ಮಲಾವಿ ಸರೋವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಗಸದಿಂದ ಮಲಾವಿ ಸರೋವರದ ದೃಶ್ಯ.

ಮಲಾವಿ ಸರೋವರ ಅಥವಾ ನ್ಯಾಸಾ ಸರೋವರವು ಪೂರ್ವ ಆಫ್ರಿಕಾದ ಬಿರುಕು ಕಣಿವೆಯ ದಕ್ಷಿಣದಂಚಿನಲ್ಲಿರುವ ಮಹಾಸರೋವರ. ಆಫ್ರಿಕಾದ ಮೂರನೆಯ ಮತ್ತು ಜಗತ್ತಿನ ೯ನೆಯ ಅತಿ ದೊಡ್ಡ ಸರೋವರವಾಗಿರುವ ಮಲಾವಿ ಸರೋವರವು ಟಾಂಜಾನಿಯ ಮತ್ತು ಮಲಾವಿ ರಾಷ್ಟ್ರಗಳಿಗೆ ಸೇರಿದೆ. ಸಾಕಷ್ಟು ಆಳವಾಗಿದ್ದರೂ ಈ ಸರೋವರವು ಯಾವುದೇ ಪ್ರಕ್ಷುಬ್ಧತೆಯನ್ನು ತೋರದೇ ಪ್ರಶಾಂತ ವಾತಾವರಣವನ್ನು ಸೂಸುವುದು. ಜಗತ್ತಿನ ಬೇರಾವುದೇ ಸರೋವರದಲ್ಲಿ ಕಾಣದಷ್ಟು ಮೀನಿನ ತಳಿಗಳು ಮಲಾವಿ ಸರೋವರದಲ್ಲಿ ಇವೆ. ಸುಮಾರು ೫೬೦ ಕಿ.ಮೀ. ಉದ್ದವಿದ್ದು ಗರಿಷ್ಠ ೭೫ ಕಿ.ಮೀ. ಅಗಲವಿರುವ ನ್ಯಾಸಾ ಸರಸ್ಸಿನ ಸರಾಸರಿ ಆಳ ೨೯೨ ಮೀ. ಗಳಷ್ಟು. ಇದಲ್ಲಿರುವ ನೀರಿನ ಪ್ರಮಾಣ ೮೯೦೦ ಘನ ಕಿ.ಮೀ.ಗಳಷ್ಟಾದರೆ ವಿಸ್ತೀರ್ಣ ೨೯೬೦೦ ಚದರ ಕಿ.ಮೀ.ಈ ಸರೋವರಕ್ಕೆ 'ನಕ್ಷತ್ರ‍ದ ಸರೋವರ' ಎಂದೂ ಸಹ ಕರೆಯುವರು.ಒಮ್ಮೊಮ್ಮೆ ಈ ಸರೋವರದಲ್ಲಿ ಅನೀಕ್ಷಿತ ಹಾಗು ಅತ್ಯಂತ ಭಯಂಕರವಾದ ಚಂಡಾಮಾರುತಗಳು ಏಳುವುದರಿಂದ ಇದನ್ನು 'ಚಂಡಮಾರುತದ ಸರೋವರ' ಎಂದು ಕರೆಯಲಾಗುವುದು.