ಮೇರಿ ಡೆಲಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇರಿ ಡೆಲಾನಿಯವರ ಜನನ ೧೪ಮೇ ೧೭೦೦ ಇಸವಿ. ಈಕೆ ಒಬ್ಬ ಕಲಾವಿದೆ,ಪತ್ರ ಬರಹಗಾರ್ತಿ. ಇವರು ತಮ್ಮ ಕಾಗದದ ಮೊಸಾಯಿಕ್ಸ್ ಹಾಗು ಅವರ ಉತ್ಸಾಹ ಭರಿತ ಪತ್ರ ವ್ಯವಹಾರಕ್ಕೆ ಪ್ರಸಿದ್ದವಾಗಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಇವರು ಕೌಲ್ಸ್ಟನ್ನಲ್ಲಿ ಜನಿಸಿದರು. ಅವರು ಕರ್ನಲ್ ಬರ್ನಾರ್ಡ ಗ್ರ್ಯಾನ್ವಿಲ್ಲೆಯ ಹಾಗು ಮೇರಿ ವೆಸ್ಟ್ ಕಾಂಬ್ರರ ಮಗಳು. ಇವರು ಹೆಸರಾಂತರಾದ ಜಾರ್ಜ್ ಗ್ರ್ಯಾನ್ವಿಲ್ಲೆ ಸೋದರ ಸೊಸೆ. ಮೇರಿಯವರಿಗೆ ಒಬ್ಬ ಹಿರಿಯ ಹಾಗು ಕಿರಿಯ ಸಹೋದರರಿದ್ದಾರೆ, ಅವರ ಹೆಸರು ಬನ್ನಿ ಹಾಗು ಆನ್. ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಲಂಡನ್ಗೆ ತೆರಳಿದರು. ಮೇರಿ ತನ್ನ ಅತ್ತೆ ಲೇಡಿ ಸ್ಟಾನ್ಲಿಯೊಂದಿಗೆ ಬೆಳೆದರು, ಅವರ ಅತ್ತೆ ನ್ಯಾಯಲಯದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಮೇರಿ ಹಾಗು ನ್ಯಾಯಲಯಕ್ಕೆ ನಿಕಟ ಸಂಪರ್ಕ ಬೆಳೆಯಿತು. ಅವರ ಅತ್ತೆ ಜೊತೆ ಬೆಳೆಯುವಾಗ ಮೇರಿ ಇಂಗ್ಲೀಶ್, ಫ್ರೆಂಚ್, ಇತಿಹಾಸ, ಸಂಗೀತ ಹಾಗು ನೃತ್ಯದಲ್ಲಿ ಪರಿಣಿತಿ ಪಡೆದರು. ಮೇರಿ ಅವರು ಹ್ಯಾಂಡಲ್ಲೊಂದಿಗೆ ಸಂಪರ್ಕ ಬೆಳೆಸಿದರು, ಅವರ ಸಂಗೀತ ಸಂಯೋಜನೆಯನ್ನು ಕೇಳಿದರು, ಈ ಸಂಪರ್ಕವು ಮೇರಿಯವರ ಉಳಿದ ಜೀವನಕ್ಕೂ ಉಳಿಯಿತು. ಅವರು ಮೇರಿಯವರ ಜೀವನದಲ್ಲಿ ಆತ್ಮೀಯ ಸ್ನೇಹಿತ ಹಾಗು ನಿಷ್ಟಾವಂತ ಬೆಂಬಲಿಗನಾಗಿದ್ದರು. [೧]

ಮದುವೆಯ ಜೀವನ[ಬದಲಾಯಿಸಿ]

ಇವರು ಇ೭ನೇ ವರ್ಷದಲ್ಲಿ ಇಷ್ಟವಿಲ್ಲದ ಮದುವೆಯಾದರು. ೧೭೧೮ನೇ ಇಸವಿಯ ಅಂತ್ಯದಲ್ಲಿ ಇವರು ಇವರ ಚಿಕ್ಕಪ್ಪ ಲಾರ್ಡ್ ಲಾನ್ಸ್ ಡೌನ್ನೊಂದಿಗೆ ಇದ್ದರು. ಅಲ್ಲಿ ಇವರಿಗೆ ಅಲೆಕ್ಸಾಂಡರ್ ಪೆಂಡೆವ್ಸ್ ಪರಿಚಯವಾದರು. ಇವರಿಬ್ಬರ ಕುಟುಂಬವು ಇವರಿಬ್ಬರ ಮದುವೆಯಲ್ಲಿ ಆಸಕ್ತಿಯನ್ನು ಹೊಂದಿದೆ ಎಂದು ಎಲ್ಲರಿಗೂ ಸ್ಪಷ್ಟವಾಯಿತು. ಪೆಂಡೆವ್ಸ್ ಲಾನ್ಸೆಸ್ಟನ್ಗಾಗಿ ಸಂಸತ್ ಸದಸ್ಯರಾಗಿದ್ದರು. ಪೆಂಡೆವ್ಸ್ಗೆ ೬೦ ವರ್ಷ, ಮೇರಿಗೆ ೧೭ ವರ್ಷವಷ್ಟೇ. ಫೆಬ್ರವರಿ ೧೭೧೮ನಲ್ಲಿ ಇವರ ಮದುವೆ ನಡೆಯಿತು. ತನ್ನ ತಂದೆ ತಾಯಿ ಹಣಕಾಸಿಗೆ ಪೆಂಡೆವ್ಸ್ ಮೇಲೆ ಅವಲಂಬಿತರಾಗಿದ್ದರು. ಏಪ್ರಿಲ್ನಲ್ಲಿ ಪೆಂಡೆವ್ಸ್ ರೋಸ್ಕೊ ಬಂಗಲೆಗೆ ತೆರೆಳಿದರು, ಅಲ್ಲಿನ ವೀಕ್ಷಣೆಗಳನ್ನು ಆನಂದಿಸಲು ಆಗಲಿಲ್ಲಾ. ಮದುವೆಯ ಎರಡನೇ ವರ್ಷವೇ ತನ್ನ ಗಂಡ ಅನಾರೋಗ್ಯರಾದರು, ಅವರು ಮಂಚವನ್ನು ಹಿಡಿದರು.ಇಬ್ಬರು ಲಂಡನ್ ನಲ್ಲಿ ಮನೆ ಪಡೆದರು. ಇವರ ಗಂಡ ಮಿತಿಮೀರಿ ಕುಡಿಯಲು ಪ್ರಾರಂಭಿಸಿದರು. ಶ್ರೀಮತಿ ಪೆಂಡೆವ್ಸ್ ತನ್ನ ಅನೇಕ ಹಳೆ ಸ್ನೇಹಿತರನ್ನು ಮತ್ತೆ ಜೊತೆ ಸೇರಲು ಆಗಲಿಲ್ಲಾ. ೧೭೨೪ರಲ್ಲಿ ಪೆಂಡೆವ್ಸ್ ತನ್ನ ನಿದ್ರೆಯಲ್ಲಿ ಇದ್ದಕ್ಕಿದ್ದಂತೆ ನಿಧನರಾದರು, ಮೇರಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದರು. ಪೆಂಡೆವ್ಸ್ ಸಾಯುವಾಗ ತನ್ನ ಹಂಡತಿಯ ಬಗ್ಗೆ ಯೋಚನೆ ಮಾಡಿರಲಿಲ್ಲಾ. ಪೆಂಡೆವ್ಸ್ನ ಎಸ್ಟೇಟ್ ಉಳಿದರೂ, ಮೇರಿಗೆ ಏನು ಅನುವಂಶಿಕವಾಗಿರಲಿಲ್ಲಾ. [೨]

ಇಷ್ಟವಿಲ್ಲದ ಮದುವೆ, ಸಣ್ಣ ವಯಸ್ಸಿಗೆ ವಿದುವೆ, ಈ ಸಂದರ್ಭದಲ್ಲೂ ಇವರಿಗೆ ಬಂದ ಅವಕಾಶಗಳು ಕಮ್ಮಿಯಾಗಿರಲಿಲ್ಲಾ. ಸಂಪನ್ಮೂಲಗಳ ಕೊರೆತೆಯ ಹೊರತಾಗಿಯೂ, ಕಾಲ ಹೊಸ ಅವಕಾಶಗಳನ್ನು ನೀಡಿತು. ಅವಿವಾಹಿತ ಮಹಿಳೆಯರಿಗಿಂತ ಭಿನ್ನವಾಗಿ ಸಮಾಜದಲ್ಲಿ ಮುಕ್ತವಾಗಿ ಸಾಗಲು ಸಾಧ್ಯವಾಯಿತು ಮತ್ತು ಅವರ ಜೀವನದಲ್ಲಿ ಮೊದಲ ಬಾರಿಗೆ ಶ್ರೀಮತಿ ಪೆಂಡೆವ್ಸ್ ಯಾವುದೇ ವ್ಯಕ್ತಿಯ ಮೇಲ್ವಿಚಾರಣೆ ಇಲ್ಲದೆ ತನ್ನದೇ ಆಸಕ್ತಿಯನ್ನು ಮುಂದುವರಿಸಲು ಸಾಧ್ಯವಾಯಿತು. ಬಹುಶಃ ತನ್ನ ಅತೃಪ್ತ ಮದುವೆಯಿಂದಾಗಿ ೧೮ನೇ ಶತಮಾನದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಇವರಿಗೆ ತೃಪ್ತಿ ಇರಲಿಲ್ಲಾ.ವಿಧವೆಯಾಗಿ ಮೇರಿ ಡೆಲಾನಿ ಬುಲ್ಸಟ್ರೋಡ್ನಲ್ಲಿ ತನ್ನ ಹತ್ತಿರದ ಸ್ನೇಹಿತ ಡೊವೆಗರ್ ಡಚೆಸ್ನ್ ಜೊತೆ ಹೆಚ್ಚು ಕಳೆದಳು. ಇಬ್ಬರ ಸಂಬಂಧ ಸಸ್ಯಶಾಸ್ತ್ರದಲ್ಲಿ ಗಟ್ಟಿಯಾಯಿತು.ಬುಲ್ಸಟ್ರೋಡ್ನಲ್ಲಿ ಡಚೆಸ್ ಜೊತೆಯಲ್ಲಿ ಆಗಾಗ ತಂಗಿದ್ದಾಗ, ಮೇರಿ ಜೋಸೆಫ್ ಬ್ಯಾಂಕ್ಸ್ ಮತ್ತು ಡೇನಿಯಲ್ ಸೋಲಾಂಡರ್ ಎಂಬ ಎರಡು ಪ್ರಸಿದ್ದ ಸಸ್ಯವಿಜ್ಞಾನಿಗಳೊಂದಿಗೆ ಮೇರಿಯ ಪರಿಚಯವಾಯಿತು. ಸಸ್ಯಶಾಸ್ತ್ರಜ್ಞರೊಂದಿಗಿನ ಈ ಸಂಪರ್ಕವು ಮೇರಿಯ ಸಸ್ಯಶಾಸ್ತ್ರದಲ್ಲಿನಾ ಆಸಕ್ತಿಗೆ ಉತ್ತೇಜನ ನೀಡಿತು ಮತ್ತು ಅವರು ಹೂವಿನ ಕಾಗದದ ಕತ್ತರಿಯ ಹಲವು ಮೂಲಗಳನ್ನು ಆಧರಿಸಿ ಜ್ಞಾನವನ್ನು ಪ್ರೋತ್ಸಾಹಿಸಿದರು.

ಕಲಾವಿದೆಯಾಗಿ ವೃತ್ತಿ ಜೀವನ[ಬದಲಾಯಿಸಿ]

ಮೇರಿ ಡೆಲಾನಿ ಯಾವಾಗಲು ಅತಿ ಆಸಕ್ತಿಯ ಕಲಾವಿದರಾಗಿದ್ದರು. ಆದರೆ ಡಾ.ಡೆಲಾನಿ ಅವರ ಮದುವೆ ಸಮಯದಲ್ಲಿ ಅವಳು ಅಂತಿಮವಾಗಿ ತನ್ನ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸಿದಳು. ಅವರು ಅತ್ಯಾಸಕ್ತಿಯ ತೋಟಗಾರರಾಗಿದ್ದರು ಮತ್ತು ಸೂಜಿಲೇಖನಗಳು, ರೇಖಾಚಿತ್ರಗಳು, ಚಿತ್ರಕಲೆಗಳು ಮತ್ತು ಕಾಗದ ಕತ್ತರಿಸುವಿಕೆಗಳಲ್ಲೂ ಉತ್ತಮವಾಗಿದ್ದರು. ಇವರು ಇವರ ಕಾಗದದ ಕತ್ತರಿಕೆಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದರು. ಈ ಮೊಸೈಕ್ಸ್ ಗಾಗಿ ಬಣ್ಣದ ಕಾಗದವು ಎದ್ದು ಕಾಣುವ ವಿವರಗಳನ್ನು ಮಾತ್ರವಲ್ಲದೇ ಬಣ್ಣಗಳ ಅಥವಾ ಒಂದೇ ಬಣ್ಣದ ಛಾಯೆಗಳನ್ನು ವ್ಯತಿರಿಕ್ತವಾಗಿ ಮತ್ತು ಇದರಿಂದಾಗಿ ಬೆಳಕಿನ ಪ್ರತಿ ಪರಿಣಾಮವು ಕಾಗದದಲ್ಲಿ ಸಿಲುಕುತ್ತಿತ್ತು. ಇವರಿಗೆ ಲೆಟಿಶಿಯಾ ಬುಶೆ, ಜಲವರ್ಣವಾದಿ ಹಾಗು ಕಿರಿಯತಜ್ಞನೊಂದಿಗೆ ಸ್ನೇಹ ಮಾಡಿದಳು. ೧೭೭೧ರಲ್ಲಿ ತನ್ನ ೭೦ರ ದಶಕದ ಆರಂಭದಲ್ಲಿ ನೋವಿನಿಂದ ಆಚೇ ಬರಲು ಇವರು ನ್ಯಾಯಲಯದಲ್ಲಿದ್ದ ಮಹಿಳೆಯರಿಗಾಗಿ ಕಾಗದವನ್ನು ಕತ್ತರಿಸುವ ಕಲಾಕೃತಿಯನ್ನು ಸೃಷ್ಟಿಸಲು ಮುಂದಾದರು.ಆಕೆಯ ಕೃತಿಗಳು ಅಸಾಧಾರಣವಾದ ಸಸ್ಯಗಳ ನಿಖರವಾದ ಚಿತ್ರಣಗಳು ಮತ್ತು ವಿವರಣಾತ್ಮಕವಾಗಿದ್ದವು. ಈ ತುಣುಕುಗಳನ್ನು ತಯಾರಿಸಲು ಅವರು ಕೈ ಬಣ್ಣವನ್ನು ಬಳಸಿದರು.

ಇವರು ೧೭೦೦ ಕೃತಿಗಳನ್ನು ರಚಿಸಿದರು. ಇವರಿಗೆ 'ಪೇಪರ್ ಮೊಸಾಯಿಕ್ಸ್' ಎಂದು ಹೆಸರು ಬಂದಿತು. ೭೧ ರಿಂದ ೮೮ರ್ ವಯಸ್ಸಿನಲ್ಲಿ, ಅವಳ ದೃಷ್ಟಿ ವಿಫಲವಾಯಿತು. ಮೇರಿ ಸುಮಾರು ೧೦೦೦ ಕಾಗದದ ಹೂಗಳನ್ನು ತಯಾರಿಸಿದರು. ಸಸ್ಯದ ಮಾದರಿಯಂತೆ ಇವರು ಕಾಗದದ ಸಹಾಯದಿಂದ ಚಿಕ್ಕ ಚಿಕ್ಕ ಚೂರು ಕತ್ತರಿಸಿ ದಳಗಳು ,ಕೇಸರಿಗಳು,ಎಲೆಗಳು ಮತ್ತು ಇತರೆ ಭಾಗಗಳನ್ನು ಪ್ರತಿನಿಧಿಸಲು ಬಣ್ಣದ ಕಾಗದದ ಸಣ್ಣ ಕಣಗಳನ್ನು ಕತ್ತರಿಸಿ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಅವುಗಳನ್ನು ಅಂಟಿಸಿದರು. ಒಂದು ತುಂಡು ಕಾಗದವನ್ನು ಇನ್ನೊಂದರ ಮೇಲೆ ಇರಿಸುವ ಮೂಲಕ ಆಕೆಯ ಅನೇಕ ಪದರಗಳನ್ನು ನಿರ್ಮಿಸಿ ಮತ್ತು ಸಂಪೂರ್ಣ ಚಿತ್ರದಲ್ಲಿ ಒಂದು ಸಸ್ಯವನ್ನು ರಚಿಸಿ ನೂರಾರು ತುಣುಕುಗಳನ್ನು ಹೊಂದಿದೆ.ಮೇರಿಯವರು ಪ್ರತಿಯೊಂದು ಹೂವುಗಳು ಸರಿಯಾಗಿವೆಯೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು, ಈ ಬಗ್ಗೆ ಅವರು ಬಹಳ ಕಾಳಜಿಯನ್ನು ವಹಿಸಿಕೊಳ್ಳುತ್ತಿದ್ದರು. ಅವರ ಕಲೆಯನ್ನು ತಿಳಿದ ಬಹಳ ಜನರು, ದಾನಿಗಳ ರೂಪದಲ್ಲಿ ಹೂವುಗಳನ್ನು ಕತ್ತರಿಸಲು ಕಳಿಸುತ್ತಿದ್ದರು. ಇವರ ಈ ಕೆಲಸ ಇಂದೂ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿ ನೋಡಲು ಸಿಗುತ್ತದೆ.

ಇವರ ಪೋಷಕರಾದ ಡೊವೆಜರ್ ಡಚೆಸ್ ಮರಣ ಹೊಂದಿದಾಗ, ಕಿಂಗ್ ಜಾರ್ಜ್ ಮತ್ತು ರಾಣಿ ಚಾರ್ಲೊಟ್ ಅವರು ವಿಂಡ್ಸರ್ನಲ್ಲಿ ಒಂದು ಸಣ್ಣ ಮನೆ ನೀಡಿ ವರ್ಷಕ್ಕೆ ಮುನ್ನೂರು ಪೌಂಡ್ಗಳ ಪಿಂಚಣಿ ನೀಡಿದರು. ಇವರು ಡಚೆಸ್ ಮನೆಯಲ್ಲಿ ವಾಸವಾಗಿದ್ದಾಗ ಇವರಿಗೆ ರಾಣಿ ಚಾರ್ಲೆಟ್ನ್ ಪರಿಚಯವಾಯಿತು, ಚಾರ್ಲೆಟ್ ನ್ಯಾಯಾಲಯದ ಆಂತರಿಕದ ಪ್ರಮುಖ ಭಾಗಕ್ಕೆ ಹತ್ತಿರವಾಗ ತೊಡಗಿದರು. ರಾಜ ಮತ್ತು ರಾಣಿ ಮೇರಿಯ ಕಾಗದದ ಕಡಿತಕ್ಕೆ ಹೆಚ್ಚು ಬೆಂಬಲ ನೀಡುತ್ತಿದ್ದರು.ಯಾವುದೇ ಕುತೂಹಲಕಾರಿ ಅಥವಾ ಸುಂದರವಾದ ಸಸ್ಯಗಳನ್ನು ಮೇರಿ ಡಿಲಾನಿಯವರೇ ಮಾಡಬೇಕೆಂದು ಯಾವಾಗಲು ಬಯಸಿದರು.೧೯೮೦ರಲ್ಲಿ, ಮೇರಿ ಡೆಲಾನಿ ಅವರ ವಂಶಸ್ತರಾದ ಸಹೋದರಿ ಆನ್ನೆ, ರುಥ್ ಹೇಡನ್, ಡೆಲಾನಿ ಅವರ ಕೃತಿ ಶ್ರೀಮತಿ 'ಡೆಲಾನಿ ಆಂಡ್ ಹರ್ ಫ್ಲವರ್ಸ್' ಎಂಬ ಪುಸ್ತಕವನ್ನು ಪ್ರಕಟಿಸಿದರು,೨೦೦೦ರಲ್ಲಿ ಬ್ರಿಟಿಷ ಮ್ಯೂಸಿಯಂ ಪ್ರೆಸ್ ಅವರು ಪುಸ್ತಕವನ್ನು ಪುನಃಹ ಪ್ರಕಟಿಸಿದರು.

ಡಚಿಸ್ಗೆ ೬೦ ವರ್ಷ, ಮೇರಿಗೆ ೧೭ ವರ್ಷವಷ್ಟೇ. ಫೆಬ್ರವರಿ ೧೭೧೮ನಲ್ಲಿ ಇವರ ಮದುವೆ ನಡೆಯಿತು. ತನ್ನ ತಂದೆ ತಾಯಿ ಹಣಕಾಸಿಗೆ ಪೆಂಡೆವ್ಸ್ ಮೇಲೆ ಅವಲಂಬಿತರಾಗಿದ್ದರು. ಏಪ್ರಿಲ್ನಲ್ಲಿ ಪೆಂಡೆವ್ಸ್ ರೋಸ್ಕೊ ಬಂಗಲೆಗೆ ತೆರೆಳಿದರು, ಅಲ್ಲಿನ ವೀಕ್ಷಣೆಗಳನ್ನು ಆನಂದಿಸಲು ಆಗಲಿಲ್ಲಾ. ಮದುವೆಯ ಎರಡನೇ ವರ್ಷವೇ ತನ್ನ ಗಂಡ ಅನಾರೋಗ್ಯರಾದರು, ಅವರು ಮಂಚವನ್ನು ಹಿಡಿದರು.ಇಬ್ಬರು ಲಂಡನ್ ನಲ್ಲಿ ಮನೆ ಪಡೆದರು. ಇವರ ಗಂಡ ಮಿತಿಮೀರಿ ಕುಡಿಯಲು ಪ್ರಾರಂಭಿಸಿದರು. ಶ್ರೀಮತಿ ಪೆಂಡೆವ್ಸ್ ತನ್ನ ಅನೇಕ ಹಳೆ ಸ್ನೇಹಿತರನ್ನು ಮತ್ತೆ ಜೊತೆ ಸೇರಲು ಆಗಲಿಲ್ಲಾ. ೧೭೨೪ರಲ್ಲಿ ಪೆಂಡೆವ್ಸ್ ತನ್ನ ನಿದ್ರೆಯಲ್ಲಿ ಇದ್ದಕ್ಕಿದ್ದಂತೆ ನಿಧನರಾದರು, ಮೇರಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದರು. ಪೆಂಡೆವ್ಸ್ ಸಾಯುವಾಗ ತನ್ನ ಹಂಡತಿಯ ಬಗ್ಗೆ ಯೋಚನೆ ಮಾಡಿರಲಿಲ್ಲಾ. ಪೆಂಡೆವ್ಸ್ನ ಎಸ್ಟೇಟ್ ಉಳಿದರೂ, ಮೇರಿಗೆ ಏನು ಅನುವಂಶಿಕವಾಗಿರಲಿಲ್ಲಾ.[೨]

ಉಲೇಖಗಳು[ಬದಲಾಯಿಸಿ]