ಮೈಕ್ರೋಸಾಫ್ಟ್ ಸರ್ಫೇಸ್
This article has been nominated to be checked for its neutrality. (May 2010) |
ಅಭಿವೃದ್ಧಿಪಡಿಸಿದವರು | Microsoft |
---|---|
ಮೊದಲು ಬಿಡುಗಡೆ | April 17[೧] 2008 |
ಕಾರ್ಯಾಚರಣಾ ವ್ಯವಸ್ಥೆ | Windows Vista |
ಅಧೀಕೃತ ಜಾಲತಾಣ | www.microsoft.com/surface/ |
ಮೈಕ್ರೋಸಾಫ್ಟ್ ಸರ್ಫೇಸ್ (ಸಂಕೇತನಾಮ ಮಿಲನ್ ) ಎಂಬುದು ಮೈಕ್ರೋಸಾಫ್ಟ್ ಕಂಪನಿಯು ಹೊರತಂದಿರುವ ಒಂದು ಬಹು-ಸ್ಪರ್ಶದ ಉತ್ಪನ್ನವಾಗಿದ್ದು, ಇದನ್ನು ತಂತ್ರಾಂಶ ಮತ್ತು ಯಂತ್ರಾಂಶದ ಒಂದು ಸಂಯೋಜನಾ ತಂತ್ರಜ್ಞಾನವಾಗಿ ಅಭಿವೃದ್ಧಿಪಡಿಸಲಾಗಿದೆ; ಕಂಪ್ಯೂಟರ್‌ನ ಓರ್ವ ಬಳಕೆದಾರ, ಅಥವಾ ಅನೇಕ ಬಳಕೆದಾರರು ಸೂಚ್ಯವರ್ತನೆಯ ಗುರುತಿಸುವಿಕೆಯನ್ನು (ಗೆಶ್ಚರ್ ರೆಕಗ್ನಿಷನ್) ಬಳಸಿಕೊಳ್ಳುವ ಮೂಲಕ ಅಂಕೀಯ ವಿಷಯವನ್ನು (ಡಿಜಿಟಲ್ ಕಂಟೆಂಟ್) ವ್ಯತ್ಯಾಸಮಾಡಲು ಈ ಸಂಯೋಜನಾ ತಂತ್ರಜ್ಞಾನವು ಅವಕಾಶ ಕಲ್ಪಿಸುತ್ತದೆ. ಇದು ಕೈಗಳು ಅಥವಾ ಭೌತಿಕ ವಸ್ತುಗಳ ಚಲನೆಯನ್ನು ಒಳಗೊಂಡಿರಲು ಸಾಧ್ಯವಿದೆ. 2007ರ ಮೇ 29ರಂದು ನಡೆದ D5 ಸಮಾವೇಶದಲ್ಲಿ ಇದರ ಕುರಿತು ಪ್ರಕಟಿಸಲಾಯಿತು.[೨] ಭೋಜನಮಂದಿರಗಳು, ಹೊಟೇಲುಗಳು, ಚಿಲ್ಲರೆ ವ್ಯಾಪಾರದ ಮಳಿಗೆ, ಸಾರ್ವಜನಿಕ ಮನರಂಜನಾ ತಾಣಗಳಂಥ ಅತಿಥಿ ಸತ್ಕಾರದ ವ್ಯವಹಾರಗಳು, ಹಾಗೂ ತಂತ್ರೋಪಾಯದ ಸ್ಥೂಲ-ಸಮೀಕ್ಷೆಗಳಿಗೆ ಸಂಬಂಧಿಸಿದ ಸೇನಾ ವಿಭಾಗದಲ್ಲಿ ಇದರ ಉದ್ದೇಶಿತ ಗ್ರಾಹಕರಿದ್ದಾರೆ. 2008ರ ಏಪ್ರಿಲ್ 17ರಂದು ಪೂರ್ವಭಾವಿ ಬಿಡುಗಡೆಯನ್ನು ಕಂಡ ಸರ್ಫೇಸ್, ಗ್ರಾಹಕ ಬಳಕೆಗೆ ಸಂಬಂಧಿಸಿದಂತೆ AT&T ಮಳಿಗೆಗಳಲ್ಲಿ ಲಭ್ಯವಾಯಿತು.[೧] 2008ರ US ಅಧ್ಯಕ್ಷೀಯ ಚುನಾವಣೆಯ[೩] ಸಂದರ್ಭದಲ್ಲಿ, MSNBCಯು ತನ್ನ ಪ್ರಸಾರಕಾರ್ಯದ ಅವಧಿಯಲ್ಲಿ ಸರ್ಫೇಸ್ ತಂತ್ರಜ್ಞಾನವನ್ನು ಬಳಸಿಕೊಂಡಿತು; ಡಿಸ್ನಿಲ್ಯಾಂಡ್‌ನ ಭವಿಷ್ಯದ ಮನೆಯ ಪ್ರದರ್ಶನಗಳ ಸಂದರ್ಭದಲ್ಲಿ ಮಾತ್ರವೇ ಅಲ್ಲದೇ ಹಲವಾರು ಹೊಟೇಲುಗಳು ಮತ್ತು ಮೋಜುಮಂದಿರಗಳಲ್ಲೂ ಸಹ ಇದು ಬಳಸಲ್ಪಟ್ಟಿದೆ. CSI ಮಿಯಾಮಿCSI: Miami ಎಂಬ CBS ಸರಣಿಯಲ್ಲಿ ಹಾಗೂ EXTRA! ಎಂಟರ್‌ಟೈನ್‌ಮೆಂಟ್ ಸುದ್ದಿಪ್ರಸಾರದ ಸಂದರ್ಭದಲ್ಲಿಯೂ ಸರ್ಫೇಸ್ ತಂತ್ರಜ್ಞಾನವು ಬಳಕೆಯಾಗಿತ್ತು. 2009ರ ಮಾರ್ಚ್ ವೇಳೆಗೆ ಇದ್ದಂತೆ, 11 ದೇಶಗಳಲ್ಲಿ 120 ಪಾಲುದಾರರನ್ನು ಮೈಕ್ರೋಸಾಫ್ಟ್ ಹೊಂದಿತ್ತು; ಇವು ಸರ್ಫೇಸ್‌ನ ಇಂಟರ್‌ಫೇಸ್‌ಗೆ ಸಂಬಂಧಿಸಿದ ಅನ್ವಯಗಳನ್ನು ಅಭಿವೃದ್ಧಿಪಡಿಸುತ್ತಿವೆ.[೪]
ಸ್ಥೂಲ ಸಮೀಕ್ಷೆ
[ಬದಲಾಯಿಸಿ]ಮೈಕ್ರೋಸಾಫ್ಟ್ ಸರ್ಫೇಸ್ ಎಂಬುದು ಮೇಲ್ಮೈ ಕಂಪ್ಯೂಟರ್ ಬಳಕೆಯ ಒಂದು ವೇದಿಕೆಯಾಗಿದ್ದು, ಇದು ಸ್ವಾಭಾವಿಕವಾಗಿರುವ ಕೈನ ಸೂಚ್ಯವರ್ತನೆಗಳು ಮತ್ತು ವಾಸ್ತವಿಕ ಪ್ರಪಂಚದ ವಸ್ತುಗಳಿಗೆ ಪ್ರತಿಕ್ರಿಯಿಸುತ್ತದೆ. ಇದು 360-ಡಿಗ್ರಿ ವ್ಯಾಪ್ತಿಯ ಒಂದು ಬಳಕೆದಾರ ಇಂಟರ್‌ಫೇಸ್‌ನ್ನು ಹೊಂದಿದೆ; ಇದು 30-ಇಂಚಿನಷ್ಟಿರುವ ಒಂದು ಪ್ರತಿಫಲಿಸುವ ಮೇಲ್ಮೈ ಆಗಿದ್ದು, ಮೇಲ್ಮೈನ ಕೆಳಭಾಗದಲ್ಲಿ ಒಂದು XGA DLP ಪ್ರಕ್ಷೇಪಕವನ್ನು ಹೊಂದಿದೆ. ಈ ಪ್ರಕ್ಷೇಪಕವು ಅದರ ಕೆಳತಲದ ಮೇಲೆ ಒಂದು ಬಿಂಬವನ್ನು ಪ್ರಕ್ಷೇಪಿಸುತ್ತದೆ. ಯಂತ್ರದ ಗಡಸು ಹೊದಿಕೆಯಲ್ಲಿರುವ ಐದು ಕ್ಯಾಮರಾಗಳು, ವಸ್ತುಗಳು ಮತ್ತು ಮಾನವ ಬೆರಳ ತುದಿಗಳಿಂದ ಬರುವ ಅವರೋಹಿತ ಬೆಳಕಿನ ಪ್ರತಿಬಿಂಬಗಳನ್ನು ಮೇಲ್ಮೈ ಮೇಲೆ ದಾಖಲಿಸುತ್ತವೆ. ವಸ್ತುವನ್ನು ಗುರುತಿಸುವುದು, ವಸ್ತು/ಬೆರಳಿನ ನೆಲೆ ಗುರುತಿಸುವುದು ಮತ್ತು ಜಾಡುಹಿಡಿಯುವುದು ಇವೇ ಮೊದಲಾದ ಕಾರ್ಯವನ್ನು ಮೇಲ್ಮೈ ನಿರ್ವಹಿಸಬಲ್ಲದು ಮತ್ತು ಇದು ಬಹು-ಸ್ಪರ್ಶ ಹಾಗೂ ಬಹು-ಬಳಕೆದಾರ ವಿಶಿಷ್ಟತೆಯನ್ನು ಹೊಂದಿದೆ. ಯಂತ್ರದೊಂದಿಗೆ ಬಳಕೆದಾರರು ಪಾರಸ್ಪರಿಕ ಪ್ರಭಾವ ಬೀರಲು ಇಲ್ಲಿ ಅವಕಾಶವಿದ್ದು, ತೆರೆಯ ಉದ್ದಗಲಕ್ಕೂ ತಮ್ಮ ಬೆರಳ ತುದಿಗಳನ್ನು ಸ್ಪರ್ಶಿಸುವ ಅಥವಾ ಎಳೆಯುವ ಮೂಲಕ ಮತ್ತು ಬಣ್ಣದ ಕುಂಚಗಳಂಥ ವಸ್ತುಗಳನ್ನು ಬಳಸುವ ಮೂಲಕ, ಅಥವಾ ವಸ್ತುಗಳನ್ನು ಇರಿಸುವ ಮೂಲಕ ಮತ್ತು ಇರಿಸಲಾದ ವಸ್ತುಗಳನ್ನು ಚಾಲಿಸುವ ಮೂಲಕ ಬಳಕೆದಾರರಲು ಇಲ್ಲಿ ಯಂತ್ರದೊಂದಿಗೆ ಪಾರಸ್ಪರಿಕ ಪ್ರಭಾವವನ್ನು ಬೀರಬಹುದು. ಕಂಪ್ಯೂಟರ್‌ಗಳೊಂದಿಗಿನ ಪಾರಸ್ಪರಿಕ ಕ್ರಿಯೆಯ ಈ ನಿದರ್ಶನಕ್ಕೆ ಒಂದು ಸ್ವಾಭಾವಿಕ ಬಳಕೆದಾರ ಇಂಟರ್‌ಫೇಸ್ (NUI) ನ್ಯಾಚುರಲ್ ಯೂಸರ್ ಇಂಟರ್‌ಫೇಸ್) ಎಂದು ಕರೆಯಲಾಗುತ್ತದೆ.
ಏಕಕಾಲಕ್ಕೆ 52 ಸ್ಪರ್ಶಗಳಿಗೆ ಪ್ರತಿಕ್ರಿಯಿಸುವಷ್ಟು ಸಮರ್ಥವಾಗಿರುವಂತೆ ಸರ್ಫೇಸ್‌ವನ್ನು ಅತ್ಯುತ್ತಮವಾಗಿಸಲಾಗಿದೆ. ಓರ್ವ ವರದಿಗಾರನೊಂದಿಗೆ ಇದರ ಒಂದು ಪ್ರಮಾಣೀಕರಣ ಅಥವಾ ಪ್ರತ್ಯಕ್ಷ ನಿದರ್ಶನವನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಸರ್ಫೇಸ್ ಕಂಪ್ಯೂಟಿಂಗ್ ಸಮೂಹದ ಮಾರಾಟ ವ್ಯವಸ್ಥೆಯ ನಿರ್ದೇಶಕನಾದ ಮಾರ್ಕ್ ಬೋಲ್ಗರ್, ತೆರೆಯ-ಮೇಲಿನ ಬಣ್ಣದ ಒಂದು ವರ್ಣಫಲಕದಲ್ಲಿ ತನ್ನ ಬೆರಳನ್ನು "ಅದ್ದಿದ", ಮತ್ತು ನಂತರದಲ್ಲಿ ತೆರೆಯ ಉದ್ದಗಲಕ್ಕೂ ಅದನ್ನು ಎಳೆಯುವ ಮೂಲಕ ಒಂದು ನಗುತ್ತಿರುವ ಮುಖವನ್ನು ಚಿತ್ರಿಸಿದ. ನಂತರ ತನ್ನೆಲ್ಲಾ 10 ಬೆರಳುಗಳನ್ನೂ ಒಮ್ಮೆಗೇ ಬಳಸಿಕೊಂಡು ಆತ ಆ ನಗುಮುಖಕ್ಕೆ ಕೂದಲಿನಿಂದ ತುಂಬಿದ ಒಂದು ಸಂಪೂರ್ಣ ತಲೆಯ ರೂಪವನ್ನು ನೀಡಿದ.
ವಸ್ತುಗಳ ಮೇಲಿನ, ವಿಶೇಷವಾಗಿ-ವಿನ್ಯಾಸಗೊಳಿಸಲಾದ ಬಾರ್‌ಕೋಡ್-ಶೈಲಿಯ "ಸರ್ಫೇಸ್ ಗುರುತುಪಟ್ಟಿಗಳನ್ನು" ಬಳಸಿಕೊಂಡು ವೈವಿಧ್ಯಮಯ ಲಕ್ಷಣಗಳನ್ನು ಮೈಕ್ರೋಸಾಫ್ಟ್ ಸರ್ಫೇಸ್ ನೀಡಬಲ್ಲದು; ಉದಾಹರಣೆಗೆ, ಸರ್ಫೇಸ್ ಮೇಲೆ ನಿಗದಿಪಡಿಸಲಾಗಿರುವ ಮದ್ಯದ ಬಗೆಯನ್ನು ಆಧರಿಸಿ ತಿನ್ನಲ್ಪಡುತ್ತಿರುವ ಊಟಕ್ಕೆ ಅನುಸಾರವಾಗಿ ರೂಪಿಸಲಾದ ಹೆಚ್ಚುವರಿ ಮದ್ಯದ ಆಯ್ಕೆಗಳನ್ನು ಸ್ವಯಂಚಾಲಿತವಾಗಿ ನೀಡುವಿಕೆ, ಅಥವಾ ಒಂದು ಸಂಕೇತಪದದ ಸಂಯೋಜನೆಯೊಂದಿಗೆ ಬಳಕೆದಾರನ ನಂಬಿಸುವಿಕೆ ಅಥವಾ ಪ್ರಮಾಣೀಕರಣ ಇದರಲ್ಲಿ ಸೇರಿವೆ.
ಒಂದು ವಾಣಿಜ್ಯೋದ್ದೇಶದ ಮೈಕ್ರೋಸಾಫ್ಟ್ ಸರ್ಫೇಸ್ ಘಟಕಕ್ಕೆ 12,500$ನಷ್ಟು (ಘಟಕ ಮಾತ್ರ) ವೆಚ್ಚವಾದರೆ, ಒಂದು ಅಭಿವರ್ಧಕ ಮೈಕ್ರೋಸಾಫ್ಟ್ ಸರ್ಫೇಸ್ ಘಟಕಕ್ಕೆ 15,000$ನಷ್ಟು ವೆಚ್ಚವಾಗುತ್ತದೆ ಮತ್ತು ಇದು ಒಂದು ಅಭಿವರ್ಧಕ ಘಟಕ, ಐದು ಆಸನಗಳು ಮತ್ತು ಪೂರಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.
ಪಾಲುದಾರ ಕಂಪನಿಗಳು ತಮ್ಮ ಹೊಟೇಲುಗಳು, ಭೋಜನಮಂದಿರಗಳು, ಮತ್ತು ಚಿಲ್ಲರೆ ವ್ಯಾಪಾರ ಮಳಿಗೆ ಮಳಿಗೆಗಳಲ್ಲಿ ಸರ್ಫೇಸ್ ತಂತ್ರಜ್ಞಾನವನ್ನು ಬಳಸುತ್ತವೆ. ಹೊಟೇಲು ಕೋಣೆಯಲ್ಲೇ ಕುಳಿತುಕೊಂಡು ಭೋಜನಮಂದಿರಗಳಲ್ಲಿನ ಊಟಗಳನ್ನು ಆರಿಸಲು, ರಜಾಕಾಲದ ವಿಹಾರಗಳ ಕುರಿತು ಮತ್ತು ಭೇಟಿನೀಡಬೇಕಿರುವ ತಾಣಗಳ ಕುರಿತು ಯೋಜಿಸಲು ಸರ್ಫೇಸ್ ತಂತ್ರಜ್ಞಾನವು ಬಳಸಲ್ಪಡುತ್ತದೆ. ಸ್ಟಾರ್‌ವುಡ್ ಹೊಟೇಲುಗಳು ಬಳಕೆದಾರರಿಗೆ ಮತ್ತಷ್ಟು ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಯೋಜಿಸಿವೆ; ಸದರಿ ವಿಹಾರಧಾಮದಲ್ಲಿ ಲಭ್ಯವಿರುವ ಸಂಗೀತ, ಪುಸ್ತಕಗಳು, ಮತ್ತು ಇತರ ಸವಲತ್ತುಗಳಿಗೆ ಸಂಬಂಧಿಸಿದಂತೆ ಹಣಪಾವತಿಸಲು ಬಳಕೆದಾರರು ಮೇಜಿನ ಮೇಲೆ ಒಂದು ಕ್ರೆಡಿಟ್ ಕಾರ್ಡ್‌ನ್ನು ಹಾಕುವುದಕ್ಕೆ ಅವಕಾಶಮಾಡಿಕೊಡುವುದು ಇದರ ವಿಶಿಷ್ಟತೆಯಾಗಿದೆ. AT&T ಮಳಿಗೆಗಳಲ್ಲಿನ ಸರ್ಫೇಸ್ ತಂತ್ರಜ್ಞಾನದ ಬಳಕೆಗಳಲ್ಲಿ ಹಲವು ಮಗ್ಗುಲುಗಳು ಸೇರಿಕೊಂಡಿವೆ; ಯೋಜನೆಗಳ ಪಾರಸ್ಪರಿಕ ಪ್ರಭಾವದ ಪ್ರಸ್ತುತಿಗಳು, ಪ್ರಸಾರಕಾರ್ಯ, ಮತ್ತು ಫೋನ್ ಲಕ್ಷಣಗಳು ಮಾತ್ರವೇ ಅಲ್ಲದೇ, ಮೇಜಿನ ಮೇಲೆ ಎರಡು ವಿಭಿನ್ನ ಫೋನ್‌ಗಳನ್ನು ಬಿಡುವುದು ಮತ್ತು ಬೆಲೆಗಳು, ಲಕ್ಷಣಗಳು ಹಾಗೂ ಯೋಜನೆಗಳನ್ನು ಗ್ರಾಹಕರು ನೋಡಲು ಮತ್ತು ಹೋಲಿಸಲು ಅನುವುಮಾಡಿಕೊಡುವುದು ಸರ್ಫೇಸ್ ತಂತ್ರಜ್ಞಾನದ ಬಳಕೆಗಳಲ್ಲಿ ಸೇರಿವೆ. 2008ರ US ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಚುನಾವಣೆಯವರೆಗೂ ಸಾಗುತ್ತಲೇ ಇದ್ದ ಸ್ಪರ್ಧೆಯ ಮಾಹಿತಿ ಮತ್ತು ವಿಶ್ಲೇಷಣೆಯನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲು, MSNBCನ ಪ್ರಸಾರಕಾರ್ಯವು ಸರ್ಫೇಸ್ ತಂತ್ರಜ್ಞಾನವನ್ನು ಬಳಸಿಕೊಂಡಿತು. ಮತದಾನದ ಮಾಹಿತಿ ಮತ್ತು ಚುನಾವಣೆಯ ಫಲಿತಾಂಶಗಳನ್ನು ವಿಶ್ಲೇಷಿಸುವುದು, ಮತದಾರರ ಪ್ರವೃತ್ತಿಗಳು ಮತ್ತು ಜನಸಂಖ್ಯೆಗೆ ಸಂಬಂಧಿಸಿದ ಮಾಹಿತಿಯನ್ನು ವೀಕ್ಷಿಸುವುದು, ಮತದಾನದ ಮಾದರಿಗಳನ್ನು ನಿರ್ಣಯಿಸಲು ಹಾಗೂ ಫಲಿತಾಂಶಗಳನ್ನು ಊಹಿಸಲು ಜಿಲ್ಲಾ ನಕಾಶೆಗಳನ್ನು ಪರಿಶೋಧಿಸುವುದು ಇವೇ ಮೊದಲಾದ ಸಂಕೀರ್ಣ ಕೆಲಸಗಳನ್ನು ಕಾರ್ಯಕ್ರಮದ ನಿರ್ವಾಹಕನು ಕೇವಲ ತನ್ನ ಕೈಬೆರಳುಗಳ ಕ್ಷಿಪ್ರ ತಿರುವಿನೊಂದಿಗೆ ನಿರ್ವಹಿಸುತ್ತಿದ್ದುದು ಇಲ್ಲಿ ಕಂಡುಬಂದಿದ್ದ ವೈಶಿಷ್ಟ್ಯವಾಗಿತ್ತು. ಕೆಲವೊಂದು ಹೊಟೇಲುಗಳಲ್ಲಿ ಮತ್ತು ಮೋಜುಮಂದಿರಗಳಲ್ಲಿ, ಬಳಕೆದಾರರು ಒಂದು ವ್ಯಾಪಕ ಶ್ರೇಣಿಯ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ; ವಿಡಿಯೋಗಳನ್ನು ವೀಕ್ಷಿಸುವುದು, ನಕಾಶೆಗಳನ್ನು ನೋಡುವುದು, ಪಾನೀಯಗಳಿಗಾಗಿ ಅಪ್ಪಣೆ ಮಾಡುವುದು, ಆಟಗಳನ್ನಾಡುವುದು, ಮತ್ತು ಸರ್ಫೇಸ್ ತಂತ್ರಜ್ಞಾನವು ಅಳವಡಿಸಲ್ಪಟ್ಟಿರುವ ಕಂಪ್ಯೂಟರ್ ಮೇಜುಗಳ ನಡುವಿನ ಜನರೊಂದಿಗೆ ಹರಟೆಕೊಚ್ಚುವುದು ಮತ್ತು ಚೆಲ್ಲಾಟವಾಡುವುದು ಇವು ಅದರಲ್ಲಿ ಸೇರಿದೆ.
ಇತಿಹಾಸ
[ಬದಲಾಯಿಸಿ]ಸರ್ಫೇಸ್‌ಗೆ ಸಂಬಂಧಿಸಿದ ಉತ್ಪನ್ನ ಪರಿಕಲ್ಪನೆಯು ಆರಂಭದಲ್ಲಿ ಮೈಕ್ರೋಸಾಫ್ಟ್ ಹಾರ್ಡ್ವೇರ್ನ ಸ್ಟೀವನ್ ಬಥಿಚೆ ಹಾಗೂ ಮೈಕ್ರೋಸಾಫ್ಟ್ ರಿಸರ್ಚ್ನ ಆಂಡಿ ವಿಲ್ಸನ್ ಎಂಬಿಬ್ಬರಿಂದ 2001ರಲ್ಲಿ ರೂಪಿಸಲ್ಪಟ್ಟಿತು.[೫]
ಸದರಿ ಪರಿಕಲ್ಪನೆಯನ್ನು ಅಭಿವೃದ್ಧಿಯ ಮುಂದಿನ ಹಂತಕ್ಕೆ ತರುವ ದೃಷ್ಟಿಯಿಂದ, 2001ರ ಅಕ್ಟೋಬರ್‌ನಲ್ಲಿ ವಾಸ್ತವಾಭಾಸದ ಸೃಷ್ಟಿಯ ತಂಡವೊಂದು ರೂಪಿಸಲ್ಪಟ್ಟಿತು, ಮತ್ತು ಬಥಿಚೆ ಹಾಗೂ ವಿಲ್ಸನ್ ಈ ತಂಡದ ಪ್ರಮುಖ ಸದಸ್ಯರಾಗಿದ್ದರು.
2003ರಲ್ಲಿ, ಒಂದು ಗುಂಪು ಅವಲೋಕನದ ಸಂದರ್ಭದಲ್ಲಿ ಈ ತಂಡವು ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಸಮ್ಮುಖದಲ್ಲಿ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿತು. ನಂತರ, ಸದರಿ ವಾಸ್ತವಾಭಾಸದ ಸೃಷ್ಟಿಯ ತಂಡವು ವಿಸ್ತರಿಸಲ್ಪಟ್ಟಿತು ಮತ್ತು T1 ಎಂಬ ಅಡ್ಡಹೆಸರಿಡಲ್ಪಟ್ಟ ಒಂದು ಮೂಲಮಾದರಿಯನ್ನು ಒಂದು ತಿಂಗಳೊಳಗಾಗಿ ನಿರ್ಮಿಸಲಾಯಿತು. ಒಂದು ಚಪ್ಪಟೆಯಾಕಾರದ IKEA ಮೇಲ್ಮೈಯನ್ನು ಆಧರಿಸಿದ್ದ ಈ ಮೂಲಮಾದರಿಯು ತನ್ನ ತುದಿಯಲ್ಲಿ ಒಂದು ರಂಧ್ರವನ್ನು ಹೊಂದಿತ್ತು ಮತ್ತು ವಾಸ್ತುಶಿಲ್ಪಿಗಳು ಬಳಸುವ ಚರ್ಮದ ಕಾಗದದ ಹಾಳೆಯೊಂದನ್ನು ಒಂದು ಪ್ರಸರಣಕಾರಕವಾಗಿ ಇದರಲ್ಲಿ ಬಳಸಲಾಗಿತ್ತು. ಪಿನ್‌ಬಾಲ್, ಒಂದು ಛಾಯಾಚಿತ್ರ ಬ್ರೌಸರ್ ಮತ್ತು ಒಂದು ವಿಡಿಯೋ ಒಗಟನ್ನು ಒಳಗೊಂಡಂತೆ ಕೆಲವೊಂದು ಅನ್ವಯಗಳನ್ನೂ ಸಹ ತಂಡವು ಅಭಿವೃದ್ಧಿಪಡಿಸಿತು.
ಮುಂದಿನ ವರ್ಷದ ವೇಳೆಗೆ, ಸರ್ಫೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ 85ಕ್ಕೂ ಹೆಚ್ಚಿನ ಆರಂಭಿಕ ಮೂಲಮಾದರಿಗಳನ್ನು ಮೈಕ್ರೋಸಾಫ್ಟ್ ನಿರ್ಮಿಸಿತ್ತು. ಯಂತ್ರಾಂಶದ ಅಂತಿಮ ವಿನ್ಯಾಸವು 2005ರಲ್ಲಿ ಸಂಪೂರ್ಣಗೊಂಡಿತು.
2002ರಲ್ಲಿ ಬಂದ ಮೈನಾರಿಟಿ ರಿಪೋರ್ಟ್ ಎಂಬ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ಇದೇ ಬಗೆಯ ಒಂದು ಪರಿಕಲ್ಪನೆಯನ್ನು ಬಳಸಿಕೊಳ್ಳಲಾಗಿತ್ತು. ಸದರಿ ಚಲನಚಿತ್ರವನ್ನು ನಿರ್ಮಿಸುವ ಸಂದರ್ಭದಲ್ಲಿ ಈ ಸಾಧನದ ಪರಿಕಲ್ಪನೆಯು ಮೈಕ್ರೋಸಾಫ್ಟ್ ಜೊತೆಗೆ ನಡೆಸಲಾದ ಸಮಾಲೋಚನೆಯಿಂದ ಬಂದಿತು ಎಂದು ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಹೇಳಿರುವುದು DVDಯೊಂದಿಗೆ ನೀಡಲಾಗಿರುವ ವಿವರಣೆಯಲ್ಲಿ ಸೂಚಿಸಲ್ಪಟ್ಟಿದೆ. MITಗೆ ಸೇರಿದ ಚಲನಚಿತ್ರದ ತಂತ್ರಜ್ಞಾನ ಸಮಾಲೋಚಕರ ಸಹವರ್ತಿಗಳಲ್ಲಿ ಒಬ್ಬ ವ್ಯಕ್ತಿಯು, ಸರ್ಫೇಸ್ ಯೋಜನೆಗೆ ಸಂಬಂಧಿಸಿದಂತೆ ಕೆಲಸಮಾಡಲು ನಂತರದಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಸೇರಿಕೊಂಡ.[೬]
2007ರ ಮೇ ತಿಂಗಳ 30ರಂದು ಮೈಕ್ರೋಸಾಫ್ಟ್ CEO ಸ್ಟೀವ್ ಬಾಲ್‌ಮರ್ ಸರ್ಫೇಸ್ ತಂತ್ರಜ್ಞಾನವನ್ನು ಅನಾವರಣಗೊಳಿಸಿದ; ಕ್ಯಾಲಿಫೋರ್ನಿಯಾದ ಕಾರ್ಲ್ಸ್‌ಬಾದ್‌ನಲ್ಲಿ ದಿ ವಾಲ್‌ಸ್ಟ್ರೀಟ್ ಜರ್ನಲ್ನ 'D: ಆಲ್ ಥಿಂಗ್ಸ್ ಡಿಜಿಟಲ್' ಸಮಾವೇಶದಲ್ಲಿ ಈ ಕಾರ್ಯವು ನೆರವೇರಿತು.[೭]
ಸರ್ಫೇಸ್ ಕಂಪ್ಯೂಟಿಂಗ್ ಎಂಬುದು ಮೈಕ್ರೋಸಾಫ್ಟ್‌ನ ಉತ್ಪಾದಕತೆ ಮತ್ತು ವಿಸ್ತರಿತ ಬಳಕೆದಾರ ಅನುಭವಗಳ ಗುಂಪಿನ ಒಂದು ಭಾಗವಾಗಿದ್ದು, ಇದು ಮನರಂಜನೆ ಹಾಗೂ ಸಾಧನಗಳ ವಿಭಾಗದ ವ್ಯಾಪ್ತಿಯೊಳಗೆ ಬರುತ್ತದೆ. ಸರ್ಫೇಸ್ ತಂತ್ರಜ್ಞಾನವನ್ನು ತಮ್ಮ ಕಾರ್ಯಾಚರಣೆಯಲ್ಲಿ ನಿಯೋಜಿಸಿದ ಮೊದಲ ಕೆಲವು ಕಂಪನಿಗಳಲ್ಲಿ ಹಾರ್ರಾಹ್'ಸ್ ಎಂಟರ್‌ಟೈನ್‌ಮೆಂಟ್, ಸ್ಟಾರ್‌ವುಡ್ ಹೊಟೇಲ್ಸ್ & ರೆಸಾರ್ಟ್ಸ್ ವರ್ಲ್ಡ್‌ವೈಡ್, T-ಮೊಬೈಲ್ ಮತ್ತು ಓರ್ವ ವಿತರಕ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಗೇಮ್ ಟೆಕ್ನಾಲಜಿ ಸೇರಿವೆ.[೮]
2008ರ ಏಪ್ರಿಲ್ 17ರಂದು, AT&Tಯು ಸರ್ಫೇಸ್‌ನ್ನು ಬಿಡುಗಡೆ ಮಾಡುವಲ್ಲಿನ ಮೊದಲ ಚಿಲ್ಲರೆ ವ್ಯಾಪಾರ ಮಳಿಗೆಯ ತಾಣ ಎಂಬ ಕೀರ್ತಿಗೆ ಪಾತ್ರವಾಯಿತು.[೯] 2008ರ ಜೂನ್‌ನಲ್ಲಿ, ರಯೋ ಐಬಾರ್[೧೦] ನಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್‌ನ್ನು ಹಾರ್ರಾಹ್'ಸ್ ಎಂಟರ್‌ಟೈನ್‌ಮೆಂಟ್ ಬಿಡುಗಡೆಮಾಡಿತು ಹಾಗೂ ಇದನ್ನು ಇನ್ನೊವೆನ್ಷನ್ಸ್ ಡ್ರೀಮ್ ಹೋಮ್‌ನ[೧೧] ಟುಮಾರೊಲ್ಯಾಂಡ್ ಎಂಬಲ್ಲಿ ಡಿಸ್ನಿಲ್ಯಾಂಡ್ ಬಿಡುಗಡೆಮಾಡಿತು. 2008ರ ಆಗಸ್ಟ್ 13ರಂದು, 5 ತಾಣಗಳಲ್ಲಿರುವ[೧೨] ತನ್ನ ಹೊಟೇಲು ಪಡಸಾಲೆಗಳಲ್ಲಿ ಸರ್ಫೇಸ್‌ನ್ನು ಷೆರಾಟನ್ ಹೊಟೇಲ್ಸ್ ಪರಿಚಯಿಸಿತು. 2008ರ ಸೆಪ್ಟೆಂಬರ್ 8ರಂದು, 2008ರ US ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಚುನಾವಣೆ ನಕಾಶೆಗಳನ್ನು ಪ್ರಸಾರಕಾರ್ಯದಲ್ಲಿ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ MSNBCಯು ಸರ್ಫೇಸ್ ತಂತ್ರಜ್ಞಾನವನ್ನು ಬಳಸಲು ಶುರುಮಾಡಿತು. MSNBCಯ ರಾಜಕೀಯ ನಿರ್ದೇಶಕನಾದ ಚಕ್ ಟಾಡ್ ಎಂಬಾತನಿಗೆ ಇದರ ಚುಕ್ಕಾಣಿಯನ್ನು ವಹಿಸಲಾಗಿತ್ತು.
ವೈಶಿಷ್ಟ್ಯಗಳು
[ಬದಲಾಯಿಸಿ]ಸರ್ಫೇಸ್‌ನ ಇಂಟರ್‌ಫೇಸ್‌ನಲ್ಲಿ ನಾಲ್ಕು ಮುಖ್ಯ ಅಂಗಭಾಗಗಳು ಮುಖ್ಯವಾಗಿವೆ ಎಂಬುದಾಗಿ ಮೈಕ್ರೋಸಾಫ್ಟ್ ಸೂಚಿಸುತ್ತದೆ. ಅವುಗಳೆಂದರೆ: ನೇರ ಪಾರಸ್ಪರಿಕ ಕ್ರಿಯೆ, ಬಹು-ಸ್ಪರ್ಶ ಸಂಪರ್ಕ, ಒಂದು ಬಹು-ಬಳಕೆದಾರ ಅನುಭವ, ಮತ್ತು ವಸ್ತುವನ್ನು ಗುರುತಿಸುವಿಕೆ.
ಒಂದು ಮೌಸ್ ಅಥವಾ ಕೀಲಿಮಣೆಯ ಅಗತ್ಯವಿಲ್ಲದೆಯೇ, ಅನ್ವಯವೊಂದರ ಇಂಟರ್‌ಫೇಸ್‌ನ ಮೇಲೆ ಪರಸ್ಪರ ಪ್ರಭಾವ ಬೀರುವ ದೃಷ್ಟಿಯಿಂದ, ಸದರಿ ಅನ್ವಯದ ಇಂಟರ್‌ಫೇಸ್‌ನ್ನು ಸರಳವಾಗಿ ತಲುಪಬಲ್ಲ ಮತ್ತು ಸ್ಪರ್ಶಿಸಬಲ್ಲ ಬಳಕೆದಾರರ ಸಾಮರ್ಥ್ಯಕ್ಕೆ ನೇರ ಪಾರಸ್ಪರಿಕ ಕ್ರಿಯೆ ಎಂಬುದು ಉಲ್ಲೇಖಿಸಲ್ಪಡುತ್ತದೆ. ಕೇವಲ ಒಂದೇ ಒಂದು ಜಾರುಪಟ್ಟಿಯ (ಕರ್ಸರ್) ವ್ಯವಸ್ಥೆಯಿರುವ ಒಂದು ಮೌಸ್ ಜೊತೆಗಿನ ಸಂಪರ್ಕಕ್ಕಿಂತ ಭಿನ್ನವಾಗಿ, ಒಂದು ಇಂಟರ್‌ಫೇಸ್‌ನೊಂದಿಗೆ ಅನೇಕ ಸಂಪರ್ಕ ಬಿಂದುಗಳನ್ನು ಹೊಂದುವಲ್ಲಿನ ಬಳಕೆದಾರರ ಸಾಮರ್ಥ್ಯಕ್ಕೆ ಬಹು-ಸ್ಪರ್ಶ ಸಂಪರ್ಕ ಎಂಬುದು ಉಲ್ಲೇಖಿಸಲ್ಪಡುತ್ತದೆ. ಬಹು-ಬಳಕೆದಾರ ವ್ಯವಸ್ಥೆಯು ಬಹು-ಸ್ಪರ್ಶದ ಕಾರಣದಿಂದ ಒದಗುವ ಒಂದು ಪ್ರಯೋಜನವಾಗಿದೆ; ಒಂದು ಅನ್ವಯದೊಂದಿಗೆ ಏಕಕಾಲಿಕವಾಗಿ ಪರಸ್ಪರ ಪ್ರಭಾವ ಬೀರಲು, ಸರ್ಫೇಸ್‌ನ ವಿಭಿನ್ನ ಪಾರ್ಶ್ವಗಳ ಮೇಲೆ ಹಲವಾರು ಜನರು ಸ್ವತಃ ತಮ್ಮನ್ನು ಅಭಿಮುಖವಾಗಿಸಲು ಇದು ಅವಕಾಶ ಕಲ್ಪಿಸುತ್ತದೆ. ಸಾಧನದ ತುದಿಯ ಮೇಲೆ ಇರಿಸಲಾದ ಹಣೆಪಟ್ಟಿ ಅಂಟಿಸಲಾದ ವಸ್ತುಗಳ ಹಾಜರಿ ಮತ್ತು ನೆಲೆಯನ್ನು ಗುರುತಿಸುವ ಸಾಧನದ ಸಾಮರ್ಥ್ಯಕ್ಕೆ ವಸ್ತುವನ್ನು ಗುರುತಿಸುವಿಕೆ ಎಂಬುದು ಉಲ್ಲೇಖಿಸಲ್ಪಡುತ್ತದೆ.
ಅಂಕೀಯವಲ್ಲದ ವಸ್ತುಗಳು ಮಾಹಿತಿ ಪ್ರದಾನ ಸಾಧನಗಳಾಗಿ ಬಳಸಲ್ಪಡಲು ಈ ತಂತ್ರಜ್ಞಾನವು ಅವಕಾಶ ನೀಡುತ್ತದೆ. ಒಂದು ಉದಾಹರಣೆಯಲ್ಲಿ, ತಂತ್ರಾಂಶದಲ್ಲಿ ಒಂದು ಅಂಕೀಯ ವರ್ಣಚಿತ್ರವನ್ನು ಸೃಷ್ಟಿಸಲು ಒಂದು ಸಾಮಾನ್ಯವಾಗಿರುವ ಬಣ್ಣದ ಕುಂಚವನ್ನು ಬಳಸಲಾಗಿತ್ತು.[೧೩] ಪ್ರದಾನಕ್ಕೆ ಸಂಬಂಧಿಸಿದಂತೆ ಕ್ಯಾಮರಾಗಳನ್ನು ಬಳಕೆಮಾಡಿಕೊಳ್ಳುವಲ್ಲಿ, ವಾಡಿಕೆಯ ಸ್ಪರ್ಶತೆರೆಯ ಅಥವಾ ಸ್ಪರ್ಶಪಟ್ಟಿ ಸಾಧನಗಳಲ್ಲಿ ಬಳಸಲಾದ ಸಾಧನದ ಧಾರಣಶಕ್ತಿ, ವಿದ್ಯುತ್ತಿನ ಪ್ರತಿರೋಧ, ಅಥವಾ ತಾಪಮಾನದಂಥ ಅಗತ್ಯಕಂಡುಬರುವ ಪ್ರತಿಬಂಧಕ ಗುಣಲಕ್ಷಣಗಳ ಮೇಲೆ ಯಂತ್ರವ್ಯವಸ್ಥೆಯು ಅವಲಂಬಿಸುವುದಿಲ್ಲ ಎಂಬ ಅಂಶದ ಮೇಲೆ ಇದನ್ನು ಕಾರ್ಯಸಾಧ್ಯವಾಗಿಸಲಾಯಿತು (ನೋಡಿ: ಸ್ಪರ್ಶತೆರೆ).
ಮೇಲ್ಮೈ ಮೇಲೆ ಗುರಿಯಿರಿಸಲಾಗಿರುವ ಒಂದು ಸಮೀಪ-ಅವರೋಹಿತದ, 850-ನ್ಯಾನೋಮೀಟರ್-ತರಂಗಾಂತರದ LED ಬೆಳಕಿನ ಮೂಲದಿಂದ ಕಂಪ್ಯೂಟರ್‌ನ "ದೃಷ್ಟಿ"ಯು ಸೃಷ್ಟಿಸಲ್ಪಟ್ಟಿದೆ. ವಸ್ತುವೊಂದು ಮೇಲ್ಮೈ ಮೇಲಿನ ಕಂಪ್ಯೂಟರ್‌ನ್ನು ಸ್ಪರ್ಶಿಸಿದಾಗ, 1024 x 768ನಷ್ಟಿರುವ ಒಂದು ನಿವ್ವಳ ಪೃಥಕ್ಕರಣದೊಂದಿಗಿನ ಅನೇಕ ಅವರೋಹಿತ ಕ್ಯಾಮರಾಗಳಿಗೆ ಬೆಳಕು ಪ್ರತಿಫಲಿಸಲ್ಪಡುತ್ತದೆ; ಇದರಿಂದಾಗಿ ಮೇಲ್ಮೈ ಮೇಲಿನ ಕಂಪ್ಯೂಟರ್‌ನ್ನು ಸ್ಪರ್ಶಿಸುವ ವಸ್ತುಗಳನ್ನು ಗ್ರಹಿಸಲು, ಮತ್ತು ಪ್ರತಿಕ್ರಿಯಿಸಲು ಅದಕ್ಕೆ ಅವಕಾಶ ದೊರೆತಂತಾಗುತ್ತದೆ.
ಗ್ರಾಹಕರ ಅಗತ್ಯಕ್ಕನುಗುಣವಾಗಿ ರೂಪಿಸಲ್ಪಡಬಹುದಾದ ಛಾಯಾಚಿತ್ರಗಳು, ಸಂಗೀತ, ವಾಸ್ತವಾಭಾಸದ ಪ್ರವೇಶಾವಕಾಶ, ಮತ್ತು ಆಟಗಳನ್ನು ಒಳಗೊಂಡಂತೆ, ಮೂಲಭೂತ ಅನ್ವಯಗಳೊಂದಿಗೆ ಸರ್ಫೇಸ್ ತಂತ್ರಜ್ಞಾನವು ಪೂರೈಸಲ್ಪಡುತ್ತದೆ.[೧೪]
ಕೊಳದ ಪರಿಣಾಮವನ್ನು ಒದಗಿಸುವ "ಅಟ್ರಾಕ್ಟ್" ಅನ್ವಯವು ಸರ್ಫೇಸ್ ತಂತ್ರಜ್ಞಾನದ ಜೊತೆಯಲ್ಲಿ ಪೂರ್ವಭಾವಿಯಾಗಿ ಅಳವಡಿಸಲ್ಪಟ್ಟು ಬರುವ ಒಂದು ಅನನ್ಯ ಲಕ್ಷಣವಾಗಿದೆ. ಸರಳವಾಗಿ ಹೇಳುವುದಾದರೆ, ಇದು ತನ್ನೊಳಗೆ ಎಲೆಗಳು ಮತ್ತು ಬಂಡೆಗಳನ್ನು ಒಳಗೊಂಡಿರುವ ನೀರಿನ ಒಂದು "ಚಿತ್ರ"ವಾಗಿದೆ (ವಿಂಡೋಸ್ XP ಅಥವಾ ವಿಸ್ಟಾದಲ್ಲಿ ಬಳಸಲಾಗುವ ಒಂದು ಸ್ಕ್ರೀನ್‌ಸೇವರ್‌ನ್ನು ಇದು ಬಹುಪಾಲು ಹೋಲುತ್ತದೆ). ಬಳಕೆದಾರರು ತೆರೆಯನ್ನು ಸ್ಪರ್ಶಿಸುವ ಮೂಲಕ ನೀರಿನಲ್ಲಿ ಸಣ್ಣ ಅಲೆಗಳನ್ನು ಸೃಷ್ಟಿಸಲು ಸಾಧ್ಯವಿದ್ದು, ಇದು ಬಹುಪಾಲು ಒಂದು ನಿಜವಾದ ತೊರೆಯಂತೆಯೇ ಕಾಣುತ್ತದೆ. ಎಲ್ಲಕ್ಕಿಂತ ಮೇಲಾಗಿ, ಸೃಷ್ಟಿಸಲ್ಪಟ್ಟ ಸಣ್ಣ ಅಲೆಯ ಗಾತ್ರವನ್ನು ಸ್ಪರ್ಶದ ಒತ್ತಡವು ಮಾರ್ಪಡಿಸುತ್ತದೆ, ಮತ್ತು ನೀರಿನೊಳಗೆ ಇರಿಸಲಾದ ವಸ್ತುಗಳು ಒಂದು ತಡೆಗೋಡೆಯನ್ನು ಸೃಷ್ಟಿಸಿ, ಅಲೆಗಳ ಚಿಮ್ಮುವಿಕೆಯ ಪರಿಣಾಮವು ಉಂಟಾಗಲು ಕಾರಣವಾಗುತ್ತವೆ. ಈ ಪರಿಣಾಮಗಳು ನಿಜಜೀವನದಲ್ಲಿ ನಾವು ಕಾಣುವ ಅಲೆಗಳ ಚಿಮ್ಮುವಿಕೆಯಂತೆಯೇ ಇರುತ್ತದೆ ಎಂಬುದು ಗಮನಾರ್ಹ.
ನಿರ್ದಿಷ್ಟ ವಿವರಣೆಗಳು
[ಬದಲಾಯಿಸಿ]ಸರ್ಫೇಸ್ ಎಂಬುದು ಒಂದು ಮಟ್ಟಸವಾದ ಮೇಲ್ಮೈಯಂಥ ಸ್ವರೂಪದ ಅಂಶದಲ್ಲಿನ ಒಂದು 30-ಇಂಚಿನಷ್ಟಿರುವ (76 ಸೆಂ.ಮೀ.) ಪ್ರದರ್ಶಿಕೆಯಾಗಿದ್ದು, 22 ಇಂಚುಗಳಷ್ಟು (56 ಸೆಂ.ಮೀ.) ಎತ್ತರ, 21 ಇಂಚುಗಳಷ್ಟು (53 ಸೆಂ.ಮೀ.) ಆಳ, ಮತ್ತು 42 ಇಂಚುಗಳಷ್ಟು (107 ಸೆಂ.ಮೀ.) ಅಗಲವನ್ನು ಅದು ಹೊಂದಿರುತ್ತದೆ.[೧೪]. ಸರ್ಫೇಸ್ ಮೇಜಿನ ಮೇಲಿನ ಪ್ರದರ್ಶಿಕೆಯು ಆಕ್ರಿಲಿಕ್‌ನಿಂದ ರೂಪುಗೊಂಡಿದೆ, ಮತ್ತು ಇದರ ಒಳಾಂಗಣ ಚೌಕಟ್ಟಿಗೆ ಉಕ್ಕಿನ ಪುಡಿ-ಲೇಪನ ಮಾಡಲಾಗಿದೆ. ವಿಂಡೋಸ್ ವಿಸ್ಟಾದ ಒಂದು ವಾಡಿಕೆಯ ಆವೃತ್ತಿಯ ಮೇಲೆ ತಂತ್ರಾಂಶ ವೇದಿಕೆಯು ಚಾಲನೆಗೊಳ್ಳುತ್ತದೆ ಮತ್ತು ತಂತಿ ಸಂಪರ್ಕ ಹೊಂದಿದ ಎಥರ್‌ನೆಟ್ 10/100, ನಿಸ್ತಂತು 802.11 b/g, ಮತ್ತು ಬ್ಲೂಟೂತ್ 2.0 ಸಂಯೋಜಕತೆಯನ್ನು ಇದು ಹೊಂದಿದೆ.[೧೪] ವಿಂಡೋಸ್ ಪ್ರೆಸೆಂಟೇಷನ್ ಫೌಂಡೇಷನ್ ಅಥವಾ ಮೈಕ್ರೋಸಾಫ್ಟ್ XNA ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಫೇಸ್ ಅನ್ವಯಗಳನ್ನು ಬರೆಯಲಾಗುತ್ತದೆ.[೧೫]
ಮೈಕ್ರೋಸಾಫ್ಟ್‌ನ MSDN ಸಮಾವೇಶದಲ್ಲಿ "ಮ್ಯಾಕ್ಸಿಮಮ್" ಸಜ್ಜಿಕೆಯ ಅಭಿವರ್ಧಕರನ್ನು ಉದ್ದೇಶಿಸಿ ಬಿಲ್ ಗೇಟ್ಸ್ ಮಾತನಾಡುತ್ತಾ, ಮೈಕ್ರೋಸಾಫ್ಟ್ ಸರ್ಫೇಸ್ ತಂತ್ರಜ್ಞಾನವು ಈ ಕೆಳಕಂಡ ವಿಶಿಷ್ಟ ಲಕ್ಷಣಗಳನ್ನು ಒಳಗೊಳ್ಳಲಿದೆ ಎಂದು ತಿಳಿಸಿದ:
- ಸುಮಾರು ಎರಡು ATX ಆಧಾರಫಲಕಗಳಷ್ಟು ಗಾತ್ರದಲ್ಲಿರುವ ಒಂದು ವಾಡಿಕೆಯ ಆಧಾರಫಲಕದ ಸ್ವರೂಪ ಅಂಶದೊಂದಿಗಿನ ಇಂಟೆಲ್ ಕೋರ್ ಕ್ವಾಡ್ ಕ್ಸಿಯಾನ್ "ವುಡ್‌ಕ್ರೆಸ್ಟ್" @ 2.66 GHz.
- 4GB ಡಿಡಿಆರ್2-1066 RAM
- 1TB 7200RPM ಹಾರ್ಡ್ ಡ್ರೈವ್
ಸದ್ಯಕ್ಕೆ ಲಭ್ಯವಿರುವ ವಾಣಿಜ್ಯ ಸ್ವರೂಪದ ಆವೃತ್ತಿಯು ಈ ಕೆಳಕಂಡ ವಿಶಿಷ್ಟತೆಗಳನ್ನು[೧೬] ಹೊಂದಿದೆ:
- ಇಂಟೆಲ್ ಕೋರ್ 2 ಡ್ಯುವೊ @ 2.13 GHz
- 2GB ಡಿಡಿಆರ್2 RAM
- 250GB SATA ಹಾರ್ಡ್ ಡ್ರೈವ್
ಅನ್ವಯಗಳ ಅಭಿವೃದ್ಧಿ
[ಬದಲಾಯಿಸಿ]ಮೈಕ್ರೋಸಾಫ್ಟ್ ಸರ್ಫೇಸ್ ಅನ್ವಯಗಳನ್ನು ವಿಂಡೋಸ್ ಪ್ರೆಸೆಂಟೇಷನ್ ಫೌಂಡೇಷನ್‌ನಲ್ಲಿ ಅಥವಾ XNAನಲ್ಲಿ ಬರೆಯಲು ಸಾಧ್ಯವಿದೆ. ಇದರ ಅಭಿವೃದ್ಧಿ ಪ್ರಕ್ರಿಯೆಯು ಬಹುಪಾಲು ಸಾಮಾನ್ಯ ವಿಸ್ಟಾದ ಅಭಿವೃದ್ಧಿಯ ರೀತಿಯಲ್ಲೇ ಇದೆಯಾದರೂ, ಸರ್ಫೇಸ್‌ನ ಅನನ್ಯ ಇಂಟರ್‌ಫೇಸ್‌ನ ಕಾರಣದಿಂದಾಗಿ ವಾಡಿಕೆಯ WPF ನಿಯಂತ್ರಣಗಳು ಸರ್ಫೇಸ್ ತಂಡದಿಂದಲೇ ಸೃಷ್ಟಿಸಲ್ಪಡಬೇಕಾಗಿರುವುದು ಅತ್ಯಗತ್ಯವಾಗಿದೆ. ಬೃಹತ್ ಹೊಟೇಲುಗಳು, ಮೋಜುಮಂದಿರಗಳು, ಮತ್ತು ಭೋಜನಮಂದಿರಗಳಿಗೆ ಸಂಬಂಧಿಸಿದ ನಿಯೋಜಿಸುವಿಕೆಗಳಿಗಾಗಿರುವ ಸರ್ಫೇಸ್ ಅನ್ವಯಗಳನ್ನು ಬರೆಯುವುದಕ್ಕೆ, ಈಗಾಗಲೇ WPFನಲ್ಲಿ ಪ್ರವೀಣರಾಗಿರುವ ಅಭಿವರ್ಧಕರು SDKಯನ್ನು ಬಳಸಿಕೊಳ್ಳಬಹುದಾಗಿದೆ.[೧೭]
ಸಂಬಂಧಿತ ಮೈಕ್ರೋಸಾಫ್ಟ್ ಸಂಶೋಧನಾ ಯೋಜನೆಗಳು
[ಬದಲಾಯಿಸಿ]ಸೆಕಂಡ್‌ಲೈಟ್[೧೮] ಎಂಬ ಅಡ್ಡಹೆಸರಿಟ್ಟುಕೊಂಡಿರುವ ಒಂದು ಸಂಬಂಧಿತ ತಂತ್ರಜ್ಞಾನದ ಕುರಿತು ಮೈಕ್ರೋಸಾಫ್ಟ್ ರಿಸರ್ಚ್ ಮಾಹಿತಿಯನ್ನು ಪ್ರಕಟಿಸಿದೆ. ಇನ್ನೂ ಸಂಶೋಧನಾ ಹಂತದಲ್ಲಿರುವ[೧೯] ಈ ಯೋಜನೆಯು,
ಮುಖ್ಯ ಪ್ರದರ್ಶಿಕೆಯಲ್ಲಿನ ಅಥವಾ ಮೇಲ್ಭಾಗದಲ್ಲಿನ ಭೌತಿಕ ವಸ್ತುಗಳ ಮೇಲೆ ದ್ವಿತೀಯಕ ಬಿಂಬಗಳನ್ನು ವರ್ಧಿಸುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಡೈಮಂಡ್ಟಚ್
- ರಿಯಾಕ್ ಟೇಬಲ್
- ಗೆಶ್ಚರ್ ಟೇಬಲ್
- ಲೆಮರ್ ಪ್ರದಾನ ಸಾಧನ
- MPX
- ಬಹು-ಸ್ಪರ್ಶ
- ಫಿಲಿಪ್ಸ್ ಎಂಟರ್ಟೈಬಲ್
- ಟಚ್ಲೈಟ್
- ವಿಂಡೋಸ್ 7
- ಸರ್ಫೇಸ್ ಕಂಪ್ಯೂಟರ್ ಬಳಕೆ
- ಸಿಕ್ಸ್ತ್ಸೆನ್ಸ್
ಆಕರಗಳು
[ಬದಲಾಯಿಸಿ]- ↑ ೧.೦ ೧.೧ AT&T First to Introduce Microsoft Surface in Retail Stores to Enhance Mobile Shopping Experience: First commercial Microsoft Surface launch to begin April 17 in select AT&T stores with expanded deployment planned throughout 2008
- ↑ "Bumps on the road to Microsoft's Surface". C-Net. Archived from the original on 2020-07-03. Retrieved 2007-11-08.
{{cite web}}
: Unknown parameter|name=
ignored (help) - ↑ http://blogs.msdn.com/surface/archive/2008/09/08/Live-from-MSNBC_2C00_-it_2700_s-Microsoft-Surface.aspx
- ↑ "ಆರ್ಕೈವ್ ನಕಲು". Archived from the original on 2011-06-06. Retrieved 2010-08-16.
- ↑ "Microsoft Surface Fact History". Microsoft. Retrieved 2007-05-30.
- ↑ ಕರೆಕ್ಷನ್: “ದಿ ಐಲೆಂಡ್” ಡಿಡ್ ನಾಟ್ ಫೀಚರ್ ಎ ಸರ್ಫೇಸ್ - ಐಸ್ಟಾರ್ಟೆಡ್‌ಸಮ್‌ಥಿಂಗ್
- ↑ "Look What's Surfacing at Microsoft" (Press release). Microsoft. 2007-05-29. Retrieved 2007-05-30.
- ↑ "Microsoft Launches New Product Category: Surface Computing Comes to Life in Restaurants, Hotels, Retail Locations and Casino Resorts" (Press release). Microsoft. 2007-05-29. Retrieved 2007-05-30.
- ↑ "ಮೈಕ್ರೋಸಾಫ್ಟ್ ಸರ್ಫೇಸ್ ಈಗ AT&T ಮಳಿಗೆಗಳಲ್ಲಿ ಲಭ್ಯ". Archived from the original on 2010-06-20. Retrieved 2010-08-16.
- ↑ ರಯೋ ಐಬಾರ್‌ನಲ್ಲಿ ಹಾರ್ರಾಹ್'ಸ್ ಎಂಟರ್‌ಟೈನ್‌ಮೆಂಟ್ ಮೈಕ್ರೋಸಾಫ್ಟ್ ಸರ್ಫೇಸ್‌ನ್ನು ಬಿಡುಗಡೆಮಾಡಿದ್ದು, ಇದು ಅತಿಥಿಗಳಿಗೆ ವಿನೂತನವಾದ ಮತ್ತು ತಲ್ಲೀನಗೊಳಿಸುವ ಹೊಸ ಮನರಂಜನಾ ಅನುಭವಗಳನ್ನು ನೀಡುತ್ತಿದೆ
- ↑ ಡಿಸ್ನಿ'ಸ್ ಇನ್ನೊವೆನ್ಷನ್ಸ್ ಡ್ರೀಮ್ ಹೋಮ್ ಈಸ್ ಎ ಬಿಗ್ ಆಡ್ ಫಾರ್ ಮೈಕ್ರೋಸಾಫ್ಟ್ ಅಂಡ್ HP... Archived 2010-03-08 ವೇಬ್ಯಾಕ್ ಮೆಷಿನ್ ನಲ್ಲಿ.ಬಟ್ ಐ ಸ್ಟಿಲ್ ವಾಂಟ್ ಇಟ್ Archived 2010-03-08 ವೇಬ್ಯಾಕ್ ಮೆಷಿನ್ ನಲ್ಲಿ.
- ↑ http://www.microsoft..com/Presspass/press/2008/aug08/08-13SheratonMSSurfacePR.mspx[ಶಾಶ್ವತವಾಗಿ ಮಡಿದ ಕೊಂಡಿ] ಮೈಕ್ರೊಸಾಫ್ಟ್ ಸರ್ಫೇಸ್‌ನೊಂದಿಗೆ ಷೆರಾಟನ್ ಹೊಟೇಲ್ಸ್ & ರೆಸಾರ್ಟ್ಸ್ ಹೊಟೇಲಿನ ಪಡಸಾಲೆಯ ಅನುಭವವನ್ನು ರೂಪಾಂತರಿಸುತ್ತದೆ
- ↑ "Microsoft Surface brings computing to the table". Retrieved 2007-05-30.
- ↑ ೧೪.೦ ೧೪.೧ ೧೪.೨ "Microsoft Surface Fact Sheet". Microsoft. Retrieved 2007-05-30.
- ↑ "Development Frameworks". Microsoft. Retrieved 2008-05-15.
- ↑ ಉತ್ಪನ್ನ ದತ್ತಾಂಶದ ಹಾಳೆ
- ↑ ವಾಟ್ ಲರ್ಕ್ಸ್ ಬಿಲೋ ಮೈಕ್ರೋಸಾಫ್ಟ್'s ಸರ್ಫೇಸ್? ಎ ಬ್ರೀಫ್ Q&A ವಿತ್ ಮೈಕ್ರೋಸಾಫ್ಟ್
- ↑ "ಆರ್ಕೈವ್ ನಕಲು". Archived from the original on 2009-09-26. Retrieved 2021-08-10.
- ↑ ಕ್ಲಿಯರಿಂಗ್ ಅಪ್ ದಿ ಕನ್‌ಫ್ಯೂಷನ್ ಆನ್ ಫ್ಯೂಚರ್ ಮೈಕ್ರೋಸಾಫ್ಟ್ ಸರ್ಫೇಸ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಯೂಟ್ಯೂಬ್ನಲ್ಲಿರುವ ಅಧಿಕೃತ ಮೈಕ್ರೋಸಾಫ್ಟ್ ಸರ್ಫೇಸ್ ವಾಹಿನಿ Archived 2011-05-18 ವೇಬ್ಯಾಕ್ ಮೆಷಿನ್ ನಲ್ಲಿ.
- ಮೈಕ್ರೋಸಾಫ್ಟ್ ಸರ್ಫೇಸ್
- ಟಚ್ಸ್ಕೇಪ್ ಟೆಕ್ನಾಲಜೀಸ್ Archived 2017-06-17 ವೇಬ್ಯಾಕ್ ಮೆಷಿನ್ ನಲ್ಲಿ.
- ಮೈಕ್ರೋಸಾಫ್ಟ್ ಸರ್ಫೇಸ್ ವರ್ಚುಯಲ್ ಪ್ರೆಸ್ರೂಮ್
- ಮೈಕ್ರೋಸಾಫ್ಟ್ ಸರ್ಫೇಸ್ ತಂಡದ ಬ್ಲಾಗ್ Archived 2007-11-02 ವೇಬ್ಯಾಕ್ ಮೆಷಿನ್ ನಲ್ಲಿ.
- ಚಾಲ್ತಿಯಲ್ಲಿರುವ ಮೈಕ್ರೋಸಾಫ್ಟ್ ಪಾಲುದಾರರ ಬಹಿರಂಗಗೊಳಿಸಲಾದ ಪಟ್ಟಿ
- ಸರ್ಫೇಸ್ ಬ್ಲಾಗ್ ಬೈ ಇನ್ಫ್ಯೂಷನ್ - 2009 ಮೈಕ್ರೋಸಾಫ್ಟ್ ಪಾರ್ಟ್ನರ್ ಆಫ್ ದಿ ಇಯರ್ Archived 2009-12-09 ವೇಬ್ಯಾಕ್ ಮೆಷಿನ್ ನಲ್ಲಿ.
- ಮೈಕ್ರೋಸಾಫ್ಟ್ ಸರ್ಫೇಸ್ ಅನ್ಅಫಿಷಿಯಲ್ ಬ್ಲಾಗ್ ಅಂಡ್ ಹೆಡ್ಕ್ವಾರ್ಟರ್ಸ್
- ವಿಮಿಯೋನಲ್ಲಿನ ಮೈಕ್ರೋಸಾಫ್ಟ್ ಸರ್ಫೇಸ್ ವಿಡಿಯೋ ವಾಹಿನಿ
- ಐಡೆಂಟಿಟಿಮೈನ್: ಅಗತ್ಯಕ್ಕನುಗುಣವಾಗಿ ರೂಪಿಸಿದ ಮೈಕ್ರೋಸಾಫ್ಟ್ ಸರ್ಫೇಸ್ ಅನ್ವಯಗಳು Archived 2008-10-18 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ಫೇಸ್ ಬ್ಲಾಗ್ ಬೈ ವೆಕ್ಟರ್ಫಾರ್ಮ್ - ಮೈಕ್ರೋಸಾಫ್ಟ್ ಸರ್ಫೇಸ್ ಅಭಿವೃದ್ಧಿ ಪಾಲುದಾರ Archived 2010-08-12 ವೇಬ್ಯಾಕ್ ಮೆಷಿನ್ ನಲ್ಲಿ.
- ಡೆವಲಪಿಂಗ್ ಫಾರ್ ಮೈಕ್ರೋಸಾಫ್ಟ್ ಸರ್ಫೇಸ್ - ಸರ್ಫೇಸ್ ತಂತ್ರಾಂಶದ ಕುರಿತಾಗಿ ಪ್ರಕಟಿಸಲ್ಪಟ್ಟ ಮೊದಲ ಪುಸ್ತಕ
- ರೇಜರ್ಫಿಶ್: ಮೈಕ್ರೋಸಾಫ್ಟ್ ಸರ್ಫೇಸ್ ವಾಡಿಕೆಯ ಪರಿಹಾರೋಪಾಯಗಳ ಪಾಲುದಾರ Archived 2010-07-30 ವೇಬ್ಯಾಕ್ ಮೆಷಿನ್ ನಲ್ಲಿ.
- ಮೈಕ್ರೋಸಾಫ್ಟ್ ಸರ್ಫೇಸ್: ಬಿಹೈಂಡ್-ದಿ-ಸೀನ್ಸ್ ಫಸ್ಟ್ ಲುಕ್ (ವಿಡಿಯೋ ಜೊತೆಯಲ್ಲಿ) Archived 2010-08-08 ವೇಬ್ಯಾಕ್ ಮೆಷಿನ್ ನಲ್ಲಿ.; PopularMechanics.com ನಲ್ಲಿರುವಂಥದು
- ಐಡೆಂಟಿಟಿಮೈನ್: ಮೈಕ್ರೋಸಾಫ್ಟ್ ಸರ್ಫೇಸ್ ಸ್ನೋಬೋರ್ಡ್ ಅಂಡ್ ವೈನ್ಬಾರ್ ಪ್ರೊಮೊ (ವಿಡಿಯೋ ಜೊತೆಯಲ್ಲಿ); Vimeo.comನಲ್ಲಿರುವಂಥದು
- ಮೊಬೈಲ್ ಖರೀದಿಯ ಅನುಭವವನ್ನು ಹೆಚ್ಚಿಸಲು ಚಿಲ್ಲರೆ ವ್ಯಾಪಾರ ಮಳಿಗೆ ಮಳಿಗೆಗಳಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್‌ನ್ನು ಪರಿಚಯಿಸುವಲ್ಲಿ AT&T ಮೊದಲಿಗನಾಗಿದೆ
- ರೇಜರ್ಫಿಶ್: AT&T ಸರ್ಫೇಸ್ ಚಿಲ್ಲರೆ ವ್ಯಾಪಾರ ಮಳಿಗೆ ಅನುಭವದ ಪ್ರತ್ಯಕ್ಷದ ದರ್ಶನ (ವಿಡಿಯೋ ಜೊತೆಯಲ್ಲಿ) Archived 2010-09-05 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ಫೇಸ್ ಡೆವಲಪರ್ - ಮೈಕ್ರೋಸಾಫ್ಟ್ ಸರ್ಫೇಸ್ ಅಭಿವರ್ಧಕರ ಬ್ಲಾಗ್
- ಇನ್ಟಾಯ್ - ಡಿಜಿಟಲ್ ವೈಟ್ಬೋರ್ಡ್ ಸಲ್ಯೂಷನ್ Archived 2010-08-06 ವೇಬ್ಯಾಕ್ ಮೆಷಿನ್ ನಲ್ಲಿ.
- ಎಕ್ಸ್ಪೀರಿಯೆನ್ಸ್ ಮೈಕ್ರೋಸಾಫ್ಟ್ ಸರ್ಫೇಸ್ ಇನ್ ಲಂಡನ್, UK Archived 2009-11-22 ವೇಬ್ಯಾಕ್ ಮೆಷಿನ್ ನಲ್ಲಿ.
- PDC 2008 ಪ್ರಸ್ತುತಿಯ ವಿಡಿಯೋ - ಮೈಕ್ರೋಸಾಫ್ಟ್ ಸರ್ಫೇಸ್ಗಾಗಿ ಅಭಿವೃದ್ಧಿಪಡಿಸಲ್ಪಡುತ್ತಿರುವುದು
- 10.netನಲ್ಲಿನ ಸುದೀರ್ಘ ಸಂದರ್ಶನ ಮತ್ತು ಪ್ರಾತ್ಯಕ್ಷಿಕೆ Archived 2010-07-28 ವೇಬ್ಯಾಕ್ ಮೆಷಿನ್ ನಲ್ಲಿ.
- ಆಫೀಸ್ ಆಫ್ ಟುಮಾರೊ
- FLUX (ಫುಲ್ಲೀ ಲಿಬರೇಟಿಂಗ್ ಯೂಸರ್ ಎಕ್ಸ್ಪೀರಿಯೆನ್ಸ್)
- ಫ್ಯಾಷನ್ ಮತ್ತು ಸುಖಸಾಧನದ ವಲಯಗಳಿಗೆ ಸಂಬಂಧಿಸಿದಂತೆ ಬಿಟ್ಮಾಮಾ ಮತ್ತು ಮೈಕ್ರೋಸಾಫ್ಟ್ ಸರ್ಫೇಸ್‌ನ್ನು ಸಾದರಪಡಿಸುತ್ತವೆ Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.
- MS ಸರ್ಫೇಸ್‌ನ ಅದ್ಭುತ ವಿಡಿಯೋ ಪ್ರಾತ್ಯಕ್ಷಿಕೆ
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles needing POV-check from May 2010
- Pages using Infobox software with unknown parameters
- Commons link is locally defined
- Commons category with page title different than on Wikidata
- Articles with hatnote templates targeting a nonexistent page
- ಮೈಕ್ರೋಸಾಫ್ಟ್ ಯಂತ್ರಾಂಶ
- ಬಹು-ಸ್ಪರ್ಶ
- ಸ್ಪರ್ಶತೆರೆಗಳು