಾಯಿತು. ದೊಸ್ಟ್ ಮುಹಮ್ಮದ್‌ನನ್ನು ಬಿಡುಗಡೆಗೊಳಿಸಲಾಯಿತು. ತದನಂತರ ಆತ ಕಬುಲ್‌ನಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದ. ೧೯೬೩ರ ಜೂನ್ ೯ರಂದು ಆತ ಮರಣವನ್ನಪ್ಪಿದ.

ಪರಂಪರೆ

[ಬದಲಾಯಿಸಿ]

ಪ್ರಥಮ ಆಂಗ್ಲೋ-ಅಫ್ಘಾನ್ ಯುದ್ಧದ ಮೂರು ದಶಕದ ನಂತರ ರಶ್ಯನ್ನರು ನಿಧಾನವಾಗಿ ಅಫ್ಘಾನಿಸ್ತಾನದ ದಕ್ಷಿಣ ಭಾಗದ ಕಡೆಗೆ ಗಮನ ನೀಡತೊಡಗಿದರು. ೧೮೪೨ರಲ್ಲಿ ರಶ್ಯನ್ನರು ಅರಲ್ ಸಮುದ್ರದ ಮೂಲಕ ಅಘಾನಿಸ್ತಾನದ ಗಡಿಯನ್ನು ಅತಿಕ್ರಮಿಸಿದರು. ಆದರೆ ಐದು ವರ್ಷಗಳ ನಂತರ ಝಾರ್ ಸೇನಾ ಹೊರ ಠಾಣೆಯನ್ನು ಅಮು ದರ್ಯಾದ ಕೆಳಗಿನ ಪ್ರಾಂತಕ್ಕೆ ವರ್ಗಾವಣೆ ಮಾಡಲಾಯಿತು. ೧೮೬೫ ರಲ್ಲಿ ತಾಷ್ಕೆಂಟ್ ಮತ್ತು ಮೂರು ವರ್ಷಗಳ ನಂತರ ಸಮರ್‌ಖಂಡ್ ಎರಡನ್ನೂ ಸೇರಿಸಿಕೊಳ್ಳಲಾಯಿತು. ಮಂಗ್ಹತ್ ಸಾಮ್ರಾಜ್ಯದ ಅಮೀರ್ ಅಲಿಮ್ ಖಾನ್ ಜೊತೆ ೧೮೭೩ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡರು. ಅಲ್ಲಿನ ಆಡಳಿತಗಾರ ಬುಖಾರನಿಗೆ ಸ್ವಾತಂತ್ರ್ಯವನ್ನು ನೀಡಿದರೂ, ನಿಧಾನವಾಗಿ ಆತನ ಹಿಡಿತವನ್ನು ಕಸಿಯಲು ಯತ್ನಿಸಿದರು. ನಂತರ ಅಮು ದರ್ಯಾದ ಉತ್ತರ ಭಾಗದಲ್ಲಿ ರಷ್ಯನ್ನರು ಹಿಡಿತ ಸಾಧಿಸ ತೊಡಗಿದರು.

೧೮೭೮ರಲ್ಲಿ ಬ್ರಿಟೀಷ್‌ರು ಮತ್ತೊಮ್ಮೆ ಅಕ್ರಮಣ ಮಾಡಿದಾಗ ಎರಡನೆ ಆಂಗ್ಲೋ-ಅಫ್ಘಾನ್ ಯುದ್ಧ ಆರಂಭವಾಯಿತು.

ಯುದ್ಧದಲ್ಲಿ ಬದುಕುಳಿದ ಏಕೈಕ ಸೈನಿಕ, ಆತ ಜಲಾಲಾಬಾದ್‌ಗೆ ಹೋಗುತ್ತಿದ್ದಾಗಿನ ಸಮಯದ, ಕುರಿತ ವರ್ಣ ಚಿತ್ರ ಲೇಡಿ ಬಟ್ಲರ್” ಡಾ.ವಿಲಿಯಮ್ ಬ್ರೈಡನ್‌ರರಾಗಿದ್ದು, ಪ್ರಸಿದ್ಧವಾಗಿದೆ. ಈ ಸೈನಿಕ ಅಫ್ಘಾನಿಸ್ತಾನದಲ್ಲಿ ವಿದೇಶಿ ಸೇನೆಯೊಂದಿಗೆ ಯುದ್ಧ ಮಾಡುವುದಕ್ಕೆ ಸಹಾಯ ಮಾಡಿರುವ ಘಟನೆ ಸಾಮ್ರಾಜ್ಯದ ಐತಿಹಾಸಿಕ ಕೃತಿಯಾಗಿ ರೂಪುಗೊಂಡಿತು.

ನೇನೆಯ ಧರ್ಮ ಬೋಧಕ ರೆವರೆಂಡ್ ಜಿ.ಎಚ್.ಗ್ಲೈಗ್ ಮೊದಲ ಆಂಗ್ಲೋ-ಅಘಾನ್ ಯುದ್ಧದ ಅವಘಡದ ಕುರಿತು ಚರಿತ್ರೆಯನ್ನು ಬರೆಯುತ್ತಾನೆ. ಇಲ್ಲಿ ಆತ ಈ ರೀತಿ ಬರೆಯುತ್ತಾನೆ. "ಯಾವುದೇ ಉದ್ದೇಶವಿಲ್ಲದೆ ಆಕ್ರೋಶದೊಂದಿಗೆ, ಆವೇಳೆಯಲ್ಲಿ ಯುದ್ಧ ಆರಂಭವಾಯಿತು. ಯುದ್ಧದಿಂದಾಗಿ ಅನೇಕ ಸಾವು ನೋವು, ಅನಾಹುತಗಳನ್ನು ಎದುರಿಸಬೇಕಾಯಿತು. ಆದರೆ ಯುದ್ಧಕ್ಕೆ ನಿರ್ದೇಶನ ನೀಡಿದ ಸರಕಾರಕ್ಕಾಗಲಿ ಅಥವಾ ಯುದ್ಧವನ್ನು ಮುನ್ನೆಡೆಸಿದ ಸೈನಕ್ಕಾಗಲಿ ಯಾವುದೇ ಹೆಚ್ಚು ಲಾಭವನ್ನು ಇದು ನೀಡಿಲ್ಲ. ಯುದ್ಧದಿಂದಾಗಿ ಮಿಲಿಟರಿಗಾಗಲಿ ಅಥವಾ ರಾಜಕೀಯವಾಗಲಿ ಏನು ಪ್ರಯೋಜನವಾಗಲಿಲ್ಲ. ಅಂತಿಮವಾಗಿ, ನಿಶಸ್ತ್ರ ಸೈನ್ಯವನ್ನು ಸೋಲಿಸಿತು ಎಂಬ ಭಾವನೆ ದೇಶದ ಜನರಲ್ಲಿ ಮೂಡಿಸಿತು”. []

ಯುದ್ಧ ಗೌರವ

[ಬದಲಾಯಿಸಿ]

೧೮೩೯ರ ನವೆಂಬರ್ ೧೯ರ ಗವರ್ನರ್ ಜನರಲ್ ಗಜೆಟ್ ಪ್ರಕಾರ, ಬೊಲನ್ ಪಾಸ್ ಮುನ್ನಡೆಸಿದ ಈಸ್ಟ್ ಇಂಡಿಯಾ ಕಂಪೆನಿಯ ಎಲ್ಲ ಆಧ್ಯಕ್ಷೀಯ ಸೇನೆಗಳ ತಂಡಗಳಿಗೆ ಯುದ್ಧ ಗೌರವ ಅಪ್ಘಾನಿಸ್ತಾನ ೧೮೩೯” ನ್ನು ಪ್ರದಾನಿಸಲಾಯಿತು. ೧೯೧೬ರ ಗಜೆಟಿನ ಪ್ರಕಾರ "ಅಫಘಾನಿಸ್ತಾನ್‌" ಅಕ್ಷರವನ್ನು ’Affghanistan’ ಎಂದು ಬದಲಾವಣೆ ಮಾಡಲಾಯಿತು. ದಿನಾಂಕವನ್ನು ೧೯೧೪ರಲ್ಲಿ ಸೇರಿಸಲಾಯಿತು. ಈ ಯುದ್ಧಕ್ಕೆ ಸಂಬಂಧಿಸಿದಂತೆ ನೀಡಿದ ಗೌರವಗಳನ್ನು ಅಸಂಗತ ಎಂದು ಪರಿಗಣಿಸಲಾಗಿದೆ. ತಂಡಗಳಿಗೆ ಪ್ರದಾನಿಸಿದ ಯುದ್ಧ ಗೌರವಗಳು ಇವು:

  • ೪ನೇ ಬಂಗಾಳ ಅನಿಮಿತ ಅಶ್ವದಳ -೧ ಆಶ್ವ
  • ೫ನೇ ಮದ್ರಾಸು ಕಾಲ್ದಳ
  • ಪೂನಾದ ಸಹಕಾರಿ ಆಶ್ವ- ಪೂನಾ ಆಶ್ವ
  • ಬಾಂಬೆ ಸುರಂಗ ಶಿಲ್ಪದ ಸೈನಿಕರು ಮತ್ತು ಗಣಿದಾರರು- ಬಾಂಬೆ ಎಂಜಿನಿಯರ್ ಸಮೂಹ
  • ೩೧ ನೇಬಂಗಾಳ ಕಾಲ್ದಳ
  • ೪೩ನೇ ಬಂಗಾಳ ಕಾಲ್ದಳ
  • ೧೯ನೇ ಬಾಂಬೆ ಕಾಲ್ದಳ
  • ನೇ ಬಾಂಬೆ ಅಶ್ವದಳ-೧೩ ಅಶ್ವಾರೋಹಿ‌ಗಳು (ಪಾಕಿಸ್ತಾನ)
  • ೨ನೇ ಮತ್ತು ೩ನೇ ಬಂಗಾಳ ಅಶ್ವದಳ- ೧೮೫೭ರ ಬಂಡಾಯಗಾರರು.
  • ೨ನೇ, ೩ನೇ ಬಂಗಾಳದ ಸುರಂಗ ಶಿಲ್ಪದ ಸೈನಿಕರು ಮತ್ತು ಗಣಿದಾರರು- ೧೮೫೭ರ ಬಂಡಾಯಗಾರರು.
  • ೧೬ನೇ, ೩೫ನೇ, ೩೭ನೇ ೪೮ನೇ ಬಂಗಾಳ ಕಾಲ್ದಳ-೧೮೫೭ರಲ್ಲಿ ಬಂಡಾಯವೆದ್ದವರು.
  • ೪೨ನೇ ಬಂಗಾಳ ಕಾಲ್ದಳ- ೧೯೯೨ರಲ್ಲಿ ವಿಸರ್ಜಿಸಲಾಯಿತು.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಬ್ರಿಟೀಷ್‌ ಮಿಲಿಟರಿ ಇತಿಹಾಸ
  • ಚಪ್ಸಲಿ ಎಸ್ಟೆಟ್
  • ಅಫ್ಘಾನಿಸ್ತಾನದಲ್ಲಿ ಯೂರೋಪಿಯನ್ನರ ಪ್ರಭಾವ
  • ಅಫ್ಘಾನಿಸ್ತಾನದ ದಾಳಿಗಳು
  • ಎರಡನೆ ಆಂಗ್ಲೋ-ಅಫ್ಘಾನ್ ಯುದ್ಧ
  • ಮೂರನೆ ಅಂಗ್ಲೋ-ಅಫ್ಘಾನ್ ಯುದ್ಧ

ಕಥೆ ಕಾದಂಬರಿಗಳಲ್ಲಿ ವರ್ಣನೆ

[ಬದಲಾಯಿಸಿ]

ಪ್ರಥಮ ಆಂಗ್ಲೋ-ಅಫ್ಘಾನ್ ಯುದ್ಧ ಕುರಿತ ಐತಿಹಾಸಿಕ ಕಥನಕ ಜಾರ್ಜ್ ಮ್ಯಾಕ್ ಡೊನಲ್ಡ್ ಫ್ರಸೆರ್‌ನ ಪ್ಲಾ‌ಷ್‌ಮ್ಯಾನ್. ಇದು ಫ್ರಸೆರ್ ಪ್ರಥಮ ಕಾದಂಬರಿ. ಡಾ.ಬ್ರೈಡನ್‌ರ ಮಾತುಗಳಲ್ಲಿ ಡಾ.ಜಾನ್ ವ್ಯಾಟ್ಸನ್‌ನ ಶೆರ್ಲಾಕ್ ಹೋಮ್ಸ್ ಮೇಲೆ ಪ್ರಭಾವ ಬೀರಿರಬಹುದು. ಹಾಗೆಯೇ ಎರಡನೆ ಮಹಾಯುದ್ಧದಲ್ಲಿ ಆತನ ಗಾಯವನ್ನು ಪತ್ತೆ ಹಚ್ಚಲಾಯಿತು. ಎಮ್ಮ ಡ್ರುಮ್ಮಂಡ್‌ರ ’ಬಿಯಾಂಡ್ ಅಲ್ ಪ್ರಂಟಿಯರ್‍ಸ್’ (೧೯೮೩) ಕಾದಂಬರಿಗೂ ಈ ಘಟನೆಗಳೇ ಮೂಲ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಫಾಲರ್‌, ಕೋರಿನ್‌, (೨೦೦೭) ಚೇಸಿಂಗ್ ಟೇಲ್ಸ್‌: ಪ್ರವಾಸ ಬರವಣಿಗೆ, ಪತ್ರಿಕೋದ್ಯಮ ಮತ್ತು ಅಫ್ಘಾನಿಸ್ಥಾನದ ಕುರಿತು ಬ್ರಿಟೀಷರ ಚಿಂತನೆಯ ಇತಿಹಾಸ , ರೊಡೊಪಿ: ಆ‍ಯ್‌ಮ್‌ಸ್ಟರ್‌ಡ್ಯಾಂ ಮತ್ತು ನ್ಯೂಯಾರ್ಕ್.
  • ಗ್ರೀನ್‌ವುಡ್, ಜೋಸೆಫ್, (೧೮೪೪) ನರೇಟಿವ್ ಆಫ್ ದ ಲೇಟ್ ವಿಕ್ಟೋರಿಯನ್ ಕ್ಯಾಂಪೇನ್ ಇನ್ ಅಫಘಾನಿಸ್ತಾನ್‌, ಅಂಡರ್ ಜನರಲ್ ಬುಲ್ಲೋಕ್: ವಿಥ್ ರಿಕಲೆಕ್ಷನ್ಸ್ ಫ್ ಸೆವೆನ್ ಇಯರ್ಸ್ ಸರ್ವೀಸ್ ಇನ್ ಇಂಡಿಯಾ . ಲಂಡನ್, ಎಚ್. ಕಾಲ್‌ಬರ್ನ್
  • ಹಾಪ್‌ಕಿರ್ಕ್, ಪೀಟರ್, (೧೯೯೨) ದ ಗ್ರೇಟ್ ಗೇಮ್‌ , ಕೊಡನ್ಶಾ ಗ್ಲೋಬ್, ಐಎಸ್‌ಬಿಎನ್‌ ೧-೫೬೮೩೬-೦೨೨-೩
  • ಕೇಯೆ, ಸರ್ ಜಾನ್, (೧೮೬೦) ಹಿಸ್ಟರಿ ಆಫ್ ದ ಫಸ್ಟ್ ಅಪ್ಘಾನ್ ವಾರ್ , ಲಂಡನ್.
  • ಮ್ಯಾಕ್ರರಿ, ಪ್ಯಾಟ್ರಿಕ್, (೨೦೦೨) ರಿಟ್ರೀಟ್ ಫ್ರಂ ಕಾಬೂಲ್: ದ ಕೆಟಾಸ್ಟ್ರೋಫಿಕ್ ಬ್ರಿಟೀಷ್ ಡಿಫೀಟ್ ಇನ್ ಅಫಘಾನಿಸ್ತಾನ್‌, ೧೮೪೨ . ದ ಲಯನ್ಸ್ ಪ್ರೆಸ್, ಗಿಲ್‌ಫರ್ಡ್, ಕನೆಕ್ಟಿಕಟ್. ಐಎಸ್‌ಬಿಎನ್‌ ೯೭೮-೧-೫೯೯೨೧-೧೭೭-೦

ಉಲ್ಲೇಖಗಳು

[ಬದಲಾಯಿಸಿ]
  1. L.W. Adamec/J.A. Norris, ANGLO-AFGHAN WARS Archived 2010-12-08 ವೇಬ್ಯಾಕ್ ಮೆಷಿನ್ ನಲ್ಲಿ., in Encycloædia Iranica, online ed., 2010
  2. J.A. Norris, ANGLO-AFGHAN RELATIONS Archived 2010-12-08 ವೇಬ್ಯಾಕ್ ಮೆಷಿನ್ ನಲ್ಲಿ., in Encycloædia Iranica, online ed., 2010
  3. ೩.೦ ೩.೧ ೩.೨ http://countrystudies.us/afghanistan/13.htm
  4. Barfield, Thomas (2010). Afghanistan: A Cultural and Political History. Princeton University Press. p. 110. ISBN 0691145687. {{cite book}}: Cite has empty unknown parameter: |coauthors= (help); More than one of |pages= and |page= specified (help); Unknown parameter |isbn2= ignored (help)
  5. ೫.೦ ೫.೧ ಉಲ್ಲೇಖ "ಸೌಟರ್ ಟೇಕ್ಸ್ ದ ಕಾಲ್ ಆ‍ಯ್‌ಸ್ ದ ಗ್ರೇಟ್ ಗೇಮ್ ರಿಪೀಟ್ಸ್ ಇಟ್‌ಸೆಲ್ಫ್, ಇಂಡಿಯಾ ಮಸ್ಟ್ ವೇಕ್ ಅಪ್ ಟು ಕರ್ಝಾಯಿಸ್ ನ್ಯೂ ಮೂವ್ಸ್"
  6. ಡೇವಿಡ್, ಸೌಲ್‌. ವಿಕ್ಟೋರಿಯಾಸ್ ವಾರ್ಸ್‌. ೨೦೦೭ ಪೆಂಗ್ವಿನ್ ಬುಕ್ಸ್ ಪು.೧೭
  7. ಡೇವಿಡ್, ಸೌಲ್‌. ವಿಕ್ಟೋರಿಯಾಸ್ ವಾರ್ಸ್‌, ೨೦೦೭ ಪೆಂಗ್ವಿನ್ ಬುಕ್ಸ್. ಪು.೪೧
  8. ಟೆರೆನ್ಸ್ ಆರ್. ಬ್ಲ್ಯಾಕ್‌ಬರ್ನ್.ಡೇವಿಡ್, ದ ಎಕ್ಸ್‌ಟ್ರೆಮಿನೇಶನ್ ಆಫ್ಹ್ ಎ ಬ್ರಿಟೀಷ್ ಆರ್ಮಿ: ದ ರಿಟ್ರೀಟ್ ಫ್ರಂ ಕಾಬೂಲ್, ೨೦೦೮ ಎಪಿಎಚ್ ಪಬ್ಲಿಷಿಂಗ್ ಕಾರ್ಪೋರೇಶನ್. ಪು.೧೨೧

ಬಾಹ್ಯ ಕೊಂಡಿಗಳು

[ಬದಲಾಯಿಸಿ]