ವಿಷಯಕ್ಕೆ ಹೋಗು

ಮಿಷ್ಟಿ ದೋಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಷ್ಟಿ ದೋಯಿ
ಮೂಲ
ಪರ್ಯಾಯ ಹೆಸರು(ಗಳು)ಮೀಠಿ ದಹಿ
ಪ್ರಾಂತ್ಯ ಅಥವಾ ರಾಜ್ಯಭಾರತೀಯ ಉಪಖಂಡದ ಬಂಗಾಳ ಪ್ರದೇಶ
ವಿವರಗಳು
ಸೇವನಾ ಸಮಯಡಿಜ಼ರ್ಟ್
ನಮೂನೆಮೊಸರು
ಮುಖ್ಯ ಘಟಕಾಂಶ(ಗಳು)ಹಾಲು, ಮೊಸರು, ಸಕ್ಕರೆ, ಬೆಲ್ಲ
ಪ್ರಭೇದಗಳುನಬದ್ವೀಪೆರ್ ಲಾಲ್ ದೋಯಿ

ಮಿಷ್ಟಿ ದೋಯಿ ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಹುದುಗಿಸಿದ ಸಿಹಿ ದೋಯಿ (ಮೊಸರು) (ಸಿಹಿ ತಿನಿಸು); ಮತ್ತು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿದೆ. ಇದರ ಬಡು ಅವಧಿ ಸುಮಾರು ಒಂದು ವಾರದಿಂದ ಒಂದು ದಿನ.[] ಇದನ್ನು ಹಾಲು ಮತ್ತು ಸಕ್ಕರೆ/ಬೆಲ್ಲದಿಂದ ತಯಾರಿಸಲಾಗುತ್ತದೆ. ತಯಾರಿಕೆಯ ತಂತ್ರದ ಕಾರಣ ಇದು ಸಾದಾ ಮೊಸರಿನಿಂದ ಭಿನ್ನವಾಗಿದೆ.

ಮಿಷ್ಟಿ ದೋಯಿಯನ್ನು ಹಾಲು ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ, ಅದಕ್ಕೆ ಸಕ್ಕರೆ ಸೇರಿಸಿ (ಗುರಾ-ಕಂದು ಸಕ್ಕರೆ ಅಥವಾ ಖೇಜುರ್ ಗುರಾ-ಖರ್ಜೂರದ ಕಾಕಂಬಿ) ತಯಾರಿಸಲಾಗುತ್ತದೆ. ಹಾಲು ಹುದುಗು ಬರಲು ರಾತ್ರಿಯಿಡಿ ಬಿಡಲಾಗುತ್ತದೆ. ಮೀಠಾ ದಹಿಯನ್ನು ತಯಾರಿಸಲು ಯಾವಾಗಲೂ ಜೇಡಿಮಣ್ಣಿನ ಪಾತ್ರೆಯನ್ನು ಬಳಸಲಾಗುತ್ತದೆ ಏಕೆಂದರೆ ಅದರ ರಂಧ್ರಯುಕ್ತ ಸುತ್ತಾಲೆಯ ಮೂಲಕ ಆಗುವ ನೀರಿನ ಕ್ರಮೇಣವಾದ ಬಾಷ್ಪೀಕರಣದಿಂದ ಮೊಸರನ್ನು ಮತ್ತಷ್ಟು ಗಟ್ಟಿಯಾಗಿಸುವುದರ ಜೊತೆಗೆ, ಸೂಕ್ಷ್ಮ ಜೀವಾಣುಗಳ ಬೆಳವಣಿಗೆಗೆ ಸರಿಯಾದ ಉಷ್ಣಾಂಶವನ್ನು ಸೃಷ್ಟಿಸುತ್ತದೆ. ಹಲವುವೇಳೆ ಮೊಸರಿಗೆ ಪರಿಮಳ ಬರಿಸಲು ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಲಾಗುತ್ತದೆ. ಪಾಶ್ಚಾತ್ಯದಲ್ಲಿ ಬೇಕ್ ಮಾಡಿದ ಮೊಸರು ಇದಕ್ಕೆ ಹೋಲುವ ತಯಾರಿಕೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Whyte, Mariam; Lin, Yong Jui (2010). Bangladesh. New York: Marshall Cavendish Benchmark. p. 144. ISBN 9780761444756.