ಮುಷ್ತಾಖ್ ಹುಸೇನ್ ಖಾನ್

ವಿಕಿಪೀಡಿಯ ಇಂದ
Jump to navigation Jump to search
ಮುಷ್ತಾಖ್ ಹುಸೇನ್ ಖಾನ್
Mushtaq Hussain Khan.jpg
ಹಿನ್ನೆಲೆ ಮಾಹಿತಿ
ಮತ್ತೊಂದು ಹೆಸರುSher-e-Mausiqi
ಜನನ1878
Sahaswan, India
ಮೂಲಸ್ಥಳSahaswan, Budaun District, ಉತ್ತರ ಪ್ರದೇಶ, India
ಮರಣಆಗಸ್ಟ್ ೧೩, ೧೯೬೪(1964-08-13) (aged ೮೫–೮೬)
Delhi, India
ಶೈಲಿ/ಗಳುIndian classical music
ವೃತ್ತಿಗಳುVocalist
ಸಕ್ರಿಯ ವರುಷಗಳು1896—1964
L‍abelsSaregama

ಮುಷ್ತಾಖ್ ಹುಸೇನ್ ಖಾನ್ (೧೮೭೮ - ೧೯೬೪) ಒಬ್ಬರು ಭಾರತದ ಶಾಸ್ತ್ರೀಯ ಗಾಯಕ. ಇವರು ರಾಂಪುರ - ಸಹಸ್ವಾನ್ ಘರಾನಾಕ್ಕೆ ಸೇರಿದವರಾಗಿದ್ದರು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಮುಷ್ತಾಖ್ ಹುಸೇನ್ ಹುಟ್ಟಿದ್ದು, ಸಹಸ್ವಾನ್ ಎಂಬ ಸಾಂಪ್ರದಾಯಿಕ ಸಂಗೀತಗಾರರ ಕುಟುಂಬದಲ್ಲಿ. ಇವರು ಹುಟ್ಟೂರು ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಸಣ್ಣ ಪಟ್ಟಣ. ಅವರು ಅಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಅವರು ಹತ್ತು ವಯಸ್ಸಿನವರಾಗಿದ್ದಾಗ, ಅವರ ತಂದೆ ಉಸ್ತಾದ್ ಕಲ್ಲಾನ್ ಖಾನ್ ರೇ ಪಾಠಗಳನ್ನು ಕಲಿಸಲು ಪ್ರಾರಂಭಿಸಿದ್ದರು. ಮುಷ್ತಾಖ್ ಹುಸೇನ್ ಖಾನ್ ಹನ್ನೆರಡು ವರುಷದವರಾಗಿದ್ದಾಗ ಹೈದರ್ ಖಾನ್ ರ ಶಿಷ್ಯರಾದರು ಮತ್ತು ಅವರೊಂದಿಗೆ ನೇಪಾಳದ ಕಾಠ್ಮಂಡುವಿಗೆ ಹೋದರು. ಕೊನೆಗೂ ಎರಡು ವರುಷಗಳ ಬಳಿಕ, ಮುಷ್ತಾಖ್ ಹುಸೇನ್ ತಮ್ಮ ಗುರುಗಳಾದ ಇನಾಯತ್ ಹುಸೇನ್ ಖಾನ್ರ ಕೆಳಗೆ ೧೮ ವರುಷಗಳ ಕಾಲ ತಮ್ಮ ಜೀವನವನ್ನು ಸಂಗೀತ ಕಲಿಕೆಯಲ್ಲಿಯೇ ಕಳೆದರು.

ಸಂಗೀತದ ಉದ್ಯೋಗ[ಬದಲಾಯಿಸಿ]

ತಮ್ಮ ೩೫ನೇ ವಯಸ್ಸಿನಲ್ಲಿ ಮುಷ್ತಾಖ್ ಹುಸೇನ್, ರಾಂಪುರದಲ್ಲಿ ಆಸ್ಥಾನ ಸಂಗೀತಗಾರರಲ್ಲಿ ಒಬ್ಬರಾಗಿದ್ದರು. ನಂತರ, ಅವರು ರಾಂಪುರದಲ್ಲಿಯೇ ಆಸ್ಥಾನ ಸಂಗೀತಗಾರರ ಮುಖ್ಯಸ್ಥರಾದರು. ದೇಶದೆಲ್ಲೆಡೆ ಸಂಗೀತ ಸಮ್ಮೇಳನಗಳು ಪ್ರಾರಂಭವಾದಾಗ, ಮುಷ್ತಾಖ್ ಹುಸೇನ್ ರನ್ನು ಭಾಗವಹಿಸಲು ಆಹ್ವಾನಿಸುತ್ತಿದ್ದರು.[೧]

ಶಿಷ್ಯ ವೃಂದ[ಬದಲಾಯಿಸಿ]

ಅವರ ಸುಧೀರ್ಘ ಉದ್ಯೋಗದ ಅವಧಿಯಲ್ಲಿ, ಅನೇಕ ಶಿಷ್ಯಂದಿರನ್ನು ಮುಷ್ತಾಖ್ ಹುಸೇನ್ ಖಾನ್ ತರಬೇತಿ ನೀಡಿದ್ದರು. ಭೀಮಸೇನ ಜೋಷಿ, ಶಾನ್ನೋ ಖರಾನಾ, ಅವರ ಅಳಿಯ ಗುಲಾಮ್ ಸಾದಿಖ್ ಖಾನ್, ನೈನಾ ದೇವಿ ಮತ್ತು ಸುಲೋಚನಾ ಬ್ರಹಸ್ಪತಿ, ಇವರು ಮಾತ್ರವಲ್ಲದೆ ಅವರ ಸ್ವಂತ ಮಕ್ಕಳನ್ನೂ ಶಿಷ್ಯಂದಿರಾಗಿ ರೂಪಿಸಿದರು.

ಪ್ರಶಸ್ತಿಗಳು ಮತ್ತು ಸಾಧನೆ[ಬದಲಾಯಿಸಿ]

ಯಾವಾಗ ಭಾರತ ಸರಕಾರ ಕಲಾ ಸಾಧನೆಯಲ್ಲಿ ಅತ್ಯುತ್ತಮ ಪ್ರತಿಪಾದಕರನ್ನು ಗುರುತಿಸುವ ಕೆಲಸ ಮಾಡಿತೋ, ಆವಾಗ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದ ಮೊದಲ ಗಾಯಕರಾದರು. ೧೯೫೨ರಲ್ಲಿ ಅವರಿಗೆ ಈ ಪ್ರಶಸ್ತಿಯನ್ನಿತ್ತು ಸಮ್ಮಾನಿಸಲಾಯಿತು. ಮಾತ್ರವಲ್ಲದೆ, ಸಂಗೀತ ನಾಟಕ ಅಕಾದೆಮಿ ಪ್ರಶಸ್ತಿ ಪಡೆದ ಮೊದಲನೆಯವರು ಕೂಡ ಇವರೇ ಆಗಿದ್ದಾರೆ. ೧೯೫೬ರಲ್ಲಿ ರಾಂಪುರದಿಂದ ನಿವೃತ್ತಿ ಹೊಂದಿ, ದೆಹಲಿಯ ಶ್ರೀರಾಮ್ ಭಾರತೀಯ ಕಲಾ ಕೇಂದ್ರವನ್ನು ಸೇರಿಕೊಂಡರು. ೧೯೫೭ರಲ್ಲಿ ಮುಷ್ತಾಖ್ ಹುಸೇನ್ ಖಾನ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.

ಧ್ವನಿ ಮುದ್ರಿಕೆ ಪಟ್ಟಿ[ಬದಲಾಯಿಸಿ]

  • ಗಾಂಧಾರಿ, ಮಿರಾ ಮಲ್ಹಾರ್, ಕಾಫಿ ತಪ್ಪ[೨]
  • ಗ್ರೇಟ್ ಮಾಸ್ಟರ್ ಗ್ರೇಟ್ ಮ್ಯೂಸಿಕ್ (ಬಾನುಲಿ)[೩]
  • ಖಯಾಲ್ ಗುಂಕರಿ (ಬಾನುಲಿ)
  • ಖಯಾಲ್ ಮತ್ತು ತರಾನಾ-ಬಿಹಾಗ್
  • ರಾಂಪುರ್ ಸಹಸ್ವಾನ್ ಘರಾನಾ
  • ಕ್ಲಾಸಿಕ್ ಗೋಲ್ಡ್ - ರೇರ್ ಜೆಮ್ಸ್

ನಿಧನ[ಬದಲಾಯಿಸಿ]

ಮುಷ್ತಾಖ್ ಹುಸೇನ್ ಖಾನ್ ೧೯೬೪ರ ಆಗಸ್ಟ್ ೧೩ರಂದು ನಿಧನ ಹೊಂದಿದರು.

ಉಲ್ಲೇಖಗಳು[ಬದಲಾಯಿಸಿ]

  1. http://oriental-traditional-music.blogspot.com/2012/09/ustad-mushtaq-hussain-khan-1880-1964_25.html
  2. https://courses.nus.edu.sg/course/ellpatke/miscellany/mushtaq-hussain.htm
  3. https://www.discogs.com/artist/6135220-Mushtaq-Hussain-Khan