ಮುತ್ಯಾಲಮಡುವು
ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ - ಮುತ್ತುಗಳು (Pearl) ಹಾಗು ಮಡುವು - ಮಡು (Valley) ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ ಧುಮುಕುವುದರಿಂದ, ಈ ಹೆಸರು ಬಂದಿದೆ.
ಪ್ರವಾಸೋದ್ಯಮ[ಬದಲಾಯಿಸಿ]
ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಮುತ್ಯಾಲಮಡುವು, ಆನೇಕಲ್ ನಿಂದ ೫ ಕಿ.ಮೀ ಹಾಗು ಬೆಂಗಳೂರಿನಿಂದ ೪೦ ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ಜಲಪಾತ ಬಳಿ, ಒಂದು ಶಿವನ ದೇವಾಲಯವಿದೆ .ಅಲ್ಲಿ ಪ್ರತಿದಿನ ಬೆಳಿಗ್ಗೆ ಪೂಜೆ(ಪ್ರಾರ್ಥನೆ) ಮಾಡಲಾಗುತ್ತದೆ.ಈ ಸ್ಥಳದಲ್ಲಿ ಜಲಪಾತವಿರುವುದರ ಕಾರಣದಿಂದಾಗಿ, ಪಕ್ಷಿಗಳ ಸಾಂದ್ರತೆಯನ್ನು ಹೊಂದಿದೆ.ಮತ್ತೊಂದು ಆಕರ್ಷಣೆ ಥತ್ತೆಕೆರೆ(Thattekere) ಸರೋವರ ಹತ್ತಿರದಲ್ಲಿದೆ.

Muthyalamaduvu ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.