ವಿಷಯಕ್ಕೆ ಹೋಗು

ಭೋಗ ಷಟ್ಪದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ 'ವೃಷಭಗೀತೆ'ಕಾವ್ಯಭೋಗ ಷಟ್ಪದಿಯಲ್ಲಿದೆ

ಉದಾಹರಣೆಗೆ: ಮುಪ್ಪಿನ ಷಡಕ್ಷರಿಯ ವಚನವನ್ನು ನೋಡುವುದಾದರೆ

ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ವೊರಗಿರುತ್ತಲೊಂದು ಕನಸಕಂಡನೆಂತನೆ
ಪುರದ ರಾಜಸತ್ತನವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ಇದರ ಛಂದಸ್ಸಿನ ಪ್ರಸ್ತಾರ:

ತಿರುಕ|ನೋರ್ವ|ನೂರ| ಮುಂದೆ|
ಮುರುಕು| ಧರ್ಮ|ಶಾಲೆ|ಯಲ್ಲಿ|
ವೊರಗಿ|ರುತ್ತ|ಲೊಂದು| ಕನಸ|ಕಂಡ|ನೆಂತ|ನೆ
ಪುರದ |ರಾಜ|ಸತ್ತ|ನವಗೆ|
ವರ ಕು|ಮಾರ|ರಿಲ್ಲ|ದಿರಲು
ಕರಿಯ| ಕೈಗೆ| ಕುಸುಮ| ಮಾಲೆ|ಯಿತ್ತು| ಪುರದೊ|ಳು

'|' ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೩|೩|೩|೩
೩|೩|೩|೩
೩|೩|೩|೩|೩|೩|-
೩|೩|೩|೩
೩|೩|೩|೩
೩|೩|೩|೩|೩|೩|-

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

2 ne pyara prastara bekagittu