ಮಾಳವಿಕಾ ಸರುಕ್ಕೈ
ಮಾಳವಿಕಾ ಸರುಕ್ಕೈ | |
---|---|
Born | ೧೯೫೯ ತಮಿಳುನಾಡು, ಭಾರತ |
Occupation | ಶಾಸ್ತ್ರೀಯ ನೃತ್ಯಗಾರ್ತಿ |
Known for | ಭರತನಾಟ್ಯ |
Awards | ಪದ್ಮಶ್ರೀ |
ಮಾಳವಿಕಾ ಸರುಕ್ಕೈ ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಭರತನಾಟ್ಯದಲ್ಲಿ ಪರಿಣತಿ ಹೊಂದಿರುವ ನೃತ್ಯ ಸಂಯೋಜಕಿ. [೧] [೨] [೩]ಇವರು ೨೦೦೨ ರಲ್ಲಿಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ವಿಜೇತರಾದರು. [೪] ಇವರಿಗೆ ೨೦೦೩ ರಲ್ಲಿ ಭಾರತ ಸರ್ಕಾರವು ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಿ ಗೌರವಿಸಿತು. [೫]
ಜೀವನಚರಿತ್ರೆ
[ಬದಲಾಯಿಸಿ]ಮಾಳವಿಕಾ ಸರುಕ್ಕೈ ಅವರು ೧೯೫೯ ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಜನಿಸಿದರು. [೬] ಇವರು ತಮ್ಮ ೭ ನೇ ವಯಸ್ಸಿನಲ್ಲಿ ಭರತನಾಟ್ಯವನ್ನು ಕಲಿಯಲು ಪ್ರಾರಂಭಿಸಿದರು ಮತ್ತು ಕಲ್ಯಾಣಸುಂದರಂ ಪಿಳ್ಳೈ (ತಂಜಾವೂರು ಶಾಲೆ) ಮತ್ತು ರಾಜರತ್ನಂ (ವಜುವೂರ್ ಶಾಲೆ) ಅವರಲ್ಲಿ ತರಬೇತಿ ಪಡೆದರು. [೭] [೮] [೯] ಅವರು ಕಲಾನಿಧಿ ನಾರಾಯಣನ್ ಅವರಲ್ಲಿ ಅಭಿನಯವನ್ನು ಮತ್ತು ಪ್ರಸಿದ್ಧ ಗುರುಗಳಾದ ಕೇಲುಚರಣ್ ಮೊಹಾಪಾತ್ರ ಮತ್ತು ರಮಣಿ ರಂಜನ್ ಜೆನಾ ಅವರಲ್ಲಿ ಒಡಿಸ್ಸಿಯನ್ನು ಕಲಿತರು. [೭] [೮] [೯] ಇವರು ತಮ್ಮ ೧೨ ನೇ ವಯಸ್ಸಿನಲ್ಲಿ ಮುಂಬೈಗೆ [೭] [೧೦] ಪಾದಾರ್ಪಣೆ ಮಾಡಿದರು. ಭಾರತ [೧೧] [೧೨] ಮತ್ತು ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್, ನ್ಯೂಯಾರ್ಕ್ವಿ, ಜಾನ್ ಎಫ್. ಕೆನಡಿ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್ ಚಿಕಾಗೋ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. [೧೩] [೧೪] [೧೫] [೧೬][೧೭] ಇವರ ಜೀವನ ಮತ್ತು ಕೆಲಸವನ್ನು ಭಾರತ ಸರ್ಕಾರವು ನಿಯೋಜಿಸಿದ ಸಮರ್ಪಣಂ ಎಂಬ ಸಾಕ್ಷ್ಯಚಿತ್ರದ ಮೂಲಕ ದಾಖಲಿಸಲಾಗಿದೆ. [೭] [೮] [೧೩] ಇವರು ಬಿಬಿಸಿ / ಡಬ್ಲೂಎನ್‌ಇಟಿ ನ ಒಂಬತ್ತು-ಗಂಟೆಗಳ ದೂರದರ್ಶನ ಸಾಕ್ಷ್ಯಚಿತ್ರದಲ್ಲಿ ಡ್ಯಾನ್ಸಿಂಗ್ ಎಂಬ ಶೀರ್ಷಿಕೆಯಡಿಯಲ್ಲಿ ಕಾಣಿಸಿಕೊಂಡಿದ್ದಾರೆ. [೭] [೮] [೧೦] ದಿ ಅನ್‌ಸೀನ್ ಸೀಕ್ವೆನ್ಸ್ – ಎಕ್ಸ್‌ಪ್ಲೋರಿಂಗ್ ಭರತನಾಟ್ಯ ಥ್ರೂ ದಿ ಆರ್ಟ್ ಆಫ್ ಮಾಳವಿಕಾ ಸರುಕ್ಕೈ ಅವರ ಕಲೆಯ ಮೇಲೆ ಮಾಡಿದ ಮತ್ತೊಂದು ಸಾಕ್ಷ್ಯಚಿತ್ರವು ಮುಂಬೈ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ಪ್ರದರ್ಶಿಸಲಾಗಿದೆ. [೧೦]
ಪ್ರಶಸ್ತಿಗಳು ಮತ್ತು ಮನ್ನಣೆಗಳು
[ಬದಲಾಯಿಸಿ]ಸರುಕ್ಕೈ ಅವರಿಗೆ ೨೦೦೨ ರಲ್ಲಿ ಭಾರತ ಸರ್ಕಾರವು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೪] [೭] ಇವರು ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಬಿರುದು ಮತ್ತು ಮೃಣಾಲಿನಿ ಸಾರಾಭಾಯ್ ಪ್ರಶಸ್ತಿಯನ್ನು ಪಡೆದರು, [೧೩] ಹಾಗೆಯೇ ನೃತ್ಯಚೂಡಾಮಣಿ ಪ್ರಶಸ್ತಿಯಂತಹ ಇತರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರು ಸಂಸ್ಕೃತಿ ಪ್ರಶಸ್ತಿ ಮತ್ತು ಹರಿದಾಸ ಸಮ್ಮೇಳನ ಪ್ರಶಸ್ತಿಯನ್ನು ಪಡೆದಿದ್ದಾರೆ. [೨] [೭] ಭಾರತ ಸರ್ಕಾರವು ೨೦೦೩ ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಪ್ರಶಸ್ತಿಯೊಂದಿಗೆ ಮತ್ತೊಮ್ಮೆ ಅವರನ್ನು ಗೌರವಿಸಿತು. [೨] [೫] [೭]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "INK Talks". INK Talks. 2015. Retrieved 8 February 2015.
- ↑ ೨.೦ ೨.೧ ೨.೨ "Kennedy Center". Kennedy Center. 2015. Retrieved 8 February 2015.
- ↑ "Walk The Talk with Malavika Sarukkai". NDTV. February 2006. Retrieved 8 February 2015.
- ↑ ೪.೦ ೪.೧ "Sangeet Natak AKademi Award". Sangeet Natak AKademi. 2015. Archived from the original on 30 May 2015. Retrieved 8 February 2015.
- ↑ ೫.೦ ೫.೧ "Padma Awards" (PDF). Padma Awards. 2015. Archived from the original (PDF) on 15 October 2015. Retrieved 6 February 2015.
- ↑ Vijaya Ramaswamy (2007). Historical dictionary of the Tamils. Lanham, Md. : Scarecrow Press. ISBN 9780810853799.
- ↑ ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ "Indian Arts". Indian Arts. 2015. Archived from the original on 24 ಸೆಪ್ಟೆಂಬರ್ 2015. Retrieved 8 February 2015.
- ↑ ೮.೦ ೮.೧ ೮.೨ ೮.೩ "Bengal Foundation". Bengal Foundation. 2015. Archived from the original on 8 February 2015. Retrieved 8 February 2015.
- ↑ ೯.೦ ೯.೧ . (Interview). 2015.
- ↑ ೧೦.೦ ೧೦.೧ ೧೦.೨ "Blouin Art Info". Blouin Art Info. 2015. Archived from the original on 8 ಫೆಬ್ರವರಿ 2015. Retrieved 8 February 2015.
- ↑ "Malavika Sarukkai: A tribute to Thimmakka". INKTalks. 13 November 2013. Retrieved 8 February 2015.
- ↑ "Padmashri Malavika Sarukkai Performs Bharatanatyam - Yaksha 2014". Isha Foundation. 21 February 2014. Retrieved 8 February 2015.
- ↑ ೧೩.೦ ೧೩.೧ ೧೩.೨ "Canary Promo". Canary Promo. 2015. Archived from the original on 8 ಫೆಬ್ರವರಿ 2015. Retrieved 8 February 2015.
- ↑ "TOI India performance". TOI. 27 June 2012. Retrieved 8 February 2015.
- ↑ "Huffington Post". Huffington Post. 21 December 2013. Retrieved 8 February 2015.
- ↑ Seibert, Brian (18 November 2012). "Stories Told With a Leap, Even a Shake". New York Times. Retrieved 18 May 2017.
- ↑ "Pulse Connects". Pulse Connects. 2015. Archived from the original on 8 February 2015. Retrieved 8 February 2015.