ಮೂಕತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಕತನ (ಮೂಕತೆ) ಎಂದರೆ ಮಾತನಾಡಲು ಆಗದಿರುವ ಸ್ಥಿತಿ. ಇದು ಹಲವುವೇಳೆ ವಾಕ್ದೋಷ ಅಥವಾ ಶಸ್ತ್ರಚಿಕಿತ್ಸೆಯಿಂದ ಉಂಟಾಗುತ್ತದೆ. ಮೂಕನಿರುವ ವ್ಯಕ್ತಿಯು ಕೆಲವು ಸಾಮಾಜಿಕ ಸಂದರ್ಭಗಳಲ್ಲಿ ಮಾತನಾಡಲು ಇಷ್ಟಪಡದಿರದ ಕಾರಣದಿಂದ ಹಾಗೆ ಇರಬಹುದು.

ಕಾರಣಗಳು[ಬದಲಾಯಿಸಿ]

ದೈಹಿಕವಾಗಿ ಮೂಕವಿರುವವರು ಮಾತಿಗೆ ಅಗತ್ಯವಾದ ಮಾನವ ಶರೀರದ ಭಾಗಗಳಲ್ಲಿ (ಧ್ವನಿ ತಂತುಗಳು, ಶ್ವಾಸಕೋಶಗಳು, ಶ್ವಾಸನಾಳ, ಅನ್ನನಾಳ, ಬಾಯಿ, ಅಥವಾ ನಾಲಿಗೆ, ಇತ್ಯಾದಿ) ಸಮಸ್ಯೆಗಳನ್ನು ಹೊಂದಿರಬಹುದು.

ಮಿದುಳಿನ ಎಡ ಕೆಳಭಾಗದ ಮುಂದಿನ ಹೊರಪದರದಲ್ಲಿ ಸ್ಥಿತವಾಗಿರುವ ಬ್ರೋಕಾ ಪ್ರದೇಶಕ್ಕೆ ಆಘಾತ ಅಥವಾ ಗಾಯವು ಮೂಕತನವನ್ನು ಉಂಟುಮಾಡಬಹುದು.[೧]

ನಿರ್ವಹಣೆ[ಬದಲಾಯಿಸಿ]

ಕೆಲವು ಮೂಕ ರೋಗಿಗಳು ತಮ್ಮ ಧ್ವನಿತಂತುಗಳನ್ನು ಅಲುಗಾಡಿಸುವ/ಕಂಪಿಸುವ ಯಂತ್ರಗಳನ್ನು ಬಳಸಿ ತಮ್ಮ ಅಂಗವೈಕಲ್ಯಕ್ಕೆ ಹೊಂದಿಕೊಂಡಿದ್ದಾರೆ. ಇದರಿಂದ ಅವರು ಮಾತನಾಡಲು ಅವಕಾಶವಾಗುತ್ತದೆ. ಅನ್ನನಾಳಜನ್ಯ ಮಾತು ಸ್ವಲ್ಪ ವಾಕ್ ಸಾಮರ್ಥ್ಯವನ್ನು ನೀಡಬಲ್ಲದು. ಇತರರು ಸಂವಹನ ಮಾಡಲು ಸನ್ನೆ ಭಾಷೆಯನ್ನು ಕಲಿಯುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Aphasia".
"https://kn.wikipedia.org/w/index.php?title=ಮೂಕತನ&oldid=911651" ಇಂದ ಪಡೆಯಲ್ಪಟ್ಟಿದೆ