ವಿಷಯಕ್ಕೆ ಹೋಗು

ಮಹಜರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಜರು (ಪಂಚನಾಮೆ) ಎಂದರೆ ಸಾಮಾನ್ಯ ಕಾನೂನುವ್ಯಾಪ್ತಿಗಳಲ್ಲಿ ನಡೆಸಲಾಗುವ ನ್ಯಾಯಾಂಗ ವಿಚಾರಣೆ. ಇದನ್ನು ವಿಶೇಷವಾಗಿ ಒಬ್ಬ ವ್ಯಕ್ತಿಯ ಸಾವಿನ ಕಾರಣವನ್ನು ನಿರ್ಣಯಿಸಲು ನಡೆಸಲಾಗುತ್ತದೆ.[೧] ಒಬ್ಬ ನ್ಯಾಯಾಧೀಶ, ನ್ಯಾಯದರ್ಶಿ ಮಂಡಲಿ ಅಥವಾ ಸರ್ಕಾರಿ ಅಧಿಕಾರಿ ನಡೆಸುವ ಮಹಜರಿಗೆ ದುರ್ಮರಣ ವಿಚಾರಕ ಅಥವಾ ವೈದ್ಯಕೀಯ ಪರಿಶೀಲಕನು ಮಾಡುವ ಶವಪರೀಕ್ಷೆ ಅಗತ್ಯವಿರಬಹುದು ಅಥವಾ ಇರದಿರಬಹುದು. ಸಾಮಾನ್ಯವಾಗಿ, ಮರಣಗಳು ಹಠಾತ್ ಅಥವಾ ವಿವರಿಸಲಾಗದಂತಿರುವಾಗ ಮಾತ್ರ ಮಹಜರುಗಳನ್ನು ಮಾಡಲಾಗುತ್ತದೆ. ಮಹಜರನ್ನು ದುರ್ಮರಣ ವಿಚಾರಕ, ನ್ಯಾಯಾಧೀಶ, ಅಭಿಯೋಕ್ತನ ಆಜ್ಞೆಯ ಮೇರೆಗೆ, ಅಥವಾ ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಸಾರ್ವಜನಿಕರ ವಿಧ್ಯುಕ್ತ ವಿನಂತಿಯ ನಂತರ ಕರೆಯಲಾಗಬಹುದು.[೨] ಈ ಬಗೆಯ ಮೊಕದ್ದಮೆಯಲ್ಲಿ ನೆರವಾಗಲು ದುರ್ಮರಣ ವಿಚಾರಕನ ನ್ಯಾಯದರ್ಶಿ ಮಂಡಲಿಯನ್ನು ಒಟ್ಟುಸೇರಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Definition of INQUEST". www.merriam-webster.com.
  2. "Municode Library". library.municode.com.
"https://kn.wikipedia.org/w/index.php?title=ಮಹಜರು&oldid=913912" ಇಂದ ಪಡೆಯಲ್ಪಟ್ಟಿದೆ