ಮಂಡೆಕೋಲು
ಮಂಡೆಕೋಲು | |
|---|---|
ಗ್ರಾಮ | |
| Coordinates: 12°33′N 75°17′E / 12.55°N 75.29°E | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ದಕ್ಷಿಣಕನ್ನಡ ಜಿಲ್ಲೆ |
| ತಾಲೂಕುಗಳು | ಸುಳ್ಯ |
| Government | |
| • Body | ಗ್ರಾಮ ಪಂಚಾಯತು |
| Population (2001) | |
• Total | ೫,೫೬೫ |
| ಭಾಷೆ | |
| • ಅಧಿಕಾರಿ | ಇಂಗ್ಲಿಷ್, ಕನ್ನಡ |
| • ಬೇರೆ ಮಾತನಾಡುವ ಭಾಷೆಗಳು | ತುಳು, ಮಲಯಾಳ, ಅರೆಭಾಷೆ, ಕೊಂಕಣಿ, ಮರಾಠಿ, ಬ್ಯಾರಿ ಭಾಷೆ |
| Time zone | UTC+5:30 (ಐಎಸ್ಟಿ) |
| ISO 3166 code | IN-KA |
| Vehicle registration | KA-21 |
| Website | karnataka |
ಮಂಡೆಕೋಲು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ 35 ಗ್ರಾಮಗಳಲ್ಲಿ ಒಂದು. ಸುಳ್ಯ ಪೇಟೆಯಿಂದ ಪಶ್ಚಿಮಕ್ಕೆ 12 ಕಿಲೋಮೀಟರ್ ದೂರದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ಇದೆ. ಕೇರಳದ ಗಡಿ ಗ್ರಾಮವಾದ ಮಂಡೆಕೋಲು ಒಂದು ಕಾಲದಲ್ಲಿ ಗುರುತಿಸಲಾದ ದಕ್ಷಿಣಕನ್ನಡದ ಕುಗ್ರಾಮ. ಆದರೆ ಇದೇ ಗ್ರಾಮದವರಾದ ಶ್ರೀ ಡಿ. ವಿ. ಸದಾನಂದ ಗೌಡರು ಕರ್ನಾಟಕದ 26ನೆಯ ಮುಖ್ಯಮಂತ್ರಿಯಾಗಿ ಅಧಿಕಾರ ಹೊಂದಿದ್ದು ಸುಳ್ಯ ತಾಲೂಕಿಗೆ ಹೆಮ್ಮೆಯ ವಿಷಯ.[೧] ಇದೇ ಗ್ರಾಮದವರಾದ ಶ್ರೀ ಸದಾನಂದ ಮಾವಜಿ ಗೌಡರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದದ್ದು ಮಂಡೆಕೋಲು ಗ್ರಾಮದ ಹೆಮ್ಮೆಯ ವಿಷಯ. ಮಂಡೆಕೋಲು ಗ್ರಾಮದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಪೇರಾಲು ಮತ್ತು ಅಂಬ್ರೋಟಿ ಬೈಲು ಸಿಗುತ್ತದೆ. ಈ ಗ್ರಾಮದಲ್ಲಿ ಗೌಡರ ಹಲವು ಪ್ರಮುಖ ಮನೆಗಳು ಇವೆ. ಈ ಗ್ರಾಮದ ಪಕ್ಕದಲ್ಲಿ ಅಜ್ಜಾವರ, ಜಾಲ್ಸೂರು ಗ್ರಾಮಗಳಿವೆ. ಹಾಗೇ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಅಡೂರು, ಮುಡೂರು, ಮುರೂರು ಊರುಗಳು ಸಿಗುತ್ತವೆ. ಇದು ಕರ್ನಾಟಕ-ಕೇರಳ ಗಡಿಯ ಹತ್ತಿರದ ಪಯಸ್ವಿನಿ(ಚಂದ್ರಗಿರಿ) ನದಿಯ ಪಕ್ಕದ ಗ್ರಾಮ. ಮಂಗಳೂರು ನಗರದಿಂದ 86 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. [೨] [೩]
ದೇವಸ್ತಾನ ಹಾಗೂ ನೋಡಬೇಕಾದ ಸ್ಥಳಗಳು
[ಬದಲಾಯಿಸಿ]ಮಂಡೆಕೋಲಿನಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ತಾನವಿದೆ. ಪೇರಾಲು ಬಜಪಿಲ ಶ್ರೀ ಉಳ್ಳಾಕುಲು ದೈವಸ್ತಾನ, ಅಂಬ್ರೋಟಿಯ ಮುಚ್ಚಿರಡಿ ಶ್ರೀ ಉಳ್ಳಾಕುಲು ದೈವಸ್ತಾನ, ಪಂಜಿಕಲ್ಲು ತೂಗು ಸೇತುವೆ, ಪರಪ್ಪೆಯ ತೂಗು ಸೇತುವೆ, ಮುರೂರಿನಲ್ಲಿ ಪಯಸ್ವಿನಿ ನದಿಗೆ ದೊಡ್ಡ ಸೇತುವೆ ಮೂಲಕ ಜಾಲ್ಸೂರು ಕೇರಳ ರಾಜ್ಯ ರಸ್ತೆಗೆ ಸೇರುತ್ತದೆ.

ಗಮನಾರ್ಹ ವ್ಯಕ್ತಿ
[ಬದಲಾಯಿಸಿ]- ಡಿ.ವಿ.ಸದಾನಂದ ಗೌಡ (ಜನ್ಮ ೧೯೫೩), ರಾಜಕಾರಣಿ [೪]
ಜನಸಂಖ್ಯೆ
[ಬದಲಾಯಿಸಿ]೨೦೦೧ನೇ ಭಾರತದ ಜನಗಣತಿಯ ಪ್ರಕಾರ, ಮಂಡೆಕೋಲು 5575 ಜನಸಂಖ್ಯೆ ಇತ್ತು. ಅದರಲ್ಲಿ 2745 ಪುರುಷರು ಮತ್ತು 2820 ಹೆಂಗಸರು.[೫]
ಹೆಚ್ಚಿನ ಮಾಹಿತಿಗೆ ನೋಡಿ
[ಬದಲಾಯಿಸಿ]- ದಕ್ಷಿಣಗನ್ನಡ
- ಕನಾ೯ಟಕದ ಜಿಲ್ಲೆಲು
- ತುಳು ಗೌಡ
ಉಲ್ಲೇಖಗಳು
[ಬದಲಾಯಿಸಿ]- ↑ "Who is Sadananda Gowda?". India Today (in ಇಂಗ್ಲಿಷ್). 2011-08-03. Retrieved 2024-08-10.
- ↑ Village code= 2723100 "Census of India : Villages with population 5000 & above". Registrar General & Census Commissioner, India. Archived from the original on 2008-12-08. Retrieved 2008-12-18.
- ↑ "Yahoomaps India :". Archived from the original on 2008-12-18. Retrieved 2008-12-18. Mandekolu, Dakshina Kannada, Karnataka
- ↑ "Who is Sadananda Gowda?". India Today (in ಇಂಗ್ಲಿಷ್). 2011-08-03. Retrieved 2024-08-10."Who is Sadananda Gowda?". India Today. 3 August 2011. Retrieved 10 August 2024.
- ↑ Village code= 2723100 "Census of India : Villages with population 5000 & above". Registrar General & Census Commissioner, India. Archived from the original on 2008-12-08. Retrieved 2008-12-18."Census of India : Villages with population 5000 & above". Registrar General & Census Commissioner, India. Archived from the original on 8 December 2008. Retrieved 18 December 2008.