ಮನಸಾರೆ (ಚಲನಚಿತ್ರ)
ಮನಸಾರೆ (ಚಲನಚಿತ್ರ) | |
---|---|
ಮನಸಾರೆ | |
ನಿರ್ದೇಶನ | ಯೋಗರಾಜ್ ಭಟ್ |
ನಿರ್ಮಾಪಕ | ರಾಕ್ಲೈನ್ ವೆಂಕಟೇಶ್ |
ಚಿತ್ರಕಥೆ | ಪವನ್ ಕುಮಾರ್ |
ಪಾತ್ರವರ್ಗ | ದಿಗಂತ್, ಐಂದ್ರಿತಾ ರೇ, ಪವನ್ ಕುಮಾರ್, ನೀನಾಸಂ ಸತೀಶ್, ರಾಜು ತಾಳಿಕೋಟಿ |
ಸಂಗೀತ | ಮನೋಮೂರ್ತಿ |
ಛಾಯಾಗ್ರಹಣ | ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೨೦೦೯ |
ಪ್ರಶಸ್ತಿಗಳು | ೨೦೦೯-೨೦೧೦ನೇ ಸಾಲಿನ ಎರಡನೇ ಅತ್ಯುತ್ತಮ ಚಲನಚಿತ್ರ - ರಾಜ್ಯ ಪ್ರಶಸ್ತಿ ಪಡೆದಿದೆ. |
ಚಿತ್ರ ನಿರ್ಮಾಣ ಸಂಸ್ಥೆ | ರಾಕ್ಲೈನ್ ಪ್ರೊಡಕ್ಷನ್ಸ್ |
ಸಾಹಿತ್ಯ | ಜಯಂತ್ ಕಾಯ್ಕಿಣಿ |
ಹಿನ್ನೆಲೆ ಗಾಯನ | ಸೊನು ನಿಗಮ್, ಕುನಾಲ್ ಗಂಜಾವಾಲ, ಅನನ್ಯ ಭಗತ್, ಶ್ರೇಯಾ ಘೋಷಾಲ್, ವಿಕಾಸ್ ವಸಿಷ್ಠ, ಲಕ್ಷ್ಮಿ ನಾಗರಾಜ್, ವಿಜಯ್ ಪ್ರಕಾಶ್ |
ಮನಸಾರೆ ಕನ್ನಡ ಭಾಷೆಯ ಚಲನಚಿತ್ರ. ಇದರ ನಿರ್ದೇಶಕ ಯೋಗರಾಜ್ ಭಟ್. ದಿಗಂತ್ ಮತ್ತು ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥಾವಸ್ತುವನ್ನು ಪವನ್ ಕುಮಾರ್ ಬರೆದಿದ್ದಾರೆ. ಪವನ್ ಈ ಚಿತ್ರದಲ್ಲಿ "ಡಾಲರ್" ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಥಾವಸ್ತು
[ಬದಲಾಯಿಸಿ]ಮನೋಹರ (ದಿಗಂತ್) ಒಬ್ಬ ನಿರುದ್ಯೋಗಿ ಯುವಕ, ಯಾವಾಗಲು ಅವನ ಮನೆಯವರ ಛೀಮಾರಿಗೆ ಪಾತ್ರನಾಗುತ್ತಾನೆ.ಆದರೆ ಅವನ ಚಿಕ್ಕಪ್ಪ ಅವನಿಗೆ ಯಾವಾಗಲೂ ಪ್ರೋತ್ಸಾಹಿಸುತ್ತಿರುತ್ತಾರೆ. ಒಂದು ದಿನ ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಹೋಗಿ ಪೊಲೀಸ್ ಠಾಣೆ ಸೇರುವ ಪರಿಸ್ಥಿತಿ ಬರುತ್ತದೆ. ಇದರ ನಂತರ ಎಲ್ಲರೂ ಮನೋಹರನನ್ನು ಮಾನಸಿಕವಾಗಿ ಅಸ್ವಸ್ಥ ಎಂದು ಭಾವಿಸುತ್ತಾರೆ. ಈತ ಕುಡಿದು ತನ್ನ ಗೆಳೆಯನೊಂದಿಗೆ ಜಗಳವಾಡಿ ಅಲ್ಲಿಂದ ಮನೆಗೆ ಹೋಗುವಾಗ ಅವನನ್ನು ತಪ್ಪಾಗಿ ಹುಚ್ಚಾಸ್ಪತ್ರೆಯವರು ಹಿಡಿದುಕೊಂಡು ಹೋಗುತ್ತಾರೆ. ಕೆಲ ವೈದ್ಯರು ಮನೋಹರನನ್ನು ಮಹೇಂದ್ರನಾಗಿ (ನಿಜವಾದ ಹುಚ್ಚ) ತಪ್ಪು ದಾಖಲೆಗಳನ್ನು ಮಾಡುತ್ತಾರೆ. ಇಲ್ಲಿಂದ ಮನೋಹರ ತಪ್ಪಿಸಿಕೊಂಡು ಹೋಗುವ ಯತ್ನ ನಡೆಸುತ್ತಿರುವಾಗ ಆಕಸ್ಮಿಕವಾಗಿ ದೇವಕಿ (ಐಂದ್ರಿತ ರೇ)ಯನ್ನು ನೋಡಿ ಅವನಲ್ಲಿ ಅವಳ ಪ್ರತಿ ಪ್ರೀತಿ ಮೂಡುತ್ತದೆ. ಅವನು ದೇವಕಿಯೊಂದಿಗೆ ಅಲ್ಲಿಂದ ತಪ್ಪಿಸಿಕೊಂಡು, ಅವಳೊಂದಿಗೆ ಮೂರು ನಾಲ್ಕು ದಿನ ಆಚೆ ಕಳೆಯುತ್ತಾನೆ. ಇಬ್ಬರ ನಡುವೆ ಪ್ರೀತಿ ಮೂಡಿ, ದೇವಕಿ ತನ್ನ ದುರಂತದ ಕಥೆಯನ್ನು ಅವನಲ್ಲಿ ಹೇಳಿಕೊಳ್ಳುತ್ತಾಳೆ.
ವಿಮರ್ಶಾ ಮನ್ನಣೆ
[ಬದಲಾಯಿಸಿ]ವಿಮರ್ಶಕರು ಈ ಚಿತ್ರಕ್ಕೆ ಪೂರಕವಾಗಿ ಬರೆದರು ಹಾಗು ಇದು ಜನ ಸಾಮನ್ಯರಲ್ಲೂ ಹೆಸರು ಗಳಿಸಿತು.[೧]
ಗಲ್ಲಾ ಪೆಟ್ಟಿಗೆ
[ಬದಲಾಯಿಸಿ]ಮನಸಾರೆ ೨೦೦೯ರ ಯಶಸ್ವೀ ಚಲನಚಿತ್ರ[೨].
ಪ್ರಶಸ್ತಿಗಳು
[ಬದಲಾಯಿಸಿ]ಫಿಲ್ಮ್‌ಫೇರ್ ಪ್ರಶಸ್ತಿಗಳು
[ಬದಲಾಯಿಸಿ]- ಅತ್ಯುತ್ತಮ ಸಾಹಿತ್ಯ: ಜಯಂತ್ ಕಾಯ್ಕಿಣಿ (ಎಲ್ಲೋ ಮಳೆಯಾಗಿದೆಯೆಂದು - ಮನಸಾರೆ)
ಸೌತ್ ಸ್ಕೋಪ್ ಅವಾರ್ಡ್ಸ್
[ಬದಲಾಯಿಸಿ]- ಉತ್ತಮ ಚಲನಚಿತ್ರ
- ಅತ್ಯುತ್ತಮ ನಿರ್ದೇಶಕ
- ಅತ್ಯುತ್ತಮ ನಟಿ
- ಅತ್ಯುತ್ತಮ ಗೀತಸಾಹಿತಿ
೨೦೦೯-೨೦೧೦ನೇ ಸಾಲಿನ ರಾಜ್ಯ ಪ್ರಶಸ್ತಿ
[ಬದಲಾಯಿಸಿ]- ಎರಡನೇ ಅತ್ಯುತ್ತಮ ಚಲನಚಿತ್ರ
ಹಾಡುಗಳು
[ಬದಲಾಯಿಸಿ]ಚಿತ್ರದ ಹಾಡುಗಳು ಜನಪ್ರಿಯವಾಗಿವೆ.
ಕ್ರಮ ಸಂ. | ಹಾಡು | ಹಾಡುಗಾರ(ರು) | ಅವಧಿ |
೧ | ಒಂದು ಕನಸು | ಕುನಾಲ್ ಗಂಜಾವಾಲ, ಅನನ್ಯ ಭಗತ್ | ೩.೦೭ |
೨ | ಎಲ್ಲೋ ಮಳೆಯಾಗಿದೆಯೆಂದು | ಸೋನು ನಿಗಮ್ | ೪:೫೧ |
೩ | ಕಣ್ಣ ಹನಿಯೊಂದಿಗೆ | ಕೆಕೆ, ಶ್ರೇಯಾ ಘೋಷಾಲ್ | ೫.೦೯ |
೪ | ಒಂದೇ ನಿನ್ನ | ಸೋನು ನಿಗಮ್ | ೩.೪೩ |
೫ | ನಾ ನಗುವ ಮೊದಲೇನೇ | ಶ್ರೇಯಾ ಘೋಷಾಲ್ | ೪:೫೧ |
೬ | ನಾನು ಮನಸಾರೆ | ವಿಕಾಸ್ ವಸಿಷ್ಠ, ಲಕ್ಷ್ಮಿ ನಾಗರಾಜ್ | ೨.೪೦ |
೭ | ಸಹನಾವವತು | ವಿಜಯ್ ಪ್ರಕಾಶ್ | ೨.೫೪ |
ಉಲ್ಲೇಖಗಳು
[ಬದಲಾಯಿಸಿ]