ಮಾವೋನ ಕೊನೆಯ ನರ್ತಕ
ಗೋಚರ
ಲೇಖಕರು | ಲೀಕುನ್ಕ್ಸಿನ್ |
---|---|
ಮೂಲ ಹೆಸರು | Mao's Last Dancer |
ಅನುವಾದಕ | ಜಯಶ್ರೀ ಭಟ್ |
ಚಿತ್ರಲೇಖಕ | ವೆಂಕಟರಮಣ ಭಟ್ |
ಮುಖಪುಟ ಕಲಾವಿದ | ಅಪಾರ |
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಾರ | ಆತ್ಮಕತೆ |
ಪ್ರಕಾಶಕರು | ಛಂದ ಪುಸ್ತಕ |
ಪ್ರಕಟವಾದ ದಿನಾಂಕ | ಡಿಸೆಂಬರ್ ೧೬, ೨೦೧೨ |
ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿದ್ದು | ೨೦೦೩ |
ಪುಟಗಳು | ೨೭೮ |
ಐಎಸ್‍ಬಿಎನ್ | ISBN819261130-2 |
ಚೀನಾ ದೇಶನ ಲೀಕುನ್‌ಕ್ಸಿನ್‌ರ ಆತ್ಮಕಥೆ ಮಾವೋನ ಕೊನೆಯ ನರ್ತಕ(Mao's Last Dancer) ಜಯಶ್ರೀ ಭಟ್ ಕನ್ನಡಕ್ಕೆ ಛಂದ ಪುಸ್ತಕದ ಮೂಲಕ ಹೊರತಂದಿದ್ದಾರೆ. ಓ.ಎಲ್ ನಾಗಭೂಷಣಸ್ವಾಮಿಯವರ ಮುನ್ನುಡಿ ಈ ಪುಸ್ತಕದಲ್ಲಿದೆ.
ಪುಸ್ತಕದ ಬಗ್ಗೆ
[ಬದಲಾಯಿಸಿ]ಇದರಲ್ಲಿ ಹಳ್ಳಿಯ ಬಡಹುಡುಗನೊಬ್ಬನು ಜಗತ್ಪ್ರಸಿದ್ಧ ನರ್ತಕನಾಗುವ ಕಥೆ ಇದೆ. ಹೊಲದಲ್ಲಿ ದುಡಿಯಲಿದ್ದ ೧೧ ವರ್ಷದ ಹುಡುಗನನ್ನು ಚೀನಾದ ಕಮ್ಯುನಿಸ್ಟ್ ಪಕ್ಷವು ಮಾವೋ ಪತ್ನಿಯ ಹೆಸರಿನ ಬೀಜಿಂಗ್ ನೃತ್ಯ ಅಕಾಡೆಮಿಗೆ ಬ್ಯಾಲೆ ನೃತ್ಯದ ತರಬೇತಿಗೆಂದು ಸೇರಿಸುತ್ತದೆ. ವಿದ್ಯಾರ್ಥಿ ವಿನಿಮಯ ಯೋಜನೆಯ ಅಡಿ ಅವನಿಗೆ ಅಮೇರಿಕಾಗೆ ಹೋಗುವ ಅವಕಾಶ ಸಿಗುತ್ತದೆ. ಅಲ್ಲಿ ಕಷ್ಟ ಪಟ್ಟು ಕಲಿಯುವ ಅವನು ವ್ಯಕ್ತಿ ಸ್ವಾತಂತ್ರ್ಯವನ್ನು ಆಯ್ದುಕೊಂಡು ಚೀನಾಗೆ ಮರಳಿಹೋಗದೆ ಇರಲು ನಿರ್ಧರಿಸುತ್ತಾನೆ.