ಮಂದರ ಪರ್ವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮುದ್ರ ಮಂಥನ

ಮಂದರ ಪದವು ಹಿಂದೂ ಪುರಾಣಗಳಲ್ಲಿ ಸಮುದ್ರ ಮಂಥನ ಪ್ರಸಂಗದಲ್ಲಿ ಕಾಣಿಸಿಕೊಳ್ಳುವ ಪರ್ವತದ ಹೆಸರಾಗಿದೆ. ಅದರಲ್ಲಿ ಇದನ್ನು ಕ್ಷೀರಸಾಗರವನ್ನು ಕಡೆಯಲು ಕಡೆಗೋಲಾಗಿ ಬಳಸಲಾಗಿತ್ತು. ಮಹಾದೇವನ ಸರ್ಪವಾದ ವಾಸುಕಿಯು ಹಗ್ಗವಾಗಿ ಕಾರ್ಯನಿರ್ವಹಿಸುತ್ತೇನೆಂದು ವ್ಯಕ್ತಪಡಿಸಿದನು. ಇವನನ್ನು ಒಂದು ಕಡೆಯಿಂದ ಅಸುರರ ತಂಡವು ಎಳೆದರೆ, ಮತ್ತೊಂದು ಕಡೆಯಿಂದ ದೇವತೆಗಳ ತಂಡವು ಎಳೆಯಿತು. ಪುರಾಣಗಳು ಮಧುಸೂದನನಾಗಿ ಕೃಷ್ಣನ ನಿವಾಸಸ್ಥಾನ ಎಂದೂ ನಂಬಲಾದ ಈ ಪರ್ವತದ ಮೇಲಿನ ವಿವಿಧ ಪವಿತ್ರ ಸ್ಥಳಗಳನ್ನು ಉಲ್ಲೇಖಿಸುತ್ತವೆ. ಕೃಷ್ಣನು ಮಧು ಎಂಬ ರಾಕ್ಷಸನನ್ನು ಧ್ವಂಸಮಾಡಿ ನಂತರ ಅವನನ್ನು ಮಂದರ ಪರ್ವತದಿಂದ ಮುಚ್ಚಿದನು.

ಕೆಲವು ಕಥೆಗಳು ಬಂಕಾ ಜಿಲ್ಲೆಯಲ್ಲಿನ ಮಂದಾರ ಪರ್ವತವೆಂಬ ಗುಡ್ಡವನ್ನು ಮಂದರ ಪರ್ವತದೊಂದಿಗೆ ಗುರುತಿಸುತ್ತವೆ.

ಕಾಳಿದಾಸನ ಕುಮಾರಸಂಭವವು ಮಂದರ ಪರ್ವತದ ಇಳಿಜಾರಿನಲ್ಲಿ ವಿಷ್ಣುವಿನ ಹೆಜ್ಜೆಗುರುತುಗಳಿರುವುದನ್ನು ಉಲ್ಲೇಖಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  • Dictionary of Hindu Lore and Legend (ISBN 0-500-51088-1) by Anna Dallapiccola