ವಿಷಯಕ್ಕೆ ಹೋಗು

ಮಧುನಾಶಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gymnema sylvestre
in Karyavattam University Campus of Kerala, India.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
G. sylvestre
Binomial name
Gymnema sylvestre

ಮಧುನಾಶಿನಿ ಒಂದು ಪ್ರಮುಖ ಔಷಧೀಯ ಸಸ್ಯ[]. ಮಧುನಾಶಿನಿ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಔಷಧಿಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ[].

ಸಸ್ಯಪರಿಚಯ

[ಬದಲಾಯಿಸಿ]

ಮಧುನಾಶಿನಿಯ ವೈಜ್ಞಾನಿಕ ಹೆಸರು ಜಿಮ್‌ನೇಮಾ ಸಿಲ್ವೆಸ್ಟ್ರೆ. ಇದು ಅಸ್ಕ್ಲೆಪಿಯೆಡೆಸಿಯಾ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಮೆಠಸಿಂಗೆ, ಗುಡುಮಾರ್ ಬುತಿ ಮುಂತಾದ ಹೆಸರುಗಳಿವೆ. ಮಧುನಾಶಿನಿ ಮರಕ್ಕೇರುವ ಸಸ್ಯವಾಗಿದ್ದು ಸಣ್ಣ ಹಳದಿ ಹೂಗಳನ್ನು ಬಿಡುತ್ತದೆ. ಅರಣ್ಯ ಪ್ರದೇಶಗಳಲ್ಲಿ ಇದು ಸಮಾನ್ಯವಾಗಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ೬೦೦ ಮೀಟರ್ ಎತ್ತರದ ತನಕ ಬೆಳೆಯಬಲ್ಲದು.

ಮಧುನಾಶಿನಿ ಎಲ್ಲಾ ವಿಧದ ಮಣ್ಣು ಮತ್ತು ಹವೆಗೆ ಒಗ್ಗಿಕೊಳ್ಳುತ್ತದೆ. ಮಧುನಾಶಿನಿ ಬಳ್ಳಿಯು ಮರದ ಆಧಾರದ ಮೂಲಕ ಮೇಲೇರುತ್ತದೆ. ಅಭಿಮುಖ ಎಲೆಯ ರಚನೆಯನ್ನು ಹೊಂದಿರುತ್ತದೆ. ಎಲೆಯ ಬುಡದಲ್ಲಿ ಸಣ್ಣ ಹೂವಿನ ಮಂಜರಿಯು ಕಾಣಿಸುತ್ತದೆ. ಐದು ಉಪದಳಗಳನ್ನು ಹೊಂದಿದೆ. ಇದರ ಕೋಡು ೨ ಕೋಣೆಯನ್ನು ಹೊಂದಿರುತ್ತದೆ. ಈ ಫಲಕೋಶವು ಮೀಸೆಯಾಕಾರದ ಜೋಡಿಫಲವಾಗಿ ಪರಿವರ್ತಿತಗೊಳ್ಳುತ್ತದೆ. ಇದರ ಪುಟಾಣಿ ಬೀಜವು ಮೀಸೆಯಂತಹ ಎಳೆಗಳ ಮೂಲಕ ಗಾಳಿಯಲ್ಲಿ ಹಾರಿ ಹೋಗಿ ಸಸ್ಯದ ಪಸರುವಿಕೆಗೆ ಸಹಾಯಕವಾಗಿದೆ.

ಎಲೆಯ ರಚನೆ
ಮಧುನಾಶಿನಿ ಗಿಡದ ಹಸಿ ಬೀಜ
ಮಧುನಾಶಿನಿ ಸಸ್ಯದ ಒಣಗಿದ ಬೀಜ

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಅಕ್ಟೋಬರ್- ದಶಂಬರ್ ಒಳಗಡೆ ಬಲಿತ ಬೀಜಗಳನ್ನು ಸಂಗ್ರಹಿಸಿ ನರ್ಸರಿಯ ವಾತಾವರಣದಲ್ಲಿ ನಾಟಿಮಾಡುವುದು ಉತ್ತಮ. ಬಳ್ಳಿಯ ತುಂಡುಗಳನ್ನು ಕೂಡಾ ನಾಟಿ ಮಾಡಬಹುದು.

ಉಪಯೋಗಗಳು

[ಬದಲಾಯಿಸಿ]

ಮಧುನಾಶಿನಿಯನ್ನು ಆಯುರ್ವೇದ, ಯುನಾನಿ, ಹೋಮಿಯೋಪತಿ ಔಷಧಪ್ರಕಾರಗಳಲ್ಲಿ ಬಳಸಲಾಗುತ್ತದೆ. ನಾಟಿ ಔಷಧಿಯಾಗಿಯೂ ಬಳಸುತ್ತಾರೆ.

ಮಧುನಾಶಿನಿ ಎಲೆಯ ಚೂರ್ಣ, ಹುಡಿ ಮತ್ತು ಖಷಾಯವನ್ನು ಮೂತ್ರಕೋಶದ ಕಲ್ಲು, ಕೆಮ್ಮು, ಮಲೇರಿಯಾ, ಕಾಮಾಲೆ ರೋಗಕ್ಕೆ ಔಷಧವಾಗಿ ಬಳಸುತ್ತಾರೆ. ಮಧುನಾಶಿನಿಯ ಎಲೆ ಮತ್ತು ಬೇರುಗಳನ್ನು ಲಿವರ್‍ನ ತೊಂದರೆ, ಅಸ್ತಮಾ ರೋಗದ ಉಪಶಮನಕ್ಕೆ ಔಷಧಿಯಾಗಿ ಬಳಸಲಾಗುತ್ತದೆ. ಡಯಾಬಿಟಿಸ್[], ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ ಮುಂತಾದ ಖಾಯಿಲೆಗಳಿಗೆ ಮಧುನಾಶಿನಿಯನ್ನು ಔಷಧವಾಗಿ ಬಳಸುತ್ತಾರೆ[]. ಇದರಿಂದ ತಯಾರಾಗುವ ಔಷಧಗಳೆಂದರೆ ಸರಿವದ್ಯಾಸವ, ಸರಿವದ್ಯಾವಲೇಹ, ಸರಿವದಿವಟಿ ಇತ್ಯಾದಿಗಳು. ಜಾನುವಾರುಗಳ ಕೆಚ್ಚಲು ಬಾವು, ಹುಣ್ಣು, ಮೊಲೆ ಸೀಳಿದಾಗ ಇದರ ರಸವನ್ನು ಲೇಪಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. http://www.ayurvediccommunity.com/AmaraKannada.asp
  2. http://www.ncbi.nlm.nih.gov/pmc/articles/PMC2170951/
  3. Gymnema sylvestre in West African plants – A Photo Guide.