ಮಾನಸಿ ಪ್ರಸಾದ್

ವಿಕಿಪೀಡಿಯ ಇಂದ
Jump to navigation Jump to search
Manasi.jpg

ಮಾನಸಿ ಪ್ರಸಾದ್, (ಮೇ ೨೮) ಇವರು ಕರ್ನಾಟಿಕ್ ಶಾಸ್ತ್ರಿಯ ಸಂಗೀತದ ಮಿನುಗುವ ತಾರೆ. ಇವರು ಸುಮಾರು ವರ್ಷಳಿಂದ ಸಾಂಪ್ರದಾಯಿಕ ತರಬೇತಿಯನ್ನು ಆಧುನಿಕ ದೃಷ್ಟಿಕೋನದಿಂದ ನಡೆಸುತ್ತಿದ್ದಾರೆ. ಮನಾಸಿಯವರು ಭಾರತೀಯ ಶಾಸ್ತ್ರೀಯ ನಾಟ್ಯದಲ್ಲಿ ತರಬೇತಿಯನ್ನು ಪಡೆದಿದಾರೆ ಹಾಗು ಅವರು ತಮ್ಮ ಉಭಯ ವೈಶಿಷ್ಟ್ಯ ಸಾಮರ್ಥ್ಯವನ್ನು ಬಳಸಿ ಗಾಯನ ಮತ್ತು ನೃತ್ಯವನ್ನು ಪ್ರದರ್ಶಿಸುತ್ತಾರೆ. ಅವರು ವಿವಿಧ ಕಲಾ ಸಂಬಂಧಿತ ವಿಷಯಗಳ ಮೇಲೆ ವ್ಯಾಪಕವಾಗಿ ಮಾತನಾಡುತ್ತಾರೆ ಹಾಗು ಬರೆಯುತ್ತಾರೆ. ಸಂಗೀತ ಮತ್ತು ಕವನಗಳನ್ನು ಆಧರಿಸಿ ಟಿವಿ ಪ್ರದರ್ಶನವನ್ನು ಅವರು ನಡೆಸುತ್ತಾರೆ.

ಶಿಕ್ಷಣ ಮತ್ತು ವೃತ್ತಿಜೀವನ[ಬದಲಾಯಿಸಿ]

ಮಾನಸಿ ಮೀರಾ ರೂಪದಲ್ಲಿ

ಮಾನಸಿ ಪ್ರಸಾದ್ ನಿಜವಾಗಿಯು ಬಹುಮುಖಿ ಕಲಾವಿದೆ. ಅವರು ಎಂಜಿನಿಯರಿಂಗ್ ಪದವಿಯನ್ನು ಹೊಂದಿದ್ದಾರೆ. ಅವರು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್, ಬೆಂಗಳೂರಿನಲ್ಲಿ ಎಮ್.ಬಿ.ಎ. ಪದವಿಯನ್ನು ಪಡೆದ್ದಿದ್ದಾರೆ. ಅಲ್ಲಿ ಅವರು ಪ್ರತಿಷ್ಠಿತ ಆದಿತ್ಯ ಬಿರ್ಲಾ ಸ್ಕಾಲರ್ಶಿಪ್ಪನ್ನು ಪಡೆದ್ದಿದ್ದರೆ. ಬಿಷಪ್ ಕಾಟನ್ ಗರ್ಲ್ಸ್ ಹೈ ಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ ಸಿಂಗಾಪುರಿನ ರಾಫೆಲ್ಸ್ ಜೂನಿಯರ್ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ಬಿ.ಎಂ.ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ತಮ್ಮ ಎಂಜಿನಿಯರಿಂಗ್ ಮುಗಿಸಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐ.ಐ.ಎಂ) ಬೆಂಗಳೂರಿನಲ್ಲಿ ಎಮ್.ಬಿ.ಎ. ಪದವಿಯನ್ನು ಪಡೆದರು.

ಐ.ಐ.ಎಂ ಬೆಂಗಳೂರಿನಿಂದ ಉತ್ತೀರ್ಣರಾದ ಅವರು ಗೋಲ್ಡ್ ಮಾನ್ ಸಾಕ್ಸ್ ಕಂಪನಿಯ ರೂ.೧ ಕೋಟಿಯ ಕೆಲಸವನ್ನು ತಿರಸ್ಕರಿಸಿ ಕರ್ನಾಟಿಕ್ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ತೀರ್ಮಾನಿಸಿದರು. ೩೧ರ ವಯಸ್ಸಿನಲ್ಲಿ ಭಾರತದ ಪ್ರಥಮ ಸಂಗೀತದ ಬಹು ಮಾಧ್ಯಮ ಸಂವಾದಾತ್ಮಕ ಮ್ಯೂಸಿಯಂ, ದಿ ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ - ಬೆಂಗಳೂರು ಸ್ಥಾಪಿಸಿದರು. ಇದು ಹಿಂದುಸ್ತಾನಿ ಹಾಗು ಕರ್ನಾಟಿಕ್ ಶಾಸ್ತ್ರೀಯ ಸಂಗೀತ ದಿಂದ ಹಿಡಿದು ಬಾಲಿವುಡ್ ರವರೆಗೆ ಒಳಗೊಳ್ಳಲಾಗಿದೆ. ಅವರು ಕರ್ನಾಟಿಕ್ ಶಾಸ್ತ್ರೀಯ ಸಂಗೀತವನ್ನು ನೂತನ ಪ್ರೇಕ್ಷಕರಿಗೆ ಮುಟ್ಟಿಸಲು ಪ್ರದರ್ಶನಗಳ ಮೂಲಕ ನಿರ್ವಹಣಾ ತರಬೇತಿಯನ್ನು ಸಲ್ಲಿಸಿದರು. ಅದಲ್ಲದೆ ಕರ್ನಾಟಿಕ್ ಸಂಗೀತದ ಬಗ್ಗೆ ಮತ್ತು ಅದರ ಪ್ರಭಾವದ ಬಗ್ಗೆ ಉದ್ಯಮ ನಾಯಕರಿಗೆ ಪವರ್ಪಾಯಿಂಟ್ ಪ್ರಸ್ತುತಿಗಳನ್ನು ತೋರಿಸಿದರು. ಮಾನಸಿ ಪ್ರಸಾದ್ ರವರ ಸಂಗೀತದ ಗುರುಗಳು ಅವರ ತಾಯಿ ತಾರಾ ಪ್ರಾಸದ್ ಹಾಗು ವಿದ್ವಾನ್ ಅರ್.ಕ್. ಪದ್ಮನಾಭ ಹಾಗು ವಿ. ಸುಬ್ರಮಣ್ಯಂ. ಅವರು ಚೆನೈನಲ್ಲಿ ಶ್ರೀರಾಂ ಪರಶುರಾಮರವರೊಂದಿಗೆ ತರಬೇತಿ ನಡೆಸುತ್ತರೆ. ಅವರು ಹಿರಿಯ ಹಾಗು ವಿದ್ವತ್ ಮಟ್ಟದ ಸಂಗೀತದ ಪರೀಕ್ಷೆಯಲ್ಲಿ ಉತ್ತಮ ಶ್ರೆಣಿಯನ್ನು ಪಡೆದ್ದಿದ್ದಾರೆ ಹಾಗು ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕೃತಿ ಇಲಾಖೆಯಿಂದ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ಸುಮಾರು ೧೫ ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿರುವ ಅವರು ತಮ್ಮ ವೃತ್ತಿಜೀವನದಲ್ಲಿ ದೇಶಾದ್ಯಂತ ಹಾಗು ವಿಶ್ವದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದರು. ಅವರು ವರ್ಷಪೂರ್ತಿ ಭಾರತದಲ್ಲಿ ಹಾಗು ವಿಶ್ವದ ಇತರ ಭಾಗಗಳಲ್ಲಿ ಸಂಗೀತ ಪ್ರದರ್ಶನ ನೀಡುವುದರ ಜೊತೆಗೆ ತಮ್ಮ ಆಲ್ಬಮ್ ಗಳಿಗೆ ಧ್ವನಿಮುದ್ರಣ ಹಾಗು ಸಂಗೀತ ಸಂಯೋಜನೆಯನ್ನು ಮಾಡುತ್ತಾರೆ. ಇದಲ್ಲದೆ ಹೊಸ ಪ್ರೊಡಕ್ಷನ್ಸ್ ರಚಿಸುವುದರ ಮೂಲಕ ಹಲವಾರು ದೂರದರ್ಶನ ಕಾರ್ಯಕ್ರಮಗಳ ಹೋಸ್ಟಿಂಗ್ ನಡೆಸುವುದು, ಹಲವಾರು ಕಲಾ ಪ್ರದರ್ಶನಗಳ ಬಗ್ಗೆ ಮಾತನಾಡುವುದು ಹಾಗು ಬರೆಯುವುದು ಇವರ ಚತುವಟಿಕೆಳು ಆಗಿದ್ದವು. ದಿ ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ರ ಮುಖ್ಯಸ್ಥರಾದ ಅವರು, ಈ ಯೋಜನೆಯು ಭಾರತದ ಮೊದಲ ಸಂಗೀತ ಸಂಗ್ರಹಾಲಯವಾಗುತ್ತದೆ. ಐ.ಸಿ.ಸಿ.ಆರ್. (ಇಂಡಿಯನ್ ಕೌಂಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್) ಸದಸ್ಯರಾದ ಇವರು ಅಮೇರಿಕಾ, ಸಿಂಗಾಪುರ, ಮಿಡಲ್ ಈಸ್ಟ್ , ಆಫ್ರಿಕಾ ದೇಶಗಳಲ್ಲಿ ಹಾಗು ಕ್ಲೀವ್ಲ್ಯಾಂಡ್ ತ್ಯಾಗರಾಜ ಉತ್ಸವಗಳಲ್ಲಿ ಸಂಗೀತ ಕಛೇರಿಯನ್ನು ನಡೆಸಿದರು.

ಪ್ರಮುಖ ಪ್ರದರ್ಶನಗಳು[ಬದಲಾಯಿಸಿ]

ಅಂತರರಾಷ್ಟ್ರೀಯ ಪ್ರದರ್ಶನಗಳು[ಬದಲಾಯಿಸಿ]

 • ಅಮೇರಿಕಾ, ೨೦೦೯, ೨೦೧೦- ಅಮೇರಿಕಾ ಕನ್ಸರ್ಟ್ ಪ್ರವಾಸ- ಇದಕ್ಕೆ ಸೇರಿದಂತೆ ಪ್ರತಿಷ್ಠಿತ ಕ್ಲೀವ್ಲ್ಯಾಂಡ್ ತ್ಯಾಗರಾಜ ಉತ್ಸವದಲ್ಲಿ ಪ್ರದರ್ಶನ ನೀಡಿದ್ದರು.
 • ಅಮೇರಿಕಾ, ೨೦೦೮- ಇಂಗ್ಲೆಂಡ್ ರಾಜ್ಯಗಳ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಕಾರ್ಯಕ್ರಮಗಳು.
 • ಸಿಂಗಾಪೂರ್, ೨೦೦೮ - ಭಾರತೀಯ ಫೈನ್ ಆರ್ಟ್ಸ್ ಸೊಸೈಟಿ ನಲ್ಲಿ ಪ್ರದರ್ಶನ.
 • ಕುವೈತ್, ೨೦೦೭- ಗಲ್ಫ್ ಕನ್ನಡ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ 'ಗಿರಿಧರ ಮೀರಾ' ಪ್ರದರ್ಶನ ಮತ್ತು ಸಂಗೀತ ಕಛೇರಿ ನಡೆಸಿದರು.
 • ಟಾಂಜೆನಿಯ (ಆಫ್ರಿಕಾ), ೨೦೦೭- ರಾಜಧಾನಿಯಲ್ಲಿ 'ಗಿರಿಧರ ಮೀರಾ' ಪ್ರದರ್ಶನ ಮತ್ತು ಸಂಗೀತ ಕಛೇರಿ ನಡೆಸಿದರು.
 • ಅಮೇರಿಕಾ, ೨೦೦೬- ಸಿ.ಎಮ್.ಎ.ಎನ್.ಎ.(ಕರ್ನಾಟಿಕ್ ಮ್ಯೂಸಿಕ್ ಅಸೋಸಿಯೇಷನ್ ಆಫ್ ನಾರ್ಥ್ ಅಮೇರಿಕಾ), ನ್ಯೂ ಜರ್ಸಿ ನಲ್ಲಿ ಪ್ರದರ್ಶನ.
 • ಚಿಲಿ (ದಕ್ಷಿಣ ಅಮೇರಿಕಾ)೨೦೦೪- ಉಪನ್ಯಾಸ ಪ್ರದರ್ಶನಗಳು, ಕಾರ್ಯಾಗಾರಗಳು ಹಾಗು ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಭಾರತೀಯ ರಾಯಭಾರದಲ್ಲಿ ಸಂಗೀತ, ನೃತ್ಯ ಪ್ರದರ್ಶನ.

ರಾಷ್ಟ್ರೀಯ ಪ್ರದರ್ಶನಗಳು[ಬದಲಾಯಿಸಿ]

 • ಚೆನ್ನೈ- ಡೆಸೆಂಬರ್ ತಿಂಗಳಿನಲ್ಲಿ ಚೆನ್ನೈಯಲ್ಲಿರುವ ಎಲ್ಲಾ ಪ್ರಮುಖ ಸಭೆಗಳಾದ ಮದ್ರಾಸ್ ಸಂಗೀತ ಅಕಾಡೆಮಿ, ನಾರದ ಗಾನ ಸಭಾ, ಶ್ರೀ ಪಾರ್ಥಸಾರಥಿ ಸ್ವಾಮಿ ಸಭಾ, ಶ್ರೀ ಕೃಷ್ಣ ಗಾನ ಸಭಾ, ಬ್ರಹ್ಮ ಗಾನ ಸಭಾ, ಕರ್ನಾಟಿಕ್ ಸಂಗೀತದ ಭಾರತ್ ಸಂಗೀತ ಉತ್ಸವ ಹಾಗು ಹಲವಾರು ಕಡೆ ಪ್ರದರ್ಶನ ನೀಡಿದರು.
 • ನವ ದೆಹಲಿ- ಸಂಗೀತ ನಾಟಕ ಅಕಾಡೆಮಿ, ದೆಹಲಿ ಇಂಟರ್ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್.
 • ಬೆಂಗಳೂರು- ರಾಮನವಮಿ ಹಬ್ಬವನ್ನು ಎರಡು ಪ್ರಮುಖ ಸ್ಥಳಗಳಲ್ಲಿ ಆಚರಿಸಿದರು- ಫೋರ್ಟ್ ಪ್ರೌಢ ಶಾಲೆ ಹಾಗು ಶೇಷಾದ್ರಿಪುರಂ ರಾಮ ಸೇವಾ ಸಮಿತಿ, ಬೆಂಗಳೂರು ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತಾ ಸಭಾ, ಇಂದಿರಾನಗರ ಸಂಗೀತಾ ಸಭಾ, ಇತ್ಯಾದಿ.
 • ಮುಂಬಯಿ- ಶನ್ಮುಖನಂದ ಫೈನ್ ಆರ್ಟ್ಸ್, ಮೈಸೂರು ಅಸೋಸಿಯೇಷನ್, ಭಕ್ತ ರಸಿಕ ರಂಜನಿ ಸಭಾ, ಇತ್ಯಾದಿ ಸ್ಥಳಗಳಲ್ಲಿ ಪ್ರದರ್ಶನಗಳನ್ನು ನೀಡಿದರು.
 • ಆಂಧ್ರ ಪ್ರದೇಶ- ಕಲಾಸಾಗರಂ, ಎಸ್.ಐ.ಸಿ.ಎ., ಅನ್ನಮಚಾರ್ಯರ ಜಯಂತಿ, ಹಲವಾರು ಹೈದರಾಬಾದಿನಲ್ಲಿ ಹಾಗು ತಿರುಪತಿಯ ಸಂತ ತ್ಯಾಗರಾಜ ಉತ್ಸವದಲ್ಲಿ ಪ್ರದರ್ಶನವನ್ನು ನೀಡಿದ್ದಾರೆ.
 • ಕೇರಳ- ತಿರುವನಂತಪುರದ ಸ್ವಾತಿ ಸಂಗೀತೋತ್ಸವಮ್, ತ್ರಿಪುನಿತುರದ ದೇವಾಲಯದ ಹಬ್ಬಗಳು, ಇರಿಂಜಲಕುಡ, ಇತ್ಯಾದಿ.

ಮಾಧ್ಯಮಗಳು[ಬದಲಾಯಿಸಿ]

ದೂರದರ್ಶನ[ಬದಲಾಯಿಸಿ]

 • ಜಯಾ ಟಿ.ವಿ.ಯ ಮಾರ್ಗಳಿ ಮಹಾ ಉತ್ಸವ, ವಿಜಯ ಟಿ.ವಿ.ಯ ಡಿಸೆಂಬರ್ ಸಂಗೀತ ಸರಣಿ, ಸ್ಟಾರ್ ವಿಜಯ್ ನ ಚೆನ್ನಾಯಿಲ್ ತಿರುವೈಯ್ಯರಿನಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತಿದ್ದರು.
 • ದೂರದರ್ಶನ, ಈ-ಟಿವಿ ಕನ್ನಡ, ಕಸ್ತೂರಿ ಟಿ.ವಿ., ಟಿ.ವಿ.೯, ಶಂಕರ ಟಿವಿ ಮತ್ತು ಇತರ ಚಾನೆಲ್ ಗಳಲ್ಲಿ ಕಾರ್ಯಕ್ರಮಗಳು. ಸಂಗೀತ ಮತ್ತು ಕಾವ್ಯದ ಮೇಲೆ ಆಧಾರಿತ ಕಾರ್ಯಕ್ರಮ 'ಕವಿ ನಮನ' ಈಟಿ.ವಿ. ಕನ್ನಡದಲ್ಲಿ ನಡೆಸಿದರು.

ಕನ್ನಡ[ಬದಲಾಯಿಸಿ]

 • ಈ-ಟಿವಿ ಕನ್ನಡದ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರೊಂದಿಗೆ ಅನೇಕ ಅಧ್ಯಾಯಗಳನ್ನು ನಡೆಸಿದರು.
 • ಟಿ.ಟಿ.ಡಿ.ಚಾನೆಲ್ಲಿನಲ್ಲಿ ನಾದ ನೀರಾಜನಮ್ ಎಂಬ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿಯನ್ನು ನಡೆಸಿದರು.

ರೇಡಿಯೋ[ಬದಲಾಯಿಸಿ]

 • ಎ.ಐ.ಆರ್. ಬೆಂಗಳೂರಿನಲ್ಲಿ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಸಂಗೀತದ ಶ್ರೇಣೀಕೃತ ಕಲಾವಿದೆ.
 • ಟೈಮ್ಸ್ ಮ್ಯೂಸಿಕ್ ಸ್ವೀಕೃತ ಶ್ರೀ ಗಣೇಶ ಸುಪ್ರಭಾತಮ್ ನ ಅಖಿಲ ಭಾರತ ಬಿಡುಗಡೆ.
 • ಕರ್ನಾಟಿಕಾ ಮೂಲಕ ಭಾರತ್ ಸಂಗೀತ ಉತ್ಸವ ನೇರವಾದ ಸಂಗೀತ ಆಲ್ಬಮ್ ಬಿಡುಗಡೆ.
 • ನ್ಯೂ ಪ್ರೊಡಕ್ಷನ್ಸ್ ಎಂಬ ಬೆಂಗಳೂರು ಮೂಲದ ಲೇಬಲ್ಗಳನ್ನು ಹಲವಾರು ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದ ಆಲ್ಬಂಗಳನ್ನು ಬಿಡುಗಡೆ ಮಾಡಲಾಯಿತು.
 • ಗಿರಿಧರ ಮೀರ- ಸಂಗೀತ, ನೃತ್ಯ ಮತ್ತು ನಾಟಕ ಒಂದು ಮಹಿಳೆಯ ಪ್ರದರ್ಶನ, ಈ ಭಜನೆಯ ಮೂಲಕ ಮೀರಾಬಾಯಿ ಕಥೆಯನ್ನು ವಿವರಿಸಲಾಗಿದೆ.
 • ಗಾನ ಯಾತ್ರ- ೧೫ ಸದಸ್ಯರನ್ನು ಒಳಗೊಂಡ ಸಂಗೀತದ ಮೇಳವು ಭಕ್ತಿ ಗೀತೆಗಳಾದ ಅಭಾಂಗ್, ಸೂಫಿ, ಭಜನೆಗಳನ್ನು ಪ್ರಸಾರಿಸುತ್ತಾರೆ.
 • ಗೀತಮ್ ಮಧುರಂ- ಎಂ.ಎಸ್. ಸುಬ್ಬುಲಕ್ಷ್ಮಿಗೆ ಎಲ್ಲಾ ಮಹಿಳೆಯರು ಉತ್ಸವ್ ಮ್ಯೂಸಿಕ್ ರ ಮೂಲಕ ಗೌರವ ಸಲ್ಲಿಸಿದರು.

ಪ್ರಶಸ್ತಿಗಳು ಮತ್ತು ಮನ್ನಣೆಗಳು[ಬದಲಾಯಿಸಿ]

 • ಅವರು ಚೆನೈಯಲ್ಲಿ ನಡೆದ ಜಾಗತಿಕ ಜಿ.ಎನ್.ಬಿ. ಶತಮಾನೋತ್ಸವ ಹಾಗು ಬೆಂಗಳೂರು ಗಾಯನ ಸಮಾಜ ನಡೆಸಿದ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ಅವರು ಹಿರಿಯ ಮತ್ತು ವಿದ್ವತ್ ಮಟ್ಟ ಪರೀಕ್ಷೆಗಳಲ್ಲಿ ರಾಂಕ್ ಪಡೆದಿದ್ದಾರೆ.
 • ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ಅವರಿಗೆ ಸಂಗೀತ ನಾಟಕ ಅಕಾಡೆಮಿ ೨೦೦೮ರಲ್ಲಿ ನವ ದೆಹಲಿಯಲ್ಲಿ ನೀಡಲಾಯಿತು.
 • ಶ್ರೀ ಜಿ.ಎನ್.ಬಾಲಸುಬ್ರಮಣ್ಯಮ್ ಗ್ಲೋಬಲ್ ಶತಮಾನೋತ್ಸವ ಕಛೇರಿ ಸ್ಫರ್ದೆಯ ವಿಜೇತರು.
 • ಮಹೋನ್ನತ ಆಲ್ರೌಂಡರ್ ಎಂದು ಗುರುತಿಸಲ್ಪಟ್ಟ ಇವರಿಗೆ ೨೦೦೬ರಲ್ಲಿ 'ರೋಟರಿ ಬ್ರಿಗೇಡ್ ಯಂಗ್ ಅಚೀವರ್ಸ್' ಪುರಸ್ಕಾರವನ್ನು ನೀಡಲಾಯಿತು.
 • ೨೦೦೫ರ ಡಿಸೆಂಬರ್ ತಿಂಗಳಿನಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯವರು ಮಾನಸಿಯವರಿಗೆ ಟಿ.ವಿ. ಸುಬ್ಬ ರಾವ್ ಸ್ಮಾರಕ ಪ್ರಶಸ್ತಿ ಕೊಡಲಾಯಿತು.
 • ಮುಂಬಯಿನಲ್ಲಿ ಶ್ರೀ ಶನ್ಮುಖನಂದ ಫೈನ್ ಆರ್ಟ್ಸ್ ರವರಿಂದ 'ಶ್ರೀ ಶನ್ಮುಖನಂದ ಎ.ಕೆ. ಸಟಗೋಪನ್ ಯುವ ಕಲಾಕಾರ್ ಪುರಸ್ಕಾರ ೨೦೦೪-೦೫' ಕೊಟ್ಟು ಸನ್ಮಾನಿಸಿದರು.
 • ೨೦೦೪ರಲ್ಲಿ ಕರ್ನಾಟಕ ಗಾನಕಲ ಪರಿಷತ್ ರವರು ನಡೆಸಿದ ವಾರ್ಷಿಕ ಸಮ್ಮೇಳನದಲ್ಲಿ ವಿವಿಧ ರೀತಿಯ ಪಲ್ಲವಿಗಳನ್ನು ಪ್ರದರ್ಶಿಸಿದ ಮಾನಸಿ ಅವರಿಗೆ ಅತ್ಯುತ್ತಮ ಉಪನ್ಯಾಸ ಪ್ರದರ್ಶನ ಪ್ರಶಸ್ತಿಯನ್ನು ನೀಡಲಾಯಿತು.
 • ಅನನ್ಯ ಪ್ರತಿಭೆ ಪುರಸ್ಕಾರ- ಅನನ್ಯ, ಬೆಂಗಳೂರು.
 • ಅವರು ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಂದ ಕಲಾ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

೧. ಅಧಿಕೃತ ವೆಬ್ ಸೈಟ್

೨. http://indiatoday.intoday.in/