ಮಣಿಕರಣ್
ಗೋಚರ
ಮಣಿಕರಣ್ ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲು ಜಿಲ್ಲೆಯಲ್ಲಿರುವ ಒಂದು ಯಾತ್ರಾಸ್ಥಳ. ಇದು ವ್ಯಾಸ್ ಮತ್ತು ಪಾರ್ವತಿ ನದಿಗಳ ನಡುವೆ ಪಾರ್ವತಿ ಕಣಿವೆಯಲ್ಲಿದೆ. ಮಣಿಕರಣ್ ಹಿಂದೂ ಮತ್ತು ಸಿಖ್ ಧರ್ಮೀಯರಿಗೆ ಒಂದು ಪವಿತ್ರ ಕ್ಷೇತ್ರವಾಗಿದೆ. ಮಹಾಪ್ರಳಯದ ನಂತರ ಮನು ಇಲ್ಲಿ ಮತ್ತೆ ಜೀವಸೃಷ್ಟಿ ಆರಂಭಿಸಿದನೆಂದು ಒಂದು ನಂಬಿಕೆ. ಮಣಿಕರಣ್‌ನಲ್ಲಿ ಹಲವು ದೇವಾಲಯಗಳು ಮತ್ತು ಒಂದು ಗುರುದ್ವಾರ ಇವೆ. ಜೊತೆಗೆ ಮಣಿಕರಣ್ ಬಿಸಿ ನೀರಿನ ಬುಗ್ಗೆಗಳಿಗೆ ಸಹ ಪ್ರಸಿದ್ಧವಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಮಣಿಕರಣ್ Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ಮಣಿಕರಣ್ ನ ಐತಿಹ್ಯಗಳು Archived 2009-01-31 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರಶಾಂತ ತಾಣ ಮಣಿಕರಣ್ Archived 2007-03-10 ವೇಬ್ಯಾಕ್ ಮೆಷಿನ್ ನಲ್ಲಿ.