ಮುಪ್ಪಿನ ಷಡಕ್ಷರಿ

ವಿಕಿಪೀಡಿಯ ಇಂದ
Jump to navigation Jump to searchಮುಪ್ಪಿನ ಷಡಕ್ಷರಿ : -ಇವರು ಕ್ರಿ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತದೆ. ಇವರು ಅನೇಕ ತತ್ವಪದಗಳನ್ನು ರಚಿಸಿದ್ದು. "ಸುಬೋಧಸಾರ" ಕೃತಿಯಲ್ಲಿ ಅನೇಕ ಹಾಡುಗಳಿವೆ. ಕನ್ನಡ ಸಾಹಿತ್ಯಲೋಕದಲ್ಲಿ ಮುಪ್ಪಿನ ಷಡಕ್ಷರಿಯ 'ತಿರುಕನ ಕನಸು" ಹಾಗೂ ಪಂಜೆಯವರ 'ಹಾವಿನ ಹಾಡು" ಗೀತೆಗಳ ಕೇಳದವರಾರು? ಮೇಲ್ನೋಟಕ್ಕೆ ಮಕ್ಕಳ ಗೀತೆಗಳ ಲಯ ಹೊಂದಿರುವ ಈ ಹಾಡುಗಳ ಗರ್ಭದಲ್ಲಿ ಅಗೆದಷ್ಟೂ ಅರ್ಥವಂತಿಕೆ ಉಂಟು. ಇಂದಿನ ಮಕ್ಕಳಿಗೆ ಅಂದಿನ ಎರಡು ಹಾಡುಗಳು.

“ತಿರುಕನೋರ್ವನೂರ ಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿರುತ್ತಲೊಂದು ಕನಸು ಕಂಡನೆಂತೆನೆ”!.

ಎನ್ನುವದು ತುಂಬ ಜನಪ್ರಿಯವಾದ ತತ್ವಪದವಾಗಿದೆ.

ಸಕಲಕೆಲ್ಲಕೆ ನೀನೇ ಅಕಳಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು.

ಅವರವರ ದರುಶನಕೆ ಅವರವರ ದೇಶದಲಿ

ಅವರವರಿಗೆಲ್ಲ ಗುರು ನೀನೊಬ್ಬನೇ

ಅವರವರ ಭಾವಕ್ಕೆ ಅವರವರ ಅರ್ಚನೆಗೆ

ಅವರವರಿಗೆ ದೇವ ನೀನೊಬ್ಬನೇ.!


"ಹೋರಾಟವಿಕ್ಕಿಸಲು ಬೇರಾದೆಯಲ್ಲದೆ

ಬೇರುಂಟೆ ಜಗದೊಳಗೆ ಎಲೆ ದೇವನೇ

ಆರೂ ಅರಿಯರು ನೀನು ಬೇರಾದ ಪರಿಗಳನು

ಮಾರಾರಿ ಶಿವ ಷಡಕ್ಷರಲಿಂಗವೆ"!.


"ತಿರುಕನೊರ್ವನೂರ ಮುಂದೆ

ಮುರುಕು ಧರ್ಮಶಾಲೆಯಲ್ಲಿ

ಒರಗಿರುತ್ತಲೊಂದು ಕನಸ ಕಂಡನೆಂತೆನೆ

ಪುರದ ರಾಜ ಸತ್ತನವಗೆ

ವರಕುಮಾರರಿಲ್ಲದಿರಲು

ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು.!


"ನಡೆದು ಯಾರ ಕೊರಳಿನಲ್ಲಿ

ತೊಡರಿಸುವದೊ ಅವರ ಪಟ್ಟ

ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ

ಒಡನೆ ತನ್ನ ಕೊರಳಿನಲ್ಲಿ

ತೊಡರಿಸಲ್ಕೆ ಕಂಡು ತಿರುಕ

ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು" !.


"ಪಟ್ಟವನ್ನು ಕಟ್ಟಿ ನೃಪರು

ಕೊಟ್ಟರವಗೆ ಕನ್ಯೆಯರನು

ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ

ಭಟ್ಟಿನಿಗಳ ಕೂಡಿ ನಲ್ಲ

ನಿಷ್ಟಸುಖದೊಳಿರಲವಂಗೆ

ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ".!


"ಓಲಗದಲಿರುತ್ತ ತೊಡೆಯ

ಮೇಲೆ ಮಕ್ಕಳಾಡುತಿರಲು

ಲೀಲೆಯಿಂದ ಚಾತುರಂಗ ಬಲವ ನೋಡುತ

ಲೋಲನಾಗಿ ನುಡಿದನಿನಿತು

ಕೇಳು ಮಂತ್ರಿ, ಸುತರುಗಳಿಗೆ

ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ".!


"ನೋಡಿ ಬನ್ನಿರೆನಲು ಜೀಯ

ನೋಡಿ ಬಂದೆವೆನಲು ಬೇಗ

ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ

ಗಾಢವಾಗೆ ಸಂಭ್ರಮಗಳು

ಮಾಡುತ್ತಿದ್ದ ಮದುವೆಗಳನು

ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ".!


"ಧನದ ಮದವು ರಾಜ್ಯ ಮದವು

ತನುಜಮದವು ಯುವತಿಮದವು

ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು

ಅನಿತರೊಳಗೆ ನೃಪರ ದಂಡು

ಮನೆಯ ಮುತ್ತಿದಂತೆಯಾಗೆ

ಕನಸ ಕಾಣುತಿರ್ದು ಹೆದರಿ ಕಣ್ಣ ತೆರೆದನು"!.


ಸಾಹಿತ್ಯ: ಮುಪ್ಪಿನ ಷಡಕ್ಷರಿ