ಮಿಷೆಲ್ ಬಾಕಲೆಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೆರೋನಿಕಾ ಮಿಷೆಲ್ ಬಾಕಲೆಟ್ ಯರಿಯಾ (ಜನನ ಸೆಪ್ಟೆಂಬರ್ ೨೯ ೧೯೫೧) ದಕ್ಷಿಣ ಅಮೇರಿಕ ಖಂಡದ ಚಿಲಿ ದೇಶದ ಅಧ್ಯಕ್ಷೆ. ಈಕೆ ಈ ಸ್ಥಾನಕ್ಕೇರಿದ ಈ ದೇಶದ ಪ್ರಥಮ ಮಹಿಳೆ. ಚಿಲಿಯ ಸಮಾಜವಾದಿ ಪಕ್ಷಕ್ಕೆ ಸೇರಿದ ಈಕೆ ದೇಶದ ಮುಕ್ತ ವಾಣಿಜ್ಯ ನೀತಿಯ ಪರವಾಗಿ ಚುನಾವಣೆ ಪ್ರಚಾರ ಮಾಡಿ ದೇಶದ ಶ್ರೀಮಂತರ ಮತ್ತು ಬಡವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಪಣ ತೊಟ್ಟವರು. ಇವರ ಅಧಿಕಾರಾವಧಿ ಮಾರ್ಚ್ ೧೧, ೨೦೦೬ರಂದು ಪ್ರಾರಂಭವಾಯಿತು.

ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕಿ ಮತ್ತು ಮಕ್ಕಳ ತಜ್ಞೆಯಾದ ಈಕೆ ಸೇನೆಯ ಬಗ್ಗೆ ಅಧ್ಯಯನ ಮಾಡಿ ಮಾಜಿ ಅಧ್ಯಕ್ಷ ರಿಕಾರ್ಡೊ ಲಾಗೊಸ್ ಮಂತ್ರಿಮಂಡಳದಲ್ಲಿ ಆರೋಗ್ಯ ಮಂತ್ರಿ ಹಾಗೂ ರಕ್ಷಣಾ ಮಂತ್ರಿಯಾಗಿದ್ದರು. ಕ್ಯಾಥಲಿಕ್ ಬಹುಮತದ ದೇಶದಲ್ಲಿ ತಮ್ಮನ್ನು ನಾಸ್ತಿಕರೆಂದು ಗುರುತಿಸಿಕೊಳ್ಳುತ್ತಾರೆ. ಬಹು ಭಾಷಾ ಪ್ರವೀಣೆಯಾದ ಈಕೆ ಸ್ಪಾನಿಷ್, ಇಂಗ್ಲಿಷ್, ಜರ್ಮನ್, ಪೋರ್ಚುಗೀಸ್, ಮತ್ತು ಫ್ರೆಂಚ್ ಭಾಷೆಗಳನ್ನು ಮಾತನಾಡಬಲ್ಲರು. ೨೦೦೬ರಲ್ಲಿ ಫೋರ್ಬ್ಸ್ ಪತ್ರಿಕೆ ಇವರನ್ನು ಜಗತ್ತಿನ ೧೦೦ ಪ್ರಭಾವಶಾಲಿ ಮಹಿಳೆಯರಲ್ಲಿ ೧೭ನೇ ಸ್ಥಾನದಲ್ಲಿಟ್ಟಿದೆ.[೧]

ಇವನ್ನೂ ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]