ಮೆರಿಲ್ ಸ್ಟ್ರೀಪ್

ವಿಕಿಪೀಡಿಯ ಇಂದ
Jump to navigation Jump to search
ಮೆರಿಲ್ ಸ್ಟ್ರೀಪ್
Meryl Streep at the Tokyo International Film Festival 2016 (32802149674) (cropped).jpg
ಹುಟ್ಟು
ಮೇರಿ ಲೂಯಿಸ್ ಸ್ಟ್ರೀಪ್

೨೨-೦೬-೧೯೪೯
ಶಿಕ್ಷಣವಸ್ಸಾರ್ ಕಾಲೇಜ್ (ಕಲಾ ಪದವೀಧರೆ)
ಯೇಲ್ ವಿಶ್ವವಿದ್ಯಾಲಯ (ಮಾಸ್ಟರ್ ಆಫ್ ಫೈನ್ ಆರ್ಟ್ಸ್)
ವೃತ್ತಿನಟಿ
ಕ್ರಿಯಾಶೀಲ ವರ್ಷಗಳು1969–ಪ್ರಸ್ತುತ
ಜೀವನ ಸಂಗಾತಿ(ಗಳು)ಡಾನ್ ಗಮ್ಮೆರ್ , 1978
Partner(s)ಜಾನ್ ಕ್ಯಾಜೆಲ್
(1976–1978; ನಿಧನ)
ಮಕ್ಕಳುಹೆನ್ರಿ ವೋಲ್ಫ್ ಗಮ್ಮರ್

ಮಾಮೀ ಗುಮ್ಮೆರ್
ಗ್ರೇಸ್ ಗಮ್ಮರ್

ಲೂಯಿಸಾ ಗಮ್ಮರ್
ಜಾಲತಾಣmerylstreeponline.net
ಹಸ್ತಾಕ್ಷರ
Meryl Streep Signature.svg

ಮೆರಿಲ್ ಸ್ಟ್ರೀಪ್ (ಜನನ ಮೇರಿ ಲೂಯಿಸ್ ಸ್ಟ್ರೀಪ್; ಜೂನ್ 22, 1949) ಒರ್ವ ಅಮೆರಿಕ ನಟಿ. ಅವರು ನ್ಯೂ ಜೆರ್ಸಿಯಲ್ಲಿ ಜನಿಸಿದರು.ಫಾಲಿಂಗ್ ಇನ್ ಲವ್, ದಿ ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿ ಮತ್ತು ದಿ ಹೌಸ್ ಆಫ್ ಸ್ಪಿರಿಟ್ಸ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟ್ರೀಪ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಅವರು ಇಲ್ಲಿಯವರೆಗೆ ಮೂರು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಒಟ್ಟಾರೆಯಾಗಿ ಹದಿನೇಳುಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮಾ ಅವರು 2010 ರ ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

1975 ರಲ್ಲಿ ಟ್ರೆಲ್ವನಿ ಆಫ಼್ ದಿ ವೆಲ್ಲ್ಸ್ ಎಂಬ ನಾಟಕದ ಮೂಲಕ ರಂಗ ಪ್ರವೇಷ ಮಾಡಿದರು. 1977 ರಲ್ಲಿ, ದಿ ಡೆಡ್ಲೀಯಸ್ಟ್ ಸೀಸನ್ ಎಂಬ ದೂರದರ್ಶನ ಚಲನಚಿತ್ರದಲ್ಲಿ ಅವರು ಕಿರುತೆರೆಯನ್ನು ಪ್ರವೇಷ ಮಾಡಿದರು ಮತ್ತು ಅದೇ ವರ್ಷದಲ್ಲಿ ಜೂಲಿಯಾ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.1978 ರ ಕಿರು-ಸರಣಿ ಹೊಲೊಕಸ್ಟ್ ಪಾತ್ರಕಾಗಿ ಎಮ್ಮಿ ಪ್ರಶಸ್ತಿಯನ್ನು ಗೆದ್ದರು, ಮತ್ತು ದಿ ಡೀರ್ ಹಂಟರ್ಗಾಗಿ ತಮ್ಮ ಮೊದಲ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನವನ್ನು ಪಡೆದರು. ಕ್ರೀಮರ್ vs. ಕ್ರಾಮರ್ (1979) ಗಾಗಿ ಅತ್ಯುತ್ತಮ ಪೋಷಕ ನಟಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು .ಸೋಫೀಸ್ ಚಾಯ್ಸ್ (1982) ಮತ್ತು ದಿ ಐರನ್ ಲೇಡಿಗಾಗಿ(2011) ಅತ್ಯುತ್ತಮ ನಟಿ ಅಕಾಡೆಮಿ ಪ್ರಶಸ್ತಿ ಗೆದ್ದಿದ್ದಾರೆ. [೧]

ಪ್ರೌಢಶಾಲೆಯಲ್ಲಿ ಮೆರಿಲ್ ಸ್ಟ್ರೀಪ್, 1966
1979 ರಲ್ಲಿ ಸ್ಟ್ರೀಪ್
ಹಾಲಿವುಡ್ ನ ವಾಕ್ ಆಫ್ ಫೇಮ್ನಲ್ಲಿ ಸ್ಟ್ರೀಪ್ ಅವರ ನಕ್ಷತ್ರ

ಮೂಲಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]