ಮಾಂಡು
ಮಾಂಡು ಅಥವಾ ಮಾಂಡವ್‍ಗಡ್ ಧಾರ್ ಜಿಲ್ಲೆಯ ಇಂದಿನ ಮಾಂಡವ್ ಪ್ರದೇಶದಲ್ಲಿರುವ ಒಂದು ಪ್ರಾಚೀನ ನಗರವಾಗಿದೆ. ಇದು ಪಶ್ಚಿಮ ಮಧ್ಯ ಪ್ರದೇಶದ ಮಾಲ್ವಾ ಪ್ರದೇಶದಲ್ಲಿ, ಧಾರ್ ನಗರದಿಂದ ೩೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ೧೧ನೇ ಶತಮಾನದಲ್ಲಿ, ಮಾಂಡು ತರಂಗಗಢ್ ಅಥವಾ ತರಂಗ ರಾಜ್ಯದ ಉಪವಿಭಾಗವಾಗಿತ್ತು.[೧] ಕಲ್ಲುಬಂಡೆಗಳ ಹೊರಚಾಚಿನ ಮೇಲಿರುವ ಈ ಕೋಟೆ ಪಟ್ಟಣವು ತನ್ನ ವಾಸ್ತುಕಲೆಗೆ ಪ್ರಸಿದ್ಧವಾಗಿದೆ.
ಆಸಕ್ತಿಯ ತಾಣಗಳು
[ಬದಲಾಯಿಸಿ]ತನ್ನ ಯುದ್ಧಾನುಕೂಲ ಸ್ಥಾನ ಮತ್ತು ನೈಸರ್ಗಿಕ ರಕ್ಷಣೆಗಳ ಕಾರಣ ಮಾಂಡು ಮಹತ್ವದ ಸ್ಥಳವಾಗಿತ್ತು. ಇದು ಒಂದು ಪ್ರಮುಖ ಸೇನಾ ಹೊರಠಾಣೆಯಾಗಿತ್ತು. ಇಲ್ಲಿನ ಕೋಟೆಯ ಮೇಲಿನ ಕೈಪಿಡಿ ಗೋಡೆಗಳ ಪರಿಧಿಯು ಸುಮಾರು ೩೭ ಕಿ.ಮಿ. ಇದೆ ಮತ್ತು ಇದರ ಪರಿಧಿಯು ೧೨ ದ್ವಾರಗಳನ್ನು ಹೊಂದಿದೆ. ಗೋಡೆಯೊಳಗೆ ಅನೇಕ ಅರಮನೆಗಳು, ಮಸೀದಿಗಳು, ೧೪ ನೇ ಶತಮಾನದ ಜೈನ ದೇವಾಲಯಗಳು ಮತ್ತು ಇತರ ಕಟ್ಟಡಗಳಿವೆ.
ಕೆಲವು ಗಮನಾರ್ಹ ಸ್ಥಳಗಳೆಂದರೆ:
ರೂಪ್‍ಮತಿಯ ದೊಡ್ಡ ಹಜಾರ
ಇದು ದೊಡ್ಡ ಮರಳುಗಲ್ಲಿನ ರಚನೆಯಾಗಿದ್ದು ಮೂಲತಃ ಸೇನಾ ವೀಕ್ಷಣಾ ನೆಲೆಯಾಗಿತ್ತು.
ಬಾಜ಼್ ಬಹಾದುರ್‌ನ ಅರಮನೆ
ಬಾಜ಼್ ಬಹಾದುರ್ ಕಟ್ಟಿದ ಈ ೧೬ನೇ ಶತಮಾನದ ರಚನೆಯು ತನ್ನ ದೊಡ್ಡ ಆಸ್ಥಾನಗಳಿಗೆ ಪ್ರಸಿದ್ಧವಾಗಿದೆ.
ರೇವಾ ಕುಂಡ್
ಬಾಜ಼್ ಬಹಾದುರ್ ನಿರ್ಮಿಸಿದ ಈ ಜಲಾಶಯವು ರಾಣಿ ರೂಪ್‍ಮತಿ ಹಜಾರಕ್ಕೆ ನೀರನ್ನು ಒದಗಿಸುತ್ತಿತ್ತು.
ದರ್ಯಾ ಖಾನ್‍ನ ಸಮಾಧಿ ಸಂಕೀರ್ಣ
ಈ ಸಂಕೀರ್ಣದ ಮಧ್ಯದಲ್ಲಿ ದರ್ಯಾ ಖಾನ್‍ನ ಮರಳಗಲ್ಲಿನ ಗೋರಿ ಇದೆ.
ಶ್ರೀ ಮಾಂಡವ್‍ಗಢ್ ತೀರ್ಥ್
ಶ್ರೀ ಮಾಂಡವ್‍ಗಢ್ ತೀರ್ಥ್ ಸುಪರ್ಶ್ವನಾಥನಿಗೆ ಸಮರ್ಪಿತವಾಗಿದೆ. ಇದು ಶ್ವೇತಾಂಬರ ಪಂಥಕ್ಕೆ ಸೇರಿದೆ. ಈ ದೇವಾಲಯವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.
ಜಾಮಿ ಮಸೀದಿ
ಡಮಾಸ್ಕಸ್‍ನ ಬೃಹತ್ ಮಸೀದಿಯಿಂದ ಸ್ಫೂರ್ತಿಪಡೆದ ಈ ಬೃಹತ್ ರಚನೆಯು ಸರಳತೆ ಮತ್ತು ವಾಸ್ತುಕಲಾ ಶೈಲಿಯಲ್ಲಿ ಗಮನಾರ್ಹವಾಗಿದೆ. ಪ್ರಾಂಗಣಗಳು ದೊಡ್ಡದಾಗಿವೆ.
ಹೋಶಂಗ್ ಶಾನ ಗೋರಿ
ಭಾರತದ ಮೊದಲ ಅಮೃತಶಿಲಾ ರಚನೆಯಾದ ಇದು ಅಫ಼್ಘಾನ್ ವಾಸ್ತುಕಲೆಯ ಅತ್ಯಂತ ಸಂಸ್ಕರಿತ ಉದಾಹರಣೆಗಳಲ್ಲಿ ಒಂದಾಗಿದೆ. ಇದು ತಾಜ್ ಮಹಲ್‍ನ ನಿರ್ಮಾಣಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಿತ್ತು.[೨]
ಜಹಾಜ಼್ ಮೆಹೆಲ್
ಎರಡು ಕೃತಕ ಸರೋವರಗಳ ನಡುವೆ ಸ್ಥಿತವಾದ ಈ ಎರಡು ಅಂತಸ್ತಿನ ವಾಸ್ತುಕಲಾ ಅದ್ಭುತವು ನೀರಿನಲ್ಲಿ ತೇಲುವ ಹಡಗಿನಂತೆ ಕಾಣುವುದರಿಂದ ಈ ಹೆಸರು ಪಡೆದಿದೆ.
ಹಿಂಡೋಲಾ ಮೆಹೆಲ್
ಇದರ ಪಾರ್ಶ್ವಗಳ ಗೋಡೆಗಳು ಇಳಿಜಾರಾಗಿರುವುದರಿಂದ ಇದು ಈ ಹೆಸರು ಪಡೆದಿದೆ. ಹಿಂಡೋಲಾ ಮೆಹೆಲ್‍ನ್ನು ಪ್ರೇಕ್ಷಕರ ಕೋಣೆಯಾಗಿ ಬಳಸಲಾಗಿರಬಹುದು.[೩]
ದರ್ವಾಜ಼ಾಗಳು
ಮಾಂಡುವನ್ನು ಸುತ್ತುವರಿದಿರುವ ಗೋಡೆಯು ೧೨ ಮುಖ್ಯ ದರ್ವಾಜ಼ಾಗಳು ಅಥವಾ ದ್ವಾರಗಳನ್ನು ಹೊಂದಿದೆ.
ಸೂರ್ಯಾಸ್ತ ಬಿಂದು
[ಬದಲಾಯಿಸಿ]ಇದು ಧಾರ್‌ನಿಂದ ಕೋಟೆಗೆ ಹೋಗುವ ದಾರಿಯಲ್ಲಿರುವ ಸುಂದರ ಕಂದರವಾಗಿದೆ. ಮಳೆಗಾಲದಲ್ಲಿ ಸುಂದರ ಜಲಪಾತವನ್ನು ನೋಡಬಹುದು.
ಸಾಗರ್ ತಾಲಾಬ್
[ಬದಲಾಯಿಸಿ]ಇದು ಕೋಟೆಯೊಳಗಿರುವ ಒಂದು ಸುಂದರ ಮಾನವ ನಿರ್ಮಿತ ಸರೋವರವಾಗಿದೆ.
ಛಾಯಾಂಕಣ
[ಬದಲಾಯಿಸಿ]-
ಮಾಂಡು ಅರಮನೆ
-
ಮಾಂಡು ಅರಮನೆ
-
ಮಾಂಡು ಅರಮನೆ
-
ರೂಪ್‍ಮತಿ ಅರಮನೆ, ಮಾಂಡು
-
ರೂಪ್‍ಮತಿ ಅರಮನೆ, ಮಾಂಡು
-
ರೂಪ್‍ಮತಿ ಅರಮನೆ, ಮಾಂಡು
ಉಲ್ಲೇಖಗಳು
[ಬದಲಾಯಿಸಿ]- ↑ "REPORT ON DEMONSTRATION OF RENEWABLE ENERGY SYSTEMS AT ROYAL FORTRESS, MANDU" (PDF). Mnre.gov.in. Archived from the original (PDF) on 3 March 2016. Retrieved 2016-01-22.
- ↑ "Hoshang Shah's Tomb, Mandu - Ticketed Monument - Archaeological Survey of India". Asi.nic.in. Archived from the original on 28 January 2016. Retrieved 2016-01-22.
- ↑ "MANDU (ⅠPalace Complex)". Ioc.u-tokyo.ac.jp. Retrieved 2016-01-22.
- This article incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 17 (11th ed.). Cambridge University Press. p. 566.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help)